Tel: 7676775624 | Mail: info@yellowandred.in

Language: EN KAN

    Follow us :


ಮಹಿಳೆಯರು ಸ್ವಾವಲಂಬನೆ ಜೊತೆಗೆ ಆರ್ಥಿಕವಾಗಿ ಬೆಳೆಯಬೇಕು. ಸಿ ಪುಟ್ಟಸ್ವಾಮಿ

Posted date: 22 Nov, 2021

Powered by:     Yellow and Red

ಮಹಿಳೆಯರು ಸ್ವಾವಲಂಬನೆ ಜೊತೆಗೆ ಆರ್ಥಿಕವಾಗಿ ಬೆಳೆಯಬೇಕು. ಸಿ ಪುಟ್ಟಸ್ವಾಮಿ

ರಾಮನಗರ: ಮಹಿಳೆಯರು ಎಂದರೆ ಅಡುಗೆ ಮನೆಗೆ ಸೀಮಿತ ಎಂಬ ಭಾವನೆ ಇಂದಿಲ್ಲ. ಸೇಕ್ರೆಡ್ ಸಂಸ್ಥೆಯಂತಹ ಹಲವಾರು ಮಹಿಳಾ ಎನ್ ಜಿ ಓ ಗಳು, ಸಹಕಾರಿ ಸಂಸ್ಥೆಗಳು, ಬ್ಯಾಂಕುಗಳು ಸೇರಿದಂತೆ ವಿವಿಧ ಸರ್ಕಾರಿ ಮತ್ತು ಸರ್ಕಾರೇತರ ಸಂಸ್ಥೆಗಳು ಆಕೆಯನ್ನು ಮಾನಸಿಕವಾಗಿ, ಆರ್ಥಿಕವಾಗಿ ಸದೃಢಗೊಳಿಸಿವೆ. ಹಾಗಾಗಿ ಮಹಿಳೆಯರು ಇಂದು ಪುರುಷರಷ್ಟೇ ಅಲ್ಲಾ, ಪುರುಷರಿಗಿಂತಲೂ ಒಂದು ಹೆಜ್ಜೆ ಬಹುತೇಕ ಎಲ್ಲಾ ರೀತಿಯಲ್ಲೂ ಮುಂದುವರೆದಿದ್ದಾರೆ ಎಂದು ಹಿರಿಯ ರೈತ ಮುಖಂಡ ಸಿ ಪುಟ್ಟಸ್ವಾಮಿ ತಿಳಿಸಿದರು.

ಅವರು ಇಂದು ನಗರದ ಗುರುಭವನದಲ್ಲಿ ಸಿಂಧ್ಯಾ ರಾಮನಗರ ಕಾರ್ಯಕ್ಷೇತ್ರ ದವರು ಹಮ್ಮಿಕೊಂಡಿದ್ದ 'ಮಹಿಳಾ ಮೇಳ' ಕಾರ್ಯಕ್ರಮದಲ್ಲಿ ಅಧ್ಯಕ್ಷತೆ ವಹಿಸಿ ಮಾತನಾಡಿದರು.


ಕೆನರಾ ಬ್ಯಾಂಕ್ ನ ಎಡಿಪಿಐ ವತಿಯಿಂದ ನೀಡುವ ತರಬೇತಿಗಳನ್ನು ಪಡೆದು, ಬ್ಯಾಂಕಿನಿಂದ ಸಾಲಪಡೆದು, ತಾವು ಬೆಳೆಯುವುದರ ಜೊತೆಗೆ ನಾಲ್ಕಾರು ಮಂದಿಗೆ ಉದ್ಯೋಗ ನೀಡಿದ್ದಾರೆ. ನೀವುಗಳು ಸಹ ಎಲ್ಲಾ ಅವಕಾಶಗಳನ್ನು ಉಪಯೋಗಿಸಿಕೊಂಡು, ಉದ್ಯಮಿಗಳಾಗಿ ಬೆಳೆಯಬೇಕು. ಅದಕ್ಕೆ ಸಿಂಧ್ಯಾ ರಾಮನಗರ ಕಾರ್ಯಕ್ಷೇತ್ರ ಸಂಸ್ಥೆ, ಕೆನರಾ ಬ್ಯಾಂಕ್ ಜೊತೆಗೆ ರೈತರಾದ ನಾವೂ ಬೆಂಬಲ ನೀಡುತ್ತೇವೆ. ಸಾಧ್ಯವಾದಷ್ಟೂ ರೈತೋತ್ಪಗಳನ್ನೇ ತಯಾರಿಸುವ ಬೃಹತ್ ಕಾರ್ಖಾನೆಗಳಾಗಬೇಕು ಎಂದು ನೆರೆದಿದ್ದ ಮಹಿಳೆಯರಿಗೆ ಕರೆ ನೀಡಿದರು.


ಬೆಂಗಳೂರಿನ ಬದುಕು ಸಂಸ್ಥೆಯ ಪ್ರಾಂಶುಪಾಲರಾದ ಕಿರಣಕುಮಾರಿ ಯವರು ಮಾತನಾಡಿ, ಮಹಿಳೆಯರು ಇಂದು ಎಲ್ಲಾ ಅಡೆತಡೆಗಳನ್ನು ಮೀರಿ ಬೆಳೆದಿದ್ದಾರೆ. ಅವರು ಸ್ಪರ್ಧಿಸದ ಕ್ಷೇತ್ರವಿಲ್ಲ. ಮಾಡದ ಉದ್ಯೋಗವಿಲ್ಲಾ, ಕೆಲವು ಕಡೆ ಈಗಲೂ ಸಹ ಮಹಿಳೆಯರ ಮೇಲೆ ದೌರ್ಜನ್ಯ, ಶೋಷಣೆ, ವರದಕ್ಷಿಣೆ ಕಿರುಕುಳದಂತಹ ಪೈಶಾಚಿಕ ಕೃತ್ಯಗಳು ನಡೆಯುತ್ತಿವೆ. ಎಲ್ಲಾ ಗಂಡಸರೂ ಈ ರೀತಿ ಇಲ್ಲದೆ ಇರಬಹುದು. ಆದರೆ ಕೆಲ ಗಂಡಸರು ಮಾಡುತ್ತಿರುವುದಕ್ಕೆ ಸಾಕ್ಷಿಗಳಿವೆ. ಇದನ್ನು ತಡೆಗಟ್ಟಲು ನಾವೆಲ್ಲರೂ ಒಗ್ಗಟ್ಟಾಗಬೇಕಿದೆ. ಯಾವುದೇ ಹೆಣ್ಣಿಗೆ ತೊಂದರೆಯಾದರೂ ನನಗೆ ತೊಂದರೆ ಆಗಿದೆ ಎಂದೇ ಭಾವಿಸಿ ಬೀದಿಗಿಳಿದು ಹೋರಾಟ ಮಾಡಬೇಕು. ಆಗ ಮಾತ್ರ ನಾವು ಸಮಸಮಾಜ ನಿರ್ಮಿಸಲು ಸಾಧ್ಯವಾಗುತ್ತದೆ ಎಂದರು.


ಬಿಡದಿಯ ಎಡಿಪಿಐ ಉಪನ್ಯಾಸಕರಾದ ದೇವೇಂದ್ರಪ್ಪ ಮಾತನಾಡಿ, ನಮ್ಮ ಸಂಸ್ಥೆಯು ಒಂದು ವಾರದ ತರಬೇತಿಯಿಂದ, ಆರು ತಿಂಗಳುಗಳ ಕಾಲದ ವಿವಿಧ ರೀತಿಯ ಇನ್ನೂರಕ್ಕೂ ಹೆಚ್ಚಿನ ತರಬೇತಿಯನ್ನು ನೀಡುತ್ತದೆ. ತರಬೇತಿಯನ್ನು ಪಡೆದು ಸ್ವಾವಲಂಬಿಯಾಗಿ ಬದುಕು ಕಟ್ಟಿಕೊಳ್ಳಲು ನಮ್ಮದೇ ಕೆನರಾ ಬ್ಯಾಂಕಿನ ವತಿಯಿಂದ ಸಾಲ ಸೌಲಭ್ಯಗಳನ್ನು ನೀಡಲಾಗುತ್ತದೆ. ಮಹಿಳೆ ಎಂದು ಸ್ವಾವಲಂಬಿಯಾಗಿ ಬದುಕು ಕಟ್ಟಿಕೊಳ್ಳುತ್ತಾಳೋ ಅಂದು ನಮ್ಮ ದೇಶವೇ ಆರ್ಥಿಕವಾಗಿ ಸದೃಢವಾಗುತ್ತದೆ. ಹಾಗಾಗಿ ಸಂಘಸಂಸ್ಥೆಗಳ ಸದಸ್ಯರುಗಳು ಬಂದು ತರಬೇತಿ ಪಡೆಯಬೇಕು ಎಂದು ಮಹಿಳಾ ಸದಸ್ಯರಿಗೆ ಕರೆ ನೀಡಿದರು.


ಸಾಮಾಜಿಕ ಕಾರ್ಯಕರ್ತ ಗೋ ರಾ ಶ್ರೀನಿವಾಸ ಮಾತನಾಡಿ, ಭಾರತೀಯರಾದ ನಾವು ಪುರಾಣ ಮತ್ತು ಇತಿಹಾಸದಲ್ಲೂ ಹೆಣ್ಣಿಗೆ  ಪೂಜನೀಯ ಸ್ಥಾನ ನೀಡಿದ್ದೇವೆ. ಇಂದು ಆಕೆ ಅಬಲೆಯಲ್ಲಾ, ಸಬಲೆ. ಆಕೆ ಒಬ್ಬ ದಿಟ್ಟ ಮಹಿಳೆಯಾಗಿ, ಸಾಮಾನ್ಯ ಮಹಿಳೆಯಿಂದ ಹಿಡಿದು ರಾಷ್ಟ್ರಪತಿ ಹುದ್ದೆಯ ತನಕ, ಸಾಮಾನ್ಯ ಕಾರಕೂನ ಹುದ್ದೆಯಿಂದ ಗಗನಯಾತ್ರಿಯ ತನಕ ಆಕೆ ಬೆಳೆದು ನಿಂತಿದ್ದಾಳೆ. ಗ್ರಾಮೀಣ ಮಹಿಳೆಯರು ಆ ಸಾಲಿನಲ್ಲಿ ನಿಲ್ಲಬೇಕು. ಅದರಲ್ಲೂ ರೈತ ಮಹಿಳೆಯರಿಗೆ ವಿಶೇಷವಾಗಿ ಪರಿಸರ ಸ್ನೇಹಿ, ವ್ಯವಸಾಯಕ್ಕೆ ಸಂಬಂಧಿಸಿದ ತರಬೇತಿಗಳನ್ನು ನೀಡಿ, ಕೃಷಿಯಿಂದಲೇ ಆಕೆ ಬದುಕು ಕಟ್ಟಿಕೊಳ್ಳಲು ಅನುವು ಮಾಡಿಕೊಡಬೇಕು. ಆಗಲೇ ನಮ್ಮ ಪ್ರಕೃತಿ ಸಮತೋಲನ ಕಾಯ್ದುಕೊಳ್ಳಲು, ಮಹಿಳೆಯರು ತಮ್ಮ ಆರೋಗ್ಯದ ಜೊತೆಗೆ ಆರ್ಥಿಕವಾಗಿ ಬದುಕು ಕಟ್ಟಿಕೊಳ್ಳಲು ಸಾಧ್ಯವಾಗುತ್ತದೆ ಎಂದು ಅಭಿಪ್ರಾಯ ಪಟ್ಟರು.


ಸೇಕ್ರೆಡ್ ಸಂಸ್ಥೆಯ ಸಿಇಓ ಮೇರಿ ಫಿಲೋಮಿನಾ ರವರು ಪ್ರಾಸ್ತಾವಿಕ ನುಡಿಗಳನ್ನಾಡಿ, ವಿಶ್ವದಲ್ಲೇ ಮಹಿಳಾ ದಿನಾಚರಣೆಯನ್ನು ಆಚರಿಸುತ್ತಿದ್ದೇವೆ. ಮಹಿಳೆಯರು ಎಲ್ಲಾ ಕ್ಷೇತ್ರದಲ್ಲೂ ಸಬಲೀಕರಣವಾಗಬೇಕು. ಸಂಘಟನೆಗಳ ಮೂಲಕ ಬಲಿಷ್ಠರಾಗಬೇಕು ಎಂದರು. ಗ್ರಾಮಾಂತರ ಎಎಸ್ಐ ರುದ್ರೇಶ್ ರವರು ಮಹಿಳೆಯರು ಒಡವೆಗಳನ್ನು ಪ್ರದರ್ಶನ ಮಾಡಬಾರದು. ಅದರಿಂದ ಪ್ರಾಣ ಕಳೆದುಕೊಳ್ಳುವ ಸಾಧ್ಯತೆ ಹೆಚ್ಚಿದೆ, ಪೋಲೀಸರು ಜನಸ್ನೇಹಿಯಾಗಿದ್ದು ಯಾವುದೇ ಹಿಂಜರಿಕೆ ಇಲ್ಲದೆ, ದೂರು ನೀಡಿ ನ್ಯಾಯ ಕೋರಬೇಕು ಎಂದರು. ಹುಣಸನಹಳ್ಳಿ ಗ್ರಾಮ ಪಂಚಾಯತಿ ಉಪಾಧ್ಯಕ್ಷ  ಅಚ್ಚಲುದೊಡ್ಡಿ ಪುಟ್ಟಸ್ವಾಮಿ ರವರಿಗೆ ಸನ್ಮಾನಿಸಲಾಯಿತು. ಹಲವಾರು ಮಹಿಳಾ ಸಂಘಗಳು ತಾವೇ ತಯಾರಿಸಿದ ವಸ್ತುಗಳನ್ನು ಪ್ರದರ್ಶನ ಮತ್ತು ಮಾರಾಟ ಮಾಡಿದರು. ರಾಮನಗರ ತಾಲ್ಲೂಕಿನ ಹಲವಾರು ಗ್ರಾಮಗಳ ಮಹಿಳಾ ಸಂಘಗಳ ಪದಾಧಿಕಾರಿಗಳು, ಸದಸ್ಯೆಯರು ಭಾಗವಹಿಸಿದ್ದರು. ಅತಿ ಹೆಚ್ಚು ಸಾಧನೆ ಮಾಡಿದ ಮಹಿಳಾ ಸಂಘಗಳ ಪದಾಧಿಕಾರಿಗಳಿಗೆ ನೆನಪಿನ ಕಾಣಿಕೆ ನೀಡಿದರು. ಕಾರ್ಯಕ್ರಮದಲ್ಲಿ ಮಕ್ಕಳು ನೃತ್ಯ ಮಾಡುವ ಮೂಲಕ ಪ್ರೇಕ್ಷಕರಿಗೆ ಮನರಂಜನೆ ನೀಡಿದರು.


ಗೋ ರಾ ಶ್ರೀನಿವಾಸ...

ಮೊ:9845856139.

??????????????

  • ????? ???????? ??????????? ???? ??????????.

ನಿಮ್ಮ ಅಭಿಪ್ರಾಯಗಳನ್ನು ಬರೆಯಿರಿ/ತಿಳಿಸಿ.

Recent news in ramanagara »

ಕಿರಿಯ ಸಹಾಯಕ ಅಭಿಯಂತರ ಅಮಾನತ್ತು ಮಾಡಿ ವಾರದ ನಂತರ ವಾಪಸ್ಸು
ಕಿರಿಯ ಸಹಾಯಕ ಅಭಿಯಂತರ ಅಮಾನತ್ತು ಮಾಡಿ ವಾರದ ನಂತರ ವಾಪಸ್ಸು

ಚನ್ನಪಟ್ಟಣ: ಭಾರತ ಸರ್ಕಾರದ ಮಹತ್ವಾಕಾಂಕ್ಷೆಯ ಯೋಜನೆಯಾದ ಜಲ ಜೀವನ್ ಮಿಷನ್ ಯೋಜನೆಯ ಕಾರ್ಯಾತ್ಮಕ ನಳ ನೀರು ಸಂಪರ್ಕ ಕಲ್ಪಿಸುವ ಕಾಮಗಾರಿಗಳನ್ನು

ಡಾ: ಬಿಆರ್. ಅಂಬೇಡ್ಕರ್ ಅವರ ಜೀವನ ಎಲ್ಲರಿಗೂ ಮಾದರಿ : ಡಾ: ರಾಕೇಶ್ ಕುಮಾರ್ ಕೆ
ಡಾ: ಬಿಆರ್. ಅಂಬೇಡ್ಕರ್ ಅವರ ಜೀವನ ಎಲ್ಲರಿಗೂ ಮಾದರಿ : ಡಾ: ರಾಕೇಶ್ ಕುಮಾರ್ ಕೆ

ರಾಮನಗರ, ಡಿ.06/21. ಸಂವಿಧಾನ ಶಿಲ್ಪಿ ಡಾ: ಬಿ.ಆರ್. ಅಂಬೇಡ್ಕರ್ ಅವರು ಪ್ರತಿ ಕ್ಷೇತ್ರದಲ್ಲೂ ತಮ್ಮ ಕೊಡುಗೆ ನೀಡಿದ್ದಾರೆ. ಡಾ: ಬಿ.ಆರ್. ಅಂಬೇ

ಮುಚ್ಚಿದ ಚರಂಡಿ. ಮಳೆ ಮತ್ತು ಚರಂಡಿ ನೀರು ಮನೆಗೆ. ಗ್ರಾಮಸ್ಥರ ಪ್ರತಿಭಟನೆ
ಮುಚ್ಚಿದ ಚರಂಡಿ. ಮಳೆ ಮತ್ತು ಚರಂಡಿ ನೀರು ಮನೆಗೆ. ಗ್ರಾಮಸ್ಥರ ಪ್ರತಿಭಟನೆ

ಚನ್ನಪಟ್ಟಣ: ಚರಂಡಿ ಹಾಗೂ ಮಳೆಯ ನೀರು ಮನೆಗಳಿಗೆ ನುಗ್ಗುತ್ತಿರುವುದನ್ನು ವಿರೋಧಿಸಿ ತಾಲೂಕಿನ ತಿಟ್ಟಮಾರನಹಳ್ಳಿ ಗ್ರಾಮಸ್ಥರು ಶನಿವಾರ ರಾತ್ರಿ ಚ

ಅಭ್ಯರ್ಥಿಗಳಿಗೆ ಧೈರ್ಯವಾಗಿ ಪರೀಕ್ಷೆ ಬರೆಯುವಂತೆ ಸಲಹೆ- ಗಂಗಾಧರ್
ಅಭ್ಯರ್ಥಿಗಳಿಗೆ ಧೈರ್ಯವಾಗಿ ಪರೀಕ್ಷೆ ಬರೆಯುವಂತೆ ಸಲಹೆ- ಗಂಗಾಧರ್

ರಾಮನಗರ, ಡಿ.04/21. ನಗರದ ಶಾಂತಿನಿಕೇತನ ಕಾಲೇಜಿನಲ್ಲಿ ದಿನಾಂಕ: 03.12.2021 ರಂದು ಕರ್ನಾಟಕ ಲೋಕ ಸೇವಾ ಆಯೋಗದಿಂದ ಗ್ರೂಪ್ ``ಸಿ” ತಾಂತ್ರಿಕೇತರ ಪರೀಕ್ಷೆಯನ್ನು ಆಯೋಜಿಸಲಾಗಿತ್ತು.

ಕೋವಿಡ್ ಲಸಿಕೆ ನೀಡುವ ಕೆಲಸವನ್ನು ಇನ್ನಷ್ಡು ಚುರುಕುಗೊಳಿಸಿ: ಡಾ: ರಾಕೇಶ್ ಕುಮಾರ್ ಕೆ
ಕೋವಿಡ್ ಲಸಿಕೆ ನೀಡುವ ಕೆಲಸವನ್ನು ಇನ್ನಷ್ಡು ಚುರುಕುಗೊಳಿಸಿ: ಡಾ: ರಾಕೇಶ್ ಕುಮಾರ್ ಕೆ

ರಾಮನಗರ, ಡಿ.04/21. ಜಿಲ್ಲೆಯಲ್ಲಿ ಕೋವಿಡ್ ಲಸಿಕೆಯಿಂದ ಯಾರು ವಂಚಿತರಾಗಬಾರದು. ಪ್ರತಿಯೊಬ್ಬರು ಲಸಿಕೆ ಪಡೆದುಕೊಳ್ಳಬೇಕು. ಈ ಹಿನ್ನಲೆಯಲ್ಲಿ ಸಮೀಕ್ಷೆ ನಡೆಸಿ ಲಸಿಕೆ ಪಡೆಯದೇ ಇರುವವರ ವಿವರ ಕ್ರೋಡೀಕರ

ಸಿ.ಎಸ್.ಸಿ ಕೇಂದ್ರಗಳಲ್ಲಿ ಉಚಿತವಾಗಿ ನೋಂದಣಿ: ಡಾ.ರಾಕೇಶ್ ಕುಮಾರ್
ಸಿ.ಎಸ್.ಸಿ ಕೇಂದ್ರಗಳಲ್ಲಿ ಉಚಿತವಾಗಿ ನೋಂದಣಿ: ಡಾ.ರಾಕೇಶ್ ಕುಮಾರ್

ಕೇಂದ್ರ ಹಾಗೂ ರಾಜ್ಯ ಸರಕಾರದಿಂದ ಅಸಂಘಟಿತ ವರ್ಗಗಳ ಕಾರ್ಮಿಕರಿಗೆ ಸಾಮಾಜಿಕ ಭದ್ರತಾ ಯೋಜನೆಗಳ ಸೌಲಭ್ಯ ಒದಗಿಸುವ ನಿಟ್ಟಿನಲ್ಲಿ ಕಾರ್ಮಿಕರ ದತ್ತಾಂಶವನ್ನು ಸಿದ್ದಪಡಿಸಲು ಇ-ಶ್ರಮ್ ಪೋರ್ಟನಲ್ಲಿ ಜಿಲ್ಲೆ

ವಸತಿ ಶಾಲೆಗಳಲ್ಲಿ ಕೋವಿಡ್ ನಿಯಮ ಪಾಲಿಸಿ
ವಸತಿ ಶಾಲೆಗಳಲ್ಲಿ ಕೋವಿಡ್ ನಿಯಮ ಪಾಲಿಸಿ

ರಾಮನಗರ: ಜಿಲ್ಲಾಡಳಿತ ಜಿಲ್ಲಾ ಪಂಚಾಯತ್, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ಜಿಲ್ಲಾ ಎಸ್.ಬಿ.ಸಿ.ಸಿ ಘಟಕ ರಾಮನಗರ, ಇವರ ಸಂಯುಕ್ತ

ಗೌಡಗೆರೆ ಚಾಮುಂಡೇಶ್ವರಿ ಬಸವಪ್ಪನ ಕ್ಷೇತ್ರದಲ್ಲಿ ಲಕ್ಷದೀಪೋತ್ಸವ ಮತ್ತು ಕೃತಿ ಲೋಕಾರ್ಪಣೆ
ಗೌಡಗೆರೆ ಚಾಮುಂಡೇಶ್ವರಿ ಬಸವಪ್ಪನ ಕ್ಷೇತ್ರದಲ್ಲಿ ಲಕ್ಷದೀಪೋತ್ಸವ ಮತ್ತು ಕೃತಿ ಲೋಕಾರ್ಪಣೆ

ಚನ್ನಪಟ್ಟಣ:ಡಿ:03/21. ತಾಲ್ಲೂಕಿನ ಗೌಡಗೆರೆ ಗ್ರಾಮದ ಶ್ರೀ ಚಾಮುಂಡೇಶ್ವರಿ ಬಸವಪ್ಪ ಪುಣ್ಯಕ್ಷೇತ್ರದಲ್ಲಿ ಡಿ.4 ರ ಶನಿವಾರ ಸಂಜೆ ಲಕ್ಷ ದೀಪೋತ್ಸ

ದೈಹಿಕವಾಗಿ ಮತ್ತು ಮಾನಸಿಕ ಸದೃಢತೆಗೆ  ಕ್ರೀಡೆ ಅತ್ಯಮುಖ್ಯ ಎಂದು ಜಿಲ್ಲಾಧಿಕಾರಿ ಡಾ ರಾಕೇಶ್ ಕುಮಾರ್
ದೈಹಿಕವಾಗಿ ಮತ್ತು ಮಾನಸಿಕ ಸದೃಢತೆಗೆ ಕ್ರೀಡೆ ಅತ್ಯಮುಖ್ಯ ಎಂದು ಜಿಲ್ಲಾಧಿಕಾರಿ ಡಾ ರಾಕೇಶ್ ಕುಮಾರ್

ಚನ್ನಪಟ್ಟಣ.ಡಿ.೦೩: ದೈಹಿಕವಾಗಿ ಮತ್ತು ಮಾನಸಿಕವಾಗಿ ಎರಡರಲ್ಲಿಯೂ ಸದೃಢವಾಗಿರಬೇಕು ಎಂದರೆ ಕ್ರೀಡೆಯಲ್ಲಿ ಭಾಗವಹಿಸುವಿಕೆ ಅತ್ಯಮುಖ್ಯ ಎಂದು ಜಿಲ್ಲಾಧಿಕಾರಿ ಡಾ ರಾಕೇಶ್ ಕುಮಾರ್ ತಿಳಿಸಿದರು..

ಅವರು ಇಂದು ಇಲ್ಲಿನ ಡಿಎಆರ್ ಮೈದಾನದಲ್ಲಿ

ಉತ್ತಮ ಚಿಂತನೆಗಳು ವ್ಯಕ್ತಿತ್ವ ರೂಪಿಸುತ್ತದೆ: ಜವರೇಗೌಡ ಟಿ
ಉತ್ತಮ ಚಿಂತನೆಗಳು ವ್ಯಕ್ತಿತ್ವ ರೂಪಿಸುತ್ತದೆ: ಜವರೇಗೌಡ ಟಿ

ರಾಮನಗರ, ಡಿ.01/21. ಸಮಾಜದಲ್ಲಿ ಪ್ರತಿಯೊಬ್ಬರು ಉತ್ತಮ ವ್ಯಕ್ತಿತ್ವ ರೂಪಿಸಿಕೊಂಡು ಒಳ್ಳೆಯ ಪ್ರಜೆಯಾಗಬೇಕು. ಇದಕ್ಕೆ ನಮ್ಮ ಆಲೋಚನೆಗಳು ಹಾಗೂ ಚ

Top Stories »  


Top ↑