Tel: 7676775624 | Mail: info@yellowandred.in

Language: EN KAN

    Follow us :


ಯೋಜನೆಗೆ ಭೂಮಿಪೂಜೆ; ಕಾಲಮಿತಿಯಲ್ಲಿ ಕಾಮಗಾರಿ ಪೂರ್ಣ ಎಂದ ಡಿಸಿಎಂ

Posted date: 19 Jul, 2021

Powered by:     Yellow and Red

ಯೋಜನೆಗೆ ಭೂಮಿಪೂಜೆ; ಕಾಲಮಿತಿಯಲ್ಲಿ ಕಾಮಗಾರಿ ಪೂರ್ಣ ಎಂದ ಡಿಸಿಎಂ

ರಾಮನಗರ: ಆದಿಚುಂಚಗಿರಿ ಮಹಾಸಂಸ್ಥಾನದ ಪೀಠಾಧ್ಯಕ್ಷರಾಗಿದ್ದ ಶ್ರೀ ಬಾಲಗಂಗಾಧರನಾಥ ಮಹಾಸ್ವಾಮೀಜಿ ಅವರ ಹುಟ್ಟೂರು ಬಾನಂದೂರು ಗ್ರಾಮವನ್ನು ವಿಶ್ವದರ್ಜೆಯ ಪಾರಂಪರಿಕ ತಾಣವನ್ನಾಗಿ ಅಭಿವೃದ್ಧಿಪಡಿಸುವ ಯೋಜನೆಗೆ ಸೋಮವಾರ ವಿದ್ಯುಕ್ತವಾಗಿ ಚಾಲನೆ ನೀಡಲಾಯಿತು. 


ಬಾನಂದೂರು ಗ್ರಾಮದಲ್ಲಿ ನಡೆದ ಕಾರ್ಯಕ್ರಮದಲ್ಲಿ ಶ್ರೀ ನಿರ್ಮಲಾನಂದ ನಾಥ ಮಹಾಸ್ವಾಮೀಜಿ ಅವರ ಸಾನ್ನಿಧ್ಯದಲ್ಲಿ ಉಪ ಮುಖ್ಯಮಂತ್ರಿ ಡಾ.ಸಿ.ಎನ್.‌ಅಶ್ವತ್ಥನಾರಾಯಣ, ಅರಣ್ಯ ಮತ್ತು ಕನ್ನಡ-ಸಂಸ್ಕೃತಿ ಖಾತೆ ಸಚಿವ ಅರವಿಂದ ಲಿಂಬಾವಳಿ ಅವರು ಯೋಜನೆಗೆ ಭೂಮಿಪೂಜೆ ನೆರೆವೇರಿಸಿದರು. 


ಈ ಸಂದರ್ಭದಲ್ಲಿ ಮಾತನಾಡಿದ ಉಪ ಮುಖ್ಯಮಂತ್ರಿಗಳು, "ಈ ಯೋಜನೆಯನ್ನು ಕಾರ್ಯಗತ ಮಾಡಲಿರುವ ಖಾಸಗಿ ಸಂಸ್ಥೆಯು 125 ಕೋಟಿ ರೂ. ವೆಚ್ಚದ ಸಮಗ್ರ ಯೋಜನಾ ವರದಿಯನ್ನು (ಡಿಪಿಆರ್) ತಯಾರಿಸಿದೆ.‌ ಸರಕಾರ 2019-20ನೇ ಸಾಲಿನ ಮುಂಗಡ ಪತ್ರದಲ್ಲಿ ಈ ಯೋಜನೆಯನ್ನು ಘೋಷಿಸಿ 25 ಕೋಟಿ ರೂ. ಅನುದಾನವನ್ನೂ ನೀಡಿದೆ. ಸರಕಾರವೂ ಸೇರಿ ಎಲ್ಲರ ಸಹಕಾರದೊಂದಿಗೆ ಇಡೀ ಯೋಜನೆಯನ್ನು ಕಾರ್ಯಗತ ಮಾಡಲಾಗುವುದು" ಎಂದರು. 


ಆಸ್ಪತ್ರೆ, ಧಾರ್ಮಿಕ ಮತ್ತು ಸಾಂಸ್ಕೃತಿಕ ಅಧ್ಯಯನ ಕೇಂದ್ರ, ಗೋಶಾಲೆ, ವಸ್ತು ಸಂಗ್ರಹಾಲಯ, ಗ್ರಂಥಾಲಯ ನಿರ್ಮಾಣ ಸೇರಿ ಹತ್ತು ಹಲವು ಯೋಜನೆಯಲ್ಲಿ ಅಡಕವಾಗಿದ್ದು, ಅತ್ಯಂತ ವೇಗವಾಗಿ ಕಾಮಗಾರಿಗಳನ್ನು ಪೂರ್ಣಗೊಳಿಸಲಾಗುವುದು ಎಂದರು ಡಿಸಿಎಂ. 


ಸಚಿವರಾದ ಅರವಿಂದ ಲಿಂಬಾವಳಿ ಮಾತನಾಡಿ, "ಜ್ಞಾನಕ್ಕೆ ಅತಿಹೆಚ್ಚು ಮಹತ್ವ ನೀಡುತ್ತಿದ್ದ ಶ್ರೀ ಬಾಲಗಂಗಾಧರ ನಾಥ ಮಹಾಸ್ವಾಮೀಜಿ ಅವರು, ಹಳ್ಳಿಮಕ್ಕಳ ಶಿಕ್ಷಣಕ್ಕೆ ಒತ್ತು ನೀಡಿದ್ದರು. ಅವರ ಆಶಯಗಳು ನಮ್ಮನ್ನು ಮುನ್ನಡೆಸುತ್ತಿದ್ದು, ಸಶಕ್ತ ಸಮಾಜ ನಿರ್ಮಾಣಕ್ಕೆ ಶ್ರೀಗಳಲ್ಲಿದ್ದ ಪರಿಕಲ್ಪನೆಗಳೆಲ್ಲ ಇಲ್ಲಿ ಸಾಕಾರವಾಗಲಿವೆ" ಎಂದರು. 


ಶ್ರೀ ಡಾ.ನಿರ್ಮಲಾನಂದ ನಾಥ ಮಹಾಸ್ವಾಮೀಜಿ ಅವರು ಸಾನ್ನಿಧ್ಯ ವಹಿಸಿ ಆಶೀರ್ವಚನ ನೀಡಿ, "ಈ ಯೋಜನೆ ಗುರುಗಳ ಅನುಗ್ರಹದೊಂದಿಗೆ ನಿರ್ವಿಘ್ನವಾಗಿ ಸಂಪನ್ನವಾಗಲಿ" ಎಂದು ನುಡಿದರು.  


ರಾಮನಗರದ ಆದಿಚುಂಚನಗಿರಿ ಶಾಖಾ ಮಠದ ಶ್ರಿ ಅನ್ನದಾನೇಶ್ವರ ಸ್ವಾಮೀಜಿಗಳು,  ಶಾಸಕರಾದ ಮಂಜುನಾಥ್‌, ಸಿ.ಎಂ.ಲಿಂಗಪ್ಪ, ಎಸ್.‌ರವಿ, ಅ.ದೇವೇಗೌಡ, ಜಿಲ್ಲಾಧಿಕಾರಿ ರಾಕೇಶ್‌, ಜಿಪಂ ಸಿಇಒ ಇಕ್ರಂ ಮುಂತಾದವರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು. 


*ಶ್ರೀಗಳ ಮಾತಾ ಪಿತೃಗಳ ಗದ್ದುಗೆಗೆ ಪೂಜೆ:*


ಕಾರ್ಯಕ್ರಮಕ್ಕೂ ಮೊದಲು ಉಪ ಮುಖ್ಯಮಂತ್ರಿಗಳು, ಶ್ರೀಗಳ ಜತೆಯಲ್ಲಿ ಶ್ರೀ ಬಾಲಗಂಗಾಧರ ನಾಥ ಮಹಾಸ್ವಾಮೀಜಿ ಅವರ ಪೂರ್ವಾಶ್ರಮ ಜನ್ಮಧಾತರಾದ ಶ್ರೀಮತಿ ಬೋರಮ್ಮ ಮತ್ತು ಶ್ರಿ ಚಿಕ್ಕಲಿಂಗಪ್ಪ ಅವರ ಗದ್ದುಗೆಗೆ ಪೂಜೆ ನೆರೆವೇರಿಸಿದರು.


ಗೋ ರಾ ಶ್ರೀನಿವಾಸ...

ಮೊ:9845856139.

??????????????

  • ????? ???????? ??????????? ???? ??????????.

ನಿಮ್ಮ ಅಭಿಪ್ರಾಯಗಳನ್ನು ಬರೆಯಿರಿ/ತಿಳಿಸಿ.

Recent news in ramanagara »

ಕರಾರಸಾ ನಿಗಮದಿಂದ ಕಾವೇರಿ ತಟದಲ್ಲಿ ಮುತ್ತತ್ತಿರಾಯನ ದರ್ಶನ. ವಿಶೇಷ ಟೂರ್ ಪ್ಯಾಕೇಜ್
ಕರಾರಸಾ ನಿಗಮದಿಂದ ಕಾವೇರಿ ತಟದಲ್ಲಿ ಮುತ್ತತ್ತಿರಾಯನ ದರ್ಶನ. ವಿಶೇಷ ಟೂರ್ ಪ್ಯಾಕೇಜ್

ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮದ ರಾಮನಗರ ವಿಭಾಗವು ಕಾವೇರಿ ತಟದಲ್ಲಿ ಮತ್ತತ್ತಿರಾಯನ ದರ್ಶನ ಎಂಬ ಹೆಸರಿನಲ್ಲಿ ವಿಶೇಷ ಟೂರ್ ಪ್ಯಾಕೇಜ್‍ನಡಿ ಸಾರಿಗೆ ಬಸ್ ಕಾರ್ಯಾಚರಣೆ ಪ್ರಾರಂಭಿಸಿದೆ.<

ಜನಸಾಮಾನ್ಯರಿಗಾಗಿ ರೋಟರಿ ಕ್ಲಬ್ ಕಾರ್ಯ ನಿರ್ವಹಿಸುತ್ತದೆ. ಎಂ ಕೆ ನಿಂಗಪ್ಪ
ಜನಸಾಮಾನ್ಯರಿಗಾಗಿ ರೋಟರಿ ಕ್ಲಬ್ ಕಾರ್ಯ ನಿರ್ವಹಿಸುತ್ತದೆ. ಎಂ ಕೆ ನಿಂಗಪ್ಪ

ರೋಟರಿ ಕ್ಲಬ್ ಎಂದಾಕ್ಷಣ ಅದು ಕೇವಲ ಪದಾಧಿಕಾರಿಗಳ ಆಸ್ತಿ ಎಂಬುದು ಜನರ ಭಾವನೆಯಾಗಿದೆ. ಕ್ಲ

ದಶವಾರ ಗ್ರಾಮದ ಪ್ರೌಢಶಾಲೆಯಲ್ಲಿ ಕಳವು. ಎಂ ಕೆ ದೊಡ್ಡಿ ಪೋಲಿಸ್ ಠಾಣೆಯಲ್ಲಿ ದೂರು
ದಶವಾರ ಗ್ರಾಮದ ಪ್ರೌಢಶಾಲೆಯಲ್ಲಿ ಕಳವು. ಎಂ ಕೆ ದೊಡ್ಡಿ ಪೋಲಿಸ್ ಠಾಣೆಯಲ್ಲಿ ದೂರು

ನಗರವೂ ಸೇರಿದಂತೆ ತಾಲ್ಲೂಕಿನಾದ್ಯಂತ ಇತ್ತೀಚೆಗೆ ಕಳ್ಳತನಗಳು ಹೆಚ್ಚಾಗುತ್ತಿದ್ದು, ಮನೆಗಳ್ಳತನಗಳ ಜೊತೆಗೆ ಶಾಲೆಗಳನ್ನು ದೋಚುತ್ತಿದ್ದು, ಈಗ ದಶವಾರ ಗ್ರಾಮದ ಪ್ರೌಢಶಾಲೆ ಕಳ್ಳತನವಾಗಿದೆ.

<

ರೆಡ್ ಕ್ರಾಸ್ ರಕ್ತನಿಧಿಗೆ ಕಂದಾಯ ಭವನದಲ್ಲಿ ಜಾಗ ನೀಡಲು ಮನವಿ
ರೆಡ್ ಕ್ರಾಸ್ ರಕ್ತನಿಧಿಗೆ ಕಂದಾಯ ಭವನದಲ್ಲಿ ಜಾಗ ನೀಡಲು ಮನವಿ

ರಾಮನಗರ: ಇಲ್ಲಿನ ಕಂದಾಯ ಭವನದಲ್ಲಿ ರೆಡ್ ಕ್ರಾಸ್ ರಕ್ತನಿಧಿಗೆ ಸ್ಥಳಾವಕಾಶ ಕೊಡುವಂತೆ ಜಿಲ್ಲಾಡಳಿತಕ್ಕೆ ಮನವಿ ಮಾಡಲಾಗಿದೆ. ಇದು ಸಾಧ್ಯವಾದರೆ ರೆಡ್ ಕ್ರಾಸ್‍ವತಿಯಿಂದಲೇ ರಕ್ತನಿಧಿಯನ್ನು ನಿರ್ವಹಣೆ ಮ

ತಾಲ್ಲೂಕಿನ ಸುಣ್ಣಘಟ್ಟ ಗ್ರಾಮದ ಮನೆಯೊಂದರಲ್ಲಿ ಮಂಗಳವಾರ ನಗನಗದು ಮತ್ತು ಮನೆಯ ಸಾಮಾನು ಕಳ್ಳತನ
ತಾಲ್ಲೂಕಿನ ಸುಣ್ಣಘಟ್ಟ ಗ್ರಾಮದ ಮನೆಯೊಂದರಲ್ಲಿ ಮಂಗಳವಾರ ನಗನಗದು ಮತ್ತು ಮನೆಯ ಸಾಮಾನು ಕಳ್ಳತನ

ಚನ್ನಪಟ್ಟಣ.ಜು.29: ತಾಲ್ಲೂಕಿನ ಸುಣ್ಣಘಟ್ಟ ಗ್ರಾಮದ ಮನೆಯೊಂದರಲ್ಲಿ ಮಂಗಳವಾರ ನಗನಗದು ಮತ್ತು ಮನೆಯ ಸಾಮಾನು ಕಳ್ಳತನವಾಗಿದ್ದು, ಗ್ರಾಮಾಂತರ ಪೋಲಿಸ್ ಠಾಣೆಯಲ್ಲಿ ದೂರು ದಾಖಲಾಗಿದೆ.  ಸರ್ವ

ಮರ ಕಡಿಯುವಾಗ ಮೇಲೆ ಬಿದ್ದು, ಸಂಕಲಗೆರೆ ಗ್ರಾಮದ ಯುವಕ ಸಾವು
ಮರ ಕಡಿಯುವಾಗ ಮೇಲೆ ಬಿದ್ದು, ಸಂಕಲಗೆರೆ ಗ್ರಾಮದ ಯುವಕ ಸಾವು

ಚನ್ನಪಟ್ಟಣ, ಜು.೨೭: ತಾನೇ ಕಡಿದ ಮರ ಬಿದ್ದು ವ್ಯಕ್ತಿ ಸಾವನ್ನಪ್ಪಿರುವ ಘಟನೆ ತಾಲೂಕಿನ ಹೊಟ್ಟಿಗನಹೊಸಹಳ್ಳಿ ಗ್ರಾಮದಲ್ಲಿ ಮಂಗಳವಾರ ನಡೆದಿದೆ.

ಸ್ಥಳೀಯ ರಾಜಕಾರಣಿಗಳು, ಪತ್ರಕರ್ತರು, ರೈತಸಂಘ ಮತ್ತು ಸಾರ್ವಜನಿಕರಿಂದ ಎಂ ರಾಮು ರವರಿಗೆ ಶ್ರದ್ಧಾಂಜಲಿ
ಸ್ಥಳೀಯ ರಾಜಕಾರಣಿಗಳು, ಪತ್ರಕರ್ತರು, ರೈತಸಂಘ ಮತ್ತು ಸಾರ್ವಜನಿಕರಿಂದ ಎಂ ರಾಮು ರವರಿಗೆ ಶ್ರದ್ಧಾಂಜಲಿ

ರಾಜ್ಯ ರೈತ ಸಂಘದ ಕಾರ್ಯಾಧ್ಯಕ್ಷರಾಗಿದ್ದ ಮೊಗೇನಹಳ್ಳಿ ಎಂ ರಾಮು ರವರಿಗೆ ಇಂದು ಬೆಳಿಗ್ಗೆ ಗಾಂಧಿಭವನದ ಮುಂಭಾಗ ಜಿಲ್ಲಾ ಮತ್ತು ತಾಲ್ಲೂಕಿನ ವಿವಿಧ ಸಂಘಸಂಸ್ಥೆಗಳ, ಹಲವಾರು ಮುಖಂಡರು ಅವರ ಭಾವಚಿತ್ರಕ್ಕ

ಎರಡು ಕಿಡ್ನಿ ಇಲ್ಲದ ಎಲೆಕೇರಿ ಸುಮಾ ಗೆ ನೆರವಾಗುವಂತೆ ದಾನಿಗಳಿಗೆ ಮೊರೆ
ಎರಡು ಕಿಡ್ನಿ ಇಲ್ಲದ ಎಲೆಕೇರಿ ಸುಮಾ ಗೆ ನೆರವಾಗುವಂತೆ ದಾನಿಗಳಿಗೆ ಮೊರೆ

ನಗರದ ಎಲೆಕೇರಿ ಗ್ರಾಮದ ಹರೀಶ್ ಎಂಬುವವರ ಪತ್ನಿ ಸುಮಾ (25) ರವರಿಗೆ ಎರಡು ಕಿಡ್ನಿ ಯೂ ಫೇಲ್ ಆಗಿದ್ದು, ಆಕೆ ಜೀವನ್ಮರಣದ ಹೋರಾಟದಲ್ಲಿದ್ದಾರೆ.


ಕಡುಬಡವರಾದ ಇವರು ಕೂಲಿ ಮಾ

ಮಂಡ್ಯದಲ್ಲಿ ಹನಿಟ್ರ್ಯಾಪ್ ದಂಧೆ. ಮಹಿಳೆ ಮತ್ತು ಚನ್ನಪಟ್ಟಣ ದ ಯುವಕ ಸೇರಿ ಐದು ಮಂದಿ ಪೋಲೀಸರ ಅತಿಥಿ
ಮಂಡ್ಯದಲ್ಲಿ ಹನಿಟ್ರ್ಯಾಪ್ ದಂಧೆ. ಮಹಿಳೆ ಮತ್ತು ಚನ್ನಪಟ್ಟಣ ದ ಯುವಕ ಸೇರಿ ಐದು ಮಂದಿ ಪೋಲೀಸರ ಅತಿಥಿ

ಮಂಡ್ಯ ನಗರದಲ್ಲಿ ನಡೆಯುತ್ತಿದ್ದ ಹನಿಟ್ರಾಪ್ ದಂಧೆಯನ್ನು ಕ್ಷಣಾರ್ಧದಲ್ಲಿ ಭೇಧಿಸುವಲ್ಲಿ ಮಂಡ್ಯ ಗ್ರಾಮಾಂತರ ಪೊಲೀಸರು ಯಶಸ್ವಿಯಾಗಿದ್ದಾರೆ.

ದಂಧೆಯಲ್ಲಿ ತೊಡಗಿದ್ದ ಓರ್ವ ಮಹಿಳೆ ಹಾಗೂ

ಮಕ್ಕಳ ಅಕ್ರಮ ದತ್ತು, ತಾಲ್ಲೂಕಿನಲ್ಲಿ ನಡೆಯುತ್ತಿದೆ ಮಕ್ಕಳ ಮಾರಾಟ! ಜಾಲ ಭೇದಿಸ ಬೇಕಿದೆ ಪೋಲೀಸರು
ಮಕ್ಕಳ ಅಕ್ರಮ ದತ್ತು, ತಾಲ್ಲೂಕಿನಲ್ಲಿ ನಡೆಯುತ್ತಿದೆ ಮಕ್ಕಳ ಮಾರಾಟ! ಜಾಲ ಭೇದಿಸ ಬೇಕಿದೆ ಪೋಲೀಸರು

ಚನ್ನಪಟ್ಟಣ ತಾಲ್ಲೂಕಿನಲ್ಲಿ ಮಕ್ಕಳ ಮಾರಾಟವಾಗುತ್ತಿದೆಯೇ ? ಆಸ್ಪತ್ರೆ ಮತ್ತಿತರ ಕಡೆ ಮಕ್ಕಳು ಕಾಣೆಯಾಗುತ್ತಿದ್ದಾರೆಯೇ ? ಆಸ್ತಿಗಾಗಿ ಮಕ್ಕಳನ್ನು ಅಕ್ರಮವಾಗಿ ದತ್ತು ಪಡೆಯುತ್ತಿದ್ದಾರೆಯೇ ! ಮಕ್ಕಳು

Top Stories »  


Top ↑