Tel: 7676775624 | Mail: info@yellowandred.in

Language: EN KAN

    Follow us :


ನಗರದಲ್ಲಿ 23 ವಾರ್ಡ್ ಗೆ ಸೀಮಿತವಾದ ಬಿಜೆಪಿ? ಯೋಗೇಶ್ವರ್ ತಂತ್ರ ಏನು !

Posted date: 18 Apr, 2021

Powered by:     Yellow and Red

ನಗರದಲ್ಲಿ 23 ವಾರ್ಡ್ ಗೆ ಸೀಮಿತವಾದ ಬಿಜೆಪಿ? ಯೋಗೇಶ್ವರ್ ತಂತ್ರ ಏನು !

ಚನ್ನಪಟ್ಟಣ ಕ್ಷೇತ್ರದ ಮಾಜಿ ಶಾಸಕ ಸಿ.ಪಿ ಯೋಗೇಶ್ವರ್, ಯಾವುದಾದರೂ ಚುನಾವಣೆ ಬಂದಾಗ ಒಂದು ಹೊಸ ತಂತ್ರ ಹೆಣೆಯುವುದು ಮಾಡುತ್ತಾರೆ ಎಂಬುದು ಜನಜನಿತ ಮಾತು.

ಈ ಬಾರಿಯ ನಗರಸಭಾ ಚುನಾವಣೆಯಲ್ಲಿ ಲೆಕ್ಕದ ಪ್ರಕಾರ 31 ಕ್ಕೆ 31 ಕ್ಷೇತ್ರದಲ್ಲಿಯೂ ಸ್ಪರ್ಧೆಗೆ ಇಳಿಸಿಯೇ ತೀರುತ್ತಾರೆ ಎಂಬ ಅಭಿಪ್ರಾಯ ಇತ್ತು.

ಆದರೆ 31 ವಾರ್ಡ್ಗಳ ಪೈಕಿ, 8 ವಾರ್ಡ್ಗಳಲ್ಲಿ ಬಿಜೆಪಿಯ ಅಭ್ಯರ್ಥಿಗಳನ್ನೇ ಕಣಕ್ಕೆ ಇಳಿಸದಿರುವುದರಲ್ಲಿಯೂ ಲೆಕ್ಕಚಾರ ಅಡಗಿದೆ.


ಹಲವು ಮುಸ್ಲಿಂ ವಾರ್ಡ್ಗಳಲ್ಲಿ ಬಿಜೆಪಿಯ ಹೆಸರು ಹೇಳಲು ಅಭ್ಯರ್ಥಿಗಳೇ ಇಲ್ಲ ಎಂಬುದು ಗಮನಾರ್ಹ.

ಮುಸ್ಲಿಂ ಸಮುದಾಯದ, ಒಂದು ರೀತಿಯಲ್ಲಿ ಕುಟುಂಬದ ಸದಸ್ಯ ಎಂಬ ರೀತಿಯಲ್ಲಿ ಸ್ನೇಹವುಳ್ಳ ಎಸ್.ಕೆ ಬೀಡಿ ಮಾಲೀಕರ ಮುಖೇನ ಕನಿಷ್ಠ 6 ಅಭ್ಯರ್ಥಿಗಳನ್ನಾದರೂ ಪುಸಲಾಯಿಸಿ ನಿಲ್ಲಿಸಬಹುದು ಎಂಬ ಅಭಿಪ್ರಾಯ ಇತ್ತು. ಅದನ್ನೂ ಸಹ ಯೋಗೇಶ್ವರ್ ಮಾಡಲು ಮುಂದಾಗಲೇ ಇಲ್ಲ.


ಈಗಲೂ ಇರುವ ಲೆಕ್ಕ: ಈಗ ಸ್ಪರ್ಧೆಯಲ್ಲಿರುವ 23 ಜನರ ಪೈಕಿ 15 ಜನರನ್ನು ಗೆಲ್ಲಿಸುವ, ಕೆಲವು ಕಡೆ ಪಕ್ಷೇತರರಿಗೆ ಬೆಂಬಲ ನೀಡಿ ಗೆಲ್ಲಿಸಿ, ನಗರಸಭೆಯ ಅಧ್ಯಕ್ಷಗಿರಿಗೆ ಆಟ ಹಾಕುವ ಲೆಕ್ಕವೂ ಸಹ ಇದೆ ಎನ್ನಲಾಗಿದೆ.

ಸದ್ಯದ ಪರಿಸ್ಥಿತಿಯಲ್ಲಿ ಒಳತೋಟೆ ರಾಜಕೀಯ ಏನಿದೆ ಎಂದು ಯಾರಿಗೂ ತಿಳಿಯುತ್ತಿಲ್ಲ. ಈಗ ಜೆಡಿಎಸ್ ಪಕ್ಷ 31 ಕ್ಕೆ 31 ವಾರ್ಡ್ಗಗಳಿಗೂ ಅಭ್ಯರ್ಥಿಯನ್ನು ಹಾಕಿದೆ. ಆ ಲೆಕ್ಕ ನೋಡಿದರೆ ಕಾಂಗ್ರೆಸ್‌ನಲ್ಲಿ 1 ನೆಯ ವಾರ್ಡ್ ಹೊರತುಪಡಿಸಿ 30 ವಾರ್ಡ್ಗೆ ಮಾತ್ರ ಅಭ್ಯರ್ಥಿಯನ್ನು ಹಾಕುವ ಕೆಲಸ ಮಾಡಲಾಗಿದೆ.


ಚುನಾವಣೆಗೂ ಮೊದಲೇ ಸಚಿವ ಯೋಗೇಶ್ವರ್ ಸೋಲು ಒಪ್ಪಿಕೊಂಡಿದ್ದಾರೋ, ಇಲ್ಲ ಬೇರೆಯದೇ ಯಾವುದಾದರೂ ತಂತ್ರಗಾರಿಕೆಯನ್ನು ರೂಪಿಸಿದ್ದಾರೋ ಎಂಬ ಬಗ್ಗೆ ತಿಳಿಯುತ್ತಿಲ್ಲ.

ಒಂದು ಲೆಕ್ಕದ ಪ್ರಕಾರ ಸಿ.ಪಿ ಯೋಗೇಶ್ವರ್ ಬಿಜೆಪಿ ಯಿಂದ ನಾಮಪತ್ರ ಸಲ್ಲಿಸುವವರಿಗೆ ಸ್ಥಳದಲ್ಲೇ ಉಳಿದು ಹುಮ್ಮಸ್ಸು ತುಂಬಬಹುದು ಎಂಬ ಅಭಿಪ್ರಾಯ ಇತ್ತು.


ಆದರೆ 2 ಹಾಗೂ 3 ನೆಯ ಹಂತದ ನಾಯಕರನ್ನು ಮುಂದೆ ಬಿಟ್ಟು ದೂರ ದೂರವೇ ಉಳಿದದ್ದು ಗಮನಾರ್ಹ. ತಾವು ಮುಂದೆ ನಿಂತು ಏನೋ ಮಾಡಲು ಹೋದರೆ, ಹೆಚ್.ಡಿ ಕುಮಾರಸ್ವಾಮಿಯವರು ಹಾಗೂ ಡಿ.ಕೆ ಸಹೋದರರು ಬೇರೆಯದೇ ಆದ ದಾರಿಯನ್ನು ತುಳಿಯಬಹುದು ಎಂಬ ಒಂದು ಭಾವನೆಯೂ ಸಹ ಅವರಲ್ಲಿ ಬಂದಿರಬಹುದು. ಹಾಗಾಗಿ ಅವರು ದೂರ ದೂರ ಸರಿದಿರಬಹುದು ಎಂದು ಅನ್ನಿಸುತ್ತಿದೆ.

ಯೋಗಿಯವರಿಂದ ಭವಿಷ್ಯದ 10 ದಿನಗಳಲ್ಲಿ ಯಾವ ಯಾವ ರೀತಿಯ ಕಸರತ್ತು ಆಗಬಹುದೋ ಕಾದು ನೋಡಬೇಕಾಗಿದೆ.


ಒಂದು ಕಡೆ ಸಚಿವ ಸಿ ಪಿ ಯೋಗೇಶ್ವರ್ ಕಾಂಗ್ರೆಸ್ ಜೊತೆಯಲ್ಲಿ ಚನ್ನಾಗಿರುವುದರಿಂದ ಕಣದಲ್ಲಿರುವ ಬಿಜೆಪಿ ಅಭ್ಯರ್ಥಿಗಳ ಅರ್ಧಕ್ಕಿಂತ ಹೆಚ್ಚು ಮಂದಿಯನ್ನು ಗೆಲ್ಲಿಸಿಕೊಂಡು ಕಿಂಗ್ ಮೇಕರ್ ಆಗಿ ಕಾಂಗ್ರೆಸ್ ಒಡಗೂಡಿ ಅಧ್ಯಕ್ಷ ಗಿರಿ ಪಡೆಯುವ ಜೊತೆಗೆ ಜೆಡಿಎಸ್ ಪಕ್ಷವನ್ನು ವಿರೋಧ ಪಕ್ಷವಾಗಿ ಕೂರಿಸುವ ಇರಾದೆ ಹೊಂದಿರುವುದಾಗಿಯೂ ಕೆಲ ಲೆಕ್ಕಾಚಾರಗಳು ಹೇಳುತ್ತಿವೆ.


ಇದಕ್ಕೆ ಜೆಡಿಎಸ್ ಪಕ್ಷದ ಒಳಜಗಳ ಹಾಗೂ ಬಂಡಾಯಗಾರರನ್ನು ತನ್ನತ್ತ ಸೆಳೆಯುವ ಕೆಲಸವನ್ನು ಮಾಡಲು ಸಂಚು ರೂಪಿಸುತ್ತಿರುವುದಾಗಿಯೂ ನಂಬಲರ್ಹ ಮೂಲಗಳು ಗುಸುಗುಸು ಪ್ರಾರಂಭಿಸಿವೆ.

ಮೂರು ಪಕ್ಷಗಳು ಸಮಬಲ ಹೋರಾಟ ಎಂದು ಹೇಳಿಕೊಳ್ಳುತ್ತಿದ್ದರೂ ಸಹ ಕಾಂಗ್ರೆಸ್ ಪಕ್ಷ ಮಾತ್ರ ಇನ್ನೂ ತಣ್ಣಗಿರುವುದು ಪಕ್ಷದ ವರಿಷ್ಠರು ಮತ್ತು ಅಭಿಮಾನಿಗಳಲ್ಲಿ ನಿರಾಸೆ ಮೂಡಿಸಿದೆ.


ಗೋ ರಾ ಶ್ರೀನಿವಾಸ...

ಮೊ:9845856139.

ಪ್ರತಿಕ್ರಿಯೆಗಳು

  • ನಿಮ್ಮ ಅಭಿಪ್ರಾಯ ತಿಳಿಸುವಲ್ಲಿ ನೀವು ಮೊದಲಿಗರಾಗಿ.

ನಿಮ್ಮ ಅಭಿಪ್ರಾಯಗಳನ್ನು ಬರೆಯಿರಿ/ತಿಳಿಸಿ.

Recent news in ramanagara »

ಅಣ್ಣನ ನೆನಪು ನಾಟಕ ಅದ್ಭುತ, ವಿಚಾರ ಹಂಚುವಲ್ಲಿ ವಿಫಲ
ಅಣ್ಣನ ನೆನಪು ನಾಟಕ ಅದ್ಭುತ, ವಿಚಾರ ಹಂಚುವಲ್ಲಿ ವಿಫಲ

ರಾಮನಗರ/ಚನ್ನಪಟ್ಟಣ: (ವಿಮರ್ಶಾತ್ಮಕ ಲೇಖನ)

ನಗರದ ಶತಮಾನೋತ್ಸವ ಭವನದಲ್ಲಿ ಬೆಂಗಳೂರಿನ ಪ್ರವರ ಹವ್ಯಾಸಿ ನಾಟಕ ತಂಡವು ನಡೆಸಿಕೊಟ್ಟ ಪೂರ್ಣ ಚ

ಪೌರಾಣಿಕ ನಾಟಕದಲ್ಲಿ ಜನಮನ ಸೂರೆಗೊಂಡು ಇತಿಹಾಸ ನಿರ್ಮಿಸಿದ ಮಹಿಳಾ ಕಲಾವಿದರು.
ಪೌರಾಣಿಕ ನಾಟಕದಲ್ಲಿ ಜನಮನ ಸೂರೆಗೊಂಡು ಇತಿಹಾಸ ನಿರ್ಮಿಸಿದ ಮಹಿಳಾ ಕಲಾವಿದರು.

ಚನ್ನಪಟ್ಟಣ :  ಚನ್ನಪಟ್ಟಣದಲ್ಲಿ ಮಹಿಳೆಯರೇ ಪೌರಾಣಿಕ ನಾಟಕವನ್ನು ಅಭ್ಯಾಸ ಮಾಡಿ ಬಯಲು ಮಂದಿರದಲ್ಲಿ ಪ್ರಸ್ತುತ ಪಡಿಸುತ್ತಿರುವುದು ವಿಶೇಷವಾಗಿದೆ. ಪೌರಾಣಿಕ

ಮಹಿಳೆಯರಿಂದಲೇ ಪೌರಾಣಿಕ ನಾಟಕ ಪ್ರದರ್ಶನ, ಇತಿಹಾಸ ಸೃಷ್ಟಿಸುವ ಸಾಧ್ಯತೆ ದಟ್ಟವಾಗಿದೆ. ಭಾವಿಪ ಪದಾಧಿಕಾರಿಗಳು
ಮಹಿಳೆಯರಿಂದಲೇ ಪೌರಾಣಿಕ ನಾಟಕ ಪ್ರದರ್ಶನ, ಇತಿಹಾಸ ಸೃಷ್ಟಿಸುವ ಸಾಧ್ಯತೆ ದಟ್ಟವಾಗಿದೆ. ಭಾವಿಪ ಪದಾಧಿಕಾರಿಗಳು

ಚನ್ನಪಟ್ಟಣ: ನಗರದ ಶ್ರೀ ಕೊಲ್ಲಾಪುರದಮ್ಮನ ದೇವಸ್ಥಾನದ ಆವರಣದಲ್ಲಿ ಇದೇ ಮಾರ್ಚ್ ತಿಂಗಳ ಹತ್ತನೇ ತಾರಿಖಿನ ಭಾನುವಾರ ಮಧ್ಯಾಹ್ನ ತಾಲೂಕಿನಲ್ಲಿ ಇದೇ ಪ್ರಪ್ರಥ

ವರ್ಣ ನೀತಿ ಮತ್ತು ಜಾತಿಯತೆಯನ್ನು ಮೀರಿದವರು ಮಾತ್ರ ಮನುಷ್ಯ ಜಾತಿಯಾಗಲು ಸಾಧ್ಯ –ಪ್ರೊ. ಕೆ.ಎಸ್.ಭಗವಾನ್
ವರ್ಣ ನೀತಿ ಮತ್ತು ಜಾತಿಯತೆಯನ್ನು ಮೀರಿದವರು ಮಾತ್ರ ಮನುಷ್ಯ ಜಾತಿಯಾಗಲು ಸಾಧ್ಯ –ಪ್ರೊ. ಕೆ.ಎಸ್.ಭಗವಾನ್

ರಾಮನಗರ: ಶೂದ್ರರನ್ನು ವರ್ಣ ನೀತಿಯಿಂದಲೆ ವೈದಿಕರು ಆಳಿದರು. ಇಂದಿಗೂ ಸಹ ವೈದಿಕರು ರಾಮನನ್ನು ನಮ್ಮ ಮೇಲೆ ಹೇರುವ ಮೂಲಕ ಮತ್ತೆ ಪೂರ್ವಕಾಲಕ್ಕೆ ಕರೆದು

ಬೆಂಗಳೂರು ಶಿಕ್ಷಕರ ಕ್ಷೇತ್ರದ ಉಪ ಚುನಾವಣೆ: ಜಿಲ್ಲೆಯಲ್ಲಿ ಶೇ.95.77 ಮತದಾನ
ಬೆಂಗಳೂರು ಶಿಕ್ಷಕರ ಕ್ಷೇತ್ರದ ಉಪ ಚುನಾವಣೆ: ಜಿಲ್ಲೆಯಲ್ಲಿ ಶೇ.95.77 ಮತದಾನ

ರಾಮನಗರ, ಫೆ. 16  ರಾಜ್ಯ ವಿಧಾನ ಪರಿಷತ್ತಿಗೆ ಬೆಂಗಳೂರು ಶಿಕ್ಷಕರ ಕ್ಷೇತ್ರದಿಂದಫೆ.16ರ ಶುಕ್ರವಾರ ಬೆಳಿಗ್ಗೆ 8 ರಿಂದ ಸಂಜೆ 4 ಗಂಟೆಯ ವರೆಗೆನಡೆದ ಉಪ ಚುನ

ವೈಜ್ಞಾನಿಕ ಮನೋವೃತ್ತಿ:ಸಾಂವಿಧಾನಿಕ ಕರ್ತವ್ಯ ಪ್ರೊ. ಎಂ.ಅಬ್ದುಲ್ ರೆಹಮಾನ್ ಪಾಷ

ರಾಮನಗರ; ಮಾನವ ಹಕ್ಕುಗಳನ್ನು ಯಾರೂ ಕೊಡುವುದಿಲ್ಲ, ವ್ಯಕ್ತಿಗಳಿಗೆ ಅವುಗಳಿಗೆ ಜನ್ಮತಃ ದಕ್ಕಿರುತ್ತವೆ. ಅವುಗಳನ್ನು ಯಾರೂ ಕೊಡುವುದಿಲ್ಲವಾದ್ದರಿ

ನಾಳೆ ನಡೆಯುವ ಶಿಕ್ಷಕರ ಕ್ಷೇತ್ರದ ಚುನಾವಣೆ ಪ್ರಯುಕ್ತ ಮತಗಟ್ಟೆಗಳತ್ತ ತೆರಳಿದ ಸಿಬ್ಬಂದಿ
ನಾಳೆ ನಡೆಯುವ ಶಿಕ್ಷಕರ ಕ್ಷೇತ್ರದ ಚುನಾವಣೆ ಪ್ರಯುಕ್ತ ಮತಗಟ್ಟೆಗಳತ್ತ ತೆರಳಿದ ಸಿಬ್ಬಂದಿ

ರಾಮನಗರ: ರಾಜ್ಯ ವಿಧಾನ ಸಭೆ ಶಿಕ್ಷಕರ ಕ್ಷೇತ್ರದ ಚುನಾವಣೆ ಕಾವೇರಿದ್ದು,  ಬಹಿರಂಗ ಪ್ರಚಾರ ಕೊನೆಗೊಂಡ ನಂತರ ಇಂದು ಮಸ್ಟರಿಂಗ್ ಕಾರ್ಯ ಮುಗಿದು, ಮತಗಟ್ಟೆ ಸ

ವೈದ್ಯ ಸಿಬ್ಬಂದಿ ನಿರ್ಲಕ್ಷ್ಯ ಹಸುಗೂಸು ಸಾವು
ವೈದ್ಯ ಸಿಬ್ಬಂದಿ ನಿರ್ಲಕ್ಷ್ಯ ಹಸುಗೂಸು ಸಾವು

ರಾಮನಗರ: ಚನ್ನಪಟ್ಟಣ: ವೈದ್ಯ ಸಿಬ್ಬಂದಿಯಾದ ಕಿರಿಯ ಮಹಿಳಾ ಆರೋಗ್ಯ ಸಹಾಯಕಿಯ ನಿರ್ಲಕ್ಷ್ಯದಿಂದ ಒಂದು ತಿಂಗಳು 20 ದಿನಗಳ ಗಂಡು ಶಿಶುವೊಂದು ಪ್ರಾಣ ಕಳೆದುಕೊ

ಗ್ರೇಟ್ ಬೆಂಗಳೂರು ಜಿಲ್ಲೆ, ಮತ್ತೇ ಮುನ್ನಲೆಗೆ ತಂದ : ಡಿ,ಸಿ.ಎಂ. ಡಿ.ಕೆ.ಶಿವಕುಮಾರ್
ಗ್ರೇಟ್ ಬೆಂಗಳೂರು ಜಿಲ್ಲೆ, ಮತ್ತೇ ಮುನ್ನಲೆಗೆ ತಂದ : ಡಿ,ಸಿ.ಎಂ. ಡಿ.ಕೆ.ಶಿವಕುಮಾರ್

ರಾಮನಗರ, ಫೆ. 12:   ನಾವು ರಾಮನಗರ ಜಿಲ್ಲೆಯವರಲ್ಲಾ ನಾವೆಲ್ಲರೂ ಬೆಂಗಳೂರು ಜಿಲ್ಲೆಯವರು. ಗ್ರೇಟ್ ಬೆಂಗಳೂರು ಜಿಲ್ಲೆ ಮಾಡುವ ಬಗ್ಗೆ ಲೋಕಸಭಾ ಚ

ನಮ್ಮದು ಬಹುತ್ವ ಭಾರತ, ಹಿಂದುತ್ವ ಹೇರಿಕೆ ಸರಿಯಲ್ಲ – ಡಾ. ಚಕ್ಕೆರೆ ಶಿವಶಂಕರ್
ನಮ್ಮದು ಬಹುತ್ವ ಭಾರತ, ಹಿಂದುತ್ವ ಹೇರಿಕೆ ಸರಿಯಲ್ಲ – ಡಾ. ಚಕ್ಕೆರೆ ಶಿವಶಂಕರ್


ರಾಮನಗರ : ಫೆ 10 ನಮ್ಮದು ಬಹುತ್ವ ಭಾರತ, ಇಲ್ಲಿ ಎಲ್ಲಾ ಧರ್ಮೀಯರು ಇದ್ದಾರೆ. ಕೇವಲ ಹಿಂದುತ್ವವನ್ನು ಬಲವಂತವಾಗಿ ಹೇರುವುದು ಸರಿಯಲ್ಲ. ಭಾರತದ

Top Stories »  


Top ↑