Tel: 7676775624 | Mail: info@yellowandred.in

Language: EN KAN

    Follow us :


ನಗರದಂಚಿಗೆ ಬಂದ ಕಾಡಾನೆಗಳು. ಸಾರ್ವಜನಿಕರಲ್ಲಿ ಆತಂಕ

Posted date: 13 Sep, 2021

Powered by:     Yellow and Red

ನಗರದಂಚಿಗೆ ಬಂದ ಕಾಡಾನೆಗಳು. ಸಾರ್ವಜನಿಕರಲ್ಲಿ ಆತಂಕ

ಚನ್ನಪಟ್ಟಣ.ಸೆ.೧೩: ತಾಲ್ಲೂಕಿನಾದ್ಯಂತ ಕಾಡು ಪ್ರಾಣಿಗಳ ಹಾವಳಿ ದಿನೇ ದಿನೆ ಹೆಚ್ಚಾಗುತ್ತಿದ್ದು, ರೈತರ ಬೆಳೆ ಮತ್ತು ಪ್ರಾಣದ ಜೊತೆಗೆ ಪ್ರಯಾಣಿಕರೂ ಸಹ ಆತಂಕಕ್ಕೀಡಾಗುವ ಸಂಭವ ಹೆಚ್ಚಾಗುತ್ತಿದೆ.


ಚನ್ನಪಟ್ಟಣ ನಗರದ ಅಪ್ಪಗೆರೆ, ಗ್ರಾಮೀಣ ಭಾಗದ ನೀಲಕಂಠನಹಳ್ಳಿ,  ಗೋವಿಂದೇಗೌಡನದೊಡ್ಡಿ ಮೂಲಕ ಇಂದು ಮುಂಜಾನೆ ಎರಡು ಆನೆಗಳು ಹಾದು ಹೋಗಿದ್ದು, ಸಿಕ್ಕ ಫಸಲುಗಳನ್ನು ತಿಂದ್ದಿಲ್ಲದೆ, ತುಳಿದು ನಾಶ ಪಡಿಸಿವೆ. ಕೂಡ್ಲೂರು ಕೆರೆಯ ಅಂಚಿನಲ್ಲಿ ಹಾದು ಹೋಗಿ ವಾಲೇತೋಪು ಗ್ರಾಮದ ತೋಟ ಒಂದರಲ್ಲಿ ಬೀಡು ಬಿಟ್ಟಿವೆ.


ನಗರದ ಮಂದಿ ಮುಂಜಾನೆ ನಾಲ್ಕು ಗಂಟೆಯಿಂದಲೇ ಈ ರಸ್ತೆಗಳಲ್ಲಿ ವಾಯುವಿಹಾರಕ್ಕೆ ತೆರಳುತ್ತಿದ್ದು, ಇವರ ಜೊತೆಗೆ ಕೆಲಸಕ್ಕಾಗಿ ಓಡಾಡುವಂತಹ ಪ್ರಯಾಣಿಕರೂ ಸಹ ಆತಂಕ ಪಡುವಂತಾಗಿದೆ.

ಅರಣ್ಯ ಅಧಿಕಾರಿಗಳು ದೂರು ಬಂದ ಸಮಯದಲ್ಲಿ ಮಾತ್ರ ಪಟಾಕಿ ಸಿಡಿಸಿ, ಆನೆಗಳನ್ನು ನೆಲೆನಿಂತ ಜಾಗದಿಂದ ದೂರ ಓಡಿಸಲಷ್ಟೇ ಸೀಮಿತವಾಗುತ್ತಿದ್ದಾರೆ. ಶಾಶ್ವತವಾಗಿ ಕಾಡಿನಿಂದ ನಾಡಿಗೆ ಕಾಡು ಪ್ರಾಣಿಗಳು ಬಾರದಂತೆ ಖೆಡ್ಡಾವನ್ನು ನಿರ್ಮಿಸುವುದನ್ನು ಬಿಟ್ಟು, ನಾಡಿಗೆ ಬಂದ ನಂತರ ಓಡಿಸುವ ನೆಪವನ್ನಷ್ಟೇ ಮಾಡುತ್ತಿದ್ದು, ಜನರಿಂದ ಕಾಡು ಪ್ರಾಣಿಗಳಿಗೆ, ಕಾಡುಪ್ರಾಣಿಗಳಿಂದ ಜನರಿಗೆ ಆಗುವ ನಷ್ಟಗಳಿಗೆ ನೇರವಾಗಿ ಅರಣ್ಯ ಇಲಾಖೆಯ ಅಧಿಕಾರಿಗಳು ಮತ್ತು ಸರ್ಕಾರವೇ ಹೊಣೆಯಾಗಿದೆ.


ಇತ್ತೀಚಿಗೆ ಜಮೀನಿನಲ್ಲಿ ಇದ್ದ ಬೆಳೆಯನ್ನು ರಕ್ಷಿಸಲು ರೈತನೋರ್ವ ತಂತಿ ಬೇಲಿ ನಿರ್ಮಿಸಿ ವಿದ್ಯುತ್ ಹರಿಸಿದ್ದ ರಿಂದ ಒಂದು ಆನೆ ಸಾವನ್ನಪ್ಪಿತ್ತು.  ಹಾಗೂ ಒಂದು ಚಿರತೆ ಬೇಟೆಗಾರರನ ಗುಂಡೇಟಿಗೆ ಬಲಿಯಾಗಿದ್ದು, ಮತ್ತೊಂದು ಚಿರತೆ ಅನುಮಾನಸ್ಪದವಾಗಿ ತೋಟವೊಂದರಲ್ಲಿ ಸತ್ತು ಬಿದ್ದಿತ್ತು. ಪ್ರಾಣಿಗಳಿಗೂ ಸಹ ಮನುಷ್ಯರಿಂದ ಅವಘಡ ತಪ್ಪಿದ್ದಲ್ಲ ಎಂದು ಸಾಬೀತಾಗಿದೆ.


ಗೋ ರಾ ಶ್ರೀನಿವಾಸ...

ಮೊ:9845856139.

??????????????

  • ????? ???????? ??????????? ???? ??????????.

ನಿಮ್ಮ ಅಭಿಪ್ರಾಯಗಳನ್ನು ಬರೆಯಿರಿ/ತಿಳಿಸಿ.

Recent news in ramanagara »

36 ನೇ ಕಾರ್ಯನಿರತ ಪತ್ರಕರ್ತರ ಸಮ್ಮೇಳನ: ಮುಖ್ಯಮಂತ್ರಿಗಳಿಗೆ ಆಹ್ವಾನ ನೀಡಿದ ಕೆಯುಡಬ್ಲ್ಯೂಜೆ ರಾಜ್ಯಾಧ್ಯಕ್ಷ ಶಿವಾನಂದ ತಗಡೂರು
36 ನೇ ಕಾರ್ಯನಿರತ ಪತ್ರಕರ್ತರ ಸಮ್ಮೇಳನ: ಮುಖ್ಯಮಂತ್ರಿಗಳಿಗೆ ಆಹ್ವಾನ ನೀಡಿದ ಕೆಯುಡಬ್ಲ್ಯೂಜೆ ರಾಜ್ಯಾಧ್ಯಕ್ಷ ಶಿವಾನಂದ ತಗಡೂರು

ಅಕ್ಟೋಬರ್ ತಿಂಗಳು ಕಲಬುರಗಿಯಲ್ಲಿ ನಡೆಸಲು ಉದ್ದೇಶಿಸಿರುವ ಕರ್ನಾಟಕ ಕಾರ್ಯನಿರತ ಪತ್ರಕರ್ತರ 36 ನೇ ರಾಜ್ಯ ಸಮ್ಮೇಳನದ ಉದ್ಘಾಟನೆ ನೆರವೇರಿಸಲು ಆಗಮಿಸುವಂತೆ ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ ಅವರಿಗೆ ಇ

ವದಂತಿಗಳಿಗೆ ಕಿವಿಕೊಡಬೇಡಿ ಕೋವಿಡ್ ಲಸಿಕೆ ಪಡೆಯಿರಿ: ಡಾ: ರಾಜೇಶ್ ಕುಮಾರ್ ಕೆ

ಕೋವಿಡ್ ಲಸಿಕೆಯನ್ನು 18 ವರ್ಷ ಮೇಲ್ಪಟ್ಟ ಎಲ್ಲರೂ ಪಡೆಯಬಹುದು ಯಾವುದೇ ರೀತಿಯ ತೊಂದರೆಯಾಗುವುದಿಲ್ಲ. ಕೋವಿಡ್ ಲಸಿಕೆಯಿಂದ ತೊಂದರೆ ಉಂಟಾಗುತ್ತಿದೆ ಎಂಬ ವದಂತಿಗಳಿಗೆ ಕಿವಿಕೊಡಬಾರದು ಎಂದು ಜಿಲ್ಲಾಧಿಕಾರಿ

ಅಕ್ಕಪಕ್ಕದವರ ಕಿರುಕುಳ: ದಯಾಮರಣ ಕೋರಿ ರಾಷ್ಟ್ರಪತಿಗಳಿಗೆ ಕುಟುಂಬದಿಂದ ಪತ್ರ
ಅಕ್ಕಪಕ್ಕದವರ ಕಿರುಕುಳ: ದಯಾಮರಣ ಕೋರಿ ರಾಷ್ಟ್ರಪತಿಗಳಿಗೆ ಕುಟುಂಬದಿಂದ ಪತ್ರ

ರಾಮನಗರ: ಕನಕಪುರ. ರಸ್ತೆಯನ್ನು ಸಂಪೂರ್ಣ ಮುಚ್ಚಿ ಮನೆಯೊಳಗೆ ಹೋಗದಂತೆ ಸುತ್ತಲೂ ನಿರ್ಬಂಧವಿಧಿಸಿರುವ ಕಾರಣ ಮನೆಯನ್ನು ತೊರೆದಿರುವ ನೊಂದ ಕುಟುಂಬ ಮನೆಗೆ ರಸ್ತೆಯನ್ನು ಬಿಡಿಸಿಕೊಡಿ ಇಲ್ಲವೆ ದಯಾಮರಣ ನೀಡಿ

ಉಳುಮೆ ಮಾಡಲು ತೆರಳುತ್ತಿದ್ದ ವೇಳೆ ಗಲಾಟೆ ಮಾಡಿ ಮಾರಣಾಂತಿಕ ಹಲ್ಲೆ. ಮಾಧ್ಯಮದವರ ಮುಂದೆ ಅಳಲು
ಉಳುಮೆ ಮಾಡಲು ತೆರಳುತ್ತಿದ್ದ ವೇಳೆ ಗಲಾಟೆ ಮಾಡಿ ಮಾರಣಾಂತಿಕ ಹಲ್ಲೆ. ಮಾಧ್ಯಮದವರ ಮುಂದೆ ಅಳಲು

ಚನ್ನಪಟ್ಟಣ:ಸೆ 11. ಹುರುಳಿ ಚೆಲ್ಲಿರುವ ಜಮೀನಿನ ಮೇಲೆ ಉಳುಮೆ ಮಾಡಲು ಟ್ರ್ಯಾಕ್ಟರ್ ಹರಿಸಿಕೊಂಡು 

ಹೋಗುತ್ತಿರುವುದನ್ನು ಪ

ಚಕ್ಕೆರೆ ಗ್ರಾಮದ ಒಂದು ದೇವಸ್ಥಾನದಲ್ಲಿ ಕಳವು. ಮತ್ತೊಂದರಲ್ಲಿ ವಿಫಲಯತ್ನ
ಚಕ್ಕೆರೆ ಗ್ರಾಮದ ಒಂದು ದೇವಸ್ಥಾನದಲ್ಲಿ ಕಳವು. ಮತ್ತೊಂದರಲ್ಲಿ ವಿಫಲಯತ್ನ

ಚನ್ನಪಟ್ಟಣ: ಗ್ರಾಮದ ಪಟ್ಟಲದಮ್ಮ ದೇವಾಲಯ ಹಾಗೂ ವಡ್ಡರದೊಡ್ಡಿ ಗ್ರಾಮದ ಮಹದೇಶ್ವರ ದೇವಸ್ಥಾನದಲ್ಲಿ ಕಳ್ಳರು ಕಳ್ಳತನ ಮಾಡಿದ್ದಾರೆ. ಮಹದೇಶ್ವರ ದೇ

ನಗರದಂಚಿಗೆ ಬಂದ ಕಾಡಾನೆಗಳು. ಸಾರ್ವಜನಿಕರಲ್ಲಿ ಆತಂಕ
ನಗರದಂಚಿಗೆ ಬಂದ ಕಾಡಾನೆಗಳು. ಸಾರ್ವಜನಿಕರಲ್ಲಿ ಆತಂಕ

ಚನ್ನಪಟ್ಟಣ.ಸೆ.೧೩: ತಾಲ್ಲೂಕಿನಾದ್ಯಂತ ಕಾಡು ಪ್ರಾಣಿಗಳ ಹಾವಳಿ ದಿನೇ ದಿನೆ ಹೆಚ್ಚಾಗುತ್ತಿದ್ದು, ರೈತರ ಬೆಳೆ ಮತ್ತು ಪ್ರಾಣದ ಜೊತೆಗೆ ಪ್ರಯಾಣಿಕರೂ ಸಹ ಆತಂಕಕ್ಕೀಡಾಗುವ ಸಂಭವ ಹೆಚ್ಚಾಗುತ್ತಿದೆ.

ಸಮವಸ್ತ್ರ ತೊಟ್ಟು ಕಾವಿ ಕಾಲಿಗೆ ಬಿದ್ದು, ಬಿ ಎಸ್ ವೈ ಹೊಗಳಿದ ಡಿವೈಎಸ್ಪಿ
ಸಮವಸ್ತ್ರ ತೊಟ್ಟು ಕಾವಿ ಕಾಲಿಗೆ ಬಿದ್ದು, ಬಿ ಎಸ್ ವೈ ಹೊಗಳಿದ ಡಿವೈಎಸ್ಪಿ

ಚನ್ನಪಟ್ಟಣ: ತಾಲ್ಲೂಕಿನ ಕೆರೆಮೇಗಳದೊಡ್ಡಿ ಗ್ರಾಮದ ಕಲ್ಯಾಣ ಮಂಟಪದಲ್ಲಿ, ಶನಿವಾರ ನಡೆದ ವಿರಕ್ತಮಠದ ಗುರುವಂದನಾ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ

ತಾಲ್ಲೂಕಿನ ಇತಿಹಾಸದಲ್ಲೇ ನಾಲ್ಕು ಮಂದಿ ಮಹಿಳಾ ಪೋಲಿಸ್ ಅಧಿಕಾರಿಗಳು. ಒಣಮಾತು ಬಿಟ್ಟು ಇಲಾಖೆಗೆ ಒತ್ತು ನೀಡಬೇಕಾಗಿದೆ ಡಿವೈಎಸ್ಪಿ ರಮೇಶ್
ತಾಲ್ಲೂಕಿನ ಇತಿಹಾಸದಲ್ಲೇ ನಾಲ್ಕು ಮಂದಿ ಮಹಿಳಾ ಪೋಲಿಸ್ ಅಧಿಕಾರಿಗಳು. ಒಣಮಾತು ಬಿಟ್ಟು ಇಲಾಖೆಗೆ ಒತ್ತು ನೀಡಬೇಕಾಗಿದೆ ಡಿವೈಎಸ್ಪಿ ರಮೇಶ್

ಚನ್ನಪಟ್ಟಣ: ತಾಲ್ಲೂಕಿನ ಇತಿಹಾಸದಲ್ಲೇ ಪ್ರಥಮವಾಗಿ ಆರು ಠಾಣೆಗಳ ಪೈಕಿ ಮೂರು ಠಾಣೆಗಳಲ್ಲಿ ಈಗಾಗಲೇ ಮಹಿಳಾ ಸಬ್ ಇನ್ಸ್ಪೆಕ್ಟರ್‌ಗಳು ಅಧಿಕಾರ ವಹಿಸಿಕೊಂಡಿದ್ದು, ಇತ್ತೀಚಿಗೆ ತೆರವಾದ ಸಂಚಾರಿ ಪೊಲೀಸ್ ಠಾಣ

ಗೌರಿ-ಗಣೇಶ ಹಬ್ಬದ ಪೂಜಾ ಸಾಮಗ್ರಿ ಮತ್ತು ಗಣೇಶನ ಬುಕ್ಕಿಂಗ್ ಗೆ ಮುಗಿಬಿದ್ದ ಜನತೆ
ಗೌರಿ-ಗಣೇಶ ಹಬ್ಬದ ಪೂಜಾ ಸಾಮಗ್ರಿ ಮತ್ತು ಗಣೇಶನ ಬುಕ್ಕಿಂಗ್ ಗೆ ಮುಗಿಬಿದ್ದ ಜನತೆ

ಚನ್ನಪಟ್ಟಣ.ಸೆ.೦೮: ನಾಳೆ ಸ್ವರ್ಣಗೌರಿ ವ್ರತ ಮತ್ತು ಶುಕ್ರವಾರ ಗಣೇಶ ಚತುರ್ಥಿ ಹಬ್ಬಗಳ ಹಿನ್ನೆಲೆಯಲ್ಲಿ ನಗರದಾದ್ಯಂತ ಭಕ್ತಾಧಿಗಳು ಪೂಜಾ ಸಾಮಗ್

ಮಲತಂದೆಯಿಂದಲೇ ಅಪ್ರಾಪ್ತ ಮಗಳ ಮೇಲೆ ಅತ್ಯಾಚಾರ: ಪ್ರಕರಣ ದಾಖಲು
ಮಲತಂದೆಯಿಂದಲೇ ಅಪ್ರಾಪ್ತ ಮಗಳ ಮೇಲೆ ಅತ್ಯಾಚಾರ: ಪ್ರಕರಣ ದಾಖಲು

ಚನ್ನಪಟ್ಟಣ: ಅಪ್ರಾಪ್ತ ಬಾಲಕಿಯ ಮೇಲೆ ಮಲತಂದೆ ಅತ್ಯಾಚಾರ ಮಾಡಿದ್ದಾನೆ ಎಂದು ತಾಯಿ ಆರೋಪ ಮಾಡಿದ್ದು, ಈ ಸಂಬಂಧ ಪಟ್ಟಣದ 

Top Stories »  


Top ↑