Tel: 7676775624 | Mail: info@yellowandred.in

Language: EN KAN

    Follow us :


ಮತಗಟ್ಟೆ ಏಜೆಂಟ್ ಗಳನ್ನು ನಿಯೋಜಿಸಿ : ತುಷಾರ್ ಗಿರಿ ನಾಥ್

Posted date: 21 Nov, 2021

Powered by:     Yellow and Red

ಮತಗಟ್ಟೆ ಏಜೆಂಟ್ ಗಳನ್ನು ನಿಯೋಜಿಸಿ : ತುಷಾರ್ ಗಿರಿ ನಾಥ್

ರಾಮನಗರ: ಮತದಾರರ ಪಟ್ಟಿಯ ವಿಶೇಷ ಸಂಕ್ಷಿಪ್ತ ಪರಿಷ್ಕರಣೆ ಜಿಲ್ಲೆಯಲ್ಲಿ ನಡೆಯುತ್ತಿದ್ದು, ರಾಜಕೀಯ ಪಕ್ಷಗಳು ತಮ್ಮಪಕ್ಷದ  ಬಿ.ಎಲ್.ಎ ಗಳನ್ನು ನಿಯೋಜಿಸಬೇಕು ಎಂದು ಮತದಾರರ ಪಟ್ಟಿಯ ವೀಕ್ಷಕರು, ಕಂದಾಯ ಇಲಾಖೆ‌ ಪ್ರಧಾನ ಕಾರ್ಯದರ್ಶಿ ತುಷಾರ್ ಗಿರಿನಾಥ್ ಅವರು ತಿಳಿಸಿದರು.


ಅವರು ಇಂದು ಮತದಾರರ ಪಟ್ಟಿ ಪರಿಷ್ಕರಣೆ ಸಂಬಂಧ ರಾಜಕೀಯ ಪಕ್ಷ ಹಾಗೂ ಅಧಿಕಾರಿಗಳ ಸಭೆ ನಡೆಸಿ ಮಾತನಾಡಿದರು.


ಕರಡು ಮತದಾರರ ಪಟ್ಟಿ‌ ಈಗಾಗಲೇ ಪ್ರಕಟಿಸಲಾಗಿದ್ದು, ಮತದಾರರ ಪಟ್ಟಿಯಲ್ಲಿ ಹೊಸದಾಗಿ ಹೆಸರು ನೋಂದಣಿ, ಹೆಸರು ಕೈ ಬಿಡುವುದು, ಹೆಸರು ಸ್ಥಳಾಂತರ ಕೆಲಸ ನಡೆಯುತ್ತಿದೆ. ಬಿ.ಎಲ್.ಎ ಗಳು ಸಹ ಪರಿಶೀಲಿಸಿಕೊಂಡು ಆಕ್ಷೇಪಣೆ ಸಲ್ಲಿಸಬಹುದು. ಚುನಾವಣೆಯ ಸಂದರ್ಭದಲ್ಲಿ ಉಂಟಾಗುವ ಮತದಾರರ ಪಟ್ಟಿಯ ಸಣ್ಣ ಪುಟ್ಟ ಗೊಂದಲವನ್ನು ಈಗಲೇ ಪರಿಶೀಲಿಸಿಕೊಂಡರೆ ಚುನಾವಣೆಯಲ್ಲಿ ತೊಂದರೆ ಉಂಟಾಗುವುದಿಲ್ಲ ಎಂದರು.


ಮತದಾರರ ಪಟ್ಟಿಯಲ್ಲಿ ಹೆಸರು ಸೇರ್ಪಡೆ ಕೋರಿ ಆನ್ ಲೈನ್ ಮೂಲಕ ಅರ್ಜಿ ಸಲ್ಲಿಸಿ ದಾಖಲಾತಿ‌ ಸರಿಯಿಲ್ಲ ಎಂದು ತಿರಸ್ಕೃತ ವಾಗಿರುವ ಅರ್ಜಿಯನ್ನು ವಿಶೇಷವಾಗಿ ಪರಿಗಣಿಸಿ ಮನೆ ಭೇಟಿ ಮಾಡಿ ಅವರ ಹೆಸರು ಮತದಾರರ ಪಟ್ಟಿಯಲ್ಲಿ ಹೆಸರು ನೊಂದಾಯಿಸಿಕೊಳ್ಳುವಂತೆ ನೋಡಿಕೊಳ್ಳಿ ಎಂದರು.


ಈ ಜನ್ಮ ಆ್ಯಪ್ ನಲ್ಲಿ ಮೃತರಾಗಿರುವವರ ಮರಣ ಪ್ರಮಾಣ ಪತ್ರ ಪಡೆದು ಪರಿಶೀಲಿಸಿ ಮರಣ ರಿಜಿಸ್ಟರ್ ನಲ್ಲಿ ದಾಖಲಿಸಿ ನಂತರ ಮತದಾರರ ‌ಪಟ್ಟಿಯಿಂದ ಹಾಗೂ ಸಾಮಾಜಿಕ ಪಿಂಚಣಿಗಳಿಂದ ಅವರ ಹೆಸರನ್ನು ಕೈಬಿಡಬಹುದು ಎಂದರು.


*ವಾಟರ್ ಹೆಲ್ಪ್ ಲೈನ್ಆ್ಯಪ್:*

ವಾಟರ್ ಹೆಲ್ಪ್ ಲೈನ್ ಆ್ಯಪ್ ನ್ನು ಡೌನ್ ಲೋಡ್ ಮಾಡಿಕೊಂಡು ಅಗತ್ಯ ದಾಖಲಾತಿಗಳೊಂದಿಗೆ  ಮತದಾರರ ಪಟ್ಟಿಯಲ್ಲಿ ಹೆಸರು ಸೇರ್ಪಡೆ,  ಮತದಾರರ ಪಟ್ಟಿಯಲ್ಲಿ ತಿದ್ದುಪಡಿಗೆ ಅರ್ಜಿ ಸಲ್ಲಿಸಬಹುದು. ಮತಗಟ್ಟೆಗಳ ವಿವರ, ಮತದಾರರ ಪಟ್ಟಿಯಲ್ಲಿ ಹೆಸರು ಇರುವ ಬಗ್ಗೆ ಪರಿಶೀಲಿಸಿಕೊಳ್ಳಬಹುದು. ಈ ಹಿನ್ನೆಲೆಯಲ್ಲಿ ಹೆಚ್ಚು ಜನರು ವಾಟರ್ ಹೆಲ್ಪ್ ಲೈನ್  ಬಳಸುವಂತೆ ಪ್ರೇರೇಪಿಸಿ ಎಂದರು.


ಸಭೆಯಲ್ಲಿ ಜಿಲ್ಲಾಧಿಕಾರಿ ಡಾ: ರಾಕೇಶ್ ಕುಮಾರ್ ಕೆ, ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ‌ಅಧಿಕಾರಿ ಇಕ್ರಂ, ಅಪರ ಜಿಲ್ಲಾಧಿಕಾರಿ ಜವರೇಗೌಡ ಟಿ, ಉಪವಿಭಾಗಾಧಿಕಾರಿ ಮಂಜುನಾಥ್, ತಹಶೀಲ್ದಾರ್ ವಿಜಯ್ ಕುಮಾರ್, ವಿಶ್ವನಾಥ್, ನಾಗೇಶ್, ಶ್ರೀನಿವಾಸ್ ಪ್ರಸಾದ್ ಸೇರಿದಂತೆ ಇನ್ನಿತರ ಅಧಿಕಾರಿಗಳು ಉಪಸ್ಥಿತರಿದ್ದರು.


ಗೋ ರಾ ಶ್ರೀನಿವಾಸ...

ಮೊ:9845856139.

??????????????

  • ????? ???????? ??????????? ???? ??????????.

ನಿಮ್ಮ ಅಭಿಪ್ರಾಯಗಳನ್ನು ಬರೆಯಿರಿ/ತಿಳಿಸಿ.

Recent news in ramanagara »

ಕಿರಿಯ ಸಹಾಯಕ ಅಭಿಯಂತರ ಅಮಾನತ್ತು ಮಾಡಿ ವಾರದ ನಂತರ ವಾಪಸ್ಸು
ಕಿರಿಯ ಸಹಾಯಕ ಅಭಿಯಂತರ ಅಮಾನತ್ತು ಮಾಡಿ ವಾರದ ನಂತರ ವಾಪಸ್ಸು

ಚನ್ನಪಟ್ಟಣ: ಭಾರತ ಸರ್ಕಾರದ ಮಹತ್ವಾಕಾಂಕ್ಷೆಯ ಯೋಜನೆಯಾದ ಜಲ ಜೀವನ್ ಮಿಷನ್ ಯೋಜನೆಯ ಕಾರ್ಯಾತ್ಮಕ ನಳ ನೀರು ಸಂಪರ್ಕ ಕಲ್ಪಿಸುವ ಕಾಮಗಾರಿಗಳನ್ನು

ಡಾ: ಬಿಆರ್. ಅಂಬೇಡ್ಕರ್ ಅವರ ಜೀವನ ಎಲ್ಲರಿಗೂ ಮಾದರಿ : ಡಾ: ರಾಕೇಶ್ ಕುಮಾರ್ ಕೆ
ಡಾ: ಬಿಆರ್. ಅಂಬೇಡ್ಕರ್ ಅವರ ಜೀವನ ಎಲ್ಲರಿಗೂ ಮಾದರಿ : ಡಾ: ರಾಕೇಶ್ ಕುಮಾರ್ ಕೆ

ರಾಮನಗರ, ಡಿ.06/21. ಸಂವಿಧಾನ ಶಿಲ್ಪಿ ಡಾ: ಬಿ.ಆರ್. ಅಂಬೇಡ್ಕರ್ ಅವರು ಪ್ರತಿ ಕ್ಷೇತ್ರದಲ್ಲೂ ತಮ್ಮ ಕೊಡುಗೆ ನೀಡಿದ್ದಾರೆ. ಡಾ: ಬಿ.ಆರ್. ಅಂಬೇ

ಮುಚ್ಚಿದ ಚರಂಡಿ. ಮಳೆ ಮತ್ತು ಚರಂಡಿ ನೀರು ಮನೆಗೆ. ಗ್ರಾಮಸ್ಥರ ಪ್ರತಿಭಟನೆ
ಮುಚ್ಚಿದ ಚರಂಡಿ. ಮಳೆ ಮತ್ತು ಚರಂಡಿ ನೀರು ಮನೆಗೆ. ಗ್ರಾಮಸ್ಥರ ಪ್ರತಿಭಟನೆ

ಚನ್ನಪಟ್ಟಣ: ಚರಂಡಿ ಹಾಗೂ ಮಳೆಯ ನೀರು ಮನೆಗಳಿಗೆ ನುಗ್ಗುತ್ತಿರುವುದನ್ನು ವಿರೋಧಿಸಿ ತಾಲೂಕಿನ ತಿಟ್ಟಮಾರನಹಳ್ಳಿ ಗ್ರಾಮಸ್ಥರು ಶನಿವಾರ ರಾತ್ರಿ ಚ

ಅಭ್ಯರ್ಥಿಗಳಿಗೆ ಧೈರ್ಯವಾಗಿ ಪರೀಕ್ಷೆ ಬರೆಯುವಂತೆ ಸಲಹೆ- ಗಂಗಾಧರ್
ಅಭ್ಯರ್ಥಿಗಳಿಗೆ ಧೈರ್ಯವಾಗಿ ಪರೀಕ್ಷೆ ಬರೆಯುವಂತೆ ಸಲಹೆ- ಗಂಗಾಧರ್

ರಾಮನಗರ, ಡಿ.04/21. ನಗರದ ಶಾಂತಿನಿಕೇತನ ಕಾಲೇಜಿನಲ್ಲಿ ದಿನಾಂಕ: 03.12.2021 ರಂದು ಕರ್ನಾಟಕ ಲೋಕ ಸೇವಾ ಆಯೋಗದಿಂದ ಗ್ರೂಪ್ ``ಸಿ” ತಾಂತ್ರಿಕೇತರ ಪರೀಕ್ಷೆಯನ್ನು ಆಯೋಜಿಸಲಾಗಿತ್ತು.

ಕೋವಿಡ್ ಲಸಿಕೆ ನೀಡುವ ಕೆಲಸವನ್ನು ಇನ್ನಷ್ಡು ಚುರುಕುಗೊಳಿಸಿ: ಡಾ: ರಾಕೇಶ್ ಕುಮಾರ್ ಕೆ
ಕೋವಿಡ್ ಲಸಿಕೆ ನೀಡುವ ಕೆಲಸವನ್ನು ಇನ್ನಷ್ಡು ಚುರುಕುಗೊಳಿಸಿ: ಡಾ: ರಾಕೇಶ್ ಕುಮಾರ್ ಕೆ

ರಾಮನಗರ, ಡಿ.04/21. ಜಿಲ್ಲೆಯಲ್ಲಿ ಕೋವಿಡ್ ಲಸಿಕೆಯಿಂದ ಯಾರು ವಂಚಿತರಾಗಬಾರದು. ಪ್ರತಿಯೊಬ್ಬರು ಲಸಿಕೆ ಪಡೆದುಕೊಳ್ಳಬೇಕು. ಈ ಹಿನ್ನಲೆಯಲ್ಲಿ ಸಮೀಕ್ಷೆ ನಡೆಸಿ ಲಸಿಕೆ ಪಡೆಯದೇ ಇರುವವರ ವಿವರ ಕ್ರೋಡೀಕರ

ಸಿ.ಎಸ್.ಸಿ ಕೇಂದ್ರಗಳಲ್ಲಿ ಉಚಿತವಾಗಿ ನೋಂದಣಿ: ಡಾ.ರಾಕೇಶ್ ಕುಮಾರ್
ಸಿ.ಎಸ್.ಸಿ ಕೇಂದ್ರಗಳಲ್ಲಿ ಉಚಿತವಾಗಿ ನೋಂದಣಿ: ಡಾ.ರಾಕೇಶ್ ಕುಮಾರ್

ಕೇಂದ್ರ ಹಾಗೂ ರಾಜ್ಯ ಸರಕಾರದಿಂದ ಅಸಂಘಟಿತ ವರ್ಗಗಳ ಕಾರ್ಮಿಕರಿಗೆ ಸಾಮಾಜಿಕ ಭದ್ರತಾ ಯೋಜನೆಗಳ ಸೌಲಭ್ಯ ಒದಗಿಸುವ ನಿಟ್ಟಿನಲ್ಲಿ ಕಾರ್ಮಿಕರ ದತ್ತಾಂಶವನ್ನು ಸಿದ್ದಪಡಿಸಲು ಇ-ಶ್ರಮ್ ಪೋರ್ಟನಲ್ಲಿ ಜಿಲ್ಲೆ

ವಸತಿ ಶಾಲೆಗಳಲ್ಲಿ ಕೋವಿಡ್ ನಿಯಮ ಪಾಲಿಸಿ
ವಸತಿ ಶಾಲೆಗಳಲ್ಲಿ ಕೋವಿಡ್ ನಿಯಮ ಪಾಲಿಸಿ

ರಾಮನಗರ: ಜಿಲ್ಲಾಡಳಿತ ಜಿಲ್ಲಾ ಪಂಚಾಯತ್, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ಜಿಲ್ಲಾ ಎಸ್.ಬಿ.ಸಿ.ಸಿ ಘಟಕ ರಾಮನಗರ, ಇವರ ಸಂಯುಕ್ತ

ಗೌಡಗೆರೆ ಚಾಮುಂಡೇಶ್ವರಿ ಬಸವಪ್ಪನ ಕ್ಷೇತ್ರದಲ್ಲಿ ಲಕ್ಷದೀಪೋತ್ಸವ ಮತ್ತು ಕೃತಿ ಲೋಕಾರ್ಪಣೆ
ಗೌಡಗೆರೆ ಚಾಮುಂಡೇಶ್ವರಿ ಬಸವಪ್ಪನ ಕ್ಷೇತ್ರದಲ್ಲಿ ಲಕ್ಷದೀಪೋತ್ಸವ ಮತ್ತು ಕೃತಿ ಲೋಕಾರ್ಪಣೆ

ಚನ್ನಪಟ್ಟಣ:ಡಿ:03/21. ತಾಲ್ಲೂಕಿನ ಗೌಡಗೆರೆ ಗ್ರಾಮದ ಶ್ರೀ ಚಾಮುಂಡೇಶ್ವರಿ ಬಸವಪ್ಪ ಪುಣ್ಯಕ್ಷೇತ್ರದಲ್ಲಿ ಡಿ.4 ರ ಶನಿವಾರ ಸಂಜೆ ಲಕ್ಷ ದೀಪೋತ್ಸ

ದೈಹಿಕವಾಗಿ ಮತ್ತು ಮಾನಸಿಕ ಸದೃಢತೆಗೆ  ಕ್ರೀಡೆ ಅತ್ಯಮುಖ್ಯ ಎಂದು ಜಿಲ್ಲಾಧಿಕಾರಿ ಡಾ ರಾಕೇಶ್ ಕುಮಾರ್
ದೈಹಿಕವಾಗಿ ಮತ್ತು ಮಾನಸಿಕ ಸದೃಢತೆಗೆ ಕ್ರೀಡೆ ಅತ್ಯಮುಖ್ಯ ಎಂದು ಜಿಲ್ಲಾಧಿಕಾರಿ ಡಾ ರಾಕೇಶ್ ಕುಮಾರ್

ಚನ್ನಪಟ್ಟಣ.ಡಿ.೦೩: ದೈಹಿಕವಾಗಿ ಮತ್ತು ಮಾನಸಿಕವಾಗಿ ಎರಡರಲ್ಲಿಯೂ ಸದೃಢವಾಗಿರಬೇಕು ಎಂದರೆ ಕ್ರೀಡೆಯಲ್ಲಿ ಭಾಗವಹಿಸುವಿಕೆ ಅತ್ಯಮುಖ್ಯ ಎಂದು ಜಿಲ್ಲಾಧಿಕಾರಿ ಡಾ ರಾಕೇಶ್ ಕುಮಾರ್ ತಿಳಿಸಿದರು..

ಅವರು ಇಂದು ಇಲ್ಲಿನ ಡಿಎಆರ್ ಮೈದಾನದಲ್ಲಿ

ಉತ್ತಮ ಚಿಂತನೆಗಳು ವ್ಯಕ್ತಿತ್ವ ರೂಪಿಸುತ್ತದೆ: ಜವರೇಗೌಡ ಟಿ
ಉತ್ತಮ ಚಿಂತನೆಗಳು ವ್ಯಕ್ತಿತ್ವ ರೂಪಿಸುತ್ತದೆ: ಜವರೇಗೌಡ ಟಿ

ರಾಮನಗರ, ಡಿ.01/21. ಸಮಾಜದಲ್ಲಿ ಪ್ರತಿಯೊಬ್ಬರು ಉತ್ತಮ ವ್ಯಕ್ತಿತ್ವ ರೂಪಿಸಿಕೊಂಡು ಒಳ್ಳೆಯ ಪ್ರಜೆಯಾಗಬೇಕು. ಇದಕ್ಕೆ ನಮ್ಮ ಆಲೋಚನೆಗಳು ಹಾಗೂ ಚ

Top Stories »  


Top ↑