Tel: 7676775624 | Mail: info@yellowandred.in

Language: EN KAN

    Follow us :


ಮಕ್ಕಳ ಅಕ್ರಮ ದತ್ತು, ತಾಲ್ಲೂಕಿನಲ್ಲಿ ನಡೆಯುತ್ತಿದೆ ಮಕ್ಕಳ ಮಾರಾಟ! ಜಾಲ ಭೇದಿಸ ಬೇಕಿದೆ ಪೋಲೀಸರು

Posted date: 24 Jul, 2021

Powered by:     Yellow and Red

ಮಕ್ಕಳ ಅಕ್ರಮ ದತ್ತು, ತಾಲ್ಲೂಕಿನಲ್ಲಿ ನಡೆಯುತ್ತಿದೆ ಮಕ್ಕಳ ಮಾರಾಟ! ಜಾಲ ಭೇದಿಸ ಬೇಕಿದೆ ಪೋಲೀಸರು

ಚನ್ನಪಟ್ಟಣ ತಾಲ್ಲೂಕಿನಲ್ಲಿ ಮಕ್ಕಳ ಮಾರಾಟವಾಗುತ್ತಿದೆಯೇ ? ಆಸ್ಪತ್ರೆ ಮತ್ತಿತರ ಕಡೆ ಮಕ್ಕಳು ಕಾಣೆಯಾಗುತ್ತಿದ್ದಾರೆಯೇ ? ಆಸ್ತಿಗಾಗಿ ಮಕ್ಕಳನ್ನು ಅಕ್ರಮವಾಗಿ ದತ್ತು ಪಡೆಯುತ್ತಿದ್ದಾರೆಯೇ ! ಮಕ್ಕಳು ಹೆಚ್ಚಾದರು ಅಥವಾ ಹೆಣ್ಣು ಮಗು ಎಂಬ ಕಾರಣದಿಂದ ಕೆಲ ಕೂಲಿಕಾರ್ಮಿಕರು ಹೊಟ್ಟೆಬಟ್ಟೆಗಾಗಿ ಮಕ್ಕಳನ್ನು ಮಾರುತ್ತಿದ್ದಾರೆಯೇ ? ಹೌದು ಎನ್ನುತ್ತಿವೆ ಇತ್ತೀಚಿನ ಬೆಳವಣಿಗೆಗಳು ಮತ್ತು ಬಲ್ಲ ಮೂಲಗಳು. ಗ್ರಾಮಾಂತರ ಪೋಲಿಸ್ ಠಾಣೆಯಲ್ಲಿ ನಿನ್ನೆ ದೂರು ದಾಖಲಾಗಿರುವ ಸಂಗತಿಯೇ ಸಾಕ್ಷಿಯಾಗಿದ್ದು, ಪೋಲೀಸರ ಹೆಚ್ಚಿನ ತನಿಖೆಯಿಂದ ಈ ಅಕ್ರಮ ಜಾಲ ಹೊರಬೀಳಬೇಕಾಗಿದೆ.


ನಿನ್ನೆ ಅಂದರೆ 23-07 ರ ಶುಕ್ರವಾರ ಬಾಲ ಮಂದಿರ ಹಾಗೂ ಮಕ್ಕಳ ಕಲ್ಯಾಣ ಇಲಾಖೆಯಿಂದ ಗ್ರಾಮಾಂತರ ಠಾಣೆಯಲ್ಲಿ ದೂರು ದಾಖಲಾಗಿದ್ದು, ಮಗು ಮಾರಾಟ ಮಾಡಿದರು ಅಥವಾ ಕದ್ದೊಯ್ದಿದ್ದಾರೆ ಎಂಬುದರ ದೂರು ಮಾತ್ರ ದಾಖಲಾಗಿಲ್ಲ. ಆದರೆ ಮಗುವನ್ನು ಕೊಂಡವರು ಮತ್ತು ಕೊಡಿಸಿದವರಿಬ್ಬರನ್ನು ಗ್ರಾಮಾಂತರ ವೃತ್ತ ನಿರೀಕ್ಷಕ ಶಿವಕುಮಾರ್ ಮತ್ತು ಉಪ ನಿರೀಕ್ಷಕ ಶಿವಕುಮಾರ್ ರವರು ಸತತ ಆರು ಗಂಟೆಗಳ ಕಾಲ ವಿಚಾರಣೆ ನಡೆಸಿ, ಎಫ್ಐಆರ್ ದಾಖಲಿಸಿಕೊಂಡು ತನಿಖೆ ಕೈಗೊಂಡಿದ್ದಾರೆ.


ತಾಲ್ಲೂಕಿನ ಮತ್ತೀಕೆರೆ-ಶೆಟ್ಟಿಹಳ್ಳಿ ಗ್ರಾಮದ ಮಹಿಳೆಯೋರ್ವರು ಗಂಡನಿಂದ ಎರಡು ವರ್ಷಗಳಿಗೂ ಹೆಚ್ಚು ಕಾಲ ದೂರವಿದ್ದು, ಆಕೆ ಅಪ್ಪಗೆರೆ ಗ್ರಾಮದಲ್ಲಿ ಒಂಟಿಯಾಗಿ ವಾಸಿಸುತ್ತಿದ್ದರು. ಆಕೆಯ ಗಂಡನಿಗೆ ಬೆಂಗಳೂರಿನ ಬಿಬಿಎಂಪಿ ಯಲ್ಲಿ ಡಿ ದರ್ಜೆಯ ನೌಕರಿ ದೊರೆತಿದ್ದು, ಅದರ ಲಾಭ ಪಡೆಯಲು ಈಕೆ ಈ ಹಿಂದೆ ನಗರದ ಸಾರ್ವಜನಿಕ ಆಸ್ಪತ್ರೆಯಲ್ಲಿ ಡಿ ಗ್ರೂಪ್ ಗುತ್ತಿಗೆ ನೌಕರಳಾಗಿ ಕೆಲಸ ನಿರ್ವಹಿಸುತ್ತಿದ್ದ ಮಹಿಳೆಯನ್ನು ಮತ್ತೊಬ್ಬ ಹುಡುಗಿಯ ಕಡೆಯಿಂದ ಪರಿಚಯಿಸಿಕೊಂಡು, ತನಗೊಂದು ಮಗು ಬೇಕೆಂದು ಬೇಡಿಕೆ ಇಟ್ಟಿದ್ದು, ಆಕೆ ಮೊದಲು ಐದು ಲಕ್ಷ ರೂಪಾಯಿ ಕೇಳಿದ್ದಾಳೆ. ಕೊನೆಗದೂ ಎಪ್ಪತ್ತು ಸಾವಿರ ರೂಪಾಯಿ ವ್ಯವಹಾರ ಕುದುರಿಸಿದ್ದಾರೆ ಎಂದು ಮಗು ಪಡೆದ ಮಹಿಳೆ ಒಪ್ಪಿಕೊಂಡಿದ್ದಾಳೆ.


*ವ್ಯವಹಾರದ ನಂತರ ಸೀಮಂತದ ನಾಟಕ*

ಗಂಡ ರಾತ್ರಿ ಸಮಯದಲ್ಲಿ ಬಂದು ಹೋಗುತ್ತಾರೆ ಎಂದು ಸ್ತಳೀಯರಿಗೆ ನಂಬಿಸಿದ ಮಹಿಳೆಯು ನಾನು ಬಸುರಿ ಎಂದು ಬಿಂಬಿಸಿದ್ದಾಳೆ. ದಲ್ಲಾಳಿ ಹೆಂಗಸಿನ ಅಣತಿಯಂತೆ ಒಂದಷ್ಟು ಮಂದಿಯನ್ನು ಮನೆಗೆ ಕರೆದು, ಸೀಮಂತವನ್ನು ಮಾಡಿಸಿಕೊಂಡಿದ್ದಾಳೆ. ಸೀಮಂತದ ಫೋಟೋಗಳನ್ನು ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಂಡಿದ್ದಾಳೆ. ಎಲ್ಲರನ್ನೂ ಮಂಕುಬೂದಿ ಎರಚಿ, ನಾಟಕವಾಡಿ ಪ್ರಸವಕ್ಕೆಂದು ಇಪ್ಪತ್ತು ದಿನಗಳ ಕಾಲ ಹೊರಗಡೆ ಇದ್ದು ಹದಿನೈದು ದಿನದ ಹಸುಗೂಸಿನೊಂದಿಗೆ ಅಪ್ಪಗೆರೆ ಗ್ರಾಮದ ತನ್ನ ಮನೆಗೆ ಹಿಂದುರಿಗಿದ್ದಾಳೆ.


*ಗಂಡನಿಗೆ ಅನುಮಾನ, ಸಿಕ್ಕಿಕೊಂಡ ಕಳ್ಳಿಯರು*

ಬೆಂಗಳೂರಿನಲ್ಲಿ ಕೆಲಸ ನಿರ್ವಹಿಸುತ್ತಿದ್ದ ಗಂಡನಿಗೆ ಅನುಮಾನ ಬಂದು ವಿಚಾರಿಸಲಾಗಿ, ನಗರದ ಸಾರ್ವಜನಿಕ ಆಸ್ಪತ್ರೆಯಲ್ಲಿ ದಾಖಲಾಗಿ, ದಲ್ಲಾಳಿ ಹೆಂಗಸಿನ ಮೂಲಕ ಮೈಸೂರಿನ ಜೆಎಸ್ಎಸ್ ಆಸ್ಪತ್ರೆಯಲ್ಲಿ ಹೆರಿಗೆಯಾಗಿರುವುದಾಗಿ ತಿಳಿಸಿದ್ದಾಳೆ. ಗಂಡ ಅನಾಮಿಕನಾಗಿ ಮಕ್ಕಳ ಸಹಾಯವಾಣಿಗೆ ಕರೆ ಮಾಡಿ ಮಾಹಿತಿ ನೀಡಿ, ಬಾಲಮಂದಿರ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ಸಹಾಯಕ ನಿರ್ದೇಶಕ ಸಿದ್ದಲಿಂಗಯ್ಯ ಜೊತೆಗೂಡಿ ಮಗುವನ್ನು ಮಾಗಡಿಯ ಶಿಶುಮಂದಿರಕ್ಕೆ ಸೇರಿಸಿ, ಗ್ರಾಮಾಂತರ ಪೋಲಿಸ್ ಠಾಣೆಗೆ ದೂರು ನೀಡಿದ್ದಾರೆ. 


*ಎಚ್ಚೆತ್ತ ಅಂಗನವಾಡಿ ಕಾರ್ಯಕರ್ತೆ*

ಅಂಗನವಾಡಿಯ ಫಲಾನುಭವಿಯಾಗಲು ನಕಲಿ ಬಾಣಂತಿಯು ಅಂಗನವಾಡಿಗೆ ಹೆಸರು ನೋಂದಾಯಿಸಲು ಹೋದಾಗ ಅಂಗನವಾಡಿ ಕಾರ್ಯಕರ್ತೆಯು ತಾಯಿ ಕಾರ್ಡ್ ಕೇಳಿದ್ದಾರೆ. ಬಸುರಿಯ ಸಂದರ್ಭದ ಯಾವುದೇ ದಾಖಲೆ ಇಲ್ಲದಿದ್ದು, ಬಾಣಂತಿ ಹೇಗಾದಳು ಎಂದು ಅನುಮಾನಗೊಂಡ ಕಾರ್ಯಕರ್ತೆ ಸಿಡಿಪಿಓ ಗೆ ದೂರು ನೀಡಿದ್ದರಿಂದ, ಎಚ್ಚೆತ್ತ ಸಿಡಿಪಿಓ ಸಿದ್ದಲಿಂಗಯ್ಯ ನವರು ಕಾರ್ಯಾಚರಣೆ ಇಳಿದಿದ್ದು ಅಕ್ರಮ ಬಯಲಾಗಲು ಕಾರಣವಾಗಿದ್ದಾರೆ.


*ಮಗುವಿನ ಪೋಷಕರ ಸ್ಪಂದನೆ ಇಲ್ಲಾ*

ಮಗುವಿನ ಪೋಷಕರ ವಿಳಾಸ ಮತ್ತು ಮೊಬೈಲ್ ಸಂಖ್ಯೆಯನ್ನು ದಲ್ಲಾಳಿ ಹೆಂಗಸಿನ ಮೂಲಕ ಪಡೆದ ಪೋಲೀಸರು ದೂರವಾಣಿ ಮೂಲಕ ಸಂಪರ್ಕಿಸಿದ್ದು, ಮೊದಲು ಮಾತನಾಡಿದ ನಂತರ ಸ್ವಿಚ್ಡ್ ಆಫ್ ಮಾಡಿಕೊಂಡಿರುವುದಾಗಿ ತಿಳಿದುಬಂದಿದೆ. ಬೆಂಗಳೂರಿನ ಆಸ್ಪತ್ರೆಯ ನರ್ಸ್ ಒಬ್ಬರು ಈ ವ್ಯವಹಾರದಲ್ಲಿ ಭಾಗಿಯಾಗಿದ್ದಾರೆಂದು ತಿಳಿದು ಬಂದಿದೆ. ಗ್ರಾಮಾಂತರ ಪೋಲೀಸರು ಇನ್ನೂ ಹೆಚ್ಚಿನ ಮಾಹಿತಿ ಕಲೆ ಹಾಕುತ್ತಿರುವುದಾಗಿ ತಿಳಿದುಬಂದಿದೆ.


ಇದಕ್ಕೆ ಕಿಂಗ್ ಪಿನ್ ತಾಲ್ಲೂಕಿನ ಭೈರಾಪಟ್ಟಣ ಗ್ರಾಮದ ಮಧ್ಯವಯಸ್ಕ ಮಹಿಳೆಯಾಗಿದ್ದು, ಈಕೆಯ ಮೇಲೆ ಸಾರ್ವಜನಿಕವಾಗಿ ಹಲವಾರು ಮಂದಿ ದೂರು ಹೇಳುತ್ತಿದ್ದಾರೆ. ಆರು ವರ್ಷಗಳ ಸಾರ್ವಜನಿಕ ಆಸ್ಪತ್ರೆಯಲ್ಲಿ ಮಹಿಳಾ ವೈದ್ಯರಾಗಿದ್ದವರೊಬ್ಬರು ಈಕೆಯ ನಡವಳಿಕೆಯನ್ನು ನೋಡಿ ಹೊರಗಟ್ಟಿದ್ದರು. ತಾಲ್ಲೂಕಿನಲ್ಲಿ ಅಥವಾ ಜಿಲ್ಲೆಯಾದ್ಯಂತ ಇದುವರೆಗೂ ಎಷ್ಟು ಮಕ್ಕಳು ಕಾಣೆಯಾಗಿದ್ದಾರೆ ? ಎಷ್ಟು ಮಕ್ಕಳು ಸಿಕ್ಕಿದ್ದಾರೆ ಎಂಬ ಮಾಹಿತಿ ಕಲೆಹಾಕಿ ಪೋಲೀಸರು ಆಳಕ್ಕಿಳಿದು ತನಿಖೆ ಕೈಗೊಂಡರೆ, ಇದರ ವಿಸ್ತಾರ ಜಾಲ ಈಚೆಗೆ ಬರುತ್ತದೆ. ಆದರೆ ಇಷ್ಟಕ್ಕೆ ಕೈಬಿಟ್ಟರೆ ಮಕ್ಕಳ ಮಾರಾಟ ಮತ್ತು ಕಳ್ಳಸಾಗಾಣೆ ಮುಂದುವರೆಯುವುದರಲ್ಲಿ ಅನುಮಾನವೇ ಇಲ್ಲ. ಚನ್ನಪಟ್ಟಣ ಪೋಲೀಸರು ಸಮರ್ಥರಿದ್ದು ಇದಕ್ಕೆ ನ್ಯಾಯ ಒದಗಿಸುತ್ತಾರಾ ! ಎಂದು ಕಾದುನೋಡಬೇಕಾಗಿದೆ.


ಗೋ ರಾ ಶ್ರೀನಿವಾಸ...

ಮೊ:9845856139.

ಪ್ರತಿಕ್ರಿಯೆಗಳು

  • ನಿಮ್ಮ ಅಭಿಪ್ರಾಯ ತಿಳಿಸುವಲ್ಲಿ ನೀವು ಮೊದಲಿಗರಾಗಿ.

ನಿಮ್ಮ ಅಭಿಪ್ರಾಯಗಳನ್ನು ಬರೆಯಿರಿ/ತಿಳಿಸಿ.

Recent news in ramanagara »

ಅಣ್ಣನ ನೆನಪು ನಾಟಕ ಅದ್ಭುತ, ವಿಚಾರ ಹಂಚುವಲ್ಲಿ ವಿಫಲ
ಅಣ್ಣನ ನೆನಪು ನಾಟಕ ಅದ್ಭುತ, ವಿಚಾರ ಹಂಚುವಲ್ಲಿ ವಿಫಲ

ರಾಮನಗರ/ಚನ್ನಪಟ್ಟಣ: (ವಿಮರ್ಶಾತ್ಮಕ ಲೇಖನ)

ನಗರದ ಶತಮಾನೋತ್ಸವ ಭವನದಲ್ಲಿ ಬೆಂಗಳೂರಿನ ಪ್ರವರ ಹವ್ಯಾಸಿ ನಾಟಕ ತಂಡವು ನಡೆಸಿಕೊಟ್ಟ ಪೂರ್ಣ ಚ

ಪೌರಾಣಿಕ ನಾಟಕದಲ್ಲಿ ಜನಮನ ಸೂರೆಗೊಂಡು ಇತಿಹಾಸ ನಿರ್ಮಿಸಿದ ಮಹಿಳಾ ಕಲಾವಿದರು.
ಪೌರಾಣಿಕ ನಾಟಕದಲ್ಲಿ ಜನಮನ ಸೂರೆಗೊಂಡು ಇತಿಹಾಸ ನಿರ್ಮಿಸಿದ ಮಹಿಳಾ ಕಲಾವಿದರು.

ಚನ್ನಪಟ್ಟಣ :  ಚನ್ನಪಟ್ಟಣದಲ್ಲಿ ಮಹಿಳೆಯರೇ ಪೌರಾಣಿಕ ನಾಟಕವನ್ನು ಅಭ್ಯಾಸ ಮಾಡಿ ಬಯಲು ಮಂದಿರದಲ್ಲಿ ಪ್ರಸ್ತುತ ಪಡಿಸುತ್ತಿರುವುದು ವಿಶೇಷವಾಗಿದೆ. ಪೌರಾಣಿಕ

ಮಹಿಳೆಯರಿಂದಲೇ ಪೌರಾಣಿಕ ನಾಟಕ ಪ್ರದರ್ಶನ, ಇತಿಹಾಸ ಸೃಷ್ಟಿಸುವ ಸಾಧ್ಯತೆ ದಟ್ಟವಾಗಿದೆ. ಭಾವಿಪ ಪದಾಧಿಕಾರಿಗಳು
ಮಹಿಳೆಯರಿಂದಲೇ ಪೌರಾಣಿಕ ನಾಟಕ ಪ್ರದರ್ಶನ, ಇತಿಹಾಸ ಸೃಷ್ಟಿಸುವ ಸಾಧ್ಯತೆ ದಟ್ಟವಾಗಿದೆ. ಭಾವಿಪ ಪದಾಧಿಕಾರಿಗಳು

ಚನ್ನಪಟ್ಟಣ: ನಗರದ ಶ್ರೀ ಕೊಲ್ಲಾಪುರದಮ್ಮನ ದೇವಸ್ಥಾನದ ಆವರಣದಲ್ಲಿ ಇದೇ ಮಾರ್ಚ್ ತಿಂಗಳ ಹತ್ತನೇ ತಾರಿಖಿನ ಭಾನುವಾರ ಮಧ್ಯಾಹ್ನ ತಾಲೂಕಿನಲ್ಲಿ ಇದೇ ಪ್ರಪ್ರಥ

ವರ್ಣ ನೀತಿ ಮತ್ತು ಜಾತಿಯತೆಯನ್ನು ಮೀರಿದವರು ಮಾತ್ರ ಮನುಷ್ಯ ಜಾತಿಯಾಗಲು ಸಾಧ್ಯ –ಪ್ರೊ. ಕೆ.ಎಸ್.ಭಗವಾನ್
ವರ್ಣ ನೀತಿ ಮತ್ತು ಜಾತಿಯತೆಯನ್ನು ಮೀರಿದವರು ಮಾತ್ರ ಮನುಷ್ಯ ಜಾತಿಯಾಗಲು ಸಾಧ್ಯ –ಪ್ರೊ. ಕೆ.ಎಸ್.ಭಗವಾನ್

ರಾಮನಗರ: ಶೂದ್ರರನ್ನು ವರ್ಣ ನೀತಿಯಿಂದಲೆ ವೈದಿಕರು ಆಳಿದರು. ಇಂದಿಗೂ ಸಹ ವೈದಿಕರು ರಾಮನನ್ನು ನಮ್ಮ ಮೇಲೆ ಹೇರುವ ಮೂಲಕ ಮತ್ತೆ ಪೂರ್ವಕಾಲಕ್ಕೆ ಕರೆದು

ಬೆಂಗಳೂರು ಶಿಕ್ಷಕರ ಕ್ಷೇತ್ರದ ಉಪ ಚುನಾವಣೆ: ಜಿಲ್ಲೆಯಲ್ಲಿ ಶೇ.95.77 ಮತದಾನ
ಬೆಂಗಳೂರು ಶಿಕ್ಷಕರ ಕ್ಷೇತ್ರದ ಉಪ ಚುನಾವಣೆ: ಜಿಲ್ಲೆಯಲ್ಲಿ ಶೇ.95.77 ಮತದಾನ

ರಾಮನಗರ, ಫೆ. 16  ರಾಜ್ಯ ವಿಧಾನ ಪರಿಷತ್ತಿಗೆ ಬೆಂಗಳೂರು ಶಿಕ್ಷಕರ ಕ್ಷೇತ್ರದಿಂದಫೆ.16ರ ಶುಕ್ರವಾರ ಬೆಳಿಗ್ಗೆ 8 ರಿಂದ ಸಂಜೆ 4 ಗಂಟೆಯ ವರೆಗೆನಡೆದ ಉಪ ಚುನ

ವೈಜ್ಞಾನಿಕ ಮನೋವೃತ್ತಿ:ಸಾಂವಿಧಾನಿಕ ಕರ್ತವ್ಯ ಪ್ರೊ. ಎಂ.ಅಬ್ದುಲ್ ರೆಹಮಾನ್ ಪಾಷ

ರಾಮನಗರ; ಮಾನವ ಹಕ್ಕುಗಳನ್ನು ಯಾರೂ ಕೊಡುವುದಿಲ್ಲ, ವ್ಯಕ್ತಿಗಳಿಗೆ ಅವುಗಳಿಗೆ ಜನ್ಮತಃ ದಕ್ಕಿರುತ್ತವೆ. ಅವುಗಳನ್ನು ಯಾರೂ ಕೊಡುವುದಿಲ್ಲವಾದ್ದರಿ

ನಾಳೆ ನಡೆಯುವ ಶಿಕ್ಷಕರ ಕ್ಷೇತ್ರದ ಚುನಾವಣೆ ಪ್ರಯುಕ್ತ ಮತಗಟ್ಟೆಗಳತ್ತ ತೆರಳಿದ ಸಿಬ್ಬಂದಿ
ನಾಳೆ ನಡೆಯುವ ಶಿಕ್ಷಕರ ಕ್ಷೇತ್ರದ ಚುನಾವಣೆ ಪ್ರಯುಕ್ತ ಮತಗಟ್ಟೆಗಳತ್ತ ತೆರಳಿದ ಸಿಬ್ಬಂದಿ

ರಾಮನಗರ: ರಾಜ್ಯ ವಿಧಾನ ಸಭೆ ಶಿಕ್ಷಕರ ಕ್ಷೇತ್ರದ ಚುನಾವಣೆ ಕಾವೇರಿದ್ದು,  ಬಹಿರಂಗ ಪ್ರಚಾರ ಕೊನೆಗೊಂಡ ನಂತರ ಇಂದು ಮಸ್ಟರಿಂಗ್ ಕಾರ್ಯ ಮುಗಿದು, ಮತಗಟ್ಟೆ ಸ

ವೈದ್ಯ ಸಿಬ್ಬಂದಿ ನಿರ್ಲಕ್ಷ್ಯ ಹಸುಗೂಸು ಸಾವು
ವೈದ್ಯ ಸಿಬ್ಬಂದಿ ನಿರ್ಲಕ್ಷ್ಯ ಹಸುಗೂಸು ಸಾವು

ರಾಮನಗರ: ಚನ್ನಪಟ್ಟಣ: ವೈದ್ಯ ಸಿಬ್ಬಂದಿಯಾದ ಕಿರಿಯ ಮಹಿಳಾ ಆರೋಗ್ಯ ಸಹಾಯಕಿಯ ನಿರ್ಲಕ್ಷ್ಯದಿಂದ ಒಂದು ತಿಂಗಳು 20 ದಿನಗಳ ಗಂಡು ಶಿಶುವೊಂದು ಪ್ರಾಣ ಕಳೆದುಕೊ

ಗ್ರೇಟ್ ಬೆಂಗಳೂರು ಜಿಲ್ಲೆ, ಮತ್ತೇ ಮುನ್ನಲೆಗೆ ತಂದ : ಡಿ,ಸಿ.ಎಂ. ಡಿ.ಕೆ.ಶಿವಕುಮಾರ್
ಗ್ರೇಟ್ ಬೆಂಗಳೂರು ಜಿಲ್ಲೆ, ಮತ್ತೇ ಮುನ್ನಲೆಗೆ ತಂದ : ಡಿ,ಸಿ.ಎಂ. ಡಿ.ಕೆ.ಶಿವಕುಮಾರ್

ರಾಮನಗರ, ಫೆ. 12:   ನಾವು ರಾಮನಗರ ಜಿಲ್ಲೆಯವರಲ್ಲಾ ನಾವೆಲ್ಲರೂ ಬೆಂಗಳೂರು ಜಿಲ್ಲೆಯವರು. ಗ್ರೇಟ್ ಬೆಂಗಳೂರು ಜಿಲ್ಲೆ ಮಾಡುವ ಬಗ್ಗೆ ಲೋಕಸಭಾ ಚ

ನಮ್ಮದು ಬಹುತ್ವ ಭಾರತ, ಹಿಂದುತ್ವ ಹೇರಿಕೆ ಸರಿಯಲ್ಲ – ಡಾ. ಚಕ್ಕೆರೆ ಶಿವಶಂಕರ್
ನಮ್ಮದು ಬಹುತ್ವ ಭಾರತ, ಹಿಂದುತ್ವ ಹೇರಿಕೆ ಸರಿಯಲ್ಲ – ಡಾ. ಚಕ್ಕೆರೆ ಶಿವಶಂಕರ್


ರಾಮನಗರ : ಫೆ 10 ನಮ್ಮದು ಬಹುತ್ವ ಭಾರತ, ಇಲ್ಲಿ ಎಲ್ಲಾ ಧರ್ಮೀಯರು ಇದ್ದಾರೆ. ಕೇವಲ ಹಿಂದುತ್ವವನ್ನು ಬಲವಂತವಾಗಿ ಹೇರುವುದು ಸರಿಯಲ್ಲ. ಭಾರತದ

Top Stories »  


Top ↑