ಜಿಲ್ಲೆಯಲ್ಲಿ ಮೂರು ದಿನ ಮಾವುಮೇಳ ಸಿಇಓ ಇಕ್ರಂ

ಚನ್ನಪಟ್ಟಣ: ಮೇ 11 22 : ಅತಿ ಹೆಚ್ಚು ಮಾವು ಬೆಳೆಯುವ ರಾಮನಗರ ಜಿಲ್ಲೆಯಲ್ಲಿ ಎರಡು ಕಡೆ ಪ್ರತಿ ವರ್ಷದಂತೆ 2022/23ನೇ ಸಾಲಿನ ಮಾವು ಮೇಳವನ್ನು ಮೂರು ದಿನಗಳ ಕಾಲ ಜಿಲ್ಲಾ ಆಡಳಿತ, ಜಿಲ್ಲಾ ಪಂಚಾಯತಿ ಹಾಗೂ ಜಿಲ್ಲಾ ತೋಟಗಾರಿಕೆಯ ಸಹಯೋಗದೊಂದಿಗೆ ಚನ್ನಪಟ್ಟಣ ತಾಲ್ಲೂಕಿನ ಕೆಂಗಲ್ ದೇವಸ್ಥಾನದ ಮುಂಭಾಗ ಹಾಗೂ ಕನಕಪುರ-ಬೆಂಗಳೂರು ರಸ್ತೆಯಲ್ಲಿರುವ ಶ್ರೀ ರವಿಶಂಕರ್ ಗುರೂಜಿ ಆಶ್ರಮದ ಬಳಿ ಇದೇ ತಿಂಗಳ 13:05:22 ರ ಶುಕ್ರವಾರದಿಂದ 15:05:22 ಭಾನುವಾರದವರೆಗೆ ಮಾವು ಮೇಳವನ್ನು ಆಯೋಜಿಸಲಾಗಿದೆ ಎಂದು ಜಿಲ್ಲಾ ಪಂಚಾಯತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಇಕ್ರಂ ತಿಳಿಸಿದರು.
ಅವರು ಮಂಗಳವಾರ ಕೆಂಗಲ್ ಬಳಿ ಇರುವ ಸಸ್ಯಕ್ಷೇತ್ರದಲ್ಲಿ ಹಮ್ಮಿಕೊಂಡಿದ್ದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ ರಾಮನಗರ ಜಿಲ್ಲೆಯಲ್ಲಿ ಮಾವು ಬೆಳೆ ಒಂದು ಪ್ರಮುಖ ಬೆಳೆಯಾಗಿದ್ದು, ಅಂದಾಜು 28 ಸಾವಿರ ರೈತ ಕುಟುಂಬಗಳು ಮಾವು ಬೆಳೆಯ ಮೇಲೆ ಅವಲಂಬಿತರಾಗಿದ್ದಾರೆ. ಮಾವಿನಲ್ಲಿ ಪ್ರಮುಖವಾಗಿ ಬಾದಾಮಿ, ರಸಪೂರಿ, ಮಲ್ಲಿಕಾ ಸೇರಿದಂತೆ ಐವತ್ತಕ್ಕು ಹೆಚ್ಚಿನ ತಳಿಗಳನ್ನು ಬೆಳೆಯುತ್ತಿದ್ದು, ಪ್ರಸ್ತುತ ಹಂಗಾಮಿನಲ್ಲಿ ನವೆಂಬರ್ ಮತ್ತು ಡಿಸೆಂಬರ್ ತಿಂಗಳಿನಲ್ಲಿ ಅನಿರೀಕ್ಷಿತವಾಗಿ ಬಿದ್ದ ಮಳೆಯಿಂದ ಮಾವಿನ ಫಸಲು ಇಳಿಮುಖವಾಗಿದ್ದರ ಜೊತೆಗೆ ತಡವಾಗಿಯೂ ಮಾರುಕಟ್ಟೆಗೆ ಬಂದಿರುವುದರಿಂದ ಪ್ರಸ್ತುತ ಸಾಲಿನಲ್ಲಿ 80 ಸಾವಿರದಿಂದ ಒಂದು ಲಕ್ಷ ಟನ್ ಮಾವು ಮಾರುಕಟ್ಟೆಗೆ ಬರುವ ನಿರೀಕ್ಷೆ ಇದೆ ಎಂದರು.
2020/21/22 ಸಾಲಿನಲ್ಲಿ ಕೊರೊನಾ ಮಹಾಮಾರಿಯಿಂದ ಜಿಲ್ಲೆಯಲ್ಲಿ ಮಾವು ಮೇಳವನ್ನು ಆಯೋಜಿಸಲಾಗಿರಲಿಲ್ಲ. ಅದಕ್ಕೂ ಹಿಂದೆ 2019/20 ಸಾಲಿನಲ್ಲಿ ಜಾನಪದ ಲೋಕದ ಬಳಿ ಹಮ್ಮಿಕೊಳ್ಳಲಾಗಿದ್ದ ಮಾವು ಮೇಳದಲ್ಲಿ ಇಪ್ಪತ್ತು ರೈತರು ಭಾಗವಹಿಸಿ ಐದು ದಿನಗಳು ನಡೆದ ಮೇಳದಲ್ಲಿ 39.03 ಟನ್ ಮಾರಾಟದಿಂದ 32,86,751₹ ಗಳ ವಹಿವಾಟು ನಡೆಸಲಾಗಿತ್ತು. ಅದರ ಅನುಸಾರವಾಗಿ ಈ ಬಾರಿಯೂ ಸಹ ಇಪ್ಪತ್ತೈದರಿಂದ ಮೂವತ್ತು ಮಳಿಗೆಗಳನ್ನು ತೆರೆಯಲಾಗುತ್ತಿದ್ದು ರೈತರಿಂದ ನೇರವಾಗಿ ಗ್ರಾಹಕರಿಗೆ ಉತ್ತಮ ಹಣ್ಣುಗಳನ್ನು ಒದಗಿಸಲಾಗುತ್ತದೆ. ಇದರಿಂದ ಮಧ್ಯವರ್ತಿಗಳ ಹಾವಳಿ ತಪ್ಪಿಸಿ ರೈತರಿಗೆ ಉತ್ತಮ ಬೆಲೆ ಸಿಗುವಂತೆ ಹಾಗೂ ಗ್ರಾಹಕರಿಗೆ ಕಾರ್ಬೈಡ್ ಮುಕ್ತ ಹಣ್ಣುಗಳನ್ನು ಸುಲಭ ದರದಲ್ಲಿ ಗ್ರಾಹಕರ ಆರೋಗ್ಯ ದೃಷ್ಟಿಯಿಂದ ಈ ಮೇಳವನ್ನು ಹಮ್ಮಿಕೊಳ್ಳಲಾಗಿದ್ದು ಗ್ರಾಹಕರು ಸದುಪಯೋಗಪಡಿಸಿಕೊಳ್ಳಬೇಕೆಂದು ಕರೆ ನೀಡಿದರು.
ಮಾವು ಪ್ರದರ್ಶನ ಮತ್ತು ಮೇಳದಲ್ಲಿ ಭಾಗವಹಿಸಲು ಇಚ್ಚಿಸುವ ರೈತರು ಎರಡು ಸಾವಿರ ಹಣವನ್ನು ಠೇವಣಿ ಇಟ್ಟು ಆಯಾಯ ತಾಲ್ಲೂಕು ತೋಟಗಾರಿಕಾ ಹಿರಿಯ ಸಹಾಯಕ ನಿರ್ದೇಶಕರ ಕಚೇರಿಯಿಂದ ಅರ್ಜಿ ಪಡೆದು ದಿನಾಂಕ 12/05/22 ರ ಮಧ್ಯಾಹ್ನ ಎರಡು ಗಂಟೆಯೊಳಗೆ ತಾಲ್ಲೂಕಿನ ತೋಟಗಾರಿಕಾ ಕಚೇರಿಗೆ ಸಲ್ಲಿಸುವಂತೆ ತಿಳಿಸಿದರು. ಈ ಸಂದರ್ಭದಲ್ಲಿ ಜಿಲ್ಲಾ ಹಿರಿಯ ತೋಟಗಾರಿಕಾ ಅಧಿಕಾರಿ ಮುನೇಗೌಡ, ತಾಲ್ಲೂಕು ಹಿರಿಯ ಸಹಾಯಕ ಅಧಿಕಾರಿ ವಿವೇಕ್, ರಮೇಶ್, ಶಾಂತರಾಜು ಉಪಸ್ಥಿತರಿದ್ದರು.
ಗೋ ರಾ ಶ್ರೀನಿವಾಸ...
ಮೊ:9845856139.
Recent news in ramanagara »

ಡಿ ಕೆ ಶಿವಕುಮಾರ್ ಮತ್ತು ಡಿ ಕೆ ಸುರೇಶ್ ರವರು ನನ್ನ ಗೆಲುವಿಗೆ ಮುನ್ನುಡಿ ಬರೆಯಲು ಆಶೀರ್ವದಿಸಿದ್ದಾರೆ
ಚನ್ನಪಟ್ಟಣ: ಮಾಜಿ ಮುಖ್ಯಮಂತ್ರಿ ಮತ್ತು ಮಾಜಿ ಮಂತ್ರಿ ಸೇರಿದಂತೆ ಕ್ಷೇತ್ರದಲ್ಲಿ ಈಗಾಗಲೇ ಇಬ್ಬರು ಘಟಾನುಘಟಿ ನಾಯಕರಿದ್ದಾರೆ, ಅವರ ಜೊತೆ ಸೆಣೆಸಲು ನಾಯಕರಾದ ಚನ್ನಪಟ್ಟಣ: ಮಾಜಿ ಮುಖ್ಯಮಂತ್ರಿ ಮತ್ತು ಮಾಜಿ ಮಂತ್ರಿ ಸೇರಿದಂತೆ ಕ್ಷೇತ್ರ
ಕೃಷಿ ಉತ್ಪನ್ನ ಮಾರುಕಟ್ಟೆ ಚುನಾವಣೆ: ಆಕ್ಷೇಪಣೆಗಳಿದ್ದಲ್ಲಿ ಸಲ್ಲಿಸಿ
ರಾಮನಗರ-ಮೇ.18: ಜಿಲ್ಲೆಯಲ್ಲಿ ಅವಧಿ ಮುಕ್ತಾಯವಾಗಿರುವ ರಾಮನಗರ-ಚನ್ನಪಟ್ಟಣ ಮತ್ತು ಕನಕಪುರ ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿಗಳಿಗೆ ಚುನಾವಣೆ ನಡೆಸುವ ಸಂಬಂಧ ಕರಡು ಮತದಾರರ ಪಟ್ಟಿಯನ್ನು ಮೇ 17 ರಂದು

ಜೂನ್ 25ರ ಮೆಗಾ ಲೋಕ ಅದಲಾತ್ ನಲ್ಲಿ ರಾಜಿ ಪ್ರಕರಣಗಳ ಇತ್ಯರ್ಥಕ್ಕೆ ಆದ್ಯತೆ
*ಜೂನ್ 25ರ ಮೆಗಾ ಲೋಕ ಅದಲಾತ್ ನಲ್ಲಿ ರಾಜಿ ಪ್ರಕರಣಗಳ ಇತ್ಯರ್ಥಕ್ಕೆ ಆದ್ಯತೆ*
ರಾಮನಗರ-ಮೇ.18: ನ್ಯಾಯಾ

ಜೆಡಿಎಸ್ ನಡೆ ಅಭಿವೃದ್ಧಿ ಕಡೆ ಜೆಡಿಎಸ್ ಪಕ್ಷದ ದಲಿತ ಮುಖಂಡರು
ಚನ್ನಪಟ್ಟಣ: ಮೇ: 18/22 ಬುಧವಾರ.
ತಾಲ್ಲೂಕಿನ ದಲಿತರ ನಡಿಗೆ ಅಭಿವೃದ್ಧಿ ಕಡೆಗೆ ವಿನಹ ಯೋಗೇಶ್ವರ್ ಕಡೆಗಲ್ಲಾ. ಜೆಡಿಎಸ್ ಪಕ್ಷದಲ್ಲಿರುವ ಎಲ್ಲಾ ದಲಿತ ಮುಖಂಡರಿಗೂ, ಮತದಾರರಿಗೂ ಪಕ್ಷವು

ಜನಸ್ಪಂದನ ಕಾರ್ಯಕ್ರಮದ ಪ್ರಯೋಜನ ಪಡೆದುಕೊಳ್ಳಿ ಶಾಸಕಿ ಅನಿತಾ ಕುಮಾರಸ್ವಾಮಿ
ರಾಮನಗರ, ಮೇ.17: ನಿಗದಿತ ಅವಧಿಯೊಳಗೆ ತ್ವರಿತವಾಗಿ ಪರಿಹಾರ ದೊರಕಿಸಿಕೊಡುವ ʼಜನ ಸ್ಪಂದನʼ ಕಾರ್ಯಕ್ರಮದ ಪೂರ್ಣ ಪ್ರಯೋಜನ ಪಡೆದುಕೊಂಡು ಯಶ್ವಸಿಗೊಳಿಸುವಂತೆ ಶಾಸಕಿ ಅನಿತಾ ಕುಮಾರಸ್ವಾಮಿ ಅವರು ನಗರದ ಸಾ

ದಲಿತರು ಕಾಂಗ್ರೆಸ್ ಬಿಡಲ್ಲಾ ಕಾಂಗ್ರೆಸ್ ಪಕ್ಷದ ದಲಿತ ಮುಖಂಡರು
ಕಾಂಗ್ರೆಸ್ ಸೇರಿದಂತೆ ಅನ್ಯ ಪಕ್ಷಗಳಲ್ಲಿ ಇರುವ ಯಾವುದೇ ದಲಿತ ಮುಖಂಡರು ಯೋಗೇಶ್ವರ್ ಅಥವಾ ಬಿಜೆಪಿ ಪಕ್ಷದ ಕಡೆ ಹೆಜ್ಜೆ ಹಾಕುವುದಿಲ್ಲಾ. ಆಯಾಯ ಪಕ್ಷದಲ್ಲಿ ಅವರದ್ದೇ ಆದ ಸ್ಥಾನಮಾನಗಳಿವೆ, ಗೌರವಗಳಿವೆ,

ನಗರದಲ್ಲಿ ಅಕ್ರಮ ಗೋಮಾಂಸ ಮಾರಾಟ ಕೇಂದ್ರಗಳ ಮೇಲೆ ದಾಳಿ ನಡೆಸಿದ ಎನ್ ಜಿ ಓ ಸದಸ್ಯರ ಮೇಲೆ ಮಾರಣಾಂತಿಕ ಹಲ್ಲೆ
ಚನ್ನಪಟ್ಟಣ: ಮೇ 15 22. ಚನ್ನಪಟ್ಟಣ ನಗರದ ಮುನಿಯಪ್ಪನದೊಡ್ಡಿ ಬಳಿಯ ಬೀಡಿ ಕಾಲೋನಿ, ಸಾತನೂರು ರಸ್ತೆಯ ಇಂದಿರಾ ಕಾಟೇಜ್ ನಲ್ಲಿ ಅಕ್ರಮ ಗೋಸಾಗಣೆ,

ಕೆಂಗಲ್ ಆಂಜನೇಯಸ್ವಾಮಿ ದರ್ಶನ ಪಡೆದ ಲೋಕಪಾಲ್ ಮುಖ್ಯಸ್ಥ ಪಿನಾಕಿ ಚಂದ್ರ ಘೋಷ್
ಚನ್ನಪಟ್ಟಣ: ಮೇ 14 22 ತಾಲ್ಲೂಕಿನ ಇತಿಹಾಸ ಹಾಗೂ ಪುರಾಣ ಪ್ರಸಿದ್ಧ ಕೆಂಗಲ್ ಆಂಜನೇಯಸ್ವಾಮಿ ದೇವಾಲಯಕ್ಕೆ ಸರ್ವೋಚ್ಚ ನ್ಯಾಯಾಲಯದ ನಿವೃತ್ತ ನ್ಯಾ

ದಲಿತರ ನಡೆ ಯೋಗೇಶ್ವರ್ ಕಡೆ ಕಾಂಗ್ರೆಸ್ ಗೆ ರಾಜಿನಾಮೆ ಘೋಷಿಸಿದ ಅಕ್ಕೂರು ಶೇಖರ್
ಚನ್ನಪಟ್ಟಣ: ಮೇ 14 22. ತಾಲ್ಲೂಕಿನ ಬ್ಲಾಕ್ ಕಾಂಗ್ರೆಸ್ ನಲ್ಲಿ ದಲಿತರಿಗೆ ಇದುವರೆಗೂ ಸ್ಥಾನಮಾನ ನೀಡದೆ ಇರುವುದರಿಂದ ಜೊತೆಗೆ ಗುಂಪುಗಾರಿಕೆಯಿಂ

ನಿರಂತರ ಇ-ಸ್ವತ್ತು ಖಾತಾ ಸಪ್ತಾಹ ಕಾರ್ಯಕ್ರಮ ಉದ್ಘಾಟನೆ ನಾಡಿದ ಇಓ ಚಂದ್ರು
ಇ-ಸ್ವತ್ತು ಸಾರ್ವಜನಿಕರಿಗೆ ಅವಶ್ಯಕವಾದ ದಾಖಲೆಯಾಗಿದ್ದು, ಜನ ಜಾಗೃತಿ ಮೂಡಿಸುವ ಕೆಲಸ ಜರುಗಬೇಕು ಈ ಉದ್ದೇಶದಿಂದಲೇ ಇಂದು ಜಿಲ್ಲಾದ್ಯಾಂತ ಎಲ್ಲಾ ಗ್ರಾಮ ಪಂಚಾಯತಿಗಳಲ್ಲಿ ನಿರಂತರ ಇ-ಸ್ವತ್ತು ಖ
??????????????