Tel: 7676775624 | Mail: info@yellowandred.in

Language: EN KAN

    Follow us :


ಗುತ್ತಿಗೆದಾರರಿಗೆ ಕಾಮಗಾರಿ ನಡೆಸುವ ಸಂದರ್ಭದಲ್ಲಿ ಕೈಗೊಳ್ಳಬೇಕಾದ ಮುನ್ನಚ್ಚರಿಕಾ ಕ್ರಮಗಳ ಬಗ್ಗೆ ತರಬೇತಿ ನೀಡಿ : ಹನುಮಂತಪ್ಪ

Posted date: 07 Jun, 2021

Powered by:     Yellow and Red

ಗುತ್ತಿಗೆದಾರರಿಗೆ ಕಾಮಗಾರಿ ನಡೆಸುವ ಸಂದರ್ಭದಲ್ಲಿ ಕೈಗೊಳ್ಳಬೇಕಾದ ಮುನ್ನಚ್ಚರಿಕಾ ಕ್ರಮಗಳ ಬಗ್ಗೆ ತರಬೇತಿ ನೀಡಿ : ಹನುಮಂತಪ್ಪ

ರಾಮನಗರ, ಜೂನ್.07: ನಗರ ಸ್ಥಳೀಯ ಸಂಸ್ಥೆಗಳು ಸೇರಿದಂತೆ ಇತರೆ ಇಲಾಖೆಗಳು ಗುತ್ತಿಗೆದಾರರಿಗೆ ಕೈಗೊಳ್ಳಬೇಕಾದ ಮುನ್ನಚ್ಚರಿಕಾ ಕ್ರಮಗಳ ಬಗ್ಗೆ ತರಬೇತಿ ನೀಡುವಂತೆ ಕರ್ನಾಟಕ ರಾಜ್ಯ ಸಫಾಯಿ ಕರ್ಮಚಾರಿ ಅಭಿವೃದ್ಧಿ ನಿಗಮ ಅಧ್ಯಕ್ಷರಾದ ಹನುಮಂತಪ್ಪ ಅವರು ತಿಳಿಸಿದರು.


ಅವರು ಇಂದು ಜಿಲ್ಲಾಧಿಕಾರಿಗಳ ಕಛೇರಿ ಸಭಾಂಗಣದಲ್ಲಿ ಅಧಿಕಾರಿಗಳ ಸಭೆ ನಡೆಸಿ ಮಾತನಾಡಿದರು. ಅನಿವಾರ್ಯ ಸಂದರ್ಭಗಳಲ್ಲಿ ಮ್ಯಾನ್ ಹೋಲ್‌ಗಳ ಒಳಭಾಗದಲ್ಲಿ ಇಳಿದು ಕೆಲಸ ಕೈಗೊಳ್ಳಬೇಕಾದ ಸಂದರ್ಭದಲ್ಲಿ ಜಿಲ್ಲಾ ಮಟ್ಟದಲ್ಲಿರುವ ಸಮಿತಿಯ ಒಪ್ಪಿಗೆ ಪಡೆದು ಸಮಿತಿ ತಿಳಿಸುವ ಕ್ರಮಗಳನ್ನು ಅನುಸರಿಸಬೇಕು. ರಾಮನಗರ ಜಿಲ್ಲೆಯಲ್ಲಿ ಮ್ಯಾನ್ ಹೋಲ್ ಸ್ವಚ್ಛಗೊಳಿಸಲು ಇಳಿದು ಮೂರು ಜನ ಮೃತಪಟ್ಟಿರುವುದು ವಿಷಾದನೀಯ. ಈ ಬಗ್ಗೆ ನಿಷ್ಪಕ್ಷಪಾತವಾಗಿ ತನಿಖೆ ನಡೆಸಿ ಕ್ರಮ ಕೈಗೊಳ್ಳಬೇಕು ಎಂದರು.


ಮ್ಯಾನ್‌ಹೋಲ್‌ನಲ್ಲಿ ಮೃತಪಟ್ಟ 3 ಜನರ ಕುಟುಂಬಕ್ಕೆ ನೀಡಲಾಗಿರುವ ಪರಿಹಾರದ ಬಗ್ಗೆ ಮಾಹಿತಿ ಪಡೆದ ನಂತರ ಅಧ್ಯಕ್ಷರು ಪೊಲೀಸ್ ಇಲಾಖೆಯಿಂದ ಚಾರ್ಜ್ ಶೀಟ್‌ನ್ನು ಯಾವುದೇ ಲೋಪವಿಲ್ಲದಂತೆ ಸಲ್ಲಿಸಿ ತಪ್ಪಿತಸ್ಥರಿಗೆ ಶಿಕ್ಷೆಯಾಗಬೇಕು‌ಎಂದರು.


ಮೃತಪಟ್ಟ 3 ಜನರ ಕುಟುಂಬಕ್ಕೆ ಜೀವನ ಅನುಕೂಲವಾಗುವಂತೆ ಕರ್ನಾಟಕ ರಾಜ್ಯ ಸಫಾಯಿ ಕರ್ಮಚಾರಿ ಅಭಿವೃದ್ಧಿ ನಿಗಮದಿಂದ 3 ಲಕ್ಷದಲ್ಲಿ ಸಣ್ಣ ಅಂಗಡಿ ಪ್ರಾರಂಭಿಸಲು ಸಹಾಯ ಮಾಡಲಾಗುವುದು. ಇದಕ್ಕೆ ಸಂಬಂಧಿಸಿದಂತೆ ಕ್ರಮ ಕೈಗೊಳ್ಳುವಂತೆ ಅಧಿಕಾರಿಗಳಿಗೆ ತಿಳಿಸಿದರು.


ನಗರಸಭೆ, ಪುರಸಭೆಗಳು ಪೌರಕಾರ್ಮಿಕರಿಲ್ಲದೆ ಕೆಲಸ ನಿರ್ವಹಿಸಲು ಸಾಧ್ಯವಾಗುವುದಿಲ್ಲ. ಪೌರಕಾರ್ಮಿಕರ ಆರೋಗ್ಯದ ಬಗ್ಗೆ ಹೆಚ್ಚಿನ ಕಾಳಜಿ ವಹಿಸಬೇಕು. ಅವರಿಗೆ ಗಮ್ ಬೂಟ್, ಹ್ಯಾಂಡ್ ಗ್ಲೌಸ್ ಹಾಗೂ ಮಾಸ್ಕ್ ನ್ನು ಒದಗಿಸುವುದರ ಜೊತೆಗೆ ಅವರಲ್ಲಿ ಅದನ್ನು ಕೆಲಸ ಮಾಡುವ ಸಂದರ್ಭದಲ್ಲಿ ಕಟ್ಟುನಿಟ್ಟಾಗಿ ಉಪಯೋಗಿಸುವ ಬಗ್ಗೆ ಅರಿವು ಮೂಡಿಸಿ ಎಂದರು.


ಪೌರಕಾರ್ಮಿಕರು ಅವರು ಕೆಲಸ ನಿರ್ವಹಿಸದ ನಂತರ ಸ್ನಾನ ಮಾಡಿ ಮನೆಗಳಿಗೆ ತೆರಳಲು ಶೌಚಗೃಹವನ್ನು ನಿರ್ಮಿಸುವ ಕೆಲಸವನ್ನು ಶೀಘ್ರವಾಗಿ ಕೈಗೊಳ್ಳಿ ಶೌಚಗೃಹದಲ್ಲಿ ಅವರಿಗೆ ಕಾಯಲು ಕೊಠಡಿಯನ್ನು ಸಹ ನಿರ್ಮಿಸಿ ಎಂದರು. 


ಸಭೆಯಲ್ಲಿ ಜಿಲ್ಲಾಧಿಕಾರಿ ಡಾ.ರಾಕೇಶ್ ಕುಮಾರ್ ಕೆ, ಅಪರ ಜಿಲ್ಲಾಧಿಕಾರಿ ಜವರೇಗೌಡ ಟಿ‌, ರಾಮನಗರ ನಗರಸಭೆ ಆಯುಕ್ತ ನಂದಕುಮಾರ್, ಜಿಲ್ಲಾ ಸಮಾಜ ಕಲ್ಯಾಣಾಧಿಕಾರಿ ಲಲಿತಾ, ಅಂಬೇಡ್ಕರ್ ಅಭಿವೃದ್ಧಿ ನಿಗಮದ ಜಿಲ್ಲಾ ವ್ಯವಸ್ಥಾಪಕ ವಿಜಯ್ ಕುಮಾರ್,  ಜಿಲ್ಲಾ ಸಫಾಯಿ ಕರ್ಮಚಾರಿ ಜಾಗೃತಿ ಸಮಿತಿ ಸದಸ್ಯರಾದ ನಾಗರಾಜು, ಶಿವಕುಮಾರ್ ಸ್ವಾಮಿ,  ಉಪವಿಭಾಗ ಮಟ್ಟದ ಜಾಗೃತಿ ಮತ್ತು ಉಸ್ತುವಾರಿ ಸಮಿತಿ ಸದಸ್ಯರಾದ ಗಿರೀಶ್, ವೆಂಕಟೇಶ್  ಸೇರಿದಂತೆ ಇನ್ನಿತರ ಗಣ್ಯರು ಉಪಸ್ಥಿತರಿದ್ದರು.


ಗೋ ರಾ ಶ್ರೀನಿವಾಸ...

ಮೊ:9845856139.

??????????????

  • ????? ???????? ??????????? ???? ??????????.

ನಿಮ್ಮ ಅಭಿಪ್ರಾಯಗಳನ್ನು ಬರೆಯಿರಿ/ತಿಳಿಸಿ.

Recent news in ramanagara »

ಪೋಲೀಸರಿಗೆ ಸಾರ್ವಜನಿಕರ ಸಹಾಯ ಅತ್ಯಗತ್ಯ. ಪಿಎಸ್ಐ ಸರಸ್ವತಿ
ಪೋಲೀಸರಿಗೆ ಸಾರ್ವಜನಿಕರ ಸಹಾಯ ಅತ್ಯಗತ್ಯ. ಪಿಎಸ್ಐ ಸರಸ್ವತಿ

ಪೋಲೀಸರೊಬ್ಬರೆ ಎಲ್ಲವನ್ನೂ ಸಾಧಿಸಲಸಾಧ್ಯ, ಸಾರ್ವಜನಿಕರ ಸಹಾಯವಿದ್ದರೆ, ಅಸಾಧ್ಯವಾದುದನ್ನು ಸಾಧಿಸಲು ಸಾಧ್ಯ ಎಂದು ಅಕ್ಕೂರು ಪೋಲಿಸ್ ಠಾಣೆಯ ಉಪ ನಿರೀಕ್ಷಕಿ ಸರಸ್ವತಿ ರವರು ಅಭಿಪ್ರಾಯಪಟ್ಟರು. ಅವರು ಗ

ಕನಕಪುರ ಉಪನೋಂದಣಾಧಿಕಾರಿ ಕಛೇರಿ ಮುಂದೆ ಜನಸಾಗರ. ನಗರಸಭೆಯಿಂದ ಎಚ್ಚರಿಕೆ
ಕನಕಪುರ ಉಪನೋಂದಣಾಧಿಕಾರಿ ಕಛೇರಿ ಮುಂದೆ ಜನಸಾಗರ. ನಗರಸಭೆಯಿಂದ ಎಚ್ಚರಿಕೆ

ಕನಕಪುರ :ನಗರದ ಉಪನೋಂದಣಾಧಿಕಾರಿ ಕಚೇರಿಯ ಕರ್ತವ್ಯ ಸಮಯದಲ್ಲಿ  ಕೊರೋನಾ ಮಾರ್ಗಸೂಚಿಗಳನ್ನು ಸಾರಾಸಗಟಾಗಿ ಉಲ್ಲಂಘಿಸಿ ಕಚೇರಿಯೊಳಗೆ ಜನರ ಗುಂಪನ್ನು ಸೇರಿಸಿಕೊಂಡು ಕೆಲಸ ನಿರ್ವಹಿಸುತ್ತಿದ್ದ ವೇಳೆ

ಕೊರೊನಾ ವಾರಿಯರ್ಸ್‌ ಎಂದು ಪರಿಗಣಿಸಿ, 15 ನೇ ಹಣಕಾಸು ಯೋಜನೆಯಲ್ಲಿ ವೇತನ ನೀಡುವಂತೆ ಆಗ್ರಹ
ಕೊರೊನಾ ವಾರಿಯರ್ಸ್‌ ಎಂದು ಪರಿಗಣಿಸಿ, 15 ನೇ ಹಣಕಾಸು ಯೋಜನೆಯಲ್ಲಿ ವೇತನ ನೀಡುವಂತೆ ಆಗ್ರಹ

ಚನ್ನಪಟ್ಟಣ: ತಮ್ಮನ್ನು ಕೊರೊನಾ ವಾರಿಯರ್ಸ್ ಎಂದು ಪರಿಗಣಿಸುವುದರ ಜತೆಗೆ 15 ನೇ ಹಣಕಾಸು ಯೋಜನೆಯಲ್ಲಿ ವೇತನವನ್ನು ಪಾವತಿಸುವಂತೆ ಆಗ್ರಹಿಸಿ, ರಾಜ್ಯ ಗ್ರಾ.ಪಂ. ನೌಕರರ ಸಂಘ ಮತ್ತು ಸಿಐಟಿಯು ಕಾರ್ಯಕರ್

ಕಬ್ಬಾಳು ಅರಣ್ಯದಲ್ಲಿ ಹತ್ತಕ್ಕೂ‌ ಹೆಚ್ಚು ಆನೆಗಳು
ಕಬ್ಬಾಳು ಅರಣ್ಯದಲ್ಲಿ ಹತ್ತಕ್ಕೂ‌ ಹೆಚ್ಚು ಆನೆಗಳು

ರಾಮನಗರ: ಹಲವು ತಿಂಗಳಿಂದ ರೈತರಿಗೆ ಉಪಟಳ ನೀಡುತ್ತಿದ್ದ 7 ಕಾಡಾನೆಗಳನ್ನು ಮುತ್ತತ್ತಿಯ ಕಾವೇರಿ ವನ್ಯಜೀವಿ ಧಾಮಕ್ಕೆ ಅಟ್ಟಲು ಅರಣ್ಯ ಇಲಾಖೆ ಯಶಸ್ವಿಯಾಗಿದೆ.


23 ಆನೆಗಳ‌

ರಾಮನಗರದಲ್ಲಿ ರೋಟರಿ-ಬಿಜಿಎಸ್ ಆಸ್ಪತ್ರೆ ಲೋಕಾರ್ಪಣೆ
ರಾಮನಗರದಲ್ಲಿ ರೋಟರಿ-ಬಿಜಿಎಸ್ ಆಸ್ಪತ್ರೆ ಲೋಕಾರ್ಪಣೆ

ರಾಮನಗರ: ಕೋವಿಡ್‌ ಹೊರತುಪಡಿಸಿ ಸಾಮಾನ್ಯ ರೋಗಿಗಳಿಗೆ ಗುಣಮಟ್ಟದ ಚಿಕಿತ್ಸೆ ನೀಡುವ ಉದ್ದೇಶದಿಂದ ರಾಮನಗರ ಜಿಲ್ಲಾ ಕೇಂದ್ರದಲ್ಲಿ ಸ್ಥಾಪಿಸಿರುವ ನವೀಕೃತ ರೋಟರಿ ಬಿಜಿಎಸ್ ಆಸ್ಪತ್ರೆಯನ್ನು ಆದಿಚುಂಚನಗಿರ

ಮಗುವಿನ ಮೇಲೆ ಕುಸಿದ ಮನೆಯ ಗೋಡೆ. ಸಾವು ಬದುಕಿನ ಹೋರಾಟದಲ್ಲಿ ಮಗು
ಮಗುವಿನ ಮೇಲೆ ಕುಸಿದ ಮನೆಯ ಗೋಡೆ. ಸಾವು ಬದುಕಿನ ಹೋರಾಟದಲ್ಲಿ ಮಗು

ನಗರದ ಷೇರು ಹೋಟೆಲ್ ಬಳಿಯ ತಟ್ಟೆಕೆರೆ, ಕಲಾಗ್ರಾಮ ದಲ್ಲಿನ ಆಲ್ ಅಮಿನ್ ಶಾಲೆಯ ಬಳಿ ಶೆಡ್ ನ ಗೋಡೆ ಕುಸಿದು ಕೂಲಿಕಾರ್ಮಿಕ ಯಾಸೀನ್ ಎಂಬುವವರ ಆಯಾನ್ ಎಂಬ ವರ್ಷದ ಮಗುವೊಂದು ಜೀವನ್ಮರಣ ಹೋರಾಟ ಮಾಡುತ್ತಿರ

ತಿಟ್ಟಮಾರನಹಳ್ಳಿ ಬಳಿ ಅವೈಜ್ಞಾನಿಕ ಅಂಡರ್ ಪಾಸ್ ವಿರೋಧಿಸಿ ಸಾಂಕೇತಿಕ ಮೌನ ಪ್ರತಿಭಟನೆ
ತಿಟ್ಟಮಾರನಹಳ್ಳಿ ಬಳಿ ಅವೈಜ್ಞಾನಿಕ ಅಂಡರ್ ಪಾಸ್ ವಿರೋಧಿಸಿ ಸಾಂಕೇತಿಕ ಮೌನ ಪ್ರತಿಭಟನೆ

ಚನ್ನಪಟ್ಟಣ ತಾಲ್ಲೂಕಿನ ತಿಟ್ಟಮಾರನಹಳ್ಳಿ ಬಳಿ ಹಾದು ಹೋಗುತ್ತಿರುವ ಬೆಂಗಳೂರು ಮೈಸೂರು ರಾಷ್ಟ್ರೀಯ ಹೆದ್ದಾರಿಯ ನೂತನ ಬೈಪಾಸ್ ರಸ್ತೆಗೆ ತಾಲೂಕಿನ ತಿಟ್ಟಮಾರನಹಳ್ಳಿ ಗ್ರಾಮದ ಬಳಿ ಕುಣಿಗಲ್ ಹೆದ್ದಾರಿಗೆ

ಕೂರಣಗೆರೆ ಕೆರೆ ಒತ್ತುವರಿ ತೆರವುಗೊಳಿಸಿದ ತಹಶಿಲ್ದಾರ್.
ಕೂರಣಗೆರೆ ಕೆರೆ ಒತ್ತುವರಿ ತೆರವುಗೊಳಿಸಿದ ತಹಶಿಲ್ದಾರ್.

ಪತ್ರಿಕೆಯ ಫಲಶೃತಿ

ತಾಲ್ಲೂಕಿನ ಕೂರಣಗೆರೆ ಗ್ರಾಮದ ಕೆರೆಯನ್ನು ಒತ್ತುವರಿ ಮಾಡಿಕೊಂಡಿದ್ದು, ಅಕ್ರಮ ಹಾಗೂ ಅವೈಜ್ಞಾನಿಕವಾಗಿ ಮಣ್ಣುತೆಗೆಯುತ್ತಿದ್ದಾರೆಂದು ಸಮಾಜ ಸೇವಕ ಕೃಷ್ಣಪ್ಪ

ಜಿಲ್ಲೆಯಲ್ಲಿ ಹೆಚ್ಚಾಗುತ್ತಿರುವ ಸರಗಳ್ಳತನ. ಎಚ್ಚೆತ್ತುಕೊಳ್ಳಬೇಕಾಗಿದೆ ಪೋಲೀಸರು
ಜಿಲ್ಲೆಯಲ್ಲಿ ಹೆಚ್ಚಾಗುತ್ತಿರುವ ಸರಗಳ್ಳತನ. ಎಚ್ಚೆತ್ತುಕೊಳ್ಳಬೇಕಾಗಿದೆ ಪೋಲೀಸರು

ನಗರ ಸೇರಿದಂತೆ ತಾಲೂಕಿನಾದ್ಯಂತ ಮಹಿಳೆಯರ ಮೈಮೇಲಿನ ಸರಗಳನ್ನು ಕಿತ್ತು ಪರಾರಿಯಾಗುವುದಲ್ಲದೆ, ಅವರ ಸಾವಿಗೂ ಕಾರಣವಾಗುತ್ತಿರುವ ತಂಡ ಜಿಲ್ಲೆಯಾದ್ಯಂತ ಸಕ್ರಿಯವಾಗಿದ್ದು, ಪೋಲೀಸರು ಎಚ್ಚೆತ್ತುಕೊಂಡು ಚೈನ್

ರಾಮನಗರ ಜಿಲ್ಲೆಯ ಮನೆಗಳಿಗೆ ನದಿ ನೀರು ಪೂರೈಕೆ: ಯೋಜನೆಗೆ 3 ತಿಂಗಳಲ್ಲಿ ಡಿಪಿಆರ್‌: ಡಿಸಿಎಂ
ರಾಮನಗರ ಜಿಲ್ಲೆಯ ಮನೆಗಳಿಗೆ ನದಿ ನೀರು ಪೂರೈಕೆ: ಯೋಜನೆಗೆ 3 ತಿಂಗಳಲ್ಲಿ ಡಿಪಿಆರ್‌: ಡಿಸಿಎಂ

ಬೆಂಗಳೂರು: ಪ್ರತಿ ಮನೆಗಳಿಗೂ ನದಿ ಮೂಲದ‌ ನೀರೊದಗಿಸುವ ಜಲಜೀವನ್‌ ಮಿಷನ್‌ ಯೋಜನೆ ಅಡಿಯಲ್ಲಿ ಕಾರ್ಯಗತವಾಗುತ್ತಿರುವ ಯೋಜನೆಗೆ ಅಗತ್ಯ ಇರುವ ಜಲಮೂಲಗಳು ರಾಮನಗರ ಜಿಲ್ಲೆಯಲ್ಲಿ ಇವೆ. ಹೀಗಾಗಿ ಯೋಜನೆಯನ್ನ

Top Stories »  


Top ↑