Tel: 7676775624 | Mail: info@yellowandred.in

Language: EN KAN

    Follow us :


ಪ್ರಸಿದ್ಧ ಅಯ್ಯನ ಗುಡಿ ಜಾತ್ರೆ ರದ್ದು: ಭಕ್ತರ ನಿರಾಸೆ

Posted date: 14 Jan, 2022

Powered by:     Yellow and Red

ಪ್ರಸಿದ್ಧ ಅಯ್ಯನ ಗುಡಿ ಜಾತ್ರೆ ರದ್ದು: ಭಕ್ತರ ನಿರಾಸೆ

ಚನ್ನಪಟ್ಟಣ ತಾಲೂಕಿನ ಮೈಸೂರು ಬೆಂಗಳೂರು ರಸ್ತೆಯಲ್ಲಿರುವ ಪುರಾಣೇತಿಹಾಸ ಕೆಂಗಲ್ ಆಂಜನೇಯ ಸ್ವಾಮಿಯ ಭಾರೀ ದನಗಳ ಜಾತ್ರೆಯು ಕೊರೋನಾ ಕಾರಣದಿಂದ ರದ್ದಾಗಿದೆ ಎಂದು ಮುಜರಾಯಿ ಇಲಾಖೆಯ ಕಾರ್ಯನಿರ್ವಾಹಕ ಅಧಿಕಾರಿ ತಮ್ಮೇಗೌಡ ಎನ್ ತಿಳಿಸಿದರು.


ಕೊರೊನಾ ಹೆಚ್ಚಾಗಿರುವ ಕಾರಣ ಜಾತ್ರೆಯನ್ನು ರದ್ದು ಮಾಡಲಾಗಿದೆ. ದೇವಾಲಯಕ್ಕೆ ಬರುವ ಭಕ್ತರಿಗೂ ಸಹ ನಿರ್ಬಂಧ ಹಾಕಲಾಗಿದೆ. ಕೊರೋನಾ ಮುಂಜಾಗ್ರತಾ ಕ್ರಮಗಳನ್ನು ತೆಗೆದುಕೊಂಡು, ಕೇವಲ ದರ್ಶನ ಮಾತ್ರ ಮಾಡಲು ಅವಕಾಶ ಕಲ್ಪಿಸಲಾಗಿದೆ. ಕಳೆದ ವರ್ಷವೂ ಇದೇ ಸಮಯದಲ್ಲಿ ನಿಷೇಧ ಹೇರಲಾಗಿತ್ತು. ಆ ಸಮಯದಲ್ಲಿ ಹೊರಗಿನಿಂದ ಹಲವಾರು ಭಕ್ತರು ರಾಸುಗಳ ಸಮೇತ ಬಂದಿದ್ದರಿಂದ ನಿಷೇಧಾಜ್ಞೆ ಸಂಪೂರ್ಣವಾಗಿ ಉಲ್ಲಂಘನೆಯಾಗಿತ್ತು.


ಕೆಂಗಲ್ ಬಳಿ ನಡೆಯುವ ದನಗಳ ಜಾತ್ರೆ ಅಯ್ಯನ ಗುಡಿ ಜಾತ್ರೆ ಎಂದು ಕರೆಯಲಾಗುತ್ತದೆ. ಮದ್ದೂರು, ಕೊಳ್ಳೇಗಾಲ, ಮಂಡ್ಯ ಸೇರಿದಂತೆ ಹಳೆ ಮೈಸೂರು ಭಾಗದ ಜನರು ದನಗಳ ಜಾತ್ರೆಯಲ್ಲಿ ಪಾಲ್ಗೊಂಡು ದನಗಳನ್ನು ತಂದು ಮಾರಾಟ ಮಾಡುತ್ತಾರೆ. ಕೃಷಿ ಚಟುವಟಿಕೆಗೆ ಬಳಸಿಕೊಳ್ಳಲು ಬೇಕಾದ ರಾಸುಗಳನ್ನು ಕೊಳ್ಳಲು ಸಹ ಅನೇಕ ರೈತರು ಆಗಮಿಸುತ್ತಾರೆ. ಅಲ್ಲದೆ ಶೋಕಿಗಾಗಿಯೇ ಸಾಕಿರುವ ಹತ್ತಾರು ಲಕ್ಷ ರೂಪಾಯಿ ಮೌಲ್ಯದ ಎತ್ತುಗಳನ್ನು ಪ್ರದರ್ಶನ ಮಾಡುತ್ತಾರೆ.


ಆದ್ದರಿಂದ ಕೊರೊನಾ ಮೂರನೇ ಅಲೆಯ ಕಾರಣದಿಂದ ಸಂಕ್ರಾಂತಿಯಲ್ಲಿ ಆಂಜನೇಯ ಸ್ವಾಮಿ ದೇವಸ್ಥಾನದ ಸುತ್ತಮುತ್ತಲಿನ ಪ್ರದೇಶಗಳಲ್ಲಿ ಭಾರೀ ದನಗಳ ಜಾತ್ರೆ ನಡೆಯುತ್ತಿರುವುದನ್ನು ನಿಷೇಧಿಸಿ ಜಾತ್ರೆಗೆ ಜಿಲ್ಲಾಡಳಿತ ಬ್ರೇಕ್ ಹಾಕಿದೆ. ಕೊರೊನಾ ಕರ್ಫ್ಯೂ ಹಿನ್ನೆಲೆಯಲ್ಲಿ ಕೆಂಗಲ್ ಜಾತ್ರೆಯನ್ನು ರದ್ದು ಮಾಡಲಾಗಿದೆ. ಜಾತ್ರೆ ಕಳೆ ಕಟ್ಟದಂತೆ ಎಚ್ಚರಿಕೆ ವಹಿಸಲು ತಾಲ್ಲೂಕು ದಂಡಾಧಿಕಾರಿಗಳಿಗೆ ಹಾಗೂ ಗ್ರಾಮಾಂತರ ಪೋಲಿಸ್ ಠಾಣೆಗೂ ಸಹ ಪತ್ರ ಬರೆಯಲಾಗಿದೆ ಎಂದು ದೇವಸ್ಥಾನದ ಕಾರ್ಯನಿರ್ವಾಹಕ ಅಧಿಕಾರಿ ತಮ್ಮೇಗೌಡ ಮತ್ತು ಅರ್ಚಕರಾದ ರವೀಂದ್ರಕುಮಾರ್ ಭಟ್ ಮತ್ತು ಶರತ್ ರವರು ತಿಳಿಸಿದ್ದಾರೆ.


ಗೋ ರಾ ಶ್ರೀನಿವಾಸ...

ಮೊ:9845856139.

??????????????

  • ????? ???????? ??????????? ???? ??????????.

ನಿಮ್ಮ ಅಭಿಪ್ರಾಯಗಳನ್ನು ಬರೆಯಿರಿ/ತಿಳಿಸಿ.

Recent news in ramanagara »

ಅಧಿಕಾರಿಗಳ ತಾತ್ಸಾರದಿಂದಲೇ ರೈತರ ಮೇಲೆ ದಬ್ಬಾಳಿಕೆ. ರೈತ ಸಂಘ ಆರೋಪ
ಅಧಿಕಾರಿಗಳ ತಾತ್ಸಾರದಿಂದಲೇ ರೈತರ ಮೇಲೆ ದಬ್ಬಾಳಿಕೆ. ರೈತ ಸಂಘ ಆರೋಪ

ರಾಮನಗರ: ನಗರದ ಸರ್ಕಾರಿ ರೇಷ್ಮೇಗೂಡಿನ ಮಾರುಕಟ್ಟೆಯಲ್ಲಿ ಮೊದಲಿನಿಂದಲೂ ರೈತರ ಮೇಲೆ ದಬ್ಬಾಳಿಕೆ, ದೌರ್ಜನ್ಯ, ಅನ್ಯಾಯ ನಡೆಯುವುದು ನಿಂತಿಲ್ಲ. ಅಧಿಕಾರಿಗಳ  ತಾತ್ಸಾರವೇ ಇದಕ್ಕೆ ಮೊದಲ ಕಾರಣ ಎಂದ

ಪ್ರಸಿದ್ಧ ಅಯ್ಯನ ಗುಡಿ ಜಾತ್ರೆ ರದ್ದು: ಭಕ್ತರ ನಿರಾಸೆ
ಪ್ರಸಿದ್ಧ ಅಯ್ಯನ ಗುಡಿ ಜಾತ್ರೆ ರದ್ದು: ಭಕ್ತರ ನಿರಾಸೆ

ಚನ್ನಪಟ್ಟಣ ತಾಲೂಕಿನ ಮೈಸೂರು ಬೆಂಗಳೂರು ರಸ್ತೆಯಲ್ಲಿರುವ ಪುರಾಣೇತಿಹಾಸ ಕೆಂಗಲ್ ಆಂಜನೇಯ ಸ್ವಾಮಿಯ ಭಾರೀ ದನಗಳ ಜಾತ್ರೆಯು ಕೊರೋನಾ ಕಾರಣದಿಂದ ರದ್ದಾಗಿದೆ ಎಂದು ಮುಜರಾಯಿ ಇಲಾಖೆಯ ಕಾರ್ಯನಿರ್ವಾಹಕ ಅಧಿ

ಚಿಕ್ಕೇನಹಳ್ಳಿ ಡೈರಿ ಸೆಕ್ರೆಟರಿಗೆ ಮೂರು ವರ್ಷ ಜೈಲು ಮತ್ತು ದಂಡ ವಿಧಿಸಿದ ಕೋರ್ಟ್
ಚಿಕ್ಕೇನಹಳ್ಳಿ ಡೈರಿ ಸೆಕ್ರೆಟರಿಗೆ ಮೂರು ವರ್ಷ ಜೈಲು ಮತ್ತು ದಂಡ ವಿಧಿಸಿದ ಕೋರ್ಟ್

ಚನ್ನಪಟ್ಟಣ: ತಾಲೂಕಿನ ಚಿಕ್ಕೇನಹಳ್ಳಿ ಗ್ರಾಮದ ಹಾಲು ಉತ್ಪಾದಕರ ಸಹಕಾರ ಸಂಘದ ಹಣ ದುರುಪಯೋಗ ಪ್ರಕರಣಕ್ಕೆ ಸಂಬಂಧಿಸಿದಂತೆ ನಗರದ ಜೆಎಂಎಫ್ ಸಿ ನ್ಯಾಯಾಲಯದ ನ್ಯಾಯಾಧೀಶರು ಸಂಘದ ಮಾಜಿ ಕಾರ್ಯದರ್ಶಿಗೆ ಮೂರ

ರಾಮನಗರ ಜಿಲ್ಲಾ ಕೋವಿಡ್ ಆಸ್ಪತ್ರೆಗೆ ಅಗತ್ಯ ಸಿಬ್ಬಂದಿ ನಿಯೋಜನೆ
ರಾಮನಗರ ಜಿಲ್ಲಾ ಕೋವಿಡ್ ಆಸ್ಪತ್ರೆಗೆ ಅಗತ್ಯ ಸಿಬ್ಬಂದಿ ನಿಯೋಜನೆ

ರಾಮನಗರ: ಕೋವಿಡ್ ಮತ್ತು ಒಮಿಕ್ರಾನ್ ಸೋಂಕು ಪ್ರಕರಣಗಳು ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಜಿಲ್ಲಾ ಕೋವಿಡ್ ಆಸ್ಪತ್ರೆಗೆ ಅಗತ್ಯವಿರುವ ವೈದ್ಯಕೀಯ ಮತ್ತು ಅರೆವೈದ್ಯಕೀಯ ಸಿಬ್ಬಂದಿಯನ್ನು ನಿಯೋಜನೆ ಮೇರೆ

ಲಂಚ ಸ್ವೀಕರಿಸುವಾಗ ಸಿಕ್ಕಿಬಿದ್ದ ಅಧಿಕಾರಿ. ಒಂದು ಲಕ್ಷ ರೂ ದಂಡ. ಮೂರು ವರ್ಷ ಸಜೆ
ಲಂಚ ಸ್ವೀಕರಿಸುವಾಗ ಸಿಕ್ಕಿಬಿದ್ದ ಅಧಿಕಾರಿ. ಒಂದು ಲಕ್ಷ ರೂ ದಂಡ. ಮೂರು ವರ್ಷ ಸಜೆ

ರಾಮನಗರ: ಡಿ/08/21. ರಾಮನಗರ ಲೋಕಾಯುಕ್ತ ಕಛೇರಿಗೆ ಪಿರ್ಯಾದಿ ವಿಜಯ್ ಕುಮಾರ್ ಒಡೆಯರ್ ರವರು ದಿನಾಂಕ: 08-07-2020 ರಂದು ಹಾಜರಾಗಿ ಮನೋರಾಜ್ ಐ.

ಸಣ್ಣ ಪತ್ರಿಕೆಗಳು ಜಾಹೀರಾತು ವಿಷಯದಲ್ಲಿ ಲೋಪ ಮಾಡುತ್ತಿವೆ. ಸು ತ ರಾಮೇಗೌಡ
ಸಣ್ಣ ಪತ್ರಿಕೆಗಳು ಜಾಹೀರಾತು ವಿಷಯದಲ್ಲಿ ಲೋಪ ಮಾಡುತ್ತಿವೆ. ಸು ತ ರಾಮೇಗೌಡ

ಚನ್ನಪಟ್ಟಣ:ಜ.08: 1976ರಲ್ಲಿ ಚನ್ನಪಟ್ಟಣದಿಂದ ‘ಬಯಲುಸೀಮೆ’ ವಾರ ಪತ್ರಿಕೆಯಾಗಿ ತನ್ನ ಪ್ರಕಟಣೆಯನ್ನು ಶುರುಮಾಡಿತು. ಆ ಕಾಲಕ್ಕೆ ಚನ್ನಪಟ್ಟಣದಲ್ಲಿಯೇ ಯಾಕೆ ಆಗಿನ ಬೆಂಗಳೂರು ನಗರ ಹೊರತುಪಡಿಸಿ, ಗ್ರಾಮ

ಶಿಲಾರೋಹಣ ತರಬೇತಿ ಶಿಬಿರ ಆಯೋಜನೆ
ಶಿಲಾರೋಹಣ ತರಬೇತಿ ಶಿಬಿರ ಆಯೋಜನೆ

ರಾಮನಗರ ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ ಹಾಗೂ ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ವತಿಯಿಂದ ಶಿಲಾರೋಹಣ ತರಬೇತಿ ಶಿಬಿರ ಕಾರ್ಯಕ್ರಮವನ್ನು ಆಯೋಜಿಸಲಾಗಿತ್ತು. 


ರಾ

ನೂರು ವರ್ಷ ಕಳೆದರೂ ಸಜ್ಜನರು ರಾಜಕಾರಣಕ್ಕೆ ಬರಲಾಗುವುದಿಲ್ಲ. ಸಿ ಎಂ ಲಿಂಗಪ್ಪ
ನೂರು ವರ್ಷ ಕಳೆದರೂ ಸಜ್ಜನರು ರಾಜಕಾರಣಕ್ಕೆ ಬರಲಾಗುವುದಿಲ್ಲ. ಸಿ ಎಂ ಲಿಂಗಪ್ಪ

ಚನ್ನಪಟ್ಟಣ: ರಾಷ್ಟ್ರಕ್ಕೆ ಸ್ವಾತಂತ್ರ್ಯ ಬಂದು ಎಪ್ಪತ್ತೈದು ವರ್ಷಗಳು ಕಳೆದಿವೆ.ಅಂದಿನಿಂದಲೂ ರಾಜಕೀಯ ನಡೆಯುತ್ತಲೇ ಇದೆ. ಆರಂಭದಲ್ಲಿ ಸಜ್ಜನಿಕೆಯ ರಾಜಕಾರಣಿಗಳಿದ್ದರು. ಈಗ ಹುಡುಕಬೇಕಾದ ಸ್ಥಿತಿ ಇದೆ.

ಸಿಎಂ‌ ಮುಂದೆಯೇ ಸಚಿವ, ಎಂಪಿ, ಎಂಎಲ್ಸಿ ಜಟಾಪಟಿ
ಸಿಎಂ‌ ಮುಂದೆಯೇ ಸಚಿವ, ಎಂಪಿ, ಎಂಎಲ್ಸಿ ಜಟಾಪಟಿ

ರಾಮನಗರ: ಅದೂ ಗೌರವ ತರುವ ಸಭೆ. ನಾಡದೊರೆ ಜಿಲ್ಲೆಯ ಅಭಿವೃದ್ಧಿಗೆ ಸಂಬಂಧಿಸಿದಂತೆ ಮೊದಲ ಬಾರಿಗೆ ಆಗಮಿಸಿ ಅಭಿವೃದ್ಧಿಗೆ ಒತ್ತು ನೀಡುವ ಸಭೆ. ಇಂತಹ ಮುಖ್ಯಮಂತ್ರಿಗಳ ಸಮ್ಮುಖದಲ್ಲೇ ಸಂಸದ ಡಿ.ಕೆ.ಸುರೇಶ್

ಶ್ರೀರಂಗ ನೀರಾವರಿ ಯೋಜನೆ ವರ್ಷದಲ್ಲಿ ಪೂರ್ಣ, 72 ಕೆರೆಗಳಿಗೆ ನೀರು
ಶ್ರೀರಂಗ ನೀರಾವರಿ ಯೋಜನೆ ವರ್ಷದಲ್ಲಿ ಪೂರ್ಣ, 72 ಕೆರೆಗಳಿಗೆ ನೀರು

ಚಿಕ್ಕಕಲ್ಯ (ಮಾಗಡಿ ತಾ.): ತಾಲ್ಲೂಕಿನಲ್ಲಿ ದಶಕಗಳಿಂದ ನನೆಗುದ್ದಿಗೆ ಬಿದ್ದಿರುವ ಶ್ರೀರಂಗ ನೀರಾವರಿ ಯೋಜನೆಯನ್ನು ಇನ್ನು ಒಂದು ವರ್ಷದಲ್ಲಿ ಪೂರ್ಣಗೊಳಿಸಿ, 72 ಕೆರೆಗಳಿಗೆ ನೀರು ತುಂಬಿಸಲಾಗುವುದು. ಈ

Top Stories »  


Top ↑