Tel: 7676775624 | Mail: info@yellowandred.in

Language: EN KAN

    Follow us :


ಅಕ್ಕಪಕ್ಕದವರ ಕಿರುಕುಳ: ದಯಾಮರಣ ಕೋರಿ ರಾಷ್ಟ್ರಪತಿಗಳಿಗೆ ಕುಟುಂಬದಿಂದ ಪತ್ರ

Posted date: 14 Sep, 2021

Powered by:     Yellow and Red

ಅಕ್ಕಪಕ್ಕದವರ ಕಿರುಕುಳ: ದಯಾಮರಣ ಕೋರಿ ರಾಷ್ಟ್ರಪತಿಗಳಿಗೆ ಕುಟುಂಬದಿಂದ ಪತ್ರ

ರಾಮನಗರ: ಕನಕಪುರ. ರಸ್ತೆಯನ್ನು ಸಂಪೂರ್ಣ ಮುಚ್ಚಿ ಮನೆಯೊಳಗೆ ಹೋಗದಂತೆ ಸುತ್ತಲೂ ನಿರ್ಬಂಧವಿಧಿಸಿರುವ ಕಾರಣ ಮನೆಯನ್ನು ತೊರೆದಿರುವ ನೊಂದ ಕುಟುಂಬ ಮನೆಗೆ ರಸ್ತೆಯನ್ನು ಬಿಡಿಸಿಕೊಡಿ ಇಲ್ಲವೆ ದಯಾಮರಣ ನೀಡಿ ಎಂದು ರಾಜ್ಯಪಾಲರು ಮತ್ತು ರಾಷ್ಟ್ರಪತಿಗಳಿಗೆ ಮನವಿ ಮಾಡಿರುವ ಘಟನೆ ನಡೆದಿದ್ದು, ತಾಲ್ಲೂಕು ಮತ್ತು ಜಿಲ್ಲಾಡಳಿತಕ್ಕೆ ಪೀಕಲಾಟಕ್ಜಿಟ್ಟುಕೊಂಡಿದೆ.


ಕನಕಪುರ ತಾಲ್ಲೂಕಿನ ಹಾರೋಹಳ್ಳಿ ಹೋಬಳಿ ದೊಡ್ಡಮುದುವಾಡಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಮತ್ತಿಕುಂಟೆ ಗ್ರಾಮದ ಕೃಷ್ಣಮೂರ್ತಿಯ ಕುಟುಂಬ ದಯಾಮರಣಕ್ಕೆ ಮುಂದಾಗಿರುವ ಕುಟುಂಬವಾಗಿದ್ದು, ವೀರೆಗೌಡನದೊಡ್ಡಿ ಗ್ರಾಮದವರಾದ ಕೃಷ್ಣಮೂರ್ತಿ ಅವರು ಮತ್ತಿಕುಂಟೆ ಗ್ರಾಮದಲ್ಲಿ 1992 ರಲ್ಲಿ ಗಿರೀಗೌಡ ಎಂಬುವರಿಂದ ನಿವೇಶನ ಖರೀದಿಸಿ 1993 ರಲ್ಲಿ ಮನೆ ಕಟ್ಟಿಕೊಂಡಿದ್ದಾರೆ. 1998 ರ ತನಕ ಚೆನ್ನಾಗಿದ್ದ ಅಕ್ಕಪಕ್ಕದವರು ನಂತರ ರಸ್ತೆಯಲ್ಲಿ ಓಡಾಡುವ ವಿಚಾರವಾಗಿ ತಗಾದೆ ತೆಗೆದು ಮನೆಯ ದಕ್ಷಿಣ ಭಾಗಕ್ಕಿದ್ದ ರಸ್ತೆಯನ್ನು ಮುಚ್ಚಿ ತೊಂದರೆ ನೀಡಿದ್ದಾರೆ.


ನಂತರದಲ್ಲಿ ಮನೆಯ ಉತ್ತರ ಭಾಗದಲ್ಲಿದ್ದ ಖಾಲಿ ನಿವೇಶನವನ್ನು 2005 ರಲ್ಲಿ ಖರೀದಿ ಮಾಡಿ ರಸ್ತೆ ಸಂಪರ್ಕ ಪಡೆದುಕೊಂಡು, ಆ ಜಾಗವು ತಮಗೆ ಬರಬೇಕೆಂದು ಅಕ್ಕ-ಪಕ್ಕದವರು ಬೇಲಿ ಹಾಕಿಕೊಂಡಿದ್ದಾರೆ. ಅಂತಿಮವಾಗಿ ಮನೆಗೆ ಬರಲು ಇದ್ದ ಎಲ್ಲಾ ಅವಕಾಶಗಳು ಬಂದ್ ಆಗಿದ್ದರಿಂದ ದಾರಿ ಕಾರಣದೆ ಕುಟುಂಬ 2005 ರಲ್ಲಿ ಮನೆ ಖಾಲಿ ಮಾಡಿಕೊಂಡು ಬೆಂಗಳೂರಿಗೆ ವಲಸೆ ಹೋಗಿದೆ. ಕುಟುಂಬಕ್ಕೆ ಆಗಿದ್ದ ಅನ್ಯಾಯವನ್ನು ಸಹಿಸಿಕೊಂಡು ಬಿ.ಕಾಂ. ಪದವಿದಾರನಾದ ಸಿನಿಮಾ ಇಂಡಸ್ಟ್ರಿನಲ್ಲಿ ರೈಟರ್ ಕಂ. ಕೋ.ಡೈರೆಕ್ಟರ್ ಆಗಿರುವ ಕೃಷ್ಣಮೂರ್ತಿ ಅವರ ಪುತ್ರ ವಿಶ್ವನಾಥ್.ವಿ.ಕೆ ತಮ್ಮ ಮನೆಗೆ ರಸ್ತೆಯನ್ನು ಬಿಡಿಸಿಕೊಡುವಂತೆ 2020 ರಲ್ಲಿ ಗ್ರಾಮ ಪಂಚಾಯಿತಿ, ತಾಲ್ಲೂಕು ಪಂಚಾಯಿತಿ ಮತ್ತು ತಹಶೀಲ್ದಾರ್ ಅವರಿಗೆ ಮನವಿಯನ್ನು ಸಲ್ಲಿಸಿದ್ದರು.


ಸಂಬಂಧಪಟ್ಟವರಿಂದ ಯಾವುದೆ ಪರಿಹಾರ ದೊರೆಯದಿದ್ದಾಗ, ಜಿಲ್ಲಾ ಪಂಚಾಯಿತಿ ಮತ್ತು ಜಿಲ್ಲಾಡಳಿತಕ್ಕೆ ದೂರು ನೀಡಿ ತಾವು 38 ವರ್ಷಗಳ ಹಿಂದೆ ಕಟ್ಟಿ ವಾಸ ಮಾಡುತ್ತಿದ್ದ ಮನೆಗೆ ಇದ್ದ ರಸ್ತೆಯನ್ನು ಉದ್ದೇಶ ಪೂರ್ವಕವಾಗಿ ಮುಚ್ಚಿದ್ದು ಅದನ್ನು ಬಿಡಿಸಿಕೊಡುವಂತೆ ಮಗ ಹೋರಾಟ ನಡೆಸಿದ್ದು, ಅದರಿಂದ ಯಾವುದೇ ಪ್ರಯೋಜನವಾಗಿಲ್ಲವೆಂದು ನೊಂದ ಕೃಷ್ಣಮೂರ್ತಿ ಅವರು ತಿಳಿಸಿದ್ದಾರೆ.


 ತಾಲ್ಲೂಕು ಆಡಳಿತ, ಜಿಲ್ಲಾಡಳಿಕ್ಕೆ ಮನವಿ ಮಾಡಿ ಹೋರಾಟ ನಡೆಸಿದರೂ ಗ್ರಾಮ ಪಂಚಾಯಿತಿಯವರು ಯಾವುದೇ ಕ್ರಮ ಕೈಗೊಂಡಿಲ್ಲ. ಹೋರಾಟ ನಡೆಸುವ ವೇಳೆ ತಾವು ಮಾಡಬೇಕಿದ್ದ ಕೆಲಸಕ್ಕೂ ಹೋಗದೆ ಲಕ್ಷಾಂತರ ರೂಪಾಯಿ ನಷ್ಟವಾಗಿದೆ. ಜೀವನಕ್ಕೆ ಆಸರೆಯಾಗಿದ್ದ ಮನೆಗೂ ರಸ್ತೆಯಿಲ್ಲದೆ ಇಲ್ಲಿ ಜೀವನ ಮಾಡುವುದು ಕಷ್ಟವಾಗಿದೆ. ಅದಕ್ಕಾಗಿ ಇಡೀ ಕುಟುಂಬ ದಯಾಮರಣಕ್ಕೆ ಮುಂದಾಗಿದ್ದೇವೆ ಎನ್ನುತ್ತಾರೆ ವಿಶ್ವನಾಥ್.ವಿ.ಕೆ. ಒಬ್ಬ ವ್ಯಕ್ತಿ ಬದುಕಲು ಬೇಕಿರುವ ಎಲ್ಲಾ ಅವಕಾಶಗಳನ್ನು ಕಾನೂನಿಡಿ ಸಂವಿಧಾನಬದ್ದ ಹಕ್ಕುಗಳನ್ನು ಕೊಡುತ್ತದೆ. ಗ್ರಾಮ ಪಂಚಾಯಿತಿ ಎಲ್ಲಾ ಅಗತ್ಯ ಮೂಲ ಸೌಕರ್ಯಗಳನ್ನು ಕಲ್ಪಿಸಿಕೊಡಬೇಕಿದೆ. ಆದರೆ ತಾವು ವಾಸಿಸುವ ಮತ್ತಿಕುಂಟೆ ಗ್ರಾಮದಲ್ಲಿ ಅಕ್ಕಪಕ್ಕದವರಾದ ಮಾಗಡಿಗೌಡರ ಕುಟುಂಬದವರಾದ ವೆಂಕಟೇಶ್, ಶ್ರೀನಿವಾಸ್, ಉದಯರಂಗ, ತಿಮ್ಮೇಗೌಡ, ರಜಿನಿಕಾಂತ್, ತೊಂದರೆ ಕೊಡುತ್ತಿದ್ದಾರೆ ಎಂಬುದು ಕೃಷ್ಣಮೂರ್ತಿ ಕುಟುಂಬದ ಆರೋಪವಾಗಿದೆ.


ಇದರಿಂದ ನೊಂದಿರುವ ಕೃಷ್ಣಮೂರ್ತಿ, ಪತ್ನಿ ಭಾಗ್ಯಮ್ಮ, ಮಗ ವಿಶ್ವನಾಥ್, ಸೊಸೆ ಚೈತ್ರ, ಮೊಮ್ಮಕ್ಕಳಾದ ಚರಿತ, ರೋಚನ್ ದಯಾಮರಣಕ್ಕೆ ಅರ್ಜಿ ಹಾಕಿಕೊಂಡಿದ್ದಾರೆ.


ತಾವು ಗೌರವಯುತ ಬದುಕು ಸಾಗಿಸಲು ಮನೆಗೆ ಬರುವ ರಸ್ತೆಯನ್ನು ತೆರವುಗೊಳಿಸಿ, ಮನೆಯಲ್ಲಿ ನೀರು ನಿಲ್ಲದಂತೆ ಚರಂಡಿ ಮಾಡಬೇಕೆಂದು ಕುಟುಂಬದ ಒತ್ತಾಯವಾಗಿದೆ.


ಮತ್ತಿಕುಂಟೆ ಗ್ರಾಮದಲ್ಲಿ ವಿಶ್ವನಾಥ.ವಿ.ಕೆ. ಅವರ ಮನೆಗೆ ಇದ್ದ ದಕ್ಷಿಣ ಭಾಗದ ರಸ್ತೆ ಸಂಪರ್ಕ ಕಡಿತವಾಗಿರುವುದು ತಮ್ಮ ಗಮನಕ್ಕೆ ಬಂದಿದ್ದು ಉತ್ತರ ಭಾಗದಲ್ಲಿ ತಾತ್ಕಾಲಿಕ ರಸ್ತೆಯನ್ನು ಮಾಡಿದ್ದೇವೆ. ಸಿಇಓ ಅವರಿಂದ ವಿಶೇಷ ಅನುಮತಿ ಪಡೆದು ನರೇಗಾದಲ್ಲಿ ಕಾಂಕ್ರೀಟ್ ಹಾಕಲಾಗುವುದು. ದಕ್ಷಿಣ ಭಾಗದಲ್ಲಿ ಚರಂಡಿಯನ್ನು ಮಾಡಿ ನೀರು ಹೋಗುವಂತೆ ಮಾಡಲಾಗುವುದು ಎಂದು ದೊಡ್ಡಗಂಗವಾಡಿ ಪಿಡಿಓ ಎಂ.ಎ. ಲೋಕೇಶ್ ಸ್ಪಷ್ಟಪಡಿಸಿದ್ದಾರೆ.


ಗೋ ರಾ ಶ್ರೀನಿವಾಸ...

ಮೊ:9845856139.

ಪ್ರತಿಕ್ರಿಯೆಗಳು

  • ನಿಮ್ಮ ಅಭಿಪ್ರಾಯ ತಿಳಿಸುವಲ್ಲಿ ನೀವು ಮೊದಲಿಗರಾಗಿ.

ನಿಮ್ಮ ಅಭಿಪ್ರಾಯಗಳನ್ನು ಬರೆಯಿರಿ/ತಿಳಿಸಿ.

Recent news in ramanagara »

ಅಣ್ಣನ ನೆನಪು ನಾಟಕ ಅದ್ಭುತ, ವಿಚಾರ ಹಂಚುವಲ್ಲಿ ವಿಫಲ
ಅಣ್ಣನ ನೆನಪು ನಾಟಕ ಅದ್ಭುತ, ವಿಚಾರ ಹಂಚುವಲ್ಲಿ ವಿಫಲ

ರಾಮನಗರ/ಚನ್ನಪಟ್ಟಣ: (ವಿಮರ್ಶಾತ್ಮಕ ಲೇಖನ)

ನಗರದ ಶತಮಾನೋತ್ಸವ ಭವನದಲ್ಲಿ ಬೆಂಗಳೂರಿನ ಪ್ರವರ ಹವ್ಯಾಸಿ ನಾಟಕ ತಂಡವು ನಡೆಸಿಕೊಟ್ಟ ಪೂರ್ಣ ಚ

ಪೌರಾಣಿಕ ನಾಟಕದಲ್ಲಿ ಜನಮನ ಸೂರೆಗೊಂಡು ಇತಿಹಾಸ ನಿರ್ಮಿಸಿದ ಮಹಿಳಾ ಕಲಾವಿದರು.
ಪೌರಾಣಿಕ ನಾಟಕದಲ್ಲಿ ಜನಮನ ಸೂರೆಗೊಂಡು ಇತಿಹಾಸ ನಿರ್ಮಿಸಿದ ಮಹಿಳಾ ಕಲಾವಿದರು.

ಚನ್ನಪಟ್ಟಣ :  ಚನ್ನಪಟ್ಟಣದಲ್ಲಿ ಮಹಿಳೆಯರೇ ಪೌರಾಣಿಕ ನಾಟಕವನ್ನು ಅಭ್ಯಾಸ ಮಾಡಿ ಬಯಲು ಮಂದಿರದಲ್ಲಿ ಪ್ರಸ್ತುತ ಪಡಿಸುತ್ತಿರುವುದು ವಿಶೇಷವಾಗಿದೆ. ಪೌರಾಣಿಕ

ಮಹಿಳೆಯರಿಂದಲೇ ಪೌರಾಣಿಕ ನಾಟಕ ಪ್ರದರ್ಶನ, ಇತಿಹಾಸ ಸೃಷ್ಟಿಸುವ ಸಾಧ್ಯತೆ ದಟ್ಟವಾಗಿದೆ. ಭಾವಿಪ ಪದಾಧಿಕಾರಿಗಳು
ಮಹಿಳೆಯರಿಂದಲೇ ಪೌರಾಣಿಕ ನಾಟಕ ಪ್ರದರ್ಶನ, ಇತಿಹಾಸ ಸೃಷ್ಟಿಸುವ ಸಾಧ್ಯತೆ ದಟ್ಟವಾಗಿದೆ. ಭಾವಿಪ ಪದಾಧಿಕಾರಿಗಳು

ಚನ್ನಪಟ್ಟಣ: ನಗರದ ಶ್ರೀ ಕೊಲ್ಲಾಪುರದಮ್ಮನ ದೇವಸ್ಥಾನದ ಆವರಣದಲ್ಲಿ ಇದೇ ಮಾರ್ಚ್ ತಿಂಗಳ ಹತ್ತನೇ ತಾರಿಖಿನ ಭಾನುವಾರ ಮಧ್ಯಾಹ್ನ ತಾಲೂಕಿನಲ್ಲಿ ಇದೇ ಪ್ರಪ್ರಥ

ವರ್ಣ ನೀತಿ ಮತ್ತು ಜಾತಿಯತೆಯನ್ನು ಮೀರಿದವರು ಮಾತ್ರ ಮನುಷ್ಯ ಜಾತಿಯಾಗಲು ಸಾಧ್ಯ –ಪ್ರೊ. ಕೆ.ಎಸ್.ಭಗವಾನ್
ವರ್ಣ ನೀತಿ ಮತ್ತು ಜಾತಿಯತೆಯನ್ನು ಮೀರಿದವರು ಮಾತ್ರ ಮನುಷ್ಯ ಜಾತಿಯಾಗಲು ಸಾಧ್ಯ –ಪ್ರೊ. ಕೆ.ಎಸ್.ಭಗವಾನ್

ರಾಮನಗರ: ಶೂದ್ರರನ್ನು ವರ್ಣ ನೀತಿಯಿಂದಲೆ ವೈದಿಕರು ಆಳಿದರು. ಇಂದಿಗೂ ಸಹ ವೈದಿಕರು ರಾಮನನ್ನು ನಮ್ಮ ಮೇಲೆ ಹೇರುವ ಮೂಲಕ ಮತ್ತೆ ಪೂರ್ವಕಾಲಕ್ಕೆ ಕರೆದು

ಬೆಂಗಳೂರು ಶಿಕ್ಷಕರ ಕ್ಷೇತ್ರದ ಉಪ ಚುನಾವಣೆ: ಜಿಲ್ಲೆಯಲ್ಲಿ ಶೇ.95.77 ಮತದಾನ
ಬೆಂಗಳೂರು ಶಿಕ್ಷಕರ ಕ್ಷೇತ್ರದ ಉಪ ಚುನಾವಣೆ: ಜಿಲ್ಲೆಯಲ್ಲಿ ಶೇ.95.77 ಮತದಾನ

ರಾಮನಗರ, ಫೆ. 16  ರಾಜ್ಯ ವಿಧಾನ ಪರಿಷತ್ತಿಗೆ ಬೆಂಗಳೂರು ಶಿಕ್ಷಕರ ಕ್ಷೇತ್ರದಿಂದಫೆ.16ರ ಶುಕ್ರವಾರ ಬೆಳಿಗ್ಗೆ 8 ರಿಂದ ಸಂಜೆ 4 ಗಂಟೆಯ ವರೆಗೆನಡೆದ ಉಪ ಚುನ

ವೈಜ್ಞಾನಿಕ ಮನೋವೃತ್ತಿ:ಸಾಂವಿಧಾನಿಕ ಕರ್ತವ್ಯ ಪ್ರೊ. ಎಂ.ಅಬ್ದುಲ್ ರೆಹಮಾನ್ ಪಾಷ

ರಾಮನಗರ; ಮಾನವ ಹಕ್ಕುಗಳನ್ನು ಯಾರೂ ಕೊಡುವುದಿಲ್ಲ, ವ್ಯಕ್ತಿಗಳಿಗೆ ಅವುಗಳಿಗೆ ಜನ್ಮತಃ ದಕ್ಕಿರುತ್ತವೆ. ಅವುಗಳನ್ನು ಯಾರೂ ಕೊಡುವುದಿಲ್ಲವಾದ್ದರಿ

ನಾಳೆ ನಡೆಯುವ ಶಿಕ್ಷಕರ ಕ್ಷೇತ್ರದ ಚುನಾವಣೆ ಪ್ರಯುಕ್ತ ಮತಗಟ್ಟೆಗಳತ್ತ ತೆರಳಿದ ಸಿಬ್ಬಂದಿ
ನಾಳೆ ನಡೆಯುವ ಶಿಕ್ಷಕರ ಕ್ಷೇತ್ರದ ಚುನಾವಣೆ ಪ್ರಯುಕ್ತ ಮತಗಟ್ಟೆಗಳತ್ತ ತೆರಳಿದ ಸಿಬ್ಬಂದಿ

ರಾಮನಗರ: ರಾಜ್ಯ ವಿಧಾನ ಸಭೆ ಶಿಕ್ಷಕರ ಕ್ಷೇತ್ರದ ಚುನಾವಣೆ ಕಾವೇರಿದ್ದು,  ಬಹಿರಂಗ ಪ್ರಚಾರ ಕೊನೆಗೊಂಡ ನಂತರ ಇಂದು ಮಸ್ಟರಿಂಗ್ ಕಾರ್ಯ ಮುಗಿದು, ಮತಗಟ್ಟೆ ಸ

ವೈದ್ಯ ಸಿಬ್ಬಂದಿ ನಿರ್ಲಕ್ಷ್ಯ ಹಸುಗೂಸು ಸಾವು
ವೈದ್ಯ ಸಿಬ್ಬಂದಿ ನಿರ್ಲಕ್ಷ್ಯ ಹಸುಗೂಸು ಸಾವು

ರಾಮನಗರ: ಚನ್ನಪಟ್ಟಣ: ವೈದ್ಯ ಸಿಬ್ಬಂದಿಯಾದ ಕಿರಿಯ ಮಹಿಳಾ ಆರೋಗ್ಯ ಸಹಾಯಕಿಯ ನಿರ್ಲಕ್ಷ್ಯದಿಂದ ಒಂದು ತಿಂಗಳು 20 ದಿನಗಳ ಗಂಡು ಶಿಶುವೊಂದು ಪ್ರಾಣ ಕಳೆದುಕೊ

ಗ್ರೇಟ್ ಬೆಂಗಳೂರು ಜಿಲ್ಲೆ, ಮತ್ತೇ ಮುನ್ನಲೆಗೆ ತಂದ : ಡಿ,ಸಿ.ಎಂ. ಡಿ.ಕೆ.ಶಿವಕುಮಾರ್
ಗ್ರೇಟ್ ಬೆಂಗಳೂರು ಜಿಲ್ಲೆ, ಮತ್ತೇ ಮುನ್ನಲೆಗೆ ತಂದ : ಡಿ,ಸಿ.ಎಂ. ಡಿ.ಕೆ.ಶಿವಕುಮಾರ್

ರಾಮನಗರ, ಫೆ. 12:   ನಾವು ರಾಮನಗರ ಜಿಲ್ಲೆಯವರಲ್ಲಾ ನಾವೆಲ್ಲರೂ ಬೆಂಗಳೂರು ಜಿಲ್ಲೆಯವರು. ಗ್ರೇಟ್ ಬೆಂಗಳೂರು ಜಿಲ್ಲೆ ಮಾಡುವ ಬಗ್ಗೆ ಲೋಕಸಭಾ ಚ

ನಮ್ಮದು ಬಹುತ್ವ ಭಾರತ, ಹಿಂದುತ್ವ ಹೇರಿಕೆ ಸರಿಯಲ್ಲ – ಡಾ. ಚಕ್ಕೆರೆ ಶಿವಶಂಕರ್
ನಮ್ಮದು ಬಹುತ್ವ ಭಾರತ, ಹಿಂದುತ್ವ ಹೇರಿಕೆ ಸರಿಯಲ್ಲ – ಡಾ. ಚಕ್ಕೆರೆ ಶಿವಶಂಕರ್


ರಾಮನಗರ : ಫೆ 10 ನಮ್ಮದು ಬಹುತ್ವ ಭಾರತ, ಇಲ್ಲಿ ಎಲ್ಲಾ ಧರ್ಮೀಯರು ಇದ್ದಾರೆ. ಕೇವಲ ಹಿಂದುತ್ವವನ್ನು ಬಲವಂತವಾಗಿ ಹೇರುವುದು ಸರಿಯಲ್ಲ. ಭಾರತದ

Top Stories »  


Top ↑