Tel: 7676775624 | Mail: info@yellowandred.in

Language: EN KAN

    Follow us :


ಗೌರಿ-ಗಣೇಶ ಹಬ್ಬದ ಪೂಜಾ ಸಾಮಗ್ರಿ ಮತ್ತು ಗಣೇಶನ ಬುಕ್ಕಿಂಗ್ ಗೆ ಮುಗಿಬಿದ್ದ ಜನತೆ

Posted date: 08 Sep, 2021

Powered by:     Yellow and Red

ಗೌರಿ-ಗಣೇಶ ಹಬ್ಬದ ಪೂಜಾ ಸಾಮಗ್ರಿ ಮತ್ತು ಗಣೇಶನ ಬುಕ್ಕಿಂಗ್ ಗೆ ಮುಗಿಬಿದ್ದ ಜನತೆ

ಚನ್ನಪಟ್ಟಣ.ಸೆ.೦೮: ನಾಳೆ ಸ್ವರ್ಣಗೌರಿ ವ್ರತ ಮತ್ತು ಶುಕ್ರವಾರ ಗಣೇಶ ಚತುರ್ಥಿ ಹಬ್ಬಗಳ ಹಿನ್ನೆಲೆಯಲ್ಲಿ ನಗರದಾದ್ಯಂತ ಭಕ್ತಾಧಿಗಳು ಪೂಜಾ ಸಾಮಗ್ರಿಗಳನ್ನು ಕೊಳ್ಳಲು ಮುಗಿಬಿದ್ದರೆ, ಯುವಕರು ಗೌರಿ ಗಣೇಶ ನನ್ನು ಕೊಳ್ಳಲು ಪೇಟೆ ಬೀದಿ ಸುತ್ತುತ್ತಿರುವುದು ಇಂದಿನ ವಿಶೇಷವಾಗಿದೆ.


ಕಳೆದ ಎರಡು ವರ್ಷಗಳಿಂದ ಕೋವಿಡ್-19 ಅತಿ ಹೆಚ್ಚಾಗಿ ಕಾಡಿದ್ದರಿಂದ ಕಳೆದ ವರ್ಷ ಸರ್ಕಾರವು ಸಂಪೂರ್ಣ ವಾಗಿ ಗಣೇಶ ಹಬ್ಬವನ್ನು ಸಾರ್ವಜನಿಕವಾಗಿ ಆಚರಿಸಲು ನಿಷೇಧ ಹೇರಿತ್ತು. ಈ ಬಾರಿಯೂ ಸಹ ಸರ್ಕಾರವು ಅದೇ ಧೋರಣೆಯನ್ನು ಅನುಸರಿಸುವ ಸಾಧ್ಯತೆ ಇತ್ತು. ಆದರೂ ಹಿಂದೂ ಪರ ಹಲವು ಸಂಘಟನೆ ಗಳು ಸಾಮಾಜಿಕ ಜಾಲ ತಾಣ ಸೇರಿದಂತೆ ಸಂಬಂಧಿಸಿದ ಅಧಿಕಾರಿಗಳು ಹಾಗೂ ಜನಪ್ರತಿನಿಧಿಗಳಿಗೆ ಮನವಿ ಸಲ್ಲಿಸುವ ಮೂಲಕ ಅನ್ಯ ಧರ್ಮಕ್ಕಿಲ್ಲದ ನಿಷೇಧ, ನಮಗೆ ಮಾತ್ರ ಏಕೆ ಎಂಬುದನ್ನು ಅರಿವಿಗೆ ತಂದಿದ್ದರು. ಇದರ ಹಿನ್ನೆಲೆಯಲ್ಲಿ ಮುಖ್ಯ ಮಂತ್ರಿಗಳು ತಜ್ಞರ ಸಭೆ ಕರೆದು, ಈ ವರ್ಷ ಕೆಲವು ಮುಂಜಾಗ್ರತ ಕ್ರಮ ಗಳೊಂದಿಗೆ ಗಣೇಶ ಹಬ್ಬವನ್ನು ಆಚರಿಸಲು ಅನುವು ಮಾಡಿಕೊಟ್ಟಿದೆ.


ಪ್ರಸ್ತುತ ಹೂವಿನ ವ್ಯಾಪಾರ ಭರ್ಜರಿಯಾಗಿ ನಡೆಯುತ್ತಿದ್ದು, ನಗರದ ಬಹುತೇಕ ರಸ್ತೆ, ಜನಸಂದಣಿ ಸ್ಥಳಗಳಲ್ಲಿ ಹೂವು, ಹಣ್ಣಿನ ಅಂಗಡಿಗಳು ತಲೆಯೆತ್ತಿವೆ. ನಗರದ ಅಂಚೆ ಕಛೇರಿ ರಸ್ತೆ, ಎಂ.ಜಿ ರಸ್ತೆ, ಜೆ.ಸಿ ರಸ್ತೆ, ಡಿ.ಟಿ ರಾಮು ವೃತ್ತ ಮತ್ತು ಪೇಟೆ ಬೀದಿಯಾದ್ಯಂತ ಸಾರ್ವಜನಿಕರು ಹೂವು, ಹಣ್ಣು ಮತ್ತು ಪೂಜಾ ಸಾಮಗ್ರಿಗಳನ್ನು ಕೊಳ್ಳಲು ಮುಗಿಬಿದ್ದಿರುವುದು ಕಂಡು ಬಂತು.

ಸರ್ಕಾರ ಅದೆಷ್ಟೇ ಕೊರೊನಾ ನಿಯಮಗಳನ್ನು ಪಾಲಿಸಲು ಹೇಳಿದ್ದರೂ ಸಹ ಜನ ಸಾಮಾಜಿಕ ಅಂತರವನ್ನು ಮರೆಯುತ್ತಿದ್ದಾರೆ. ಹಬ್ಬ ಆಚರಿಸುವ ಜೊತೆಗೆ ಕೊರೊನಾವನ್ನು ಹೆಗಲಿಗೇರಿಸಿ ಕೊಂಡು ಹೋಗಲು ನಿರ್ಧರಿಸಿದಂತೆ ವರ್ತಿಸುತ್ತಿದ್ದಾರೆ.


ಕಳೆದ ಎರಡು ವರ್ಷ ಹೊರತುಪಡಿಸಿ, ಕೆಲವು ವರ್ಷಗಳು ಪ್ರತಿ ಗ್ರಾಮಕ್ಕೂ ಜೆಡಿಎಸ್ ಘಟಕದ ತಾಲ್ಲೂಕು ಅಧ್ಯಕ್ಷ ಜಯಮುತ್ತು ಅವರು ಉಚಿತವಾಗಿ ಗೌರಿ ಗಣೇಶ ಮೂರ್ತಿಗಳನ್ನು ನೀಡುತ್ತಾ ಬಂದಿದ್ದರು. ಈ ವರ್ಷ ಸಾರ್ವಜನಿಕರೇ ಮೂರ್ತಿ ಗಳನ್ನು ಕೊಂಡುಕೊಳ್ಳುತ್ತಿರುವುದು ಕಂಡು ಬರುತ್ತಿದೆ. ನಗರದ ಗರಡುಗಂಭ ಬೀದಿಯಲ್ಲಿ ಎರಡು ಮೂರು ಕಡೆ ಮಾತ್ರ ಗೌರಿ ಗಣೇಶ ಮೂರ್ತಿಗಳನ್ನು ಮಾರಾಟಕ್ಕಿಟ್ಟಿದ್ದು, ಈ ಮೊದಲಿನಂತೆ ನಗರದಾದ್ಯಂತ ಎಲ್ಲೂ ಮೂರ್ತಿಗಳು ಕಂಡು ಬರುತ್ತಿಲ್ಲ.


ಸದ್ಯ ಪೊಲೀಸರು ಅವಕಾಶ ಮಾಡಿಕೊಟ್ಟಿ ರುವುದರಿಂದ ಮೂರು ಅಂಗುಲದಿಂದ ನಾಲ್ಕೂವರೆ ಅಡಿಯ ತನಕ ಪರಿಸರ ಗಣಪನನ್ನು ತಯಾರಿಸಿ, ಮಾರಾಟಕ್ಕಿಟ್ಟಿದ್ದಾರೆ.

ಗಣೇಶ ಪತ್ರಿಮೆಗಳ ಮಾರಾಟಗಾರ ವರದ ಬಾಬು ಹೇಳುವಂತೆ, ಸಂಪೂರ್ಣವಾಗಿಯಾವುದೇ ಪಿಓಪಿ ಬಳಸದೆ, ಕೇವಲ ಮಣ್ಣಿನಿಂದಲೇ ಮೂರ್ತಿಗಳನ್ನು ತಯಾರಿಸಲಾಗಿದೆ. ರಾಸಾಯನಿಕ ಬಣ್ಣ ಬಳಸದೆ, ನೀರಿನ ಬಣ್ಣ (Water paint) ಬಳಿದಿರುವುದರಿಂದ ಪರಿಸರಕ್ಕೆ ಯಾವುದೇ ರೀತಿಯ ಧಕ್ಕೆ ಇಲ್ಲ ಎಂದು ತಿಳಿಸಿದ್ದಾರೆ.

ಪೊಲೀಸರೂ ಸಹ ಈಗಾಗಲೇ ಅವರವರ ಠಾಣಾ ವ್ಯಾಪ್ತಿಗಳಲ್ಲಿ ಸಾರ್ವಜನಿಕ ಸಭೆಗಳನ್ನು ನಡೆಸಿ, ಕೊರೊನಾ ಮುಂಜಾಗ್ರತಾ ಕ್ರಮ ಕೈಗೊಂಡು, ಹಬ್ಬ ವನ್ನು ಆಚರಿಸುವಂತೆ ಸೂಚಿಸಿದ್ದಾರೆ.


*ದೇವಸ್ಥಾನಗಳಲ್ಲೂ ಸಿದ್ಧತೆ:*

ಗೌರಿ ಗಣೇಶ ಹಬ್ಬದ ಪ್ರಯುಕ್ತ ನಗರದ ವಿವಿಧ ದೇವಸ್ಥಾನಗಳು ಅದೇ ರೀತಿಯಲ್ಲಿ ಗ್ರಾಮಾಂತರ ಪ್ರದೇಶದ ವಿವಿಧ ದೇವಸ್ಥಾನಗಳಲ್ಲಿ ದೇವರುಗಳಿಗೆ ಅಲಂಕಾರ ಮಾಡಿಕೊಂಡು ನಾಳಿನ ಹಬ್ಬಕ್ಕಾಗಿ ಸಿದ್ಧತೆ ನಡೆಯುತ್ತಿದೆ. ಗೌರಿ ಹಬ್ಬದ ಪ್ರಯುಕ್ತ ನಾಗರ ಕಲ್ಲಿಗೆ ಪೂಜೆ ಮಾಡುವ ಹಿನ್ನೆಲೆಯಲ್ಲಿ ದೇವಸ್ಥಾನದ ಮುಂಭಾಗ ಹಾಗೂ ಅಕ್ಕ ಪಕ್ಕದಲ್ಲಿರುವ ಹುತ್ತಗಳ ಜಾಗಗಳಲ್ಲಿಯೂ ಸಹ ಶುಚಿತ್ವಗೊಳಿಸಿಕೊಂಡು ತನಿ ಎರೆಯುವ ಸಿದ್ಧತೆ ಮಾಡಿಕೊಂಡಿದ್ದಾರೆ.


ಗೋ ರಾ ಶ್ರೀನಿವಾಸ...

ಮೊ:9845856139.

??????????????

  • ????? ???????? ??????????? ???? ??????????.

ನಿಮ್ಮ ಅಭಿಪ್ರಾಯಗಳನ್ನು ಬರೆಯಿರಿ/ತಿಳಿಸಿ.

Recent news in ramanagara »

ಮಾಹಿತಿ ನೀಡಬೇಕಾದ ಅಧಿಕಾರಿಗಳೇ ಗ್ರಾಮಸಭೆಗೆ ಗೈರು
ಮಾಹಿತಿ ನೀಡಬೇಕಾದ ಅಧಿಕಾರಿಗಳೇ ಗ್ರಾಮಸಭೆಗೆ ಗೈರು

ಮಂಡ್ಯ:ಅ/27/21. ಗ್ರಾಮಸಭೆಯಲ್ಲಿ ತಮ್ಮ ಇಲಾಖಾ ಮಾಹಿತಿ ನೀಡಬೇಕಾದ ಅಧಿಕಾರಿಗಳೇ ಗೈರು ಹಾಜರಾದ ಹಿನ್ನಲೆಯಲ್ಲಿ ಗ್ರಾಮ ಸಭೆ ರದ್ದಾದ ಘಟನೆ ಮಂಡ್ಯ

ನಗರದ ನೀರಿನ ಪೈಪಿನಲ್ಲಿ ಶವದ ಅಂಗ ಮತ್ತೊಮ್ಮೆ ಪತ್ತೆ. ಆಕ್ರೋಶಗೊಂಡ ನಗರಿಗರು
ನಗರದ ನೀರಿನ ಪೈಪಿನಲ್ಲಿ ಶವದ ಅಂಗ ಮತ್ತೊಮ್ಮೆ ಪತ್ತೆ. ಆಕ್ರೋಶಗೊಂಡ ನಗರಿಗರು

ಚನ್ನಪಟ್ಟಣ:ಅ/27/21. ಚನ್ನಪಟ್ಟಣ ನಗರದಲ್ಲಿ ಮತ್ತೊಮ್ಮೆ ಸದ್ದು ಮಾಡಿದ ಅಪರಿಚಿತ ಮೃತ ದೇಹದ ಅಂಗಗಳು. ಅಧಿಕಾರಿಗಳ ವಿರುದ್ಧ ಆಕ್ರೋಶಗೊಂಡ ನಗರವಾಸಿಗಳು.  ನಗರದ ಮಂಗಳವಾರಪೇಟೆಯ 10 ನೇ ಕ್ರಾಸ್ ನ

ಕರುಳ ಕುಡಿಯನ್ನೇ ಬೀದಿಗೆಸೆದ 'ಮಹಾತಾಯಿ !?'
ಕರುಳ ಕುಡಿಯನ್ನೇ ಬೀದಿಗೆಸೆದ 'ಮಹಾತಾಯಿ !?'

ಚನ್ನಪಟ್ಟಣ:ಅ/27/21. ಮಾನವೀಯತೆಯನ್ನೇ ಮರೆತ ಹೆತ್ತತಾಯಿಯಿಬ್ಬಳು ಆಗ ತಾನೆ ಜನಿಸಿದ ತನ್ನ ನವಜಾತ ಶಿಶುವನ್ನು ಬೀದಿಗೆಸೆದ ಘಟನೆ ನಗರದ ಸಾತನೂರು ಮುಖ್ಯ ರಸ್ತೆಯಲ್ಲಿನ ನಗರಸಭೆ ವ್ಯಾಪ್ತಿಯಲ್ಲಿ ನಿನ್ನೆ ತ

ಐಷಾರಾಮಿ ಕಳ್ಳನನ್ನು ಬಂಧಿಸಿದ ಮಾಗಡಿ ಪೋಲಿಸರು
ಐಷಾರಾಮಿ ಕಳ್ಳನನ್ನು ಬಂಧಿಸಿದ ಮಾಗಡಿ ಪೋಲಿಸರು

ರಾಮನಗರ:ಅ/26/21. ಒಂಟಿ ಮನೆಗಳನ್ನೇ ಗುರಿ ಮಾಡಿಕೊಂಡು ಕನ್ನ ಹಾಕಿ ಐಷಾರಾಮಿ ಜೀವನ ನಡೆಸುತ್ತಿದ್ದ ಕುಖ್ಯಾತ ಮನೆಗಳ್ಳನನ್ನು ಬಂಧಿಸಿರುವ ಮಾಗಡಿ

ನಗರದಲ್ಲಿ ತುಂಬಿತುಳುಕುತ್ತಿದೆ ಕಸದ ರಾಶಿ. ಇಚ್ಚಾಶಕ್ತಿ ಕಳೆದುಕೊಂಡ ಜನಪ್ರತಿನಿಧಿಗಳು, ಜಾಗವಿಲ್ಲದೆ ಕೈಚೆಲ್ಲಿದ ಅಧಿಕಾರಿಗಳು
ನಗರದಲ್ಲಿ ತುಂಬಿತುಳುಕುತ್ತಿದೆ ಕಸದ ರಾಶಿ. ಇಚ್ಚಾಶಕ್ತಿ ಕಳೆದುಕೊಂಡ ಜನಪ್ರತಿನಿಧಿಗಳು, ಜಾಗವಿಲ್ಲದೆ ಕೈಚೆಲ್ಲಿದ ಅಧಿಕಾರಿಗಳು

ಚನ್ನಪಟ್ಟಣ:ಅ:25/21. ಚನ್ನಪಟ್ಟಣ ಎಂದಾಕ್ಷಣ ಜಪ್ತಿಗೆ ಬರುವುದು ಸಾಂಪ್ರದಾಯಿಕ ಗೊಂಬೆಗಳ ತವರು ಎಂದು, ಜೊತೆಗೆ ಪುರಾಣೇತಿಹಾಸಗಳ ಹಾಗೂ ಹೋರಾಟಗಳ

ಕೊರೊನಾ ನಿಯಮ ಪಾಲನೆಯೊಂದಿಗೆ ರಾಜ್ಯೋತ್ಸವ ಕಾರ್ಯಕ್ರಮ. ತಹಶಿಲ್ದಾರ್ ನಾಗೇಶ್
ಕೊರೊನಾ ನಿಯಮ ಪಾಲನೆಯೊಂದಿಗೆ ರಾಜ್ಯೋತ್ಸವ ಕಾರ್ಯಕ್ರಮ. ತಹಶಿಲ್ದಾರ್ ನಾಗೇಶ್

  • ಚನ್ನಪಟ್ಟಣ:ಅ:25/21. ಕೊರೊನಾ ನಿಯಮ ಪಾಲಿಸಿಕೊಂಡು ನಗರದ ಬಾಲಕರ ಪದವಿಪೂರ್ವ ಕಾಲೇಜು ಮೈದಾನದಲ್ಲಿ ಸಾಧ್ಯವಾದಷ್ಟು ಅದ್ದೂರಿಯಾಗಿ ನವೆಂಬರ್ 1 ನೇ ತಾರೀಖಿನಂದು ನಾಡಹಬ್ಬವಾದ ಕನ್ನಡ ರಾಜ್ಯೋತ್ಸವ ವನ್ನು ಆಚರಿಸಲಾಗುವುದು ಎಂದು ದಂಡಾಧಿಕಾ

ಜಿಲ್ಲೆಯಲ್ಲಿ ಅರ್ಥಪೂರ್ಣ ಕನ್ನಡ ರಾಜ್ಯೋತ್ಸವ ಆಚರಿಸಲಾಗುವುದು ಅಪರ ಜಿಲ್ಲಾಧಿಕಾರಿ
ಜಿಲ್ಲೆಯಲ್ಲಿ ಅರ್ಥಪೂರ್ಣ ಕನ್ನಡ ರಾಜ್ಯೋತ್ಸವ ಆಚರಿಸಲಾಗುವುದು ಅಪರ ಜಿಲ್ಲಾಧಿಕಾರಿ

ರಾಮನಗರ.ಅ.23:21. ಜಿಲ್ಲಾಡಳಿತದ ವತಿಯಿಂದ ನವೆಂಬರ್ 01 ರಂದು ಅರ್ಥಪೂರ್ಣವಾಗಿ ಕನ್ನಡ ರಾಜ್ಯೋತ್ಸವ ದಿನಾಚರಣೆ ಆಚರಿಸಲು ಇಂದು ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಅಪರ ಜಿಲ್ಲಾಧಿಕಾರಿ ಜವರೇಗೌಡ ಟ

ಕಾವೇರಿ ವಾಟರ್ ಬೋರ್ಡ್ ಸರ್ಕಲ್ ಗುಂಡಿಮಯ. ಪ್ರಯಾಣಿಕರ ಪರದಾಟ
ಕಾವೇರಿ ವಾಟರ್ ಬೋರ್ಡ್ ಸರ್ಕಲ್ ಗುಂಡಿಮಯ. ಪ್ರಯಾಣಿಕರ ಪರದಾಟ

ಚನ್ನಪಟ್ಟಣ:ಅ/22/21. ಚನ್ನಪಟ್ಟಣ ನಗರದ ಕಾವೇರಿ ನೀರು ಸರಬರಾಜು ಕಚೇರಿಯ ವೃತ್ತದಲ್ಲಿ ರಸ್ತೆ ಸಂಪೂರ್ಣ ಹಾಳಾಗಿದೆ. ಗುಂಡಿ ಬಿದ್ದು ವಾಹನಸವಾರರಿಗೆ ಬಹಳಷ್ಟು ತೊಂದರೆಯಾಗುತ್ತಿದೆ. ಸದ್ಯ ರಾಜ್ಯ ಹೆದ್ದ

ಕೆರೆಯಲ್ಲಿ ಈಜಲು ಹೋದ ಇಬ್ಬರು ಬಾಲಕರು ಸಾವು
ಕೆರೆಯಲ್ಲಿ ಈಜಲು ಹೋದ ಇಬ್ಬರು ಬಾಲಕರು ಸಾವು

ಬಿಡದಿ.ಅ.22/21: ರಾಮನಗರ ತಾಲೂಕಿನ ಕೆಂಚನಗುಪ್ಪೆ ಗ್ರಾಮದ ಕುಂಬಾರಕಟ್ಟೆಯಲ್ಲಿ ಈಜಲು ಹೋಗಿದ್ದ ಇಬ್ಬರು ಬಾಲಕರು ಸಾವಿಗೀಡಾಗಿರುವ ಘಟನೆ ನಡೆದಿದೆ

ಸರಗಳ್ಳರ ಸೆರೆ ಹಿಡಿದ ಎಂ ಕೆ ದೊಡ್ಡಿ ಪೋಲೀಸರು
ಸರಗಳ್ಳರ ಸೆರೆ ಹಿಡಿದ ಎಂ ಕೆ ದೊಡ್ಡಿ ಪೋಲೀಸರು

ಚನ್ನಪಟ್ಟಣ.ಅ.21/21: ತಾಲ್ಲೂಕಿನ ಎಂ ಕೆ ದೊಡ್ಡಿ ಪೋಲೀಸ್ ಠಾಣಾ ವ್ಯಾಪ್ತಿಯ ಬೊಮ್ಮನಾಯಕನಹಳ್ಳಿ ಬಳಿ ತಾಯಿ ಮಗಳು ದ್ವಿಚಕ್ರ ವಾಹನದಲ್ಲಿ ತೆರಳುವ

Top Stories »  


Top ↑