Tel: 7676775624 | Mail: info@yellowandred.in

Language: EN KAN

    Follow us :


ತಾಲ್ಲೂಕಿನ ಇತಿಹಾಸದಲ್ಲೇ ನಾಲ್ಕು ಮಂದಿ ಮಹಿಳಾ ಪೋಲಿಸ್ ಅಧಿಕಾರಿಗಳು. ಒಣಮಾತು ಬಿಟ್ಟು ಇಲಾಖೆಗೆ ಒತ್ತು ನೀಡಬೇಕಾಗಿದೆ ಡಿವೈಎಸ್ಪಿ ರಮೇಶ್

Posted date: 11 Sep, 2021

Powered by:     Yellow and Red

ತಾಲ್ಲೂಕಿನ ಇತಿಹಾಸದಲ್ಲೇ ನಾಲ್ಕು ಮಂದಿ ಮಹಿಳಾ ಪೋಲಿಸ್ ಅಧಿಕಾರಿಗಳು. ಒಣಮಾತು ಬಿಟ್ಟು ಇಲಾಖೆಗೆ ಒತ್ತು ನೀಡಬೇಕಾಗಿದೆ ಡಿವೈಎಸ್ಪಿ ರಮೇಶ್

ಚನ್ನಪಟ್ಟಣ: ತಾಲ್ಲೂಕಿನ ಇತಿಹಾಸದಲ್ಲೇ ಪ್ರಥಮವಾಗಿ ಆರು ಠಾಣೆಗಳ ಪೈಕಿ ಮೂರು ಠಾಣೆಗಳಲ್ಲಿ ಈಗಾಗಲೇ ಮಹಿಳಾ ಸಬ್ ಇನ್ಸ್ಪೆಕ್ಟರ್‌ಗಳು ಅಧಿಕಾರ ವಹಿಸಿಕೊಂಡಿದ್ದು, ಇತ್ತೀಚಿಗೆ ತೆರವಾದ ಸಂಚಾರಿ ಪೊಲೀಸ್ ಠಾಣೆಯ ಪಿಎಸ್‌ಐ ಆಗಿ ರಾಮನಗರದ ಐಜೂರು ಠಾಣೆಯ ಶುಭಾಂಬಿಕ ವರ್ಗವಾಗಿ ಬಂದಿದ್ದು, ಒಟ್ಟು ನಾಲ್ಕು ಮಂದಿ ಮಹಿಳಾ ಪೊಲೀಸರು ಸೇರ್ಪಡೆಗೊಂಡಿದ್ದಾರೆ. ಇತ್ತೀಚಿನವರೆಗೂ ಬಹುಪಾಲು ಪುರುಷರೇ ಎಲ್ಲಾ ಠಾಣೆಗಳಲ್ಲೂ ಅಧಿಕಾರದಲ್ಲಿದ್ದು, ವರ್ಷದಿಂದೀಚೆಗೆ ನಾಲ್ವರು ಮಹಿಳೆಯರು ನಾಲ್ಕು ಠಾಣೆಗಳಲ್ಲಿ ಸಬ್ ಇನ್ಸ್ಪೆಕ್ಟರ್‌ಗಳಾಗಿದ್ದಾರೆ.


ಇವರಲ್ಲಿ ಶುಭಾಂಬಿಕ ಹೊರತುಪಡಿಸಿ ಯಾರೂ ಸಹ ಪರೀಕ್ಷೆ ಬರೆದು ನೇರವಾಗಿ ಆಯ್ಕೆಯಾದವರಲ್ಗಾ, ಪಿಸಿ, ಹೆಎಚ್ ಸಿ, ಎಎಸ್‌ಐ ಗಳಾಗಿ ಕಳೆದ ವರ್ಷದಿಂದ ಮಾತ್ರ ಪಿಎಸ್‌ಐ ಗಳಾಗಿ ಬಡ್ತಿ ಹೊಂದಿದವರಾಗಿದ್ದು, ಈ ಬಡ್ತಿಯನ್ನು ವಿರೋಧಿಸಿಯೂ ಸಹ ಹಲವಾರು ಸಹೋದ್ಯೋಗಿಗಳು ಕೋರ್ಟ್ಗೆ ಹೋಗಿದ್ದಾರೆ. ಇಲಾಖೆಯದ್ದು ಏನೇ ಇರಲಿ ತಾಲ್ಲೂಕಿನಲ್ಲಿರುವ ಆರು ಠಾಣೆಗಳ ಪೈಕಿ ಅಕ್ಕೂರು ಪೋಲಿಸ್ ಠಾಣೆಯ ಪಿಎಸ್‌ಐ ಆಗಿ ಸರಸ್ವತಿ, ಪುರ ಪೋಲಿಸ್ ಠಾಣೆಯ ಪಿಎಸ್‌ಐ ಆಗಿ ಮಮತಾ ಮತ್ತು ಇತ್ತೀಚೆಗೆ ಎಂ ಕೆ ದೊಡ್ಡಿ ಪೋಲಿಸ್ ಠಾಣೆಯ ಸಬ್ ಇನ್ಸ್ಪೆಕ್ಟರ್ ಆಗಿ ರತ್ನಮ್ಮ ರವರು ಅಧಿಕಾರ ವಹಿಸಿಕೊಂಡಿದ್ದು, ಶುಭಾಂಬಿಕ ಮಾತ್ರ ನೇರವಾಗಿ ಆಯ್ಕೆಯಾದ ಸಬ್ ಇನ್ಸೆಪೆಕ್ಟರ್ ಆಗಿದ್ದು, ಅಧಿಕಾರಿ ವಹಿಸಿಕೊಳ್ಳಬೇಕಾಗಿದೆ.


ಇಲಾಖೆಯ ಎಲ್ಲಾ ವರ್ಗದ ಪೋಲಿಸ್ ಸಿಬ್ಬಂದಿಗಳು ಸೇರಿದಂತೆ, ಸಾರ್ವಜನಿಕರು, ಕೆಲ ರಾಜಕೀಯ ಮುಖಂಡರುಗಳು ಮತ್ತು ಕಳ್ಳಕಾಕರು ಸಹ ಈ ಮೂವರು ಮಹಿಳಾ ಅಧಿಕಾರಿಗಳನ್ನು ಒಪ್ಪಿಕೊಳ್ಳುತ್ತಿಲ್ಲ. ಇವರಿಗಿಂತಲೂ ಹಲವು ಮಂದಿ ಹಿರಿಯ ಪೋಲಿಸರಿದ್ದಾಗ್ಯೂ, ಅವರಿಗಿಂತ ಕಿರಿಯವರಾದ ಇವರನ್ನು ಮೆಲಾಧಿಕಾರಿಗಳಾಗಿ ಸಿಬ್ಬಂದಿಗಳು ಮೇಲ್ನೋಟಕ್ಕೆ ಒಪ್ಪಿಕೊಂಡ ಹಾಗೆ ಮಾಡಿದರೂ ಸಹ ಒಳಗೊಳಗೆ ಅಸಮಧಾನ ವ್ಯಕ್ತಪಡಿಸುತ್ತಾರೆ. ಅದೆಷ್ಟೋ ಪ್ರಕರಣಗಳು ಇಲ್ಲಿ ಬಗೆಹರಿಯಲಾರವು ಎಂದು ಮನಗಂಡ ಬಳಿಕ ನೇರವಾಗಿ ವೃತ್ತ ನಿರೀಕ್ಷಕರ ಬಳಿ, ಎಸ್ ಪಿ ಯವರ ಬಳಿ ಪ್ರಕರಣಗಳು ದಾಖಲಾಗಿರುವ ಉದಾಹರಣೆಗಳು ಸಹ ಇವೆ. ಕೇವಲ ಬಾಯಿ ಮಾಡುತ್ತಾರೆಯೇ ವಿನಹ ಸ್ಪಷ್ಟವಾದ ನ್ಯಾಯ ದೊರೆಯುವುದಿಲ್ಲಾ ಎಂಬುದು ಪಿರ್ಯಾದುದಾರರ ಮತ್ತು ಆರೋಪಿಗಳ ಆರೋಪವಾಗಿದೆ. ಗ್ರಾಮಾಂತರ ಪೋಲಿಸ್ ಠಾಣೆಯಲ್ಲಿ ಪುರುಷ ಪಿಎಸ್‌ಐ ಇದ್ದು ಶೀಘ್ರವಾಗಿ ಬಡ್ತಿ ಹೊಂದುವ ಹಂತದಲ್ಲಿದ್ದಾರೆ. ಪೂರ್ವ ಪೋಲಿಸ್ ಠಾಣೆಯ ಪಿಎಸ್‌ಐ ಸಹ ಪುರುಷ ಅಧಿಕಾರಿಯಾಗಿದ್ದರೂ, ಬಡ್ತಿ ಹೊಂದಿ ಬಂದವರಾಗಿದ್ದಾರೆ. ಆದರೂ ತಾಲ್ಲೂಕಿಲ್ಲಿರುವ ಆರು ಠಾಣೆಗಳ ಪೈಕಿ ನಾಲ್ಕು ಠಾಣೆಗಳಲ್ಲಿ ಮಹಿಳಾ ಸಬ್ ಇನ್ಸ್ಪೆಕ್ಟರ್ ಗಳಾಗಿ ದುಡಿಯುತ್ತಿರುವುದು ವಿಶೇಷವಾಗಿದೆ.


ಮಹಿಳಾ ಅಧಿಕಾರಿಗಳಿಗೆ ಸಾಥ್ ನೀಡಬೇಕಾಗಿದೆ

ಯಾರೂ ಹುಟ್ಟಿನಿಂದಲೇ ಎಲ್ಲವನ್ನೂ ಕಲಿತುಕೊಂಡು‌ ಬಂದಿರುವುದಿಲ್ಲ. ಬಡ್ತಿ ಹೊಂದಿ ಕೆಲಸ ನಿರ್ವಹಿಸುತ್ತಿರುವ ಅಧಿಕಾರಿಗಳಿಗೆ ಸರ್ಕಲ್ ಇನ್ಸ್‌ಪೆಕ್ಟರ್ ಗಳು ಮತ್ತು ಡಿವೈಎಸ್ಪಿ ರವರು ಪಿರ್ಯಾದುದಾರರು ಮತ್ತು ಆರೋಪಿಗಳ‌ ಬಳಿ ಹೇಗೆ ನಡೆದುಕೊಳ್ಳಬೇಕು. ಸಾರ್ವಜನಿಕರು, ನೌಕರರು, ಜನಪ್ರತಿನಿಧಿಗಳ ಬಳಿ ಹೇಗಿರಬೇಕು ಎಂಬುದನ್ನು ಬಿಡಿಸಿ ಹೇಳಬೇಕು. ಕೇವಲ ದರ್ಪದಿಂದ ನಡೆದುಕೊಳ್ಳುವುದೇ ನಮ್ಮ ಅಧಿಕಾರ ಎಂಬುದನ್ನು ಬಿಟ್ಟು ಜೊತೆಯಲ್ಲಿ ಕರೆದುಕೊಂಡು ಹೋದಾಗಲೇ ಇಂತಹ ಸೂಕ್ಷ್ಮ ಪ್ರದೇಶಗಳಲ್ಲಿ, ಮೂರು ಬಲಿಷ್ಠ ರಾಜಕೀಯ ನಾಯಕರು ಮತ್ತು ಅವರ ಹಿಂಬಾಲಕರನ್ನು ಸಮರ್ಥವಾಗಿ ಹೆದರಿಸಲು ಸಾಧ್ಯವಾಗುತ್ತದೆ.


ಹೆಚ್ಚಾಗುತ್ತಲೇ ಇವೆ ಅಪರಾಧ ಪ್ರಕರಣಗಳು:

ನಗರವೂ ಸೇರಿದಂತೆ ತಾಲ್ಲೂಕಿನಾದ್ಯಂತ ಅಪರಾಧ ಪ್ರಕರಣಗಳ ಸಂಖ್ಯೆ ದಿನೆದಿನೇ ಹೆಚ್ಚಾಗುತ್ತಲೇ ಇವೆ. ಹಳೆಯ ಮತ್ತು ಹೊಸ ರೌಡಿಸಂ ಗಳ ಅಟ್ಟಹಾಸ ಮೇರೆ ಮೀರುತ್ತಿದೆ. ಇತ್ತೀಚಿಗೆ ಅಕ್ಕೂರು ಪೋಲಿಸ್ ಠಾಣೆಯ ವ್ಯಾಪ್ತಿಯಲ್ಲಿ ಹಳೆಯ ರೌಡಿಗಳ ಕಿತ್ತಾಟ ಮತ್ತು ಗ್ರಾಮಾಂತರ ಪೋಲಿಸ್ ಠಾಣಾ ವ್ಯಾಪ್ತಿಯಲ್ಲಿ ನಡೆದ ಹೊಸ ರೌಡಿಗಳ ಅಟ್ಟಹಾಸ ಸಾಕ್ಷಿಯಾಗಿದೆ. ಇದೇ ಸಮಯದಲ್ಲಿ ಕೆಲ ಪೋಲೀಸ್ ಠಾಣೆಗಳಲ್ಲಿ ರೌಡಿ ಪೆರೇಡ್ ಮಾಡಿ ಎಚ್ಚರಿಕೆ ನೀಡದರಾದರೂ, ಅಲ್ಲಿ ಬಹು ಮುಖ್ಯ ರೌಡಿಗಳ ಗೈರು ಹಾಜರಿ ಎದ್ದುಕಾಣುತ್ತಿದ್ದು, ಪುಡಿರೌಡಿಗಳು ಮಾತ್ರ ಕೈಕಟ್ಟಿ ನಿಂತಿದ್ದರು.


ಇಬ್ಬರು ಪಿಎಸ್‌ಐ ಮತ್ತು ಇಬ್ಬರು ಸಿಪಿಐ:

ಈಗಿರುವ ನಾಲ್ಕು ಮಂದಿ ಬಡ್ತಿ ಹೊಂದಿದ ಪಿಎಸ್‌ಐಗಳನ್ನು ಹೊರತುಪಡಿಸಿದರೆ, ಗ್ರಾಮಾಂತರ ಠಾಣೆಯ ಪಿಎಸ್ಐ ಹೆಚ್ ಎಂ ಶಿವಕುಮಾರ್ ರವರ ಜೊತೆಗೆ ವೃತ್ತ ನಿರೀಕ್ಷರಾದ ದಿವಾಕರ್, ಟಿ ಎಂ ಶಿವಕುಮಾರ್, ಇತ್ತೀಚೆಗೆ ಬಡ್ತಿಹೊಂದಿದ ಎಂ ಕೆ ದೊಡ್ಡಿ ಪಿಎಸ್‌ಐ ಸದಾನಂದ ರವರು ಮತ್ತು ಸಂಚಾರಿ ಠಾಣೆಯ ಪ್ರಕಾಶ್ ಅವರು ಮಾತ್ರ ನೊಂದವರಿಗೆ ನ್ಯಾಯ ದೊರಕಿಸಿಕೊಡುವ ನಿಟ್ಟಿನಲ್ಲಿ ಕೆಲಸ ಮಾಡುತ್ತಾರೆ ಎಂದು ಹಲವಾರು ಮಂದಿ ಹೇಳುತ್ತಾರೆ. ಕೆಲ ಆರೋಪಗಳನ್ನು ಬಿಟ್ಟರೆ ಉಳಿದಂತೆ ಈ ಐದು ಮಂದಿಗೆ ಒಳ್ಳೆಯ ಹೆಸರಿತ್ತು. ಇವರ ಮೇಲೂ ಸಹ ಸಾರ್ವಜನಿಕವಾಗಿ ಕೆಲ ಆರೋಪಗಳು ಇವೆ. ಹಾಗಂತ ಮೂವರು ಮಹಿಳಾ ಅಧಿಕಾರಿಗಳು ಸಮರ್ಥರಿಲ್ಲವೆಂದಲ್ಲಾ, ಇನ್ನೂ ಫಳಗುವ ಮೂಲಕ ನೊಂದವರ ದನಿಯಾಗುವ ಮೂಲಕ ಸದೃಢರಾಗಬೇಕಾಗಿದೆ.


ಕೇವಲ ಮಾತುಗಾರ ಡಿವೈಎಸ್ಪಿ!

ಅಬ್ಬಾ ನಾನು ಅದೆಷ್ಟೋ ಮಂದಿ ಡಿವೈಎಸ್ಪಿ ಮತ್ತು ಎಎಸ್ಪಿ ಗಳನ್ನು ನೋಡಿದ್ದೇನೆ, ಇಂತಹ ಡಿವೈಎಸ್ಪಿಯನ್ನು ಇಂದೇ ನೋಡುತ್ತಿರುವುದು ಎಂದು ತಾಲ್ಲೂಕಿನಾದ್ಯಂತ ಕರ್ತವ್ಯ ನಿರ್ವಹಿಸುತ್ತಿರುವ ವಿವಿಧ ಇಲಾಖೆಯ ಅಧಿಕಾರಿಗಳು, ವೈದ್ಯರು, ಸಾಮಾಜಿಕ ಕಾರ್ಯಕರ್ತರು ಸೇರಿದಂತೆ ಒಟ್ಟಾರೆ ಎಲ್ಲರ ಮಾತು ಇದೇ ಆಗಿದೆ. ಇದ್ದಕ್ಕಿದ್ದಂತೆ ಎಗರಾಡುವುದು, ಸುಖಾಸುಮ್ಮನೆ ಮಾತನಾಡುವುದು, ಯಾವುದೋ ವಿಷಯ ಆರಂಭಿಸಿ ಮತ್ಯಾವುದೋ ವಿಷಯ ಪ್ರಸ್ತಾಪಿಸಿ ದಿಕ್ಕು ತಪ್ಪಿಸುವುದು ಇವರ ಮಾತಿನ ವೈಖರಿ. ಇಡೀ ಸಮಾಜವನ್ನೇ ತಿದ್ದುತ್ತೇನೆ. ತಾಲ್ಲೂಕನ್ನು ಮಾರ್ಪಡಿಸುತ್ತೇನೆ ಎಂದು ಹೇಳುವುದೇ ಒಂದು ಫ್ಯಾಸನ್. ಇಡೀ ಚನ್ನಪಟ್ಟಣ ವನ್ನೇ ಹಸಿರುಮಯವಾಗಿಸುತ್ತೇನೆ, ಕೆರೆಗಳಲ್ಲಿ ನಡುಗಡ್ಡೆ ನಿರ್ಮಿಸಿ ಚನ್ನಪಟ್ಟಣ ತಾಲ್ಲೂಕಿನ ಪ್ರಸಿದ್ದ ಸ್ಥಳಗಳ ಪ್ರತಿಕೃತಿ ನಿರ್ಮಿಸುತ್ತೇನೆ ಎನ್ನುವ ಇವರು ನೆಟ್ಟ ಗಿಡಗಳು ಉಳಿದಿದೆಯಾ ಎಂಬುದನ್ನು ನೋಡಿ ಪೋಷಿಸಲು ಉತ್ಸುಕರಾಗದಿರುವುದು, ಇವರು ಕೇವಲ ಮಾತಿನ ಮಲ್ಲ ಎಂಬುದನ್ನು ಸಾಬೀತು ಮಾಡಿದ್ದಾರೆ.


ಇವರ ಭಾಷಣ, ಸಾರ್ವಜನಿಕ ಮಾತುಗಳ ಬದಲು ಇಷ್ಟೇ ಸಮಯವನ್ನು ತಾಲ್ಲೂಕನ್ನು ಅಪರಾಧ ಮುಕ್ತ ಮಾಡಲು ಮೀಸಲಿಟ್ಟಿದ್ದರೆ ಇಲಾಖೆ ಮತ್ತು ಅವರಿಗೆ ಒಳ್ಳೆಯ ಹೆಸರು ಬರುತ್ತಿತ್ತು. ನಗರದಲ್ಲಿನ ಟ್ರಾಫಿಕ್ ಸಮಸ್ಯೆ, ಬೀದಿಬದಿ ವ್ಯಾಪಾರಿಗಳ ಸಮಸ್ಯೆ, ರೌಡಿಗಳ ಅಟ್ಟಹಾಸ, ಪ್ರತಿನಿತ್ಯ ನಡೆಯುವ ಪಿಕ್ ಪ್ಯಾಕೆಟ್, ಮೊಬೈಲ್ ಮತ್ತು ಬೈಕ್ ಕಳ್ಳತನ, ಜೂಜಾಟಗಳು ದಿನದಿಂದ ದಿನಕ್ಕೇ ಹೆಚ್ಚಾಗುತ್ತಲೇ ಹೋಗುತ್ತಿವೆ. ಇತ್ತೀಚೆಗೆ ಅವರ ಕಛೇರಿಯ ಕೂಗಳತೆ ದೂರದಲ್ಲಿ ಹತ್ತಿರತ್ತಿರ ಕೋಟಿ ರೂಪಾಯಿ ನಗ-ನಗದು ಕಳವು ಆಗಿದ್ದು ಇದು ಸೇರಿದಂತೆ ಅನೇಕ ಪ್ರಕರಣಗಳು ನಿಂತನೀರಾಗಿವೆ. ತಾಲ್ಲೂಕಿಗೆ ಸಂಂಬಂಧಿಸಿದ ಎರಡು ಪ್ರಕರಣಗಳನ್ನು ಬೇರೊಂದು ತಾಲ್ಲೂಕಿನ ಡಿವೈಎಸ್ಪಿ ನಿರ್ವಹಿಸಿದ್ದು ಮತ್ತು, ಕ್ಷೇತ್ರದ ಸಂಸದರಿಗೂ ಸಹ ಇವರ ಹೆಸರು ಗೊತ್ತಿಲ್ಲದಿರುವುದು ಇವರ ಕಾರ್ಯವೈಖರಿಯನ್ನು ತೋರಿಸುತ್ತದೆ.


*ರೌಡಿಗಳ ಪೆರೇಡ್‌ನಿಂದ ಯಾರಿಗೆ ಲಾಭ:*

ಎಲ್ಲಾ ರೌಡಿಗಳನ್ನು ಸೇರಿಸಿ ಪೆರೇಡ್ ಮಾಡುವ ಧೈರ್ಯ ಸ್ಥೈರ್ಯ ಇಲ್ಲವೇ? ಗಾಂಜಾ ಅಫೀಮು ಎಂಬ ಭಯಾನಕ ಭೂತ ತರುಣರನ್ನು ಆವರಿಸಿಕೊಂಡಿದೆ. ಇದನ್ನು ಹತ್ತಿಕ್ಕಲು ಏನು ಕ್ರಮ ಕೈಗೊಂಡಿದ್ದೀರಿ ? ತಾಲ್ಲೂಕಿನಲ್ಲಿ ಇದುವರೆಗೂ ಎಷ್ಟು ಮಕ್ಕಳು ಕಾಣೆಯಾಗಿದ್ದಾರೆ ಎಂಬ ಮಾಹಿತಿ ತಮ್ಮ ಬಳಿ ಇಲ್ಲದಿರುವುದು ಸಹ ಹೆತ್ತವರಿಗೆ ನೋವುಂಟು ಮಾಡಿದಂತಲ್ಲವೇ !? ತಾಲ್ಲೂಕಿನ ಗಡಿ ಗ್ರಾಮಗಳಲ್ಲಿ, ಅಕ್ಕೂರು ಪೋಲಿಸ್ ಠಾಣಾ ವ್ಯಾಪ್ತಿಯಲ್ಲಿ ಮರಳು ದಂಧೆ ನಡೆಯುತ್ತಲೇ ಇದೆ. ಗಣಿ ಸ್ಪೋಟವು ನಿಂತೇ ಇಲ್ಲ. ಇತ್ತೀಚೆಗೆ ಜಿಲೆಟಿನ್ ಸಿಡಿದು ಅವಘಡ ಸಂಭವಿಸಿದ್ದು ಹಸಿಯಾಗಿದ್ದು, ಮುಂದೆ ಈ ರೀತಿಯ ಘಟನೆ ನಡೆಯದಂತೆ ತಡೆಯಬೇಕಾದ್ದು ತಮ್ಮ ಕರ್ತವ್ಯವಲ್ಲವೇ ? ನನ್ನ ಕೈ ಕೆಳಗಿನ ಅಧಿಕಾರಿಗಳು ಕೆಲಸ ಮಾಡುತ್ತಾರೆ, ನಾನೇನಿದ್ದರೂ ಸೂಪರ್ವೈಸರ್ ಕೆಲಸ ಮಾಡುವುದು ಎಂಬ ಹೇಳಿಕೆಯ ಬದಲು ಇಲಾಖೆಯಲ್ಲಿ ಹೊಸತನ್ನು ಹುಡುಕಿ, ಶಾಶ್ವತವಾಗಿ ಕ್ರೈಂಗಳಿಗೆ ತಡೆಯೊಡ್ಡುವ ಕೆಲಸ ಮಾಡಿದ್ದರೆ ತಮ್ಮ ಬಾಯಿ ಮಾತಿನಂತೆಯೇ ಚನ್ನಪಟ್ಟಣ ಚಂದದ ಪಟ್ಟಣವಾಗುತ್ತಿತ್ತಲ್ಲವೇ ? ರೋಟರಿ ಸಂಸ್ಥೆಯ ಕಾರ್ಯಕ್ರಮವೊಂದರಲ್ಲಿ ಗಾಂಧೀಜಿ, ಲಾಲ್ ಬಹಾದ್ದೂರ್ ಶಾಸ್ತ್ರಿ ಕುರಿತಂತೆ ವಿವಾದಾತ್ಮಕ ಹೇಳಿಕೆ ನೀಡಿದ್ದು, ಸಭೆಯಲ್ಲಿದ್ದ ಜನರು ಕೆಕ್ಕರಿಸಿ ನೋಡುವಂತೆ ಮಾತನಾಡುವ ಬದಲು ಇಬ್ಬರು ಮಹಾಪುರುಷರ ಜನ್ಮದಿನ ಎಂದಿದ್ದರೆ ನಿಮ್ಮ ಘನತೆ ಮತ್ತಷ್ಟು ಹೆಚ್ಚುತ್ತಿರಲಿಲ್ಲವೇ ಡಿವೈಎಸ್ಪಿ ಸಾಹೇಬರೇ!


ಇತ್ತೀಚಿಗೆ ಅಂಬೇಡ್ಕರ್ ಭವನದ ಕಾರ್ಯಕ್ರಮವೊಂದರಲ್ಲಿ, ಮಾಧ್ಯಮಗಳ ಜೊತೆ ಮಾತನಾಡಿದ ಮಾಜಿ ಮುಖ್ಯಮಂತ್ರಿ ಹೆಚ್.ಡಿ ಕುಮಾರಸ್ವಾಮಿಯವರೂ ಸಹ ಎಲ್ಲಿಯ ತನಕ ಪೊಲೀಸರ ಬಳಿ ದುಡ್ಡು ಪಡೆದು, ವರ್ಗಾವಣೆ ಮಾಡುತ್ತಾರೋ ಅರ್ಥಾತ್ ಪೊಲೀಸರು ದುಡ್ಡುಕೊಟ್ಟು ವರ್ಗಾವಣೆ ಬಯಸುತ್ತಾರೋ ಅಲ್ಲಿಯ ತನಕ ಕಾನೂನು ಸುವ್ಯವಸ್ಥೆ ಸುಗುಮವಾಗುವುದಿಲ್ಲ ಎಂದು ದೂರಿದರು.

ಚನ್ನಪಟ್ಟಣ ಕ್ಷೇತ್ರದಲ್ಲಿ ರಾಜಕೀಯ ಕೆಸರೆರಚಾಟ ನಾಯಕರ ನಡುವೆ, ಹೆಚ್ಚಾಗುತ್ತಿರುವ ಕಾರಣ, ಈ ವರ್ಗಾವಣೆಗಳು ನಡೆಯುತ್ತಿವೆ. ಅತಿ ಸೂಕ್ಷ್ಮ ಪ್ರದೇಶವಾದ ಚನ್ನಪಟ್ಟಣ ಕ್ಷೇತ್ರದಲ್ಲಿ ಖಡಕ್ ಅಧಿಕಾರಿಗಳ ಅವಶ್ಯಕತೆ ಇದೆ. ಆದರೆ, ಇವರ ಕಚ್ಚಾಟದಿಂದ ಬಂದ ಪುಟ್ಟ, ಹೋದ ಪುಟ್ಟ ಎಂಬಂತೆ ಅಥವಾ ಇಲಾಖೆಗೊಂದು ಮೂರ್ತಿ ಇರಲೆಂಬಂತೆ ಯಾರೋ ಒಬ್ಬ ಅಧಿಕಾರಿಯನ್ನು ತಂದು ಕೂರಿಸುವುದು ಮುಂದಿನ ಅತಂತ್ರ ಸ್ಥಿತಿಗೆ ಕಾರಣಭೂತರಾಗುತ್ತಿದ್ದಾರೆ.

ಇದು ಯಾರೋ ಒಬ್ಬ ವ್ಯಕ್ತಿ ಮಾತನಾಡುತ್ತಿಲ್ಲಾ, ಸಾರ್ವಜನಿಕರು ಬೀದಿಯಲ್ಲಿ ಮಾತನಾಡುತ್ತಿರುವ ಬಹಿರಂಗ ಸತ್ಯಗಳು. ದಯವಿಟ್ಟು ತಾಲ್ಲೂಕಿನಲ್ಲಿ ಕಾನೂನು ಸುವ್ಯವಸ್ಥೆ ಕಾಪಾಡುತ್ತೀರಿ ಮತ್ತು ಅನುಭವವಿರದ ಅಧಿಕಾರಿಗಳಿಗೆ ಚಾಟಿ ಬೀಸಿ ಮಾರ್ಗದರ್ಶನ ನೀಡಿ ನೊಂದವರಿಗೆ ನ್ಯಾಯ ಒದಗಿಸಿಕೊಡುತ್ತೀರೆಂಬ ಭರವಸೆಯಲ್ಲಿ ತಾಲ್ಲೂಕಿನ ನಾಗರೀಕರಿದ್ದಾರೆ. ಇದು ಹುಸಿಯಾಗದಿರಲೆಂದು ಪತ್ರಿಕೆ ಆಶಿಸುತ್ತದೆ.


ಗೋ ರಾ ಶ್ರೀನಿವಾಸ...

ಮೊ:9845856139.

ಪ್ರತಿಕ್ರಿಯೆಗಳು

  • ನಿಮ್ಮ ಅಭಿಪ್ರಾಯ ತಿಳಿಸುವಲ್ಲಿ ನೀವು ಮೊದಲಿಗರಾಗಿ.

ನಿಮ್ಮ ಅಭಿಪ್ರಾಯಗಳನ್ನು ಬರೆಯಿರಿ/ತಿಳಿಸಿ.

Recent news in ramanagara »

ಅಣ್ಣನ ನೆನಪು ನಾಟಕ ಅದ್ಭುತ, ವಿಚಾರ ಹಂಚುವಲ್ಲಿ ವಿಫಲ
ಅಣ್ಣನ ನೆನಪು ನಾಟಕ ಅದ್ಭುತ, ವಿಚಾರ ಹಂಚುವಲ್ಲಿ ವಿಫಲ

ರಾಮನಗರ/ಚನ್ನಪಟ್ಟಣ: (ವಿಮರ್ಶಾತ್ಮಕ ಲೇಖನ)

ನಗರದ ಶತಮಾನೋತ್ಸವ ಭವನದಲ್ಲಿ ಬೆಂಗಳೂರಿನ ಪ್ರವರ ಹವ್ಯಾಸಿ ನಾಟಕ ತಂಡವು ನಡೆಸಿಕೊಟ್ಟ ಪೂರ್ಣ ಚ

ಪೌರಾಣಿಕ ನಾಟಕದಲ್ಲಿ ಜನಮನ ಸೂರೆಗೊಂಡು ಇತಿಹಾಸ ನಿರ್ಮಿಸಿದ ಮಹಿಳಾ ಕಲಾವಿದರು.
ಪೌರಾಣಿಕ ನಾಟಕದಲ್ಲಿ ಜನಮನ ಸೂರೆಗೊಂಡು ಇತಿಹಾಸ ನಿರ್ಮಿಸಿದ ಮಹಿಳಾ ಕಲಾವಿದರು.

ಚನ್ನಪಟ್ಟಣ :  ಚನ್ನಪಟ್ಟಣದಲ್ಲಿ ಮಹಿಳೆಯರೇ ಪೌರಾಣಿಕ ನಾಟಕವನ್ನು ಅಭ್ಯಾಸ ಮಾಡಿ ಬಯಲು ಮಂದಿರದಲ್ಲಿ ಪ್ರಸ್ತುತ ಪಡಿಸುತ್ತಿರುವುದು ವಿಶೇಷವಾಗಿದೆ. ಪೌರಾಣಿಕ

ಮಹಿಳೆಯರಿಂದಲೇ ಪೌರಾಣಿಕ ನಾಟಕ ಪ್ರದರ್ಶನ, ಇತಿಹಾಸ ಸೃಷ್ಟಿಸುವ ಸಾಧ್ಯತೆ ದಟ್ಟವಾಗಿದೆ. ಭಾವಿಪ ಪದಾಧಿಕಾರಿಗಳು
ಮಹಿಳೆಯರಿಂದಲೇ ಪೌರಾಣಿಕ ನಾಟಕ ಪ್ರದರ್ಶನ, ಇತಿಹಾಸ ಸೃಷ್ಟಿಸುವ ಸಾಧ್ಯತೆ ದಟ್ಟವಾಗಿದೆ. ಭಾವಿಪ ಪದಾಧಿಕಾರಿಗಳು

ಚನ್ನಪಟ್ಟಣ: ನಗರದ ಶ್ರೀ ಕೊಲ್ಲಾಪುರದಮ್ಮನ ದೇವಸ್ಥಾನದ ಆವರಣದಲ್ಲಿ ಇದೇ ಮಾರ್ಚ್ ತಿಂಗಳ ಹತ್ತನೇ ತಾರಿಖಿನ ಭಾನುವಾರ ಮಧ್ಯಾಹ್ನ ತಾಲೂಕಿನಲ್ಲಿ ಇದೇ ಪ್ರಪ್ರಥ

ವರ್ಣ ನೀತಿ ಮತ್ತು ಜಾತಿಯತೆಯನ್ನು ಮೀರಿದವರು ಮಾತ್ರ ಮನುಷ್ಯ ಜಾತಿಯಾಗಲು ಸಾಧ್ಯ –ಪ್ರೊ. ಕೆ.ಎಸ್.ಭಗವಾನ್
ವರ್ಣ ನೀತಿ ಮತ್ತು ಜಾತಿಯತೆಯನ್ನು ಮೀರಿದವರು ಮಾತ್ರ ಮನುಷ್ಯ ಜಾತಿಯಾಗಲು ಸಾಧ್ಯ –ಪ್ರೊ. ಕೆ.ಎಸ್.ಭಗವಾನ್

ರಾಮನಗರ: ಶೂದ್ರರನ್ನು ವರ್ಣ ನೀತಿಯಿಂದಲೆ ವೈದಿಕರು ಆಳಿದರು. ಇಂದಿಗೂ ಸಹ ವೈದಿಕರು ರಾಮನನ್ನು ನಮ್ಮ ಮೇಲೆ ಹೇರುವ ಮೂಲಕ ಮತ್ತೆ ಪೂರ್ವಕಾಲಕ್ಕೆ ಕರೆದು

ಬೆಂಗಳೂರು ಶಿಕ್ಷಕರ ಕ್ಷೇತ್ರದ ಉಪ ಚುನಾವಣೆ: ಜಿಲ್ಲೆಯಲ್ಲಿ ಶೇ.95.77 ಮತದಾನ
ಬೆಂಗಳೂರು ಶಿಕ್ಷಕರ ಕ್ಷೇತ್ರದ ಉಪ ಚುನಾವಣೆ: ಜಿಲ್ಲೆಯಲ್ಲಿ ಶೇ.95.77 ಮತದಾನ

ರಾಮನಗರ, ಫೆ. 16  ರಾಜ್ಯ ವಿಧಾನ ಪರಿಷತ್ತಿಗೆ ಬೆಂಗಳೂರು ಶಿಕ್ಷಕರ ಕ್ಷೇತ್ರದಿಂದಫೆ.16ರ ಶುಕ್ರವಾರ ಬೆಳಿಗ್ಗೆ 8 ರಿಂದ ಸಂಜೆ 4 ಗಂಟೆಯ ವರೆಗೆನಡೆದ ಉಪ ಚುನ

ವೈಜ್ಞಾನಿಕ ಮನೋವೃತ್ತಿ:ಸಾಂವಿಧಾನಿಕ ಕರ್ತವ್ಯ ಪ್ರೊ. ಎಂ.ಅಬ್ದುಲ್ ರೆಹಮಾನ್ ಪಾಷ

ರಾಮನಗರ; ಮಾನವ ಹಕ್ಕುಗಳನ್ನು ಯಾರೂ ಕೊಡುವುದಿಲ್ಲ, ವ್ಯಕ್ತಿಗಳಿಗೆ ಅವುಗಳಿಗೆ ಜನ್ಮತಃ ದಕ್ಕಿರುತ್ತವೆ. ಅವುಗಳನ್ನು ಯಾರೂ ಕೊಡುವುದಿಲ್ಲವಾದ್ದರಿ

ನಾಳೆ ನಡೆಯುವ ಶಿಕ್ಷಕರ ಕ್ಷೇತ್ರದ ಚುನಾವಣೆ ಪ್ರಯುಕ್ತ ಮತಗಟ್ಟೆಗಳತ್ತ ತೆರಳಿದ ಸಿಬ್ಬಂದಿ
ನಾಳೆ ನಡೆಯುವ ಶಿಕ್ಷಕರ ಕ್ಷೇತ್ರದ ಚುನಾವಣೆ ಪ್ರಯುಕ್ತ ಮತಗಟ್ಟೆಗಳತ್ತ ತೆರಳಿದ ಸಿಬ್ಬಂದಿ

ರಾಮನಗರ: ರಾಜ್ಯ ವಿಧಾನ ಸಭೆ ಶಿಕ್ಷಕರ ಕ್ಷೇತ್ರದ ಚುನಾವಣೆ ಕಾವೇರಿದ್ದು,  ಬಹಿರಂಗ ಪ್ರಚಾರ ಕೊನೆಗೊಂಡ ನಂತರ ಇಂದು ಮಸ್ಟರಿಂಗ್ ಕಾರ್ಯ ಮುಗಿದು, ಮತಗಟ್ಟೆ ಸ

ವೈದ್ಯ ಸಿಬ್ಬಂದಿ ನಿರ್ಲಕ್ಷ್ಯ ಹಸುಗೂಸು ಸಾವು
ವೈದ್ಯ ಸಿಬ್ಬಂದಿ ನಿರ್ಲಕ್ಷ್ಯ ಹಸುಗೂಸು ಸಾವು

ರಾಮನಗರ: ಚನ್ನಪಟ್ಟಣ: ವೈದ್ಯ ಸಿಬ್ಬಂದಿಯಾದ ಕಿರಿಯ ಮಹಿಳಾ ಆರೋಗ್ಯ ಸಹಾಯಕಿಯ ನಿರ್ಲಕ್ಷ್ಯದಿಂದ ಒಂದು ತಿಂಗಳು 20 ದಿನಗಳ ಗಂಡು ಶಿಶುವೊಂದು ಪ್ರಾಣ ಕಳೆದುಕೊ

ಗ್ರೇಟ್ ಬೆಂಗಳೂರು ಜಿಲ್ಲೆ, ಮತ್ತೇ ಮುನ್ನಲೆಗೆ ತಂದ : ಡಿ,ಸಿ.ಎಂ. ಡಿ.ಕೆ.ಶಿವಕುಮಾರ್
ಗ್ರೇಟ್ ಬೆಂಗಳೂರು ಜಿಲ್ಲೆ, ಮತ್ತೇ ಮುನ್ನಲೆಗೆ ತಂದ : ಡಿ,ಸಿ.ಎಂ. ಡಿ.ಕೆ.ಶಿವಕುಮಾರ್

ರಾಮನಗರ, ಫೆ. 12:   ನಾವು ರಾಮನಗರ ಜಿಲ್ಲೆಯವರಲ್ಲಾ ನಾವೆಲ್ಲರೂ ಬೆಂಗಳೂರು ಜಿಲ್ಲೆಯವರು. ಗ್ರೇಟ್ ಬೆಂಗಳೂರು ಜಿಲ್ಲೆ ಮಾಡುವ ಬಗ್ಗೆ ಲೋಕಸಭಾ ಚ

ನಮ್ಮದು ಬಹುತ್ವ ಭಾರತ, ಹಿಂದುತ್ವ ಹೇರಿಕೆ ಸರಿಯಲ್ಲ – ಡಾ. ಚಕ್ಕೆರೆ ಶಿವಶಂಕರ್
ನಮ್ಮದು ಬಹುತ್ವ ಭಾರತ, ಹಿಂದುತ್ವ ಹೇರಿಕೆ ಸರಿಯಲ್ಲ – ಡಾ. ಚಕ್ಕೆರೆ ಶಿವಶಂಕರ್


ರಾಮನಗರ : ಫೆ 10 ನಮ್ಮದು ಬಹುತ್ವ ಭಾರತ, ಇಲ್ಲಿ ಎಲ್ಲಾ ಧರ್ಮೀಯರು ಇದ್ದಾರೆ. ಕೇವಲ ಹಿಂದುತ್ವವನ್ನು ಬಲವಂತವಾಗಿ ಹೇರುವುದು ಸರಿಯಲ್ಲ. ಭಾರತದ

Top Stories »  


Top ↑