Tel: 7676775624 | Mail: info@yellowandred.in

Language: EN KAN

    Follow us :


ದಲಿತರ ನಡೆ ಯೋಗೇಶ್ವರ್ ಕಡೆ ಕಾಂಗ್ರೆಸ್ ಗೆ ರಾಜಿನಾಮೆ ಘೋಷಿಸಿದ ಅಕ್ಕೂರು ಶೇಖರ್

Posted date: 14 May, 2022

Powered by:     Yellow and Red

ದಲಿತರ ನಡೆ ಯೋಗೇಶ್ವರ್ ಕಡೆ ಕಾಂಗ್ರೆಸ್ ಗೆ ರಾಜಿನಾಮೆ ಘೋಷಿಸಿದ ಅಕ್ಕೂರು ಶೇಖರ್

ಚನ್ನಪಟ್ಟಣ: ಮೇ 14 22. ತಾಲ್ಲೂಕಿನ ಬ್ಲಾಕ್ ಕಾಂಗ್ರೆಸ್ ನಲ್ಲಿ ದಲಿತರಿಗೆ ಇದುವರೆಗೂ ಸ್ಥಾನಮಾನ ನೀಡದೆ ಇರುವುದರಿಂದ ಜೊತೆಗೆ ಗುಂಪುಗಾರಿಕೆಯಿಂದ ನೊಂದು ನಾವು ಕಾಂಗ್ರೆಸ್ ಪಕ್ಷದ ಪ್ರಾಥಮಿಕ ಸದಸ್ಯತ್ವಕ್ಕೆ ರಾಜೀನಾಮೆ ನೀಡಿ ಬಿಜೆಪಿ ಬೆಂಬಲಿಸಲು ಮುಂದಾಗಿದ್ದೇವೆ ಎಂದು ಕಾಂಗ್ರೆಸ್ ಹಿರಿಯ ಮುಖಂಡ ರಾಮನಗರ ಜಿಲ್ಲಾ ಕಾಂಗ್ರೆಸ್ ನ ಪ್ರಧಾನ ಕಾರ್ಯದರ್ಶಿ ಎಸ್ ಸಿ ಶೇಖರ್ (ಅಕ್ಕೂರು ಶೇಖರ್) ಘೋಷಿಸಿದರು.

ಅವರು ಶನಿವಾರ ನಗರದ ಹೊರವಲಯದ ಖಾಸಗಿ ಹೋಟೆಲ್ ನಲ್ಲಿ ಕರೆದಿದ್ದ ಪತ್ರಿಕಾಗೋಷ್ಠಿಯಲ್ಲಿ ಸ್ಪಷ್ಟಪಡಿಸಿದರು.


ತಾಲ್ಲೂಕು ಕಾಂಗ್ರೆಸ್ ನಲ್ಲಿ ನಾಲ್ಕೈದು ಗುಂಪುಗಳಿವೆ. ಈ ಗುಂಪುಗಾರಿಕೆಯಲ್ಲಿ ಹೊಂದಾಣಿಕೆ ಇಲ್ಲದ ಕಾರಣ ತಾಲ್ಲೂಕಿನ ದಲಿತರಿಗೆ ಅದರಲ್ಲೂ ಕಾಂಗ್ರೆಸ್ ಪಕ್ಷದ ಆಧಾರ ಸ್ತಂಭವಾಗಿರುವ ದಲಿತರನ್ನು ಕಡೆಗಣಿಸುತ್ತಲೇ ಬಂದಿದ್ದಾರೆ. ನೆಪಮಾತ್ರಕ್ಕೆ ಹುದ್ದೆ ನೀಡುತ್ತಾರೆಯೇ ವಿನಹ ಅಧಿಕಾರ ಮಾತ್ರ ಶೂನ್ಯ. ಇದು ವೇದಿಕೆ ಹಂಚಿಕೊಳ್ಳುವ ಸಂದರ್ಭದಲ್ಲಿಯೂ ಮುಂದುವರೆದು ಅಲ್ಲಿಯೂ ಕಡೆಗಣಿಸುತ್ತಾರೆ. ಪ್ರತಿ ಚುನಾವಣೆಯಲ್ಲೂ ಹೊಸಹೊಸ ಅಭ್ಯರ್ಥಿಗಳನ್ನು ಕರೆತಂದು ಚುನಾವಣೆಗೆ ನಿಲ್ಲಿಸಿ ಸೋಲಿಸುತ್ತಾರೆ. ಈ ಎಲ್ಲಾ ಕಾರಣಗಳಿಂದ ನಾವೆಲ್ಲರೂ ಕಾಂಗ್ರೆಸ್ ಪಕ್ಷಕ್ಕೆ ರಾಜೀನಾಮೆ ನೀಡಿ ದಲಿತರ ನಡೆ ಯೋಗೇಶ್ವರ್ ಕಡೆ ಎಂಬ ಧ್ಯೇಯೋದ್ದೇಶದೊಂದಿಗೆ ಅಡಿ ಇಟ್ಟಿದ್ದೇವೆ ಎಂದರು.


ಡಾ ಲೋಕಾನಂದ ರವರು ಮಾತನಾಡಿ ಕಳೆದ ಇಪ್ಪತ್ತು ವರ್ಷಗಳ ಹಿಂದೆ ನಾವೆಲ್ಲರೂ ಸಿ ಪಿ ಯೋಗೇಶ್ವರ್ ಜೊತೆಯಲ್ಲೇ ಇದ್ದು ಹಲವಾರು ಕಾರಣಗಳಿಂದ ತಾಲ್ಲೂಕಿನ ಎಲ್ಲಾ ದಲಿತ ಮುಖಂಡರು ಬೇರೆ ಬೇರೆ ಪಕ್ಷಗಳಲ್ಲಿ ಗುರುತಿಸಿಕೊಂಡಿದ್ದಾರೆ. ಅವರೆಲ್ಲರನ್ನೂ ಒಗ್ಗೂಡಿಸಿ ಮುಂದಿನ ಚುನಾವಣೆಯಲ್ಲಿ ಸಿ‌ ಪಿ ಯೋಗೇಶ್ವರ್ ರವರ ಕೈ ಬಲಪಡಿಸಲು ಅನ್ಯ ಪಕ್ಷಗಳಲ್ಲಿರುವ ಎಲ್ಲಾ ದಲಿತರು ಒಗ್ಗಟ್ಟಾಗುತ್ತಿದ್ದು ಮುಂದಿನ ದಿನಗಳಲ್ಲಿ ಬಿಜೆಪಿ ಸೇರ್ಪಡೆ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗುತ್ತದೆ ಎಂದರು.


ಮಾಜಿ ನಗರಸಭಾ ಸದಸ್ಯ ನಾರಾಯಣಮೂರ್ತಿ ಮಾತನಾಡಿ ರಾಜ್ಯ ಮಟ್ಟದ ನಾಯಕರು ಸಹ ತಾಲ್ಲೂಕಿನ ದಲಿತ ಮುಖಂಡರ ಬಗ್ಗೆ ಕಿಂಚಿತ್ತೂ ವಿಶ್ವಾಸ ಗಳಿಸಲು ಪ್ರಯತ್ನಿಸಲಿಲ್ಲ. ದಲಿತರನ್ನು ಮುಖ್ಯಮಂತ್ರಿ ಮಾಡಲೂ ಸಹ ರಾಜ್ಯದಲ್ಲಿ ಅಡ್ಡಗಾಲು ಹಾಕಿ ನಿಂತವರೇ ಹೆಚ್ಚು. ಸಮಸ್ಯೆಗೆ ಸಂಬಂಧಿಸಿದಂತೆ ಪತ್ರ ನೀಡಿದಾಗಲೂ ಸಹ ಸಂಸದ ಡಿ ಕೆ ಸುರೇಶ್ ರವರು ದುರಹಂಕಾರದಿಂದ ಪತ್ರವನ್ನು ಹರಿದುಹಾಕುವ ಮೂಲಕ ದಲಿತರಿಗೆ ಅವಮಾನ ಮಾಡಿದ್ದಾರೆ. ಈ ಹಿನ್ನೆಲೆಯಲ್ಲಿ ನಾವೆಲ್ಲರೂ ಕಾಂಗ್ರೆಸ್ ಪಕ್ಷವನ್ನು ತ್ಯಜಿಸಿ ಸಿ ಪಿ ಯೋಗೇಶ್ವರ್ ಬೆಂಬಲಿಸಲು ಬಿಜೆಪಿ ಸೇರ್ಪಡೆಯಾಗುತ್ತಿದ್ದೇವೆ ಎಂದರು.


ಪತ್ರಿಕಾಗೋಷ್ಠಿಯಲ್ಲಿ ಜಿಲ್ಲಾ ಕಾಂಗ್ರೆಸ್ ಕಾರ್ಯದರ್ಶಿ ಎಂ ಎಸ್ ಕೇಶವಮೂರ್ತಿ, ನಗರಸಭಾ ಮಾಜಿ ಸದಸ್ಯ ಪುರುಷೋತ್ತಮ, ಜಗದಾಪುರ ಗ್ರಾಪಂ ಮಾಜಿ ಸದಸ್ಯ ಭೀಮಯ್ಯ, ಎಸ್ ಎಸ್ಟಿ ನಗರ ಪ್ರಧಾನ ಕಾರ್ಯದರ್ಶಿ ಜಗದೀಶ್, ಅಂಬಾಡಹಳ್ಳಿ ಜೆಡಿಎಸ್ ಮುಖಂಡ ಪಾಪಣ್ಣ, ಜಯಸಿಂಹ ಸೇರಿದಂತೆ ಮುಂತಾದವರು ಉಪಸ್ಥಿತರಿದ್ದರು.


ಗೋ ರಾ ಶ್ರೀನಿವಾಸ...

ಮೊ:9845856139.

??????????????

  • ????? ???????? ??????????? ???? ??????????.

ನಿಮ್ಮ ಅಭಿಪ್ರಾಯಗಳನ್ನು ಬರೆಯಿರಿ/ತಿಳಿಸಿ.

Recent news in ramanagara »

ಡಿ ಕೆ ಶಿವಕುಮಾರ್ ಮತ್ತು ಡಿ ಕೆ ಸುರೇಶ್ ರವರು ನನ್ನ ಗೆಲುವಿಗೆ ಮುನ್ನುಡಿ ಬರೆಯಲು ಆಶೀರ್ವದಿಸಿದ್ದಾರೆ
ಡಿ ಕೆ ಶಿವಕುಮಾರ್ ಮತ್ತು ಡಿ ಕೆ ಸುರೇಶ್ ರವರು ನನ್ನ ಗೆಲುವಿಗೆ ಮುನ್ನುಡಿ ಬರೆಯಲು ಆಶೀರ್ವದಿಸಿದ್ದಾರೆ

ಚನ್ನಪಟ್ಟಣ: ಮಾಜಿ ಮುಖ್ಯಮಂತ್ರಿ ಮತ್ತು ಮಾಜಿ ಮಂತ್ರಿ ಸೇರಿದಂತೆ ಕ್ಷೇತ್ರದಲ್ಲಿ ಈಗಾಗಲೇ ಇಬ್ಬರು ಘಟಾನುಘಟಿ ನಾಯಕರಿದ್ದಾರೆ, ಅವರ ಜೊತೆ ಸೆಣೆಸಲು ನಾಯಕರಾದ ಚನ್ನಪಟ್ಟಣ: ಮಾಜಿ ಮುಖ್ಯಮಂತ್ರಿ ಮತ್ತು ಮಾಜಿ ಮಂತ್ರಿ ಸೇರಿದಂತೆ ಕ್ಷೇತ್ರ

ಕೃಷಿ ಉತ್ಪನ್ನ ಮಾರುಕಟ್ಟೆ ಚುನಾವಣೆ: ಆಕ್ಷೇಪಣೆಗಳಿದ್ದಲ್ಲಿ ಸಲ್ಲಿಸಿ

ರಾಮನಗರ-ಮೇ.18: ಜಿಲ್ಲೆಯಲ್ಲಿ ಅವಧಿ ಮುಕ್ತಾಯವಾಗಿರುವ ರಾಮನಗರ-ಚನ್ನಪಟ್ಟಣ ಮತ್ತು ಕನಕಪುರ ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿಗಳಿಗೆ ಚುನಾವಣೆ ನಡೆಸುವ ಸಂಬಂಧ ಕರಡು ಮತದಾರರ ಪಟ್ಟಿಯನ್ನು ಮೇ 17 ರಂದು

ಜೂನ್ 25ರ ಮೆಗಾ ಲೋಕ ಅದಲಾತ್ ನಲ್ಲಿ ರಾಜಿ ಪ್ರಕರಣಗಳ ಇತ್ಯರ್ಥಕ್ಕೆ ಆದ್ಯತೆ
ಜೂನ್ 25ರ ಮೆಗಾ ಲೋಕ ಅದಲಾತ್ ನಲ್ಲಿ ರಾಜಿ ಪ್ರಕರಣಗಳ ಇತ್ಯರ್ಥಕ್ಕೆ ಆದ್ಯತೆ

*ಜೂನ್ 25ರ ಮೆಗಾ ಲೋಕ ಅದಲಾತ್ ನಲ್ಲಿ ರಾಜಿ ಪ್ರಕರಣಗಳ ಇತ್ಯರ್ಥಕ್ಕೆ ಆದ್ಯತೆ*

ರಾಮನಗರ-ಮೇ.18:  ನ್ಯಾಯಾ

ಜೆಡಿಎಸ್ ನಡೆ ಅಭಿವೃದ್ಧಿ ಕಡೆ ಜೆಡಿಎಸ್ ಪಕ್ಷದ ದಲಿತ ಮುಖಂಡರು
ಜೆಡಿಎಸ್ ನಡೆ ಅಭಿವೃದ್ಧಿ ಕಡೆ ಜೆಡಿಎಸ್ ಪಕ್ಷದ ದಲಿತ ಮುಖಂಡರು

ಚನ್ನಪಟ್ಟಣ: ಮೇ: 18/22 ಬುಧವಾರ.

ತಾಲ್ಲೂಕಿನ ದಲಿತರ ನಡಿಗೆ ಅಭಿವೃದ್ಧಿ ಕಡೆಗೆ ವಿನಹ ಯೋಗೇಶ್ವರ್ ಕಡೆಗಲ್ಲಾ. ಜೆಡಿಎಸ್ ಪಕ್ಷದಲ್ಲಿರುವ ಎಲ್ಲಾ ದಲಿತ ಮುಖಂಡರಿಗೂ, ಮತದಾರರಿಗೂ ಪಕ್ಷವು

ಜನಸ್ಪಂದನ ಕಾರ್ಯಕ್ರಮದ ಪ್ರಯೋಜನ ಪಡೆದುಕೊಳ್ಳಿ ಶಾಸಕಿ ಅನಿತಾ ಕುಮಾರಸ್ವಾಮಿ
ಜನಸ್ಪಂದನ ಕಾರ್ಯಕ್ರಮದ ಪ್ರಯೋಜನ ಪಡೆದುಕೊಳ್ಳಿ ಶಾಸಕಿ ಅನಿತಾ ಕುಮಾರಸ್ವಾಮಿ

ರಾಮನಗರ, ಮೇ.17: ನಿಗದಿತ ಅವಧಿಯೊಳಗೆ ತ್ವರಿತವಾಗಿ ಪರಿಹಾರ ದೊರಕಿಸಿಕೊಡುವ ʼಜನ ಸ್ಪಂದನʼ ಕಾರ್ಯಕ್ರಮದ ಪೂರ್ಣ ಪ್ರಯೋಜನ ಪಡೆದುಕೊಂಡು ಯಶ್ವಸಿಗೊಳಿಸುವಂತೆ ಶಾಸಕಿ ಅನಿತಾ ಕುಮಾರಸ್ವಾಮಿ ಅವರು ನಗರದ ಸಾ

ದಲಿತರು ಕಾಂಗ್ರೆಸ್ ಬಿಡಲ್ಲಾ ಕಾಂಗ್ರೆಸ್ ಪಕ್ಷದ ದಲಿತ ಮುಖಂಡರು
ದಲಿತರು ಕಾಂಗ್ರೆಸ್ ಬಿಡಲ್ಲಾ ಕಾಂಗ್ರೆಸ್ ಪಕ್ಷದ ದಲಿತ ಮುಖಂಡರು

ಕಾಂಗ್ರೆಸ್ ಸೇರಿದಂತೆ ಅನ್ಯ ಪಕ್ಷಗಳಲ್ಲಿ ಇರುವ ಯಾವುದೇ ದಲಿತ ಮುಖಂಡರು ಯೋಗೇಶ್ವರ್ ಅಥವಾ ಬಿಜೆಪಿ ಪಕ್ಷದ ಕಡೆ ಹೆಜ್ಜೆ ಹಾಕುವುದಿಲ್ಲಾ. ಆಯಾಯ ಪಕ್ಷದಲ್ಲಿ ಅವರದ್ದೇ ಆದ ಸ್ಥಾನಮಾನಗಳಿವೆ, ಗೌರವಗಳಿವೆ,

ನಗರದಲ್ಲಿ ಅಕ್ರಮ ಗೋಮಾಂಸ ಮಾರಾಟ ಕೇಂದ್ರಗಳ ಮೇಲೆ ದಾಳಿ ನಡೆಸಿದ ಎನ್ ಜಿ ಓ ಸದಸ್ಯರ  ಮೇಲೆ ಮಾರಣಾಂತಿಕ ಹಲ್ಲೆ
ನಗರದಲ್ಲಿ ಅಕ್ರಮ ಗೋಮಾಂಸ ಮಾರಾಟ ಕೇಂದ್ರಗಳ ಮೇಲೆ ದಾಳಿ ನಡೆಸಿದ ಎನ್ ಜಿ ಓ ಸದಸ್ಯರ ಮೇಲೆ ಮಾರಣಾಂತಿಕ ಹಲ್ಲೆ

ಚನ್ನಪಟ್ಟಣ: ಮೇ 15 22. ಚನ್ನಪಟ್ಟಣ ನಗರದ ಮುನಿಯಪ್ಪನದೊಡ್ಡಿ ಬಳಿಯ ಬೀಡಿ ಕಾಲೋನಿ, ಸಾತನೂರು ರಸ್ತೆಯ ಇಂದಿರಾ ಕಾಟೇಜ್ ನಲ್ಲಿ ಅಕ್ರಮ ಗೋಸಾಗಣೆ,

ಕೆಂಗಲ್ ಆಂಜನೇಯಸ್ವಾಮಿ ದರ್ಶನ ಪಡೆದ ಲೋಕಪಾಲ್ ಮುಖ್ಯಸ್ಥ ಪಿನಾಕಿ ಚಂದ್ರ ಘೋಷ್
ಕೆಂಗಲ್ ಆಂಜನೇಯಸ್ವಾಮಿ ದರ್ಶನ ಪಡೆದ ಲೋಕಪಾಲ್ ಮುಖ್ಯಸ್ಥ ಪಿನಾಕಿ ಚಂದ್ರ ಘೋಷ್

ಚನ್ನಪಟ್ಟಣ: ಮೇ 14 22 ತಾಲ್ಲೂಕಿನ ಇತಿಹಾಸ ಹಾಗೂ ಪುರಾಣ ಪ್ರಸಿದ್ಧ ಕೆಂಗಲ್ ಆಂಜನೇಯಸ್ವಾಮಿ ದೇವಾಲಯಕ್ಕೆ ಸರ್ವೋಚ್ಚ ನ್ಯಾಯಾಲಯದ ನಿವೃತ್ತ ನ್ಯಾ

ದಲಿತರ ನಡೆ ಯೋಗೇಶ್ವರ್ ಕಡೆ ಕಾಂಗ್ರೆಸ್ ಗೆ ರಾಜಿನಾಮೆ ಘೋಷಿಸಿದ ಅಕ್ಕೂರು ಶೇಖರ್
ದಲಿತರ ನಡೆ ಯೋಗೇಶ್ವರ್ ಕಡೆ ಕಾಂಗ್ರೆಸ್ ಗೆ ರಾಜಿನಾಮೆ ಘೋಷಿಸಿದ ಅಕ್ಕೂರು ಶೇಖರ್

ಚನ್ನಪಟ್ಟಣ: ಮೇ 14 22. ತಾಲ್ಲೂಕಿನ ಬ್ಲಾಕ್ ಕಾಂಗ್ರೆಸ್ ನಲ್ಲಿ ದಲಿತರಿಗೆ ಇದುವರೆಗೂ ಸ್ಥಾನಮಾನ ನೀಡದೆ ಇರುವುದರಿಂದ ಜೊತೆಗೆ ಗುಂಪುಗಾರಿಕೆಯಿಂ

ನಿರಂತರ ಇ-ಸ್ವತ್ತು ಖಾತಾ ಸಪ್ತಾಹ ಕಾರ್ಯಕ್ರಮ ಉದ್ಘಾಟನೆ ನಾಡಿದ ಇಓ ಚಂದ್ರು
ನಿರಂತರ ಇ-ಸ್ವತ್ತು ಖಾತಾ ಸಪ್ತಾಹ ಕಾರ್ಯಕ್ರಮ ಉದ್ಘಾಟನೆ ನಾಡಿದ ಇಓ ಚಂದ್ರು

ಇ-ಸ್ವತ್ತು ಸಾರ್ವಜನಿಕರಿಗೆ ಅವಶ್ಯಕವಾದ ದಾಖಲೆಯಾಗಿದ್ದು, ಜನ ಜಾಗೃತಿ ಮೂಡಿಸುವ ಕೆಲಸ ಜರುಗಬೇಕು ಈ ಉದ್ದೇಶದಿಂದಲೇ ಇಂದು  ಜಿಲ್ಲಾದ್ಯಾಂತ ಎಲ್ಲಾ ಗ್ರಾಮ ಪಂಚಾಯತಿಗಳಲ್ಲಿ ನಿರಂತರ ಇ-ಸ್ವತ್ತು ಖ

Top Stories »  


Top ↑