Tel: 7676775624 | Mail: info@yellowandred.in

Language: EN KAN

    Follow us :


ಕಸಾಪ ಜಿಲ್ಲಾ ಚುನಾವಣೆ: ಬಿ ಟಿ ನಾಗೇಶ್ ಗೆ ಜಯ

Posted date: 22 Nov, 2021

Powered by:     Yellow and Red

ಕಸಾಪ ಜಿಲ್ಲಾ ಚುನಾವಣೆ: ಬಿ ಟಿ ನಾಗೇಶ್ ಗೆ ಜಯ

ಚನ್ನಪಟ್ಟಣ: ಕನ್ನಡ ಸಾಹಿತ್ಯ ಪರಿಷತ್ ರಾಜ್ಯ ಮತ್ತು ಜಿಲ್ಲಾ ಅಧ್ಯಕ್ಷ ಸ್ಥಾನಕ್ಕೆ ಭಾನುವಾರ ನಡೆದ ಚುನಾವಣೆಯಲ್ಲಿ ಜಿಲ್ಲಾಧ್ಯಕ್ಷ ಸ್ಥಾನಕ್ಕೆ ಸ್ಫರ್ಧೆ ಮಾಡಿದ್ದ ಬಿ.ಟಿ.ನಾಗೇಶ್‍ ಅವರು 707 ಅಂತರದಲ್ಲಿ ಸಹಸ್ಪರ್ಧಿ ಚಕ್ಕೆರೆ ಯೋಗೇಶ್, ಪಾರ್ವತೀಶ್ ಬಿ ಮತ್ತು ವಿರುದ್ಧ ಜಯಬೇರಿ ಬಾರಿಸುವ ಮೂಲಕ ಜಿಲ್ಲೆಯಲ್ಲಿ ಕನ್ನಡದ ರಥವನ್ನು ಎಳೆಯುವ ಜವಾಬ್ದಾರಿಯನ್ನು ಪಡೆದಯಕೊಂಡಿದ್ದು, ಈ ಮೂಲಕ ಕಸಾಪ ಚುನಾವಣೆಯಲ್ಲಿನ ಕುತೂಹಲಗಳಿಗೆ ತೆರೆಬಿದ್ದಿದೆ.


ಜಿಲ್ಲೆಯಲ್ಲಿ ಕಸಾಪ ಚುನಾವಣೆ ಪ್ರತಿಷ್ಠಿತ ಕಣ ನಿರ್ಮಾಣವಾಗಿತ್ತು. ಹಳೆ ಬೇರು- ಹೊಸ ಚಿಗುರು ಎಂಬಂತೆ ನಿಕಟ ಪೂರ್ವ ಅಧ್ಯಕ್ಷ ಬಿ.ಟಿ.ನಾಗೇಶ್ ಮತ್ತು ಶಿಕ್ಷಕ ಚಕ್ಕೆರೆ ಯೋಗೇಶ್‍ ಮತ್ತು ಪಾರ್ವತೀಶ್ ಬಿ ನಡುವೆ ನೇರ ಹಣಾಹಣಿ ನಡೆದಿತ್ತು. ಈ ನಿಟ್ಟಿನಲ್ಲಿ ಜಿಲ್ಲಾ ಕಸಾಪ ಚುನಾವಣೆಯಲ್ಲಿ ಶಿಕ್ಷಕರು, ಮತ್ತು ರಾಜಕೀಯ ಮುಂಡರು ಹಾಗೂ ಪತ್ರಕರ್ತರ ನಡುವೆ ನೇರ ಪೈಪೋಟಿಯೇ ನಡೆದಿತ್ತು. ಅಲ್ಲದೆ ನಿಕಟ ಪೂರ್ವ ಜಿಲ್ಲಾಧ್ಯಕ್ಷ ಸಿಂ.ಲಿಂ. ನಾಗರಾಜು ಅವರು ಕಳೆದ ಬಾರಿ ಅಧ್ಯಕ್ಷರಾಗಿ ಆಯ್ಕೆಯಾಗಲು ಕಾರಣವಾಗಿದ್ದ ಬಿ.ಟಿ.ನಾಗೇಶ್‍ ಅವರ ವಿರುದ್ಧ ಪ್ರಚಾರ ಮಾಡಿ ಯೋಗೇಶ್ ಪರ ಬ್ಯಾಟಿಂಗ್ ಮಾಡಿದ್ದರು. ಅಲ್ಲದೆ ಕಳೆದ ಬಾರಿ ಬಿ.ಟಿ.ನಾಗೇಶ್‍ ಅವರು ಜಿಲ್ಲಾಧ್ಯಕ್ಷರಾಗಿದ್ದ ವೇಳೆ ತಾಲೂಕು ಅಧ್ಯಕ್ಷರಾಗಿದ್ದ ಶಿವಮಾದು ಅವರು ಸಹ ಚಕ್ಕೆರೆ ಯೋಗೇಶ್ ಪರ ಚುನಾವಣಾ ಪ್ರಚಾರ ಮಾಡಿ ಹಗಲಿರುಳು ಟೊಂಕಕಟ್ಟಿ ಶ್ರಮಿಸಿದ್ದರು.


ಈ ನಿಟ್ಟಿನಲ್ಲಿ ದೊಡ್ಡ ತಂಡದೊಂದಿಗೆ ಚುನಾವಣಾ ಕಣಕ್ಕೆ ಧುಮುಕಿದ್ದ ಚಕ್ಕೆರೆ ಯೋಗೇಶ್‍ ಅವರಿಗೆ ಶಿಕ್ಷಕರೆ ಹೆಚ್ಚು ಮತಗಳನ್ನು ನೀಡುವ ಭರವಸೆ ಇತ್ತು. ಆದರೆ ಚುನಾವಣೆಯಲ್ಲಿ ಮತದಾರನ ತೀರ್ಪು ಎಲ್ಲವನ್ನು ಬದಲು ಮಾಡಿ ಜಿಲ್ಲೆಯಲ್ಲಿನ ಚನ್ನಪಟ್ಟಣ, ಮಾಗಡಿ, ರಾಮನಗರ ತಾಲೂಕುಗಳಲ್ಲಿ ಬಿ.ಟಿ.ನಾಗೇಶ್‍ ಅವರೆ ಯೋಗೇಶ್‍ ಕ್ಕಿಂತ ಹೆಚ್ಚು ಲೀಡ್ ಪಡೆಯುವ ಜಿಲ್ಲೆಯಲ್ಲಿ ಒಟ್ಟು 600 ಮತಗಳ ಅಂತರದಲ್ಲಿ ಕನ್ನಡದ ಬಾವುಟವನ್ನು ಹಾರಿಸಿ ಕನ್ನಡದ ತೇರನ್ನು ಎಳೆಯುವ ಜವಾಬ್ದಾರಿಯನ್ನು ಪಡೆದರು.


ಶೇ. 58 ರಷ್ಟು ಮತದಾನ: ಜಿಲ್ಲಾ ಕಸಾಪ ಚುನಾವಣೆಯಲ್ಲಿ ಒಟ್ಟು 9,680 ಮತಗಳಿದ್ದು ಇದರಲ್ಲಿ ಒಟ್ಟು 5553 ಮತಗಳು ಚಲಾವಣೆಯಾದವು. ಇಂದು ಭಾನುವಾರ ಮದುವೆ ಸಮಾರಂಭಗಳು, ಗೃಹಪ್ರವೇಶ ಸೇರಿದಂತೆ ಹಲವು ಕಾರ್ಯಕ್ರಮಗಳಿದ್ದ ಕಾರಣ ಚುನಾವಣೆಗೆ ಮತದಾರ ಆರಂಭದಲ್ಲಿ ಮಂದಗತಿಯಲ್ಲಿ ಬಂದರು ಮಧ್ಯಾಹ್ನ 12 ಗಂಟೆಯ ನಂತರ ವೇಗವನ್ನು ಪಡೆಯಿತು. ಈ ವೇಳೆ 8 ಗಂಟೆಯಿಂದ ಸಂಜೆ 4 ಗಂಟೆವರೆಗೆ ಮತದಾನ ಇದ್ದ ಕಾರಣ ಚುನಾವಣೆಯಲ್ಲಿ ಮತದಾನ ಮಾಡಲು 4 ಗಂಟೆಯ ನಂತರವೂ 20 ಕ್ಕೂ 

ಹೆಚ್ಚು ಮತದಾರರು ಮತದಾನ ಮಾಡಲು ಬಂದರು. ಆದರೆ ಸಮಯ ಮೀರಿದ್ದರಿಂದ ಮತದಾನಕ್ಕೆ ಅವಕಾಶ ಮಾಡಿಕೊಡಲಿಲ್ಲ.


*ಮತದಾರನ್ನು ಮನವಿ ಮಾಡಿದ ಬೆಂಬಲಿಗರು:* ತಾಲೂಕಿನಲ್ಲಿ ಮಳೂರು ನಾಡ ಕಚೇರಿ, ತಾಲೂಕು ಕಚೇರಿ, ವಿರುಪಾಕ್ಷಿಪುರ ನಾಡಕಚೇರಿಯಲ್ಲಿ ಮತದಾನಕ್ಕೆ ಅವಕಾಶ ಮಾಡಿಕೊಡಲಾಗಿತ್ತು. ಈ ನಿಟ್ಟಿನಲ್ಲಿ ಅಭ್ಯರ್ಥಿಗಳ ಪರ ಬೆಂಬಲಿಗರು ಮತಗಟ್ಟೆಯ ಹೊರಾಂಗಣದಲ್ಲಿ ಮತದಾರನ್ನು ಮನವೊಲಿಸಿ ತಮ್ಮ ಬೆಂಬಲಿಗರು ಪ್ರಚಾರ ಮಾಡಿದರು.


*ಚನ್ನಪಟ್ಟಣದಲ್ಲಿ 399 ಮತಗಳ ಲೀಡ್:*

ಜಿಲ್ಲಾ ಕಸಾಪ ಚುನಾವಣೆಯಲ್ಲಿ ನೇರಾ-ನೇರ ಚುನಾವಣೆಯನ್ನು ಎದುರಿಸಿದ್ದ ಬಿ.ಟಿ.ನಾಗೇಶ್ ಮತ್ತು ಚಕ್ಕೆರೆ ಯೋಗೇಶ್‍ ಅವರು ತಾಲೂಕಿನಲ್ಲಿ ಬಾರೀ ಪೈಪೋಟಿಯಲ್ಲಿ ಪ್ರಚಾರ ಮಾಡಿದ್ದರು. ಅಲ್ಲದೆ ಘಟಾನುಘಟಿ ನಾಯಕರು ಈ ಇಬ್ಬರ ಪರ ಚುನಾವಣಾ ಪ್ರಚಾ ಮಾಡಿದ್ದರು. ಚುನಾವಣೆಯ ಬಳಿಕ ಬಂದ ಫಲಿತಾಂಶದಲ್ಲಿ ಬಿ.ಟಿ.ನಾಗೇಶ್‍ ಅವರು ಚಕ್ಕೆರೆ ಯೋಗೇಶ್‍ಅವರಿಗಿಂತ 399 ಮತಗಳನ್ನು ಲೀಡ್ ಪಡೆದಿದ್ದಾರೆ. ಇದರಲ್ಲಿ ಕೋಡಂಬಹಳ್ಳಿ ಬೂತ್‍ನಲ್ಲೇ 235 ಮತಗಳ ಲೀಡ್ ಪಡೆದಿದ್ದು, ಇಲ್ಲಿ ಅರಳಾಳುಸಂದ್ರ ಶಿವಪ್ಪ, ಹನಿಯೂರು ರವಿ, ರಾಜೇಶ್, ಮತ್ತಿರವಿ ಪ್ರಬಲವಾಗಿ ನಿಂತರೆ ಮತ್ತೊಂದು ಭಾಗದಲ್ಲಿ ಸಿಂ.ಲಿಂ. ನಾಗರಾಜು ಮತ್ತು ಅವರ ಮಗ ಆದರ್ಶಕುಮಾರ್ ನಡುವೆಯೆ ಪ್ರಚಾರದಲ್ಲಿ ನೇರಾ ನೇರ ಪೈಪೋಟಿ ನಡೆದಿತ್ತು. ಇಲ್ಲಿ ಸಿಂ.ಲಿಂ. ಗಿಂತ ಅವರ ಮಗ ಆದರ್ಶನ ಪ್ರಭಾವ ಮತ್ತು ರಾಜೇಶ್ ಕೊಂಡಾಪುರ ಪ್ರಬಲವಾಗಿ ನಿಂತು ಮತದಾನ ಮಾಡಿಸಿವ ಮೂಲಕ ಬಿ.ಟಿ.ನಾಗೇಶ್‍ಗೆ ಹೆಚ್ಚು ಮತಗಳ ಲೀಡ್ ಕೊಡಿಸಿದ್ದಾರೆ ಎಂಬ ಮಾತುಗಳು ಕೇಳಿಬಂದಿದೆ.


*ವಿಜಯೋತ್ಸವ:* ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಚುನಾವಣೆಯಲ್ಲಿ ಎರಡನೆ ಬಾರಿಗೆ ಜಿಲ್ಲಾಧ್ಯಕ್ಷರಾಗಿ ಆಯ್ಕೆಯಾದ ಬಿ.ಟಿ.ನಾಗೇಶ್‍ಅವರು 

ಗೆಲುವಿನ ಸೂಚನೆ ಸಿಗುತ್ತಿದ್ದಂತೆ ಪಟ್ಟಣದ ತಾಲೂಕು ಕಚೇರಿಯ ಬಳಿ ಬಿ.ಟಿ.ನಾಗೇಶ್‍ಅವರ ಬೆಂಬಲಿಗರು ವಿಜಯೋತ್ಸವ ಆಚರಣೆ ಮಾಡಿದರು. ಈ ವೇಳೆ ಬಿ.ಟಿ.ನಾಗೇಶ್‍ಅವರನ್ನು ಹೊತ್ತು ಜೈಕಾರ ಹಾಕಿದರು. ಬಳಿಕ ಮುಖಂಡರಾದ ಅರಳಾಳುಸಂದ್ರ ಶಿವಪ್ಪ, ಹನಿಯೂರು, ರವಿ, ಬಿಜೆಪಿ ಮುಖಂಡ ಎಂ.ಎನ್.ಆನಂದಸ್ವಾಮಿ, ರೇಖಾಉಮಾಶಂಕರ್, ಕೂಡ್ಲೂರು ವೆಂಕಟೇಶ್, ಹನಿಯೂರು ರವಿಕುಮಾರ್, ಮತ್ತೀರವಿ, ರಾಜೇಶ್, ಸೇರಿದಂತೆ ಪ್ರೌಢಶಾಲೆಯ ಶಿಕ್ಷಕರು, ಪ್ರಾಧಿಕ ಶಾಲೆಯ ಶಿಕ್ಷಕರು ಶುಭಕೋರಿದರು.

ಕೃತಜ್ಷತೆ ಸಲ್ಲಿಸಿದ ಬಿ.ಟಿ.ನಾಗೇಶ್: ಜಿಲ್ಲಾ ಕಸಾಪ ಅದ್ಯಕ್ಷರಾಗಿ ಎರಡನೇ ಬಾರಿಗೆ ಆಯ್ಕೆಯಾದ ಬಿ.ಟಿ.ನಾಗೇಶ್‍ಅವರು ಸುದ್ದಿಗಾರರೊಂದಿಗೆ ಮಾತನಾಡಿ, ನನ್ನ ಮೇಲೆ ನಂಬಿಕೆ ಇಟ್ಟು ನನಗೆ ಮತ ನೀಡಿ ಗೆಲ್ಲಿಸಿರುವ ಸಾಹಿತ್ಯ ಪ್ರೇಮಿಗಳು, ಕನ್ನಡದ ಮನಸ್ಸುಗಳಿಗೆ ಹಾಗೂ ಎಲ್ಲಾ ಮತದಾರರಿಗೆ ಕೃತಜ್ಞತೆ ಸಲ್ಲಿಸುತ್ತೇನೆ ಎಂದು ಹೇಳಿದರು. ಜೊತೆಗೆ ನನ್ನ ಮೇಲಿನ ಭರವಸೆಯನ್ನು ಉಳಿಸಿಕೊಳ್ಳುವ ನಿಟ್ಟಿನಲ್ಲಿ ನಾನು ಜಿಲ್ಲೆಯಲ್ಲಿ ಕನ್ನಡದ ತೇರನ್ನು ಎಳೆದು ಜಿಲ್ಲೆಯ ಎಲ್ಲಾ ತಾಲೂಕುಗಳಲ್ಲಿ ಕನ್ನಡ ಭವನ ನಿರ್ಮಾಣ ಮಾಡಲು ಶ್ರಮಿಸುತ್ತೇನೆ. ನನ್ನ ಗೆಲುವಿಗೆ ಪ್ರತ್ಯಕ್ಷವಾಗಿ ಪರೋಕ್ಷವಾಗಿ ಶ್ರಮಿಸಿದ ಎಲ್ಲಾ ಪಕ್ಷದ ಮುಖಂಡರು, ಶಿಕ್ಷಕರು, ಪತ್ರಕರ್ತ ಬಂಧುಗಳು ಸೇರಿದಂತೆ ಎಲ್ಲರಿಗೂ ನಾನು ಆಭಾರಿಯಾಗಿರುತ್ತೆನೆ ಎಂದು ಹೇಳಿದರು.


ಗೋ ರಾ ಶ್ರೀನಿವಾಸ...

ಮೊ:9845856139.

ಪ್ರತಿಕ್ರಿಯೆಗಳು

  • ನಿಮ್ಮ ಅಭಿಪ್ರಾಯ ತಿಳಿಸುವಲ್ಲಿ ನೀವು ಮೊದಲಿಗರಾಗಿ.

ನಿಮ್ಮ ಅಭಿಪ್ರಾಯಗಳನ್ನು ಬರೆಯಿರಿ/ತಿಳಿಸಿ.

Recent news in ramanagara »

ಅಣ್ಣನ ನೆನಪು ನಾಟಕ ಅದ್ಭುತ, ವಿಚಾರ ಹಂಚುವಲ್ಲಿ ವಿಫಲ
ಅಣ್ಣನ ನೆನಪು ನಾಟಕ ಅದ್ಭುತ, ವಿಚಾರ ಹಂಚುವಲ್ಲಿ ವಿಫಲ

ರಾಮನಗರ/ಚನ್ನಪಟ್ಟಣ: (ವಿಮರ್ಶಾತ್ಮಕ ಲೇಖನ)

ನಗರದ ಶತಮಾನೋತ್ಸವ ಭವನದಲ್ಲಿ ಬೆಂಗಳೂರಿನ ಪ್ರವರ ಹವ್ಯಾಸಿ ನಾಟಕ ತಂಡವು ನಡೆಸಿಕೊಟ್ಟ ಪೂರ್ಣ ಚ

ಪೌರಾಣಿಕ ನಾಟಕದಲ್ಲಿ ಜನಮನ ಸೂರೆಗೊಂಡು ಇತಿಹಾಸ ನಿರ್ಮಿಸಿದ ಮಹಿಳಾ ಕಲಾವಿದರು.
ಪೌರಾಣಿಕ ನಾಟಕದಲ್ಲಿ ಜನಮನ ಸೂರೆಗೊಂಡು ಇತಿಹಾಸ ನಿರ್ಮಿಸಿದ ಮಹಿಳಾ ಕಲಾವಿದರು.

ಚನ್ನಪಟ್ಟಣ :  ಚನ್ನಪಟ್ಟಣದಲ್ಲಿ ಮಹಿಳೆಯರೇ ಪೌರಾಣಿಕ ನಾಟಕವನ್ನು ಅಭ್ಯಾಸ ಮಾಡಿ ಬಯಲು ಮಂದಿರದಲ್ಲಿ ಪ್ರಸ್ತುತ ಪಡಿಸುತ್ತಿರುವುದು ವಿಶೇಷವಾಗಿದೆ. ಪೌರಾಣಿಕ

ಮಹಿಳೆಯರಿಂದಲೇ ಪೌರಾಣಿಕ ನಾಟಕ ಪ್ರದರ್ಶನ, ಇತಿಹಾಸ ಸೃಷ್ಟಿಸುವ ಸಾಧ್ಯತೆ ದಟ್ಟವಾಗಿದೆ. ಭಾವಿಪ ಪದಾಧಿಕಾರಿಗಳು
ಮಹಿಳೆಯರಿಂದಲೇ ಪೌರಾಣಿಕ ನಾಟಕ ಪ್ರದರ್ಶನ, ಇತಿಹಾಸ ಸೃಷ್ಟಿಸುವ ಸಾಧ್ಯತೆ ದಟ್ಟವಾಗಿದೆ. ಭಾವಿಪ ಪದಾಧಿಕಾರಿಗಳು

ಚನ್ನಪಟ್ಟಣ: ನಗರದ ಶ್ರೀ ಕೊಲ್ಲಾಪುರದಮ್ಮನ ದೇವಸ್ಥಾನದ ಆವರಣದಲ್ಲಿ ಇದೇ ಮಾರ್ಚ್ ತಿಂಗಳ ಹತ್ತನೇ ತಾರಿಖಿನ ಭಾನುವಾರ ಮಧ್ಯಾಹ್ನ ತಾಲೂಕಿನಲ್ಲಿ ಇದೇ ಪ್ರಪ್ರಥ

ವರ್ಣ ನೀತಿ ಮತ್ತು ಜಾತಿಯತೆಯನ್ನು ಮೀರಿದವರು ಮಾತ್ರ ಮನುಷ್ಯ ಜಾತಿಯಾಗಲು ಸಾಧ್ಯ –ಪ್ರೊ. ಕೆ.ಎಸ್.ಭಗವಾನ್
ವರ್ಣ ನೀತಿ ಮತ್ತು ಜಾತಿಯತೆಯನ್ನು ಮೀರಿದವರು ಮಾತ್ರ ಮನುಷ್ಯ ಜಾತಿಯಾಗಲು ಸಾಧ್ಯ –ಪ್ರೊ. ಕೆ.ಎಸ್.ಭಗವಾನ್

ರಾಮನಗರ: ಶೂದ್ರರನ್ನು ವರ್ಣ ನೀತಿಯಿಂದಲೆ ವೈದಿಕರು ಆಳಿದರು. ಇಂದಿಗೂ ಸಹ ವೈದಿಕರು ರಾಮನನ್ನು ನಮ್ಮ ಮೇಲೆ ಹೇರುವ ಮೂಲಕ ಮತ್ತೆ ಪೂರ್ವಕಾಲಕ್ಕೆ ಕರೆದು

ಬೆಂಗಳೂರು ಶಿಕ್ಷಕರ ಕ್ಷೇತ್ರದ ಉಪ ಚುನಾವಣೆ: ಜಿಲ್ಲೆಯಲ್ಲಿ ಶೇ.95.77 ಮತದಾನ
ಬೆಂಗಳೂರು ಶಿಕ್ಷಕರ ಕ್ಷೇತ್ರದ ಉಪ ಚುನಾವಣೆ: ಜಿಲ್ಲೆಯಲ್ಲಿ ಶೇ.95.77 ಮತದಾನ

ರಾಮನಗರ, ಫೆ. 16  ರಾಜ್ಯ ವಿಧಾನ ಪರಿಷತ್ತಿಗೆ ಬೆಂಗಳೂರು ಶಿಕ್ಷಕರ ಕ್ಷೇತ್ರದಿಂದಫೆ.16ರ ಶುಕ್ರವಾರ ಬೆಳಿಗ್ಗೆ 8 ರಿಂದ ಸಂಜೆ 4 ಗಂಟೆಯ ವರೆಗೆನಡೆದ ಉಪ ಚುನ

ವೈಜ್ಞಾನಿಕ ಮನೋವೃತ್ತಿ:ಸಾಂವಿಧಾನಿಕ ಕರ್ತವ್ಯ ಪ್ರೊ. ಎಂ.ಅಬ್ದುಲ್ ರೆಹಮಾನ್ ಪಾಷ

ರಾಮನಗರ; ಮಾನವ ಹಕ್ಕುಗಳನ್ನು ಯಾರೂ ಕೊಡುವುದಿಲ್ಲ, ವ್ಯಕ್ತಿಗಳಿಗೆ ಅವುಗಳಿಗೆ ಜನ್ಮತಃ ದಕ್ಕಿರುತ್ತವೆ. ಅವುಗಳನ್ನು ಯಾರೂ ಕೊಡುವುದಿಲ್ಲವಾದ್ದರಿ

ನಾಳೆ ನಡೆಯುವ ಶಿಕ್ಷಕರ ಕ್ಷೇತ್ರದ ಚುನಾವಣೆ ಪ್ರಯುಕ್ತ ಮತಗಟ್ಟೆಗಳತ್ತ ತೆರಳಿದ ಸಿಬ್ಬಂದಿ
ನಾಳೆ ನಡೆಯುವ ಶಿಕ್ಷಕರ ಕ್ಷೇತ್ರದ ಚುನಾವಣೆ ಪ್ರಯುಕ್ತ ಮತಗಟ್ಟೆಗಳತ್ತ ತೆರಳಿದ ಸಿಬ್ಬಂದಿ

ರಾಮನಗರ: ರಾಜ್ಯ ವಿಧಾನ ಸಭೆ ಶಿಕ್ಷಕರ ಕ್ಷೇತ್ರದ ಚುನಾವಣೆ ಕಾವೇರಿದ್ದು,  ಬಹಿರಂಗ ಪ್ರಚಾರ ಕೊನೆಗೊಂಡ ನಂತರ ಇಂದು ಮಸ್ಟರಿಂಗ್ ಕಾರ್ಯ ಮುಗಿದು, ಮತಗಟ್ಟೆ ಸ

ವೈದ್ಯ ಸಿಬ್ಬಂದಿ ನಿರ್ಲಕ್ಷ್ಯ ಹಸುಗೂಸು ಸಾವು
ವೈದ್ಯ ಸಿಬ್ಬಂದಿ ನಿರ್ಲಕ್ಷ್ಯ ಹಸುಗೂಸು ಸಾವು

ರಾಮನಗರ: ಚನ್ನಪಟ್ಟಣ: ವೈದ್ಯ ಸಿಬ್ಬಂದಿಯಾದ ಕಿರಿಯ ಮಹಿಳಾ ಆರೋಗ್ಯ ಸಹಾಯಕಿಯ ನಿರ್ಲಕ್ಷ್ಯದಿಂದ ಒಂದು ತಿಂಗಳು 20 ದಿನಗಳ ಗಂಡು ಶಿಶುವೊಂದು ಪ್ರಾಣ ಕಳೆದುಕೊ

ಗ್ರೇಟ್ ಬೆಂಗಳೂರು ಜಿಲ್ಲೆ, ಮತ್ತೇ ಮುನ್ನಲೆಗೆ ತಂದ : ಡಿ,ಸಿ.ಎಂ. ಡಿ.ಕೆ.ಶಿವಕುಮಾರ್
ಗ್ರೇಟ್ ಬೆಂಗಳೂರು ಜಿಲ್ಲೆ, ಮತ್ತೇ ಮುನ್ನಲೆಗೆ ತಂದ : ಡಿ,ಸಿ.ಎಂ. ಡಿ.ಕೆ.ಶಿವಕುಮಾರ್

ರಾಮನಗರ, ಫೆ. 12:   ನಾವು ರಾಮನಗರ ಜಿಲ್ಲೆಯವರಲ್ಲಾ ನಾವೆಲ್ಲರೂ ಬೆಂಗಳೂರು ಜಿಲ್ಲೆಯವರು. ಗ್ರೇಟ್ ಬೆಂಗಳೂರು ಜಿಲ್ಲೆ ಮಾಡುವ ಬಗ್ಗೆ ಲೋಕಸಭಾ ಚ

ನಮ್ಮದು ಬಹುತ್ವ ಭಾರತ, ಹಿಂದುತ್ವ ಹೇರಿಕೆ ಸರಿಯಲ್ಲ – ಡಾ. ಚಕ್ಕೆರೆ ಶಿವಶಂಕರ್
ನಮ್ಮದು ಬಹುತ್ವ ಭಾರತ, ಹಿಂದುತ್ವ ಹೇರಿಕೆ ಸರಿಯಲ್ಲ – ಡಾ. ಚಕ್ಕೆರೆ ಶಿವಶಂಕರ್


ರಾಮನಗರ : ಫೆ 10 ನಮ್ಮದು ಬಹುತ್ವ ಭಾರತ, ಇಲ್ಲಿ ಎಲ್ಲಾ ಧರ್ಮೀಯರು ಇದ್ದಾರೆ. ಕೇವಲ ಹಿಂದುತ್ವವನ್ನು ಬಲವಂತವಾಗಿ ಹೇರುವುದು ಸರಿಯಲ್ಲ. ಭಾರತದ

Top Stories »  


Top ↑