Tel: 7676775624 | Mail: info@yellowandred.in

Language: EN KAN

    Follow us :

ಮಹಾತ್ಮರ ಪ್ರತಿಮೆಗಳಿಗೆ ಆಡಂಬರದಿಂದ ಪೂಜಿಸುವ ಬದಲು ಅವರ ನಡೆನುಡಿ ಅನುಸರಿಸಿ ಗೌರವ ಸಲ್ಲಿಸಬೇಕು. ಡಿವೈಎಸ್ಪಿ ರಮೇಶ್

Posted date: 05 Apr, 2021

Powered by:     Yellow and Red

ಮಹಾತ್ಮರ ಪ್ರತಿಮೆಗಳಿಗೆ ಆಡಂಬರದಿಂದ ಪೂಜಿಸುವ ಬದಲು ಅವರ ನಡೆನುಡಿ ಅನುಸರಿಸಿ ಗೌರವ ಸಲ್ಲಿಸಬೇಕು. ಡಿವೈಎಸ್ಪಿ ರಮೇಶ್

ಮಹಾತ್ಮರ ಪ್ರತಿಮೆಗಳನ್ನು ಸ್ಥಾಪಿಸಿ, ಆಡಂಬರದ ಪೂಜೆ ಮತ್ತು ಮೆರವಣಿಗೆ ಮಾಡಿ, ರಜೆ ಪಡೆದು ಮಜಾ ಮಾಡುವ ಬದಲು ಅಂತಹ ಮಹಾತ್ಮರ ನಡೆ ನುಡಿಗಳನ್ನು ಅನುಸರಿಸುವ ಜೊತೆಗೆ ಎಲ್ಲರೂ ಪಾಲಿಸುವಂತೆ ಜಾರಿಗೆ ಬಂದರೆ ಅಂತಹ ಮಹಾತ್ಮರ ಆಶಯಗಳು ಈಡೇರುತ್ತವೆ ಎಂದು ಉಪ ಪೊಲೀಸ್ ಅಧೀಕ್ಷಕ ಕೆ.ಎನ್ ರಮೇಶ್ ಅಭಿಪ್ರಾಯ ಪಟ್ಟರು.

ಅವರು ಇಂದು ಇಲ್ಲಿನ ತಾಲ್ಲೂಕು ಕಛೇರಿ ಸಭಾಂಗಣದಲ್ಲಿ ತಾಲ್ಲೂಕು ಆಡಳಿತ ಹಾಗೂ ರಾಷ್ಟ್ರೀಯ ಹಬ್ಬಗಳ ಆಚರಣಾ ಸಮಿತಿ ವತಿಯಿಂದ ಸರಳವಾಗಿ ಹಮ್ಮಿಕೊಂಡಿದ್ದ ಜಗಜೀವನ್ ರಾಮ್ ಅವರ 114 ನೇ ಜಯಂತಿಯಲ್ಲಿ, ಭಾವಚಿತ್ರಕ್ಕೆ ಪುಷ್ಪನಮನ ಸಲ್ಲಿಸಿ ಮಾತನಾಡಿದರು.

ನಾಡು ನುಡಿಗೆ ನಾವು ಹೇಗೆ ಸ್ಪಂದಿಸುತ್ತೇವೆಯೋ ಅದೇ ರೀತಿಯಾಗಿ ರಾಷ್ಟ್ರ ಕಟ್ಟಿದ  ನಾಯಕರುಗಳನ್ನೂ ಸಹ ನಾವು ಸದಾ ಸ್ಮರಿಸಿಕೊಳ್ಳಬೇಕು. ಸ್ವಾತಂತ್ರ ಪೂರ್ವದಲ್ಲಿ ಸ್ವಾತಂತ್ರ ಪಡೆಯುವುದಕ್ಕಾಗಿ ಪಟ್ಟಂತಹ ಕಷ್ಟಗಳು, ಸ್ವಾತಂತ್ರ ನಂತರ ರಾಷ್ಟ್ರ ಕಟ್ಟಲು ಎದುರಿಸಿದ ಸಂಕಷ್ಟಗಳನ್ನು ನಾವು ಓದಿ ತಿಳಿದುಕೊಳ್ಳಬೇಕಾಗಿದೆ. ಇಂದು ಯಾವುದೇ ಜಯಂತಿ ಎಂದರೆ, ಕಾಟಾಚಾರಕ್ಕೆ ಎಂಬಂತೆ ಆಗಿದ್ದು, ಅದನ್ನು ತಡೆಗಟ್ಟಿ ಅವರ ಆಶೋತ್ತರಗಳನ್ನು ಈಡೇರಿಸುವ ಮೂಲಕ  ಜಯಂತಿಯನ್ನು ಆಚರಿಸಬೇಕು ಎಂದು ತಿಳಿಸಿದರು.

ನಗರಸಭೆಯ ಪೌರಾಯುಕ್ತರಾದ ಶಿವನಾಂಕಾರಿಗೌಡ ಮಾತನಾಡಿ, ಜಗಜೀವನ್ ರಾಂ ಅವರು ಹಸಿರು ಕ್ರಾಂತಿಯ ಹರಿಕಾರರಾಗಿದ್ದು. ಸ್ವಾತಂತ್ರ್ಯ ನಂತರ ದೇಶವು ಆರ್ಥಿಕ ಮತ್ತು ಆಹಾರ ಸಂಕಷ್ಟವನ್ನು ಎದುರಿಸುತ್ತಿತ್ತು. ಆ ಸಂದರ್ಭದಲ್ಲಿ ಜಗಜೀವನ್ ರಾಂ ಅವರು ಆಹಾರ ಉತ್ಪಾದನೆಯಲ್ಲಿ ಒಂದು ಹೊಸ ಕ್ರಾಂತಿಯನ್ನು ಹುಟ್ಟು ಹಾಕಿ ಜನರ ಹಸಿವನ್ನು ನೀಗಿಸಿದ್ದರು, ಅಂದು ಅವರು ಹಾಕಿ ಕೊಟ್ಟ ಹಸಿರುಕ್ರಾಂತಿ ಬುನಾದಿಯು ಇನ್ನೂ ಹಸಿರಾಗಿರುವುದೇ ಸಾಕ್ಷಿಯಾಗಿದೆ, ಆದ್ದರಿಂದ ಇವರನ್ನು ಸದಾಕಾಲ ಸ್ಮರಿಸಬೇಕಾಗಿರುವುದು ನಮ್ಮೆಲ್ಲರ ಆದ್ಯ ಕರ್ತವ್ಯ ಎಂದರು.

ಸಂದರ್ಭದಲ್ಲಿ ಉಪ ತಹಶೀಲ್ದಾರ್ ಕೃಷ್ಣಪ್ಪ,  ಶಿರಸ್ತೇದಾರ್ ಹರೀಶ್, ಸಮಾಜ ಕಲ್ಯಾಣ ಇಲಾಖೆಯ ಸರೋಜಮ್ಮ, ಆಚರಣಾ ಸಮಿತಿಯ ಸದಸ್ಯರು, ಸೇರಿದಂತೆ ವಿವಿಧ ಇಲಾಖೆಯ ಅಧಿಕಾರಿಗಳು ಭಾಗವಹಿಸಿದ್ದರು.

ಗೋ ರಾ ಶ್ರೀನಿವಾಸ...

ಮೊ:9845856139.

??????????????

  • ????? ???????? ??????????? ???? ??????????.

ನಿಮ್ಮ ಅಭಿಪ್ರಾಯಗಳನ್ನು ಬರೆಯಿರಿ/ತಿಳಿಸಿ.

Recent news in ramanagara »

ನಗರದಲ್ಲಿ 23 ವಾರ್ಡ್ ಗೆ ಸೀಮಿತವಾದ ಬಿಜೆಪಿ? ಯೋಗೇಶ್ವರ್ ತಂತ್ರ ಏನು !
ನಗರದಲ್ಲಿ 23 ವಾರ್ಡ್ ಗೆ ಸೀಮಿತವಾದ ಬಿಜೆಪಿ? ಯೋಗೇಶ್ವರ್ ತಂತ್ರ ಏನು !

ಚನ್ನಪಟ್ಟಣ ಕ್ಷೇತ್ರದ ಮಾಜಿ ಶಾಸಕ ಸಿ.ಪಿ ಯೋಗೇಶ್ವರ್, ಯಾವುದಾದರೂ ಚುನಾವಣೆ ಬಂದಾಗ ಒಂದು ಹೊಸ ತಂತ್ರ ಹೆಣೆಯುವುದು ಮಾಡುತ್ತಾರೆ ಎಂಬುದು ಜನಜನಿತ ಮಾತು.

ಈ ಬಾರಿಯ ನಗರಸಭಾ ಚುನಾವಣೆಯಲ

ಸಮಾಜ ಸೇವಕ ಎಂ.ಪಿ. ವಾಸುಪುಟ್ಟಮಾಸ್ತಿಗೌಡ ಹಾಗೂ ಪರಿಸರವಾದಿ ಬಿ.ಟಿ. ರಾಜೇಂದ್ರ ಅವರಿಗೆ ಸನ್ಮಾನ
ಸಮಾಜ ಸೇವಕ ಎಂ.ಪಿ. ವಾಸುಪುಟ್ಟಮಾಸ್ತಿಗೌಡ ಹಾಗೂ ಪರಿಸರವಾದಿ ಬಿ.ಟಿ. ರಾಜೇಂದ್ರ ಅವರಿಗೆ ಸನ್ಮಾನ

ರಾಮನಗರ : ನಗರದ ಶ್ರೀ ಶಾರದಾಂಬೆ ದೇವಾಲಯದಲ್ಲಿ ಶುಕ್ರವಾರ ನಡೆದ ಕಾರ್ಯಕ್ರಮದಲ್ಲಿ ಸಮಾಜ ಸೇವಕ ಎಂ.ಪಿ. ವಾಸುಪುಟ್ಟಮಾಸ್ತಿಗೌಡ ಹಾಗೂ ಪರಿಸರವಾದಿ ಬಿ.ಟಿ. ರಾಜೇಂದ್ರ ಅವರನ್ನು ಶ್ರೀಶಂಕರ ಮಠದ ಕಾರ್ಯದರ್ಶಿ ಕೆ.ಎಲ್. ಶೇಷಗಿರಿರಾವ್ ಸನ್ಮಾನಿಸಿ

ಭಾರತ ವಿಕಾಸ ಪರಿಷದ್ ಖಜಾಂಚಿಯಾಗಿ ಎಸ್. ರುದ್ರೇಶ್ವರ ಆಯ್ಕೆ
ಭಾರತ ವಿಕಾಸ ಪರಿಷದ್ ಖಜಾಂಚಿಯಾಗಿ ಎಸ್. ರುದ್ರೇಶ್ವರ ಆಯ್ಕೆ

ರಾಮನಗರ : ಲೇಖಕ ಎಸ್. ರುದ್ರೇಶ್ವರ ಅವರನ್ನು ಭಾರತ ವಿಕಾಸ ಪರಿಷದ್ ವಾಲ್ಮೀಕಿ ಶಾಖೆಯ ಖಜಾಂಚಿಯನ್ನಾಗಿ ಆಯ್ಕೆ ಮಾಡಲಾಗಿದೆ ಎಂದು ಭಾರತ ವಿಕಾಸ ಪರಿಷದ್ ವಾಲ್ಮೀಕಿ ಖಾಖೆಯ ಗೌರವಾಧ್ಯಕ್ಷ ಎಚ್.ವಿ. ಶೇಷಾದ

ಡಾಃ ಬಿ.ಆರ್ ಅಂಬೇಡ್ಕರ್ ಅವರ ತತ್ವ ಮತ್ತು ಆದರ್ಶ ರೂಡಿಸಿಕೊಳ್ಳಿ: ಜಿಲ್ಲಾಧಿಕಾರಿ ಡಾ: ರಾಕೇಶ್ ಕುಮಾರ್ ಕೆ.
ಡಾಃ ಬಿ.ಆರ್ ಅಂಬೇಡ್ಕರ್ ಅವರ ತತ್ವ ಮತ್ತು ಆದರ್ಶ ರೂಡಿಸಿಕೊಳ್ಳಿ: ಜಿಲ್ಲಾಧಿಕಾರಿ ಡಾ: ರಾಕೇಶ್ ಕುಮಾರ್ ಕೆ.

ಡಾ: ಬಿ.ಆರ್. ಅಂಬೇಡ್ಕರ್ ಅವರು ಜೀವನದಲ್ಲಿ ಬಹಳ ಕಷ್ಟ ಅನುಭವಿಸಿ ಭಾರತಕ್ಕೆ ಸಂವಿಧಾನ ನೀಡಿದ್ದಾರೆ. ಅವರು ನೀಡಿರುವ ತತ್ವ  ಮತ್ತು ಆದರ್ಶ ಪ್ರತಿಯೊಬ್ಬರು ರೂಡಿಸಿಕೊಳ್ಳಬೇಕು ಎಂದು ಜಿಲ್ಲಾಧಿಕಾ

ಆರನೇ ವೇತನ ಜಾರಿಗೊಳಿಸಿ, ತಾಲ್ಲೂಕು ಕಛೇರಿಯ ಮುಂದೆ ತಟ್ಟೆ, ಲೋಟದ ಮೂಲಕ ಜಾಗಟೆ ಬಾರಿಸಿ ಆಕ್ರೋಶ ವ್ಯಕ್ತಪಡಿಸಿದ ಸಾರಿಗೆ ನೌಕರರ ಕುಟುಂಬ
ಆರನೇ ವೇತನ ಜಾರಿಗೊಳಿಸಿ, ತಾಲ್ಲೂಕು ಕಛೇರಿಯ ಮುಂದೆ ತಟ್ಟೆ, ಲೋಟದ ಮೂಲಕ ಜಾಗಟೆ ಬಾರಿಸಿ ಆಕ್ರೋಶ ವ್ಯಕ್ತಪಡಿಸಿದ ಸಾರಿಗೆ ನೌಕರರ ಕುಟುಂಬ

ಸರ್ಕಾರ ಆರನೇ ವೇತನ ಜಾರಿಗೊಳಿಸುವಂತೆ  ಹಾಗೂ ಸರ್ಕಾರಿ ನೌಕರರನ್ನಾಗಿ ಪರಿಗಣಿಸುವಂತೆ ಸಾರಿಗೆ ನೌಕರರು  ಮುಷ್ಕರ ನಡೆಸುತ್ತಿದ್ದು, ಇಂದಿಗೆ ಆರನೇ ದಿನಕ್ಕೆ ಕಾಲಿಟ್ಟಿದೆ. ಈ ಹಿನ್ನೆಲೆಯಲ್ಲ

ಕೊರೊನಾ ಎರಡನೇ ಅಲೆಗೆ ಕಳೆಗುಂದಿದ ಯುಗಾದಿ ಹಬ್ಬ
ಕೊರೊನಾ ಎರಡನೇ ಅಲೆಗೆ ಕಳೆಗುಂದಿದ ಯುಗಾದಿ ಹಬ್ಬ

ಕಳೆದ ವರ್ಷ ಯುಗಾದಿ ಹಬ್ಬಕ್ಕೂ ಮುನ್ನ ಕೊರೊನಾ ವಕ್ಕರಿಸಿತ್ತು. ಜನರು ಗೊಣಗುತ್ತಲೇ ಸರ್ಕಾರದ ಆದೇಶದ ಮೇರೆಗೆ ಸರಳವಾಗಿ ಯುಗಾದಿ ಹಬ್ಬ ಆಚರಿಸಿದರು.

ಆದರೆ ಈ ವರ್ಷವೂ ಸಹ ಕೊರೊನಾ ಎರಡನೆಯ

ಅಪ್ರಾಪ್ತ ಬಾಲಕಿಗೆ ಲೈಂಗಿಕ ಕಿರುಕುಳ. ಆರೋಪಿ ಪಿ ಡಿ ರಾಜು ಗೆ 10 ವರ್ಷ ಜೈಲು 2 ಲಕ್ಷ ದಂಡ ವಿಧಿಸಿದ ನ್ಯಾಯಾಧೀಶರು
ಅಪ್ರಾಪ್ತ ಬಾಲಕಿಗೆ ಲೈಂಗಿಕ ಕಿರುಕುಳ. ಆರೋಪಿ ಪಿ ಡಿ ರಾಜು ಗೆ 10 ವರ್ಷ ಜೈಲು 2 ಲಕ್ಷ ದಂಡ ವಿಧಿಸಿದ ನ್ಯಾಯಾಧೀಶರು

ಚನ್ನಪಟ್ಟಣ ಗ್ರಾಮಾಂತರ ಪೋಲೀಸ್ ಠಾಣಾ ವ್ಯಾಪ್ತಿಗೆ ಸೇರಿದ ಪಾರೇದೊಡ್ಡಿ ಗ್ರಾಮದ ವಾಸಿಯಾದ ಅಪ್ರಾಪ್ತ ಬಾಲಕಿಗೆ ಲೈಂಗಿಕ ದೌರ್ಜನ್ಯ ನೀಡಿದ ಆರೋಪಿ ಪಿ ಡಿ ರಾಜು ಉ ರಾಜು, ಉ ವರದರಾಜು ಬಿನ್ ಲೇಟ್ ಜವರಯ್

ಕರ್ನಾಟಕ ರಾಜ್ಯ ಕೌಶಲ್ಯ ಸ್ಪರ್ಧೆ-2021ಕ್ಕೆ ಟೊಯೋಟಾ ಕಿರ್ಲೋಸ್ಕರ್ ಮೋಟಾರ್ ಆತಿಥ್ಯ
ಕರ್ನಾಟಕ ರಾಜ್ಯ ಕೌಶಲ್ಯ ಸ್ಪರ್ಧೆ-2021ಕ್ಕೆ ಟೊಯೋಟಾ ಕಿರ್ಲೋಸ್ಕರ್ ಮೋಟಾರ್ ಆತಿಥ್ಯ

2021 ರ ಆವೃತ್ತಿಯ ಹೆಸರಾಂತ ಕರ್ನಾಟಕ ರಾಜ್ಯ ಕೌಶಲ್ಯ ಸ್ಪರ್ಧೆಯನ್ನು ಟೊಯೋಟಾ ಕಿರ್ಲೋಸ್ಕರ್ ಮೋಟಾರ್ ಬಿಡದಿಯ ಕಂಪನಿಯ ಆವರಣದಲ್ಲಿ ಆಯೋಜಿಸಿತ್ತು. ಕರ್ನಾಟಕ ಕೌಶಲ್ಯ ಅಭಿವೃದ್ಧಿ ನಿಗಮ (ಕೆಎಸ್ ಡಿಸಿ)

ಸರ್ಕಾರಿ ಹಳ್ಳ ಮುಚ್ಚಿ ಪಟ್ಟಭದ್ರರಿಗೆ ರಸ್ತೆ ಮಾಡಿದ ಕಂದಾಯ ಅಧಿಕಾರಿಗಳು ದೂರು
ಸರ್ಕಾರಿ ಹಳ್ಳ ಮುಚ್ಚಿ ಪಟ್ಟಭದ್ರರಿಗೆ ರಸ್ತೆ ಮಾಡಿದ ಕಂದಾಯ ಅಧಿಕಾರಿಗಳು ದೂರು

ಚನ್ನಪಟ್ಟಣ ತಾಲ್ಲೂಕು, ವಿರೂಪಾಕ್ಷಿಪುರ ಹೋಬಳಿ, ಮಂಗಾಡಹಳ್ಳಿ ಮತ್ತು ಬಲ್ಲಾಪಟ್ಟಣ ಗ್ರಾಮಗಳ ಗಡಿ ಮಧ್ಯೆ ಇರುವ ಸರ್ಕಾರಿ ಹಳ್ಳವನ್ನು ಮುಚ್ಚಿ ರಸ್ತೆ ಮಾಡಿ ಶಿಕ್ಷಾರ್ಹ ಅಪರಾಧ ಎಸೆಗಿರುವ ತಹಸೀಲ್ದಾರ್ ನಾಗೇಶ್, ಡಿ.ಟಿ. ದಿನಕರ್, ಆರ್.ಐ.ರಜ

ಡಿಸಿ ಆದೇಶವಿದ್ದರೂ ಸಾರಿಗೆ ನಿಲ್ದಾಣಕ್ಕೆ ತೆರಳದ ಖಾಸಗಿ ಬಸ್ಸುಗಳು. ಟ್ರಾಫಿಕ್ ಜಾಮ್ ಆಗುತ್ತಿರುವ ನಗರದ ಹೈವೇ
ಡಿಸಿ ಆದೇಶವಿದ್ದರೂ ಸಾರಿಗೆ ನಿಲ್ದಾಣಕ್ಕೆ ತೆರಳದ ಖಾಸಗಿ ಬಸ್ಸುಗಳು. ಟ್ರಾಫಿಕ್ ಜಾಮ್ ಆಗುತ್ತಿರುವ ನಗರದ ಹೈವೇ

  • ತಮ್ಮ ಬೇಡಿಕೆಯ ಈಡೇರಿಕೆಗಾಗಿ ಸಾರಿಗೆ ನೌಕರರು  ಅನಿರ್ಧಿಷ್ಟಾವಧಿ ಮುಷ್ಕರ ನಡೆಸುತ್ತಿದ್ದು, ಇಂದಿಗೆ ಮೂರು ದಿನಗಳು ಕಳೆದಿವೆ. ಸಾರ್ವಜನಿಕರ ಅನುಕೂಲ ದೃಷ್ಟಿಯಿಂದ ಪರ್ಯಾಯ ವಾಗಿ ಖಾಸಗಿ ಬಸ್‌ಗಳ ವ್ಯವಸ್ಥೆ ಮಾಡಲಾಗಿದ್ದು, ಎಲ್ಲಾ ಖಾಸಗಿ

Top Stories »  

Top ↑