Tel: 7676775624 | Mail: info@yellowandred.in

Language: EN KAN

    Follow us :


ಜೆಡಿಎಸ್ ಬಗ್ಗೆ ಮಾತನಾಡಲು ವಿಷಯವೇ ಇಲ್ಲಾ. ಹೆಚ್ ಡಿ ಕುಮಾರಸ್ವಾಮಿ

Posted date: 09 Oct, 2021

Powered by:     Yellow and Red

ಜೆಡಿಎಸ್ ಬಗ್ಗೆ ಮಾತನಾಡಲು ವಿಷಯವೇ ಇಲ್ಲಾ. ಹೆಚ್ ಡಿ ಕುಮಾರಸ್ವಾಮಿ

ರಾಮನಗರ:ಅ/08/21. ಜೆಡಿಎಸ್ ಬಿಜೆಪಿಯ ಬಿ ಟೀಂ ಅನ್ನುವ ಕಾಂಗ್ರೆಸ್ ನವರು ಚುನಾವಣೆಯಲ್ಲಿ ಬಿಜೆಪಿ ಗೆಲ್ಲಿಸಲು ಅಲ್ಪಸಂಖ್ಯಾತ ಅಭ್ಯರ್ಥಿ ಹಾಕಿದ್ದಾರೆ ಅಂತಾರೆ. ಅವರಿಗೆ ಜೆಡಿಎಸ್ ಪಕ್ಷದ ಬಗ್ಗೆ ಮಾತಾನಡಲು ಕಾಂಗ್ರೆಸ್ ನಾಯಕರಿಗೆ ವಿಷಯವಿಲ್ಲ ಎಂದು ಮಾಜಿ ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ ಹೇಳಿದರು.

ಇಂದು ಚನ್ನಪಟ್ಟಣದಲ್ಲಿ ವಿವಿಧ ಕಾರ್ಯಕ್ರಮಗಳಲ್ಲಿ ಪಾಲ್ಗೊಳ್ಳುವ ಮುನ್ನ ಸುದ್ದಿಗಾರರ ಜೊತೆ ಮಾತನಾಡಿದ ಅವರು, ಕಾಂಗ್ರೆಸ್ ನವರು ಸುಖಾಸುಮ್ಮನೆ ಜೆಡಿಎಸ್ ಬಗ್ಗೆ ಮಾತನಾಡುತ್ತಿದ್ದಾರೆ ಎಂದರು.


ನಾನು ಈ ಹಿಂದೆ ಆರ್.ಎಸ್.ಎಸ್ ಬಗ್ಗೆ ನೀಡಿರುವ ಹೇಳಿಕೆಗೆ ಬದ್ದನಾಗಿದ್ದೇನೆ. ನಾನು ವಾಸ್ತವತೆಯ ಆಧಾರದಲ್ಲಿ ಆ ಮಾತನ್ನ ಹೇಳಿದ್ದೇನೆ.


ಆರ್.ಎಸ್.ಎಸ್ ಪ್ರಚಾರಕರೆ ಹೇಳಿರುವ ಮಾತುಗಳನ್ನ ಪ್ರಸ್ತಾಪ ಮಾಡಿದ್ದೇನೆ. ಸಾರ್ವಜನಿಕವಾಗಿ ಚರ್ಚೆಗೆ ನಾನು ಸಿದ್ದನಿದ್ದೇನೆ. ಬಿಜೆಪಿ ಹಾಗೂ ಆರ್.ಎಸ್.ಎಸ್ ನಾಯಕರು ಬರಲಿ ಎಂದು ಸವಾಲೆಸೆದರು.


ಆರ್ ಎಸ್ ಎಸ್  ಅಜೆಂಡಾಗಳ ಬಗ್ಗೆ ಚರ್ಚೆ ನಡೆಸಲು ನಾನು ಸಿದ್ದನಿದ್ದು ಆರ್.ಎಸ್.ಎಸ್ ಪ್ರಚಾರಕರೆ ಒಬ್ಬ ಲೇಖಕರ ಮುಂದೆ ಹೇಳಿರುವುದನ್ನೆ ನಾನು ಹೇಳಿದ್ದೇನೆ. ಸ್ವಾತಂತ್ರ್ಯ ಬಂದಾಗ ಆರ್.ಎಸ್.ಎಸ್ ಇಲ್ಲದಿದ್ದರೆ ಭಾರತ ಪಾಕಿಸ್ತಾನ ಆಗುತಿತ್ತು ಎಂಬ ಸಚಿವ ಈಶ್ವರಪ್ಪ ಹೇಳಿಕೆ ವಿಚಾರದ ಬಗ್ಗೆ ಪ್ರತಿಕ್ರಿಯೆ ನೀಡಿದ ಹೆಚ್ಡಿಕೆ, 

ಸ್ವಾತಂತ್ರ್ಯ ಬಂದಾಗ ಈಶ್ವರಪ್ಪ ಹುಟ್ಟಿದ್ರಾ? ನಾನು ಹುಟ್ಟಿರಲಿಲ್ಲ.

ಯಾರ ಯಾರ ಕೊಡುಗೆ ಏನ್ ಏನ್ ಇದೆ ಅಂತಾ ಈಶ್ವರಪ್ಪ ಅವರಿಗೆ ಏನ್ ಗೊತ್ತು‌

ಆರ್.ಎಸ್.ಎಸ್ ನವರು ಬಂದು ಪಾಕಿಸ್ತಾನ ಆಗುವುದನ್ನ ತಪ್ಪಿಸಿದ್ದಾರಾ ಎಂದು ಪ್ರಶ್ನಿಸಿದರು.


ಕಾಶ್ಮೀರದಲ್ಲಿ ಶಾಲೆಗೆ ನುಗ್ಗಿ ಭಯೋತ್ಪಾದಕರು ಶಿಕ್ಷಕರನ್ನ ಸುಟ್ಟಿದ್ದಾರೆ. ದೇವೇಗೌಡ್ರು 10 ತಿಂಗಳು ಪ್ರಧಾನಿ ಆಗಿದ್ದ ವೇಳೆ ದೇಶದಲ್ಲಿ ನಾಗರಿಕರ ಮೇಲೆ ಗುಂಡು ಹಾರಿಸಿದ ಘಟನೆ ಯಾವುದಾದರೂ ನಡೆದಿತ್ತಾ ಎನ್ನುವುದಕ್ಕೆ ಪುರಾವೆ ಕೊಡಿ ಎಂದ ಕುಮಾರಸ್ವಾಮಿ,

ಕಳೆದ 4 ದಿನಗಳಲ್ಲಿ ಕಾಶ್ಮೀರದಲ್ಲಿ ಪಂಡಿತರು ಹಾಗೂ ಶಿಕ್ಷಕರನ್ನ ನಾಗರಿಕರನ್ನ ಭಯೋತ್ಪಾದಕರು ಗುಂಡಿಕ್ಕಿದ್ದಾರೆ. ಇದೇನಾ ಆರ್.ಎಸ್.ಎಸ್ ನಿಮಗೆ ಸರಕಾರ ನಡೆಸುವುದು ಹೇಗೆ ಅಂತಾ ಹೇಳಿಕೊಟ್ಟಿರೋದು ಎಂದರು.


ಕಾಂಗ್ರೆಸ್ ನಾಯಕರ ಜತೆಗೆ ಬಿಜೆಪಿ ನಾಯಕರು ವಾದ ಮಾಡಿದ ಹಾಗೆ ನನ್ನ ಬಳಿ ಚರ್ಚೆ ಬೇಡ. ನಾನು ದಾಖಲೆ ಆಧಾರ ಇಟ್ಟಿಕೊಂಡು ಮಾತನಾಡುತ್ತೇನೆ. ಆರ್.ಎಸ್.ಎಸ್ ಹಾಗೂ ಬಿಜೆಪಿ ಸೇರಿಕೊಂಡು ಕಾಶ್ಮೀರವನ್ನ ಹಾಳು ಮಾಡುತ್ತಿದ್ದಾರೆ ಎಂದು ಕಿಡಿಕಾರಿದ್ರು.


 *ಉತ್ತಮ ವಾತಾವರಣ ಇದೆ:* 

ಉಪ ಚುನಾವಣೆ ನಡೆಯುತ್ತಿರುವ ಎರಡು ಕ್ಷೇತ್ರಗಳಲ್ಲಿ ಉತ್ತಮ ವಾತಾವರಣವಿದೆ. ಸಿಂಧಗಿಯಲ್ಲಿ ಈಗಾಗಲೇ ನಮ್ಮ ಪಕ್ಷದ ಅಭ್ಯರ್ಥಿ ಗೆಲ್ಲುವ ಸೂಚನೆ ಇದೆ. ಹಾನಗಲ್ ನಲ್ಲಿ ಗೆಲುವ ಪೈಪೋಟಿ ನೀಡಲಿದ್ದೇವೆ ಎಂದು ಪ್ರಶ್ನೆಯೊಂದಕ್ಕೆ ಉತ್ತರಿಸಿದ್ರು.

ಜೆಡಿಎಸ್ ಕಾರ್ಯಾಗಾರದಲ್ಲಿ ನಾನೇ ಹೇಳಿದಂತೆ ಜೆಡಿಎಸ್ ಪಕ್ಷ ಎಲ್ಲಿ ಸ್ಟ್ರಾಂಗ್ ಇದೆ ಅಲ್ಲಿ ಪಕ್ಷ ಬೆಂಬಲಿಸಿ. ಎಲ್ಲಿ ಬಿಜೆಪಿಗಿಂತ ಕಾಂಗ್ರೆಸ್ ಮುಂದೆ ಇದೆ ಅಲ್ಲಿ ಅಲ್ಪಸಂಖ್ಯಾತ ಕಾರ್ಯಕರ್ತರು ಕಾಂಗ್ರೆಸ್ ಪಕ್ಷ ಬೆಂಬಲಿಸಿ ಅಂತಾ ಓಪನ್ನಾಗಿ ಹೇಳಿದ್ದೇನೆ. ಕಾಂಗ್ರೆಸ್ ಪಕ್ಷದ ಹಾಗೇ ಹೀನಾಯ ರಾಜಕೀಯ ಮಾಡಲ್ಲ. ಸಿದ್ದರಾಮಯ್ಯ ಅವರ ಹಾಗೆ ಕುಲಗೆಟ್ಟ ರಾಜಕೀಯ ನಾನು  ಮಾಡಲ್ಲವೆಂದು ಸಿದ್ದುವನ್ನು ಕುಟುಕಿದರು.


ರಾಜ್ಯದಲ್ಲಿ ಜ್ಯಾತೀತಾ ಶಕ್ತಿ ಉಳಿಯಲು ಕಾಂಗ್ರೆಸ್ ಹಾಗೂ ಜೆಡಿಎಸ್ ಪಕ್ಷವನ್ನ ಬೆಂಬಲಿಸಿ ಅಂತಾ ಹೇಳಿದ್ದೇನೆ. ಸಿದ್ದರಾಮಯ್ಯ ಅವರು ಜೆಡಿಎಸ್ ಪಕ್ಷದ ವಿರುದ್ಧ ಅಪಪ್ರಚಾರ ಮಾಡಿ ತಮ್ಮ ಕೀಳುಮಟ್ಟದ ರಾಜಕೀಯ ಏನೂ ಎಂಬುದನ್ನ ಪ್ರದರ್ಶನ ಮಾಡುತ್ತಿದ್ದಾರೆ ಎಂದು ಕುಮಾರಸ್ವಾಮಿ ಆಕ್ರೋಶ ವ್ಯಕ್ತಪಡಿಸಿದರು‌.


*ಉಪ ಚುನಾವಣೆ ವಿಚಾರ:*

ಎರಡು ಕ್ಷೇತ್ರಗಳಲ್ಲಿ ಉತ್ತಮ ವಾತಾವರಣ ಇದೆ.

ಸಿಂಧಗಿಯಲ್ಲಿ ಈಗಾಗಲೇ ಅಭ್ಯರ್ಥಿ ಗೆಲ್ಲುವ ಸೂಚನೆ ಇದೆ

ಹಾನಗಲ್ ನಲ್ಲಿ ಗೆಲುವ ಪೈಪೋಟಿ ನೀಡಲಿದ್ದೇವೆ

ಜೆಡಿಎಸ್ ಕಾರ್ಯಾಗಾರದಲ್ಲಿ ನಾನೇ ಹೇಳಿದ್ದೆನೆ.


ನಮ್ಮ ಪಕ್ಷವನ್ನ 2023 ಕ್ಕೆ ಅಧಿಕಾರಕ್ಕೆ ತರಲು ಕಾರ್ಯಾಗಾರಗಳನ್ನ ಮಾಡಿದ್ದೇನೆ. ದೇಶದಲ್ಲಿ ನಡೆಯುತ್ತಿರುವ ಘಟನೆಗಳನ್ನ ಜನತೆ ಮುಂದೆ ಇಡಲು ಪ್ರಾರಂಭ ಮಾಡಿದ್ದೇನೆ.

ಇದನ್ನ ಇಲ್ಲಿಗೆ ನಿಲ್ಲಿಸುವ ಪ್ರಶ್ನೆ ಇಲ್ಲ. ಕಾರ್ಯಾಗಾರಗಳನ್ನ ಮಾಡುವ ಮೂಲಕ ಮುಂದೆಯೂ ಜನರಿಗೆ ಮನವರಿಕೆ ಮಾಡುವ ಕೆಲಸ ಮಾಡುತ್ತೇನೆ ಎಂದು ವಿವರಿಸಿದರು‌


ಇದು ಉಪ ಚುನಾವಣೆಯಲ್ಲಿ ಯಾರನ್ನೊ ಓಲೈಸಿಕೊಳ್ಳಲು ಕಾರ್ಯಾಗಾರ ಮಾಡಿಲ್ಲ. ಓಲೈಸೊ ರಾಜಕಾರಣ ಏನಿದ್ರು ಬಿಜೆಪಿ ಪಕ್ಷದ್ದು‌ ಹಿಂದುತ್ವದ ಹೆಸರಿನಲ್ಲಿ ಸಂದೇಶ ಕೊಡಲು ಬಿಜೆಪಿಯವರು ಹೊರಟ್ಟಿದ್ದಾರೆ.

ಹಿಂದುತ್ವದ ರಾಜಕಾರಣ ಮಾಡಿಕೊಂಡು ಮತಗಳಿಗೊಸ್ಕರ ನಾನು ಓಟ್ ಬ್ಯಾಂಕ್ ರಾಜಕಾರಣ ಮಾಡುವುದಿಲ್ಲವೆಂದರು.


ಗೋ ರಾ ಶ್ರೀನಿವಾಸ...

ಮೊ:9845856139.

??????????????

  • ????? ???????? ??????????? ???? ??????????.

ನಿಮ್ಮ ಅಭಿಪ್ರಾಯಗಳನ್ನು ಬರೆಯಿರಿ/ತಿಳಿಸಿ.

Recent news in ramanagara »

ಮಾಹಿತಿ ನೀಡಬೇಕಾದ ಅಧಿಕಾರಿಗಳೇ ಗ್ರಾಮಸಭೆಗೆ ಗೈರು
ಮಾಹಿತಿ ನೀಡಬೇಕಾದ ಅಧಿಕಾರಿಗಳೇ ಗ್ರಾಮಸಭೆಗೆ ಗೈರು

ಮಂಡ್ಯ:ಅ/27/21. ಗ್ರಾಮಸಭೆಯಲ್ಲಿ ತಮ್ಮ ಇಲಾಖಾ ಮಾಹಿತಿ ನೀಡಬೇಕಾದ ಅಧಿಕಾರಿಗಳೇ ಗೈರು ಹಾಜರಾದ ಹಿನ್ನಲೆಯಲ್ಲಿ ಗ್ರಾಮ ಸಭೆ ರದ್ದಾದ ಘಟನೆ ಮಂಡ್ಯ

ನಗರದ ನೀರಿನ ಪೈಪಿನಲ್ಲಿ ಶವದ ಅಂಗ ಮತ್ತೊಮ್ಮೆ ಪತ್ತೆ. ಆಕ್ರೋಶಗೊಂಡ ನಗರಿಗರು
ನಗರದ ನೀರಿನ ಪೈಪಿನಲ್ಲಿ ಶವದ ಅಂಗ ಮತ್ತೊಮ್ಮೆ ಪತ್ತೆ. ಆಕ್ರೋಶಗೊಂಡ ನಗರಿಗರು

ಚನ್ನಪಟ್ಟಣ:ಅ/27/21. ಚನ್ನಪಟ್ಟಣ ನಗರದಲ್ಲಿ ಮತ್ತೊಮ್ಮೆ ಸದ್ದು ಮಾಡಿದ ಅಪರಿಚಿತ ಮೃತ ದೇಹದ ಅಂಗಗಳು. ಅಧಿಕಾರಿಗಳ ವಿರುದ್ಧ ಆಕ್ರೋಶಗೊಂಡ ನಗರವಾಸಿಗಳು.  ನಗರದ ಮಂಗಳವಾರಪೇಟೆಯ 10 ನೇ ಕ್ರಾಸ್ ನ

ಕರುಳ ಕುಡಿಯನ್ನೇ ಬೀದಿಗೆಸೆದ 'ಮಹಾತಾಯಿ !?'
ಕರುಳ ಕುಡಿಯನ್ನೇ ಬೀದಿಗೆಸೆದ 'ಮಹಾತಾಯಿ !?'

ಚನ್ನಪಟ್ಟಣ:ಅ/27/21. ಮಾನವೀಯತೆಯನ್ನೇ ಮರೆತ ಹೆತ್ತತಾಯಿಯಿಬ್ಬಳು ಆಗ ತಾನೆ ಜನಿಸಿದ ತನ್ನ ನವಜಾತ ಶಿಶುವನ್ನು ಬೀದಿಗೆಸೆದ ಘಟನೆ ನಗರದ ಸಾತನೂರು ಮುಖ್ಯ ರಸ್ತೆಯಲ್ಲಿನ ನಗರಸಭೆ ವ್ಯಾಪ್ತಿಯಲ್ಲಿ ನಿನ್ನೆ ತ

ಐಷಾರಾಮಿ ಕಳ್ಳನನ್ನು ಬಂಧಿಸಿದ ಮಾಗಡಿ ಪೋಲಿಸರು
ಐಷಾರಾಮಿ ಕಳ್ಳನನ್ನು ಬಂಧಿಸಿದ ಮಾಗಡಿ ಪೋಲಿಸರು

ರಾಮನಗರ:ಅ/26/21. ಒಂಟಿ ಮನೆಗಳನ್ನೇ ಗುರಿ ಮಾಡಿಕೊಂಡು ಕನ್ನ ಹಾಕಿ ಐಷಾರಾಮಿ ಜೀವನ ನಡೆಸುತ್ತಿದ್ದ ಕುಖ್ಯಾತ ಮನೆಗಳ್ಳನನ್ನು ಬಂಧಿಸಿರುವ ಮಾಗಡಿ

ನಗರದಲ್ಲಿ ತುಂಬಿತುಳುಕುತ್ತಿದೆ ಕಸದ ರಾಶಿ. ಇಚ್ಚಾಶಕ್ತಿ ಕಳೆದುಕೊಂಡ ಜನಪ್ರತಿನಿಧಿಗಳು, ಜಾಗವಿಲ್ಲದೆ ಕೈಚೆಲ್ಲಿದ ಅಧಿಕಾರಿಗಳು
ನಗರದಲ್ಲಿ ತುಂಬಿತುಳುಕುತ್ತಿದೆ ಕಸದ ರಾಶಿ. ಇಚ್ಚಾಶಕ್ತಿ ಕಳೆದುಕೊಂಡ ಜನಪ್ರತಿನಿಧಿಗಳು, ಜಾಗವಿಲ್ಲದೆ ಕೈಚೆಲ್ಲಿದ ಅಧಿಕಾರಿಗಳು

ಚನ್ನಪಟ್ಟಣ:ಅ:25/21. ಚನ್ನಪಟ್ಟಣ ಎಂದಾಕ್ಷಣ ಜಪ್ತಿಗೆ ಬರುವುದು ಸಾಂಪ್ರದಾಯಿಕ ಗೊಂಬೆಗಳ ತವರು ಎಂದು, ಜೊತೆಗೆ ಪುರಾಣೇತಿಹಾಸಗಳ ಹಾಗೂ ಹೋರಾಟಗಳ

ಕೊರೊನಾ ನಿಯಮ ಪಾಲನೆಯೊಂದಿಗೆ ರಾಜ್ಯೋತ್ಸವ ಕಾರ್ಯಕ್ರಮ. ತಹಶಿಲ್ದಾರ್ ನಾಗೇಶ್
ಕೊರೊನಾ ನಿಯಮ ಪಾಲನೆಯೊಂದಿಗೆ ರಾಜ್ಯೋತ್ಸವ ಕಾರ್ಯಕ್ರಮ. ತಹಶಿಲ್ದಾರ್ ನಾಗೇಶ್

  • ಚನ್ನಪಟ್ಟಣ:ಅ:25/21. ಕೊರೊನಾ ನಿಯಮ ಪಾಲಿಸಿಕೊಂಡು ನಗರದ ಬಾಲಕರ ಪದವಿಪೂರ್ವ ಕಾಲೇಜು ಮೈದಾನದಲ್ಲಿ ಸಾಧ್ಯವಾದಷ್ಟು ಅದ್ದೂರಿಯಾಗಿ ನವೆಂಬರ್ 1 ನೇ ತಾರೀಖಿನಂದು ನಾಡಹಬ್ಬವಾದ ಕನ್ನಡ ರಾಜ್ಯೋತ್ಸವ ವನ್ನು ಆಚರಿಸಲಾಗುವುದು ಎಂದು ದಂಡಾಧಿಕಾ

ಜಿಲ್ಲೆಯಲ್ಲಿ ಅರ್ಥಪೂರ್ಣ ಕನ್ನಡ ರಾಜ್ಯೋತ್ಸವ ಆಚರಿಸಲಾಗುವುದು ಅಪರ ಜಿಲ್ಲಾಧಿಕಾರಿ
ಜಿಲ್ಲೆಯಲ್ಲಿ ಅರ್ಥಪೂರ್ಣ ಕನ್ನಡ ರಾಜ್ಯೋತ್ಸವ ಆಚರಿಸಲಾಗುವುದು ಅಪರ ಜಿಲ್ಲಾಧಿಕಾರಿ

ರಾಮನಗರ.ಅ.23:21. ಜಿಲ್ಲಾಡಳಿತದ ವತಿಯಿಂದ ನವೆಂಬರ್ 01 ರಂದು ಅರ್ಥಪೂರ್ಣವಾಗಿ ಕನ್ನಡ ರಾಜ್ಯೋತ್ಸವ ದಿನಾಚರಣೆ ಆಚರಿಸಲು ಇಂದು ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಅಪರ ಜಿಲ್ಲಾಧಿಕಾರಿ ಜವರೇಗೌಡ ಟ

ಕಾವೇರಿ ವಾಟರ್ ಬೋರ್ಡ್ ಸರ್ಕಲ್ ಗುಂಡಿಮಯ. ಪ್ರಯಾಣಿಕರ ಪರದಾಟ
ಕಾವೇರಿ ವಾಟರ್ ಬೋರ್ಡ್ ಸರ್ಕಲ್ ಗುಂಡಿಮಯ. ಪ್ರಯಾಣಿಕರ ಪರದಾಟ

ಚನ್ನಪಟ್ಟಣ:ಅ/22/21. ಚನ್ನಪಟ್ಟಣ ನಗರದ ಕಾವೇರಿ ನೀರು ಸರಬರಾಜು ಕಚೇರಿಯ ವೃತ್ತದಲ್ಲಿ ರಸ್ತೆ ಸಂಪೂರ್ಣ ಹಾಳಾಗಿದೆ. ಗುಂಡಿ ಬಿದ್ದು ವಾಹನಸವಾರರಿಗೆ ಬಹಳಷ್ಟು ತೊಂದರೆಯಾಗುತ್ತಿದೆ. ಸದ್ಯ ರಾಜ್ಯ ಹೆದ್ದ

ಕೆರೆಯಲ್ಲಿ ಈಜಲು ಹೋದ ಇಬ್ಬರು ಬಾಲಕರು ಸಾವು
ಕೆರೆಯಲ್ಲಿ ಈಜಲು ಹೋದ ಇಬ್ಬರು ಬಾಲಕರು ಸಾವು

ಬಿಡದಿ.ಅ.22/21: ರಾಮನಗರ ತಾಲೂಕಿನ ಕೆಂಚನಗುಪ್ಪೆ ಗ್ರಾಮದ ಕುಂಬಾರಕಟ್ಟೆಯಲ್ಲಿ ಈಜಲು ಹೋಗಿದ್ದ ಇಬ್ಬರು ಬಾಲಕರು ಸಾವಿಗೀಡಾಗಿರುವ ಘಟನೆ ನಡೆದಿದೆ

ಸರಗಳ್ಳರ ಸೆರೆ ಹಿಡಿದ ಎಂ ಕೆ ದೊಡ್ಡಿ ಪೋಲೀಸರು
ಸರಗಳ್ಳರ ಸೆರೆ ಹಿಡಿದ ಎಂ ಕೆ ದೊಡ್ಡಿ ಪೋಲೀಸರು

ಚನ್ನಪಟ್ಟಣ.ಅ.21/21: ತಾಲ್ಲೂಕಿನ ಎಂ ಕೆ ದೊಡ್ಡಿ ಪೋಲೀಸ್ ಠಾಣಾ ವ್ಯಾಪ್ತಿಯ ಬೊಮ್ಮನಾಯಕನಹಳ್ಳಿ ಬಳಿ ತಾಯಿ ಮಗಳು ದ್ವಿಚಕ್ರ ವಾಹನದಲ್ಲಿ ತೆರಳುವ

Top Stories »  


Top ↑