Tel: 7676775624 | Mail: info@yellowandred.in

Language: EN KAN

    Follow us :


ಮೂರು ದಿನಗಳ ಸ್ವಾತಂತ್ರ್ಯ ದಿನಾಚರಣೆಗೆ ತಹಶಿಲ್ದಾರ್ ಸುದರ್ಶನ್ ಕರೆ

Posted date: 02 Aug, 2022

Powered by:     Yellow and Red

ಮೂರು ದಿನಗಳ ಸ್ವಾತಂತ್ರ್ಯ ದಿನಾಚರಣೆಗೆ ತಹಶಿಲ್ದಾರ್ ಸುದರ್ಶನ್ ಕರೆ

Channapatna Tehsildar Sudarshan calls for three days of Independence Day celebrations in channapatna taluk

ಚನ್ನಪಟ್ಟಣ.ಆ.೦೨: ಆಗಸ್ಟ್ ೧೫ ರಂದು ೭೬ನೇ ಸ್ವಾತಂತ್ರ ದಿನಾಚರಣೆ ಸಮಾರಂಭ ಆಚರಿಸುವ ಹಿನ್ನೆಲೆಯಲ್ಲಿ, ಇಲ್ಲಿನ ತಾಲ್ಲೂಕು ಕಛೇರಿ ಸಭಾಂಗಣದಲ್ಲಿ ತಹಶೀಲ್ದಾರ್ ಸುದರ್ಶನ್ ಅವರ ಅಧ್ಯಕ್ಷತೆಯಲ್ಲಿ ಪೂರ್ವಭಾವಿ ಸಭೆ ನಡೆಯಿತು.

ದೇಶಕ್ಕೆ ಸ್ವಾತಂತ್ರ ಬಂದು ೭೫ ವರ್ಷಗಳು ಕಳೆದಿದ್ದು, ಈ ಸ್ವಾತಂತ್ರ ಅಮೃತ ಮಹೋತ್ಸವ ಆಚರಣೆಯನ್ನು ತಾಲ್ಲೂಕಿನಾದ್ಯಂತ ಮೂರು ದಿನಗಳ ಕಾಲ ಅಂದರೆ ಆಗಸ್ಟ್ ೧೩ರಿಂದ ೧೫ರ ವರಗೆ ಪ್ರತಿಯೊಬ್ಬರು, ಪ್ರತಿಯೊಂದು ಮನೆ, ಅಂಗಡಿ, ಕಛೇರಿಗಳಲ್ಲಿ ಧ್ವಜಾರೋಹಣ ನೆರವೇರಿಸಿ ಅರ್ಥಪೂರ್ಣ ಆಚರಣೆ ಮಾಡಲು ತಹಶೀಲ್ದಾರ್ ಸುದರ್ಶನ್ ಕರೆ ನೀಡಿದರು.


ತಾಲ್ಲೂಕಿನಾದ್ಯಂತ ಇರುವ ಎಲ್ಲಾ ಶಾಲಾ ಕಾಲೇಜು, ಸರ್ಕಾರಿ ಕಛೇರಿಗಳಲ್ಲಿ ಕಡ್ಡಾಯವಾಗಿ ಧ್ವಜಾರೋಹಣ ನೆರವೇರಿಸಬೇಕು. ಧ್ವಜಾರೋಹಣ ಸಂದರ್ಭದಲ್ಲಿ ಯಾವುದೇ ಕಾರಣಕ್ಕೂ ಪ್ಲಾಸ್ಟಿಕ್ ಧ್ವಜವನ್ನು ಬಳಸಬಾರದು ಹಾಗೂ ರಾಷ್ಟ್ರಧ್ವಜಕ್ಕೆ ಅವಮಾನವಾದರೆ ಅಂತಹವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗವುದು ಎಂದು ಎಚ್ಚರಿಸಿದರು.

ಆಗಸ್ಟ್ ೧೫ರಂದು ಬೆಳಿಗ್ಗೆ ೮ ಗಂಟೆಗೆ ಇಲ್ಲಿನ ನಗರಸಭೆ ಆವರಣದಿಂದ ಮೆರವಣಿಗೆ ಹೊರಟು, ಒಂಭತ್ತು ಗಂಟೆಗೆ ಬಾಲಕರ ಕಿರಿಯ ಕಾಲೇಜು ಆವರಣದಲ್ಲಿ  ಧ್ವಜಾರೋಹಣ ನೆರವೇರಿಸಲಾಗುವುದು.


ಈ ಸಂದರ್ಭದಲ್ಲಿ ಎಲ್ಲಾ ಇಲಾಖೆಯ ಅಧಿಕಾರಿಗಳು ಕಡ್ಡಾಯವಾಗಿ ಹಾಜರಿದ್ದು, ಕಾರ್ಯಕ್ರಮವನ್ನು ಯಶಸ್ವಿಗೊಳಿಸಬೇಕು, ತಪ್ಪಿದ್ದಲ್ಲಿ ಅಂತಹವರ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳಲಾಗುವುದು ಎಂದು ಅಧಿಕಾರಿಗಳಿಗೆ ಎಚ್ಚರಿಕೆ ನೀಡಿದರು.

ಪೂರ್ವಭಾವಿ ಸಭೆಯಲ್ಲಿ ಬಿಇಓ ಮರಿಗೌಡ, ಪೌರಾಯುಕ್ತ ಸಿ ಪುಟ್ಟಸ್ವಾಮಿ, ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯ ಎನ್ ಮೋಹನ್, ಅಬಕಾರಿ ಇಲಾಖೆಯ ಇಂದುಕುಮಾರ್ ಸೇರಿದಂತೆ ಹಲವಾರು ಇಲಾಖೆಯ ಅಧಿಕಾರಿಗಳು, ಮುಖಂಡರು ಉಪಸ್ಥಿತರಿದ್ದರು.


ಗೋ ರಾ ಶ್ರೀನಿವಾಸ...

ಮೊ:9845856139.

ಪ್ರತಿಕ್ರಿಯೆಗಳು

  • ನಿಮ್ಮ ಅಭಿಪ್ರಾಯ ತಿಳಿಸುವಲ್ಲಿ ನೀವು ಮೊದಲಿಗರಾಗಿ.

ನಿಮ್ಮ ಅಭಿಪ್ರಾಯಗಳನ್ನು ಬರೆಯಿರಿ/ತಿಳಿಸಿ.

Recent news in ramanagara »

ನಗರದಲ್ಲಿ ಒಂಟಿ ಮಹಿಳೆಯನ್ನು ಕೊಲೆ ಮಾಡಿ ಪರಾರಿಯಾಗಿದ್ದ ಆರೋಪಿ ಸೆರೆ ಮುಂದುವರಿದ ತನಿಖೆ
ನಗರದಲ್ಲಿ ಒಂಟಿ ಮಹಿಳೆಯನ್ನು ಕೊಲೆ ಮಾಡಿ ಪರಾರಿಯಾಗಿದ್ದ ಆರೋಪಿ ಸೆರೆ ಮುಂದುವರಿದ ತನಿಖೆ

ಚನ್ನಪಟ್ಟಣ: ಗಂಡನ ಸೋದರಳಿಯನೇ ಕಾಮಾಂಧನಾಗಿ ಮಹಿಳೆಯನ್ನು ಕೊಲೆಗೈದು ಪರಾರಿಯಾಗಿದ್ದ. ಆತನನ್ನು ಬಂಧಿಸಿ ವಿಚಾರಣೆ ನಡೆಸಿದಾಗ ಆತ ತಾನೇ ಕೊಲೆ ಮಾಡ

ಹನುಮಾಪುರದೊಡ್ಡಿ ಗ್ರಾಮದಲ್ಲಿನ ಸ್ಮಶಾನ ಖಾಸಗಿ ವ್ಯಕ್ತಿ ಪಾಲು. ತಾಲ್ಲೂಕು ಕಛೇರಿ ಮುಂದೆ ಶವವಿಟ್ಟು ಪ್ರತಿಭಟನೆ
ಹನುಮಾಪುರದೊಡ್ಡಿ ಗ್ರಾಮದಲ್ಲಿನ ಸ್ಮಶಾನ ಖಾಸಗಿ ವ್ಯಕ್ತಿ ಪಾಲು. ತಾಲ್ಲೂಕು ಕಛೇರಿ ಮುಂದೆ ಶವವಿಟ್ಟು ಪ್ರತಿಭಟನೆ

ಚನ್ನಪಟ್ಟಣ.ಆ.೦೯: ತಾಲೂಕಿನ ಹನುಮಾಪುರದದೊಡ್ಡಿ ಗ್ರಾಮದಲ್ಲಿ  ಸ್ಮಶಾನ ಜಾಗವನ್ನು ಖಾಸಗಿ ವ್ಯಕ್ತಿಯೊಬ್ಬರು ಆಕ್ರಮಿಸಿಕೊಂಡು, ಶವಸಂಸ್ಕಾರಕ

ರಾಮನಗರ ಜಿಲ್ಲೆ: ಸತತ ಮಳೆಯಿಂದ 178 ಮನೆಗಳಿಗೆ ಹಾನಿ, 1.14 ಕೋಟಿ ರೂ. ಪರಿಹಾರ ವಿತರಣೆ
ರಾಮನಗರ ಜಿಲ್ಲೆ: ಸತತ ಮಳೆಯಿಂದ 178 ಮನೆಗಳಿಗೆ ಹಾನಿ, 1.14 ಕೋಟಿ ರೂ. ಪರಿಹಾರ ವಿತರಣೆ

ರಾಮನಗರ: ಸತತ ಮಳೆಯಿಂದ ಜಿಲ್ಲೆಯಲ್ಲಿ 178 ಮನೆಗಳಿಗೆ ಹಾನಿಯಾಗಿದ್ದು, ಇದಕ್ಕೆ ಸಂಬಂಧಿಸಿದಂತೆ 1.14 ಕೋಟಿ ರೂಪಾಯಿ ಪರಿಹಾರ ವಿತರಿಸಲಾಗಿದೆ. ಜೊ

ರಾಮನಗರ ಜಿಲ್ಲೆ: ನೆರೆಪೀಡಿತ ಪ್ರದೇಶಗಳಿಗೆ ಉಸ್ತುವಾರಿ ಸಚಿವರ ಭೇಟಿ
ರಾಮನಗರ ಜಿಲ್ಲೆ: ನೆರೆಪೀಡಿತ ಪ್ರದೇಶಗಳಿಗೆ ಉಸ್ತುವಾರಿ ಸಚಿವರ ಭೇಟಿ

ರಾಮನಗರ: ಸತತ ಮತ್ತು ಮೇರೆ ಮೀರಿದ ಮಳೆಯಿಂದಾಗಿ ಕಂಗೆಟ್ಟಿರುವ ಜಿಲ್ಲೆಯ ನಾನಾ ಪ್ರದೇಶಗಳಿಗೆ ಉಸ್ತುವಾರಿ ಸಚಿವ ಡಾ.ಸಿ ಎನ್ ಅಶ್ವತ್ಥ ನಾರಾಯಣ ಅವರು ಸೋಮವಾರ ಭೇಟಿ ನೀಡಿದರು.


ಗೋಡೆ ಕುಸಿದು ಇಬ್ಬರು ಮಕ್ಕಳು ಸಾವು
ಗೋಡೆ ಕುಸಿದು ಇಬ್ಬರು ಮಕ್ಕಳು ಸಾವು

ಮಾಗಡಿ: ದನದ ಕೊಟ್ಟಿಗೆಯ ಗೋಡೆ ಕುಸಿದು ಇಬ್ಬರು ಮಕ್ಕಳು ದಾರುಣ ಸಾವನ್ನಪ್ಪಿರುವ ಘಟನೆ ತಾಲೂಕಿನ ಸೋಲೂರು ಗ್ರಾಮದಲ್ಲಿ ಜರುಗಿದೆ.

ಜಗದೀಪ್ ಧನಕರ್ ಭಾರತದ 14ನೇ ನೂತನ ಉಪರಾಷ್ಟ್ರಪತಿ
ಜಗದೀಪ್ ಧನಕರ್ ಭಾರತದ 14ನೇ ನೂತನ ಉಪರಾಷ್ಟ್ರಪತಿ

ಉಪರಾಷ್ಟ್ರಪತಿ ಚುನಾವಣೆಯಲ್ಲಿ ಎನ್.ಡಿ.ಎ. ಅಭ್ಯರ್ಥಿ ಜಗದೀಪ್ ಧನಕರ್ ಗೆಲುವು ಸಾಧಿಸಿದ್ದಾರೆ. ಈ ಮೂಲಕ ಯುಪಿಎ ಒಕ್ಕೂಟದ ಅಭ್ಯರ್ಥಿ ಕರ್ನಾಟಕದ ಮಾರ್ಗರೇಟ್ ಆಳ್ವ ಸೋಲನ್ನುಕಂಡಿದ್ದಾರೆ.

ಪಟ್ಲು ಗ್ರಾಮದಲ್ಲಿ ಕಾಣಿಸಿಕೊಂಡ ಹೆಬ್ಬಾವು ರಕ್ಷಿಸಿದ ಸ್ನೇಕ್ ನಾಗೇಶ್ ಮತ್ತು ಸಂತು
ಪಟ್ಲು ಗ್ರಾಮದಲ್ಲಿ ಕಾಣಿಸಿಕೊಂಡ ಹೆಬ್ಬಾವು ರಕ್ಷಿಸಿದ ಸ್ನೇಕ್ ನಾಗೇಶ್ ಮತ್ತು ಸಂತು

ಚನ್ನಪಟ್ಟಣ: ತಾಲೂಕಿನ ಪಟ್ಲು ಗ್ರಾಮದಲ್ಲಿ 10 ಅಡಿ ಉದ್ದದ ಹೆಬ್ಬಾವು ಕಾಣಿಸಿಕೊಂಡಿದ್ದು, ನಾಗೇಶ್ ಸಂತು ಅದನ್ನು ರಕ್ಷಿಸಿ  ಅರಣ್ಯಕ್ಕೆ ಬ

ಮಾಗಡಿ ತಾಲ್ಲೂಕು ಆರೋಗ್ಯಾಧಿಕಾರಿ ಡಾ. ಚಂದ್ರಶೇಖರಯ್ಯ ವಿರುದ್ಧ ಅಸಭ್ಯ ವರ್ತನೆ ಆರೋಪ
ಮಾಗಡಿ ತಾಲ್ಲೂಕು ಆರೋಗ್ಯಾಧಿಕಾರಿ ಡಾ. ಚಂದ್ರಶೇಖರಯ್ಯ ವಿರುದ್ಧ ಅಸಭ್ಯ ವರ್ತನೆ ಆರೋಪ

ರಾಮನಗರ ಮಾಗಡಿ: ಮಹಿಳಾ ಸಿಬ್ಬಂದಿ ಯೊಂದಿಗೆ ಅಸಭ್ಯವರ್ತನೆ ಹಾಗೂ ಏಕ ವಚನ ಪದ ಬಳಕೆ ಆರೋಪ ಮಾಗಡಿ ತಾಲೂಕು ಆರೋಗ್ಯಾಧಿಕಾರಿ ಡಾ.ಚಂದ್ರಶೇಖರಯ್ಯ ವಿ

ತಾಲ್ಲೂಕಿನಲ್ಲಿ ನಿಲ್ಲದ ಮಳೆ: ಗ್ರಾಮಗಳಲ್ಲಿ ಹರಿದ ನೀರಿನ ಹೊಳೆ
ತಾಲ್ಲೂಕಿನಲ್ಲಿ ನಿಲ್ಲದ ಮಳೆ: ಗ್ರಾಮಗಳಲ್ಲಿ ಹರಿದ ನೀರಿನ ಹೊಳೆ

ಚನ್ನಪಟ್ಟಣ: ಕಳೆದ ಏಪ್ರಿಲ್ ತಿಂಗಳಿನಲ್ಲೇ ಮಳೆ ಆರಂಭವಾದರು ಜುಲೈ ಕೊನೆಯ ದಿನ ಮತ್ತು ಆಗಸ್ಟ್ ಮೊದಲ ವಾರದಲ್ಲಿ ಮಳೆಯ ಆರ್ಭಟ ಜೋರಾಗಿದೆ. ಕೆಲ ದಿ

Top Stories »  


Top ↑