Tel: 7676775624 | Mail: info@yellowandred.in

Language: EN KAN

    Follow us :


ತಾಲ್ಲೂಕಿನಲ್ಲಿ ನಿಲ್ಲದ ಮಳೆ: ಗ್ರಾಮಗಳಲ್ಲಿ ಹರಿದ ನೀರಿನ ಹೊಳೆ

Posted date: 05 Aug, 2022

Powered by:     Yellow and Red

ತಾಲ್ಲೂಕಿನಲ್ಲಿ ನಿಲ್ಲದ ಮಳೆ: ಗ್ರಾಮಗಳಲ್ಲಿ ಹರಿದ ನೀರಿನ ಹೊಳೆ

ಚನ್ನಪಟ್ಟಣ: ಕಳೆದ ಏಪ್ರಿಲ್ ತಿಂಗಳಿನಲ್ಲೇ ಮಳೆ ಆರಂಭವಾದರು ಜುಲೈ ಕೊನೆಯ ದಿನ ಮತ್ತು ಆಗಸ್ಟ್ ಮೊದಲ ವಾರದಲ್ಲಿ ಮಳೆಯ ಆರ್ಭಟ ಜೋರಾಗಿದೆ. ಕೆಲ ದಿನಗಳಿಂದ ತಾಲೂಕಿನಲ್ಲಿ ಸುರಿಯುತ್ತಿರುವ ಭಾರಿ ಮಳೆಯು ಸಾಕಷ್ಟು ಅವಾಂತರಗಳನ್ನು ಸೃಷ್ಟಿಸಿದೆ. ಕೆಲವು ಕಡೆ ಜನವಸತಿ ಪ್ರದೇಶಗಳಿಗೆ ನೀರು ನುಗ್ಗಿದ್ದರೆ, ಇನ್ನು ಕೆಲವು ಕಡೆ ಜಮೀನುಗಳಲ್ಲಿ ನೀರು ನಿಂತು ರೈತರ ಬೆಳೆಗಳನ್ನು ನಾಶಮಾಡಿದೆ.


ಕಳೆದ 20 ವರ್ಷಗಳಲ್ಲಿ ಎಂದೂ ಆಗದಂತ ದಾಖಲೆಯ ಮಳೆ ಈ ಬಾರಿ ಆಗಿದ್ದು, ಮುಂದಿನ ಐದು ವರ್ಷಗಳ ಕಾಲ ಏಪ್ರಿಲ್ ತಿಂಗಳಿಂದ ಆಗಸ್ಟ್ ವರೆಗೂ ನಿರಂತರ ಮಳೆಯಾಗಲಿದೆ ಎಂದು ಹವಾಮಾನ ಇಲಾಖೆ ಈಗಾಗಲೇ ಹೇಳಿತ್ತು. ಈ ಮಳೆಯಿಂದಾಗಿ ಕೆಲವು ಕಡೆ ಕೆರೆಕಟ್ಟೆಗಳು ತುಂಬಿ ಕೋಡಿ ಒಡೆದ ಪರಿಣಾಮ ರೈತರ ಜಮೀನು ಮತ್ತು ಮನೆಗಳಿಗೆ ನೀರು ನುಗ್ಗಿದ್ದು, ನೆರೆ ಭೀತಿ ಎದುರಾಗಿದೆ.


*ಧುಮ್ಮುಕ್ಕಿ ಹರಿಯುತ್ತಿರುವ ಕಣ್ವ:*

ತಾಲೂಕಿನ ಜೀವನಾಡಿಯಾದ ಕಣ್ವ ನದಿ ಭಾಗಶಃ ಭರ್ತಿಯಾಗಿದ್ದು, ಕಳೆದ ಎರಡು ದಿನಗಳಿಂದ ಕಣ್ವದಿಂದ 3,500 ಕ್ಯೂಸೆಕ್ಸ್ ನೀರು ಹೊರಬಿಡಲಾಗುತ್ತಿದೆ. ಇದರೊಂದಿಗೆ ಕೆಲ ಗ್ರಾಮಗಳಲ್ಲಿ ಕೆರೆಗಳ ಕೋಡಿ ಒಡೆದ ಪರಿಣಾಮ ಜಮೀನುಗಳಿಗೆ ನೀರು ನುಗ್ಗಿದೆ. ಈಗಾಗಲೇ ಮೈಲನಾಯ್ಕನಹಳ್ಳಿ, ಅಬ್ಬೂರು, ತೊರೆ ಹೊಸೂರು ಸೇರಿದಂತೆ ಕೆಲ ಗ್ರಾಮಗಳಲ್ಲಿ ತಗ್ಗು ಪ್ರದೇಶಕ್ಕೆ ಮಳೆ ನೀರು ನುಗ್ಗಿದ್ದು, ಕೆಲವೆಡೆ ಮನೆಗಳಿಗೆ ನೀರು ನುಗ್ಗಿ ಅವಾಂತರ ಸೃಷ್ಟಿಯಾಗಿದೆ.


ಕಣ್ವ ನದಿಯಿಂದ ಅಪಾರ ಪ್ರಮಾಣದ ನೀರನ್ನು ಹೊರಬಿಟ್ಟ ಪರಿಣಾಮ ನದಿಯ ನೀರು ತಾಲೂಕಿನ ಪ್ರಸಿದ್ದ ಧಾರ್ಮಿಕ ಕ್ಷೇತ್ರವಾದ ಅಬ್ಬೂರು ಗ್ರಾಮದ ಕುಂದಾಪುರ ವ್ಯಾಸರಾಜ ಮಠದ ಅಂಗಳಕ್ಕೆ  ನುಗ್ಗಿದೆ. ಮಾಧ್ವ ಸಂಪ್ರದಾಯದ ಪ್ರಸಿದ್ದ ಯತಿಗಳಾದ ಬ್ರಹ್ಮಣ್ಯ ತೀರ್ಥರ ವೃಂದಾವನ ಈ ಮಠದಲ್ಲಿ ಇದ್ದು, ಮಾಧ್ವ ಸಂಪ್ರದಾಯದವರ ಪವಿತ್ರ ಯಾತ್ರಾಕ್ಷೇತ್ರವಾಗಿದೆ. ಶ್ರೀಮಠದ ಆವರಣಕ್ಕೆ ನೀರು ನುಗ್ಗಿದ್ದ ಪರಿಣಾಮ ಸದ್ಯಕ್ಕೆ ಮಠಕ್ಕೆ ಭಕ್ತರ ಪ್ರವೇಶ ನಿಷೇಧಿಸಲಾಗಿದ್ದು, ಮಠದ ಶ್ರೀಗಳು ಮತ್ತು ಅರ್ಚಕರು ದೈನಂದಿನ ಪೂಜಾ ಕಾರ್ಯವನ್ನು ನೆರವೇರಿಸುತ್ತಿದ್ದಾರೆ.


*ಮಾಕಳಿ ರಸ್ತೆ ಬಂದ್:*

ಅಬ್ಬೂರು ಗ್ರಾಮದ ವ್ಯಾಸರಾಜ ಮಠದ ಸಮೀಪ ರಸ್ತೆಯಲ್ಲಿ 2 ಅಡಿಗಳಷ್ಟು ನೀರು ನಿಂತಿರುವ ಪರಿಣಾಮ ಅಬ್ಬೂರು ಮೂಲಕ ಮಾಕಳಿ ಮತ್ತು ನಾಗವಾರಕ್ಕೆ ತೆರಳುವ ಸಂಪರ್ಕ ರಸ್ತೆ ಬಂದ್ ಆಗಿದ್ದು, ಈ ಭಾಗದ ಜನತೆ  ಬದಲಿ ರಸ್ತೆಯಲ್ಲಿ ತಿರುಗಾಡುವಂತಾಗಿದೆ.


*ಮನೆಗಳಿಗೆ ನುಗ್ಗಿದ ನೀರು:*

ತಾಲೂಕಿನ ಕೋಲೂರು ಗಾಂಧಿ ಗ್ರಾಮದಲ್ಲಿ ಸುಮಾರು 10ಕ್ಕೂ ಹೆಚ್ಚು ಮನೆಗಳಿಗೆ ನೀರು ನುಗ್ಗಿ ಸಮಸ್ಯೆಯಾಗಿದೆ. ನೀರು ನುಗ್ಗಿದ ಪರಿಣಾಮ ಜನ ಸಾಕಷ್ಟು ತೊಂದರೆ ಅನುಭವಿಸಿದ್ದಾರೆ. ತಾಲೂಕು ಆಡಳಿತ ಗಮನಹರಿಸಿ ಈ ಸಮಸ್ಯೆಗೆ ಪರಿಹಾರ ಕಲ್ಪಿಸಬೇಕು ಎಂದು ಗ್ರಾಮಸ್ಥರು ತಾಲೂಕು ಆಡಳಿತವನ್ನು ಆಗ್ರಹಿಸಿದ್ದಾರೆ. ಅಧಿಕಾರಿಗಳು ಪರಿಶೀಲನೆ ನಡೆಸಿದ್ದಾರೆ.


*ಅಧಿಕಾರಿಗಳ ಭೇಟಿ:*

ಕಳೆದ ಎರಡು ದಿನಗಳಿಂದ ತಾಲೂಕಿನಲ್ಲಿ ಭಾರಿ ಮಳೇ ಸುರಿದಿದ್ದು, ಮಳೆಯಿಂದ ಸಮಸ್ಯೆ ಉಂಟಾದ ಗ್ರಾಮಗಳಿಗೆ ವಿಧಾನ ಪರಿಷತ್ ಸದಸ್ಯ ಸಿ ಪಿ ಯೋಗೇಶ್ವರ್, ಶಾಸಕ ಹೆಚ್ ಡಿ ಕುಮಾರಸ್ವಾಮಿ, ತಹಸೀಲ್ದಾರ್ ಸುದರ್ಶನ್ ಮತ್ತು ನೀರಾವರಿ ಇಲಾಖೆ ಅಧಿಕಾರಿಗಳು ಭೇಟಿನೀಡಿ ಪರಿಶೀಲನೆ ನಡೆಸಿದ್ದಾರೆ. ರಾಜಕಾಲುವೆಗಳು ಮತ್ತು ಕಣ್ವ ನದಿ ಪಾತ್ರದಲ್ಲಿ ನೀರಿನ ಹರಿವನ್ನು ವೀಕ್ಷಿಸಿದ ಅಧಿಕಾರಿಗಳು ಜನವಸತಿ ಪ್ರದೇಶಕ್ಕೆ ನೀರು ನುಗ್ಗುವುದನ್ನು ತಪ್ಪಿಸಲು ಅಗತ್ಯ ಕ್ರಮಗಳನ್ನು ಕೈಗೊಳ್ಳಲು ಮುಂದಾಗಿದ್ದಾರೆ.


*ಮೈಲನಾಯ್ಕನಹಳ್ಳಿಯಲ್ಲಿ ನಿಲ್ಲದ ಪರಿಹಾರ*


*ಕಣ್ವ ನದಿಯಲ್ಲಿ ನೀರು ಹರಿದು ಹೋಗಲು ಸ್ಥಳಾವಕಾಶ ಇಲ್ಲದೆ ಹೆಚ್ಚುವರಿ ನೀರು ಮೈಲನಾಯ್ಕನಹಳ್ಳಿ ಗ್ರಾಮಕ್ಕೆ ನುಗ್ಗಿದ್ದು, ಮೈಲನಾಯ್ಕನಹಳ್ಳಿ ಗ್ರಾಮದ ಹಲವಾರು ಮನೆಗಳು ಜಲಾವೃತಗೊಂಡಿದೆ. ಇನ್ನು ಬೇವೂರು ಮಾರ್ಗದ ರಸ್ತೆಯಲ್ಲಿ ಸಹ ಸಂಚಾರಕ್ಕೆ ಸಮಸ್ಯೆ ಎದುರಾಗಿದೆ.* 

*ಕಣ್ವ ಜಲಾಶಯದಿಂದ ಸದ್ಯಕ್ಕೆ 3,500 ಕ್ಯೂಸೆಕ್ಸ್ ನೀರನ್ನು ನದಿಗೆ ಬಿಡಲಾಗುತ್ತಿದೆ. ಇದರೊಂದಿಗೆ ಬೇಬಿ ಸೈಫನ್‍ನಿಂದಲೂ 1,500 ಕ್ಯೂಸೆಕ್ಸ್ ನೀರು ಹರಿಯುತ್ತಿದ್ದು, ಇಷ್ಟು ನೀರು ಹರಿಯುತ್ತಿರುವ ಕಾರಣ ನದಿಯಲ್ಲಿ ಜಾಗ ಇಲ್ಲದೆ ಗ್ರಾಮಕ್ಕೆ ನೀರು ನುಗ್ಗಿದೆ. ಜಲಾಶಯದಿಂದ ಹೆಚ್ಚುವರಿ ನೀರನ್ನು ಹೊರ ಬಿಟ್ಟರೆ ಮತ್ತಷ್ಟು ಸಮಸ್ಯೆ ಎದುರಾಗುವ ಸಾಧ್ಯತೆಯಿದೆ.*


ಗೋ ರಾ ಶ್ರೀನಿವಾಸ...

ಮೊ:9845856139.

ಪ್ರತಿಕ್ರಿಯೆಗಳು

  • ನಿಮ್ಮ ಅಭಿಪ್ರಾಯ ತಿಳಿಸುವಲ್ಲಿ ನೀವು ಮೊದಲಿಗರಾಗಿ.

ನಿಮ್ಮ ಅಭಿಪ್ರಾಯಗಳನ್ನು ಬರೆಯಿರಿ/ತಿಳಿಸಿ.

Recent news in ramanagara »

ನಗರದಲ್ಲಿ ಒಂಟಿ ಮಹಿಳೆಯನ್ನು ಕೊಲೆ ಮಾಡಿ ಪರಾರಿಯಾಗಿದ್ದ ಆರೋಪಿ ಸೆರೆ ಮುಂದುವರಿದ ತನಿಖೆ
ನಗರದಲ್ಲಿ ಒಂಟಿ ಮಹಿಳೆಯನ್ನು ಕೊಲೆ ಮಾಡಿ ಪರಾರಿಯಾಗಿದ್ದ ಆರೋಪಿ ಸೆರೆ ಮುಂದುವರಿದ ತನಿಖೆ

ಚನ್ನಪಟ್ಟಣ: ಗಂಡನ ಸೋದರಳಿಯನೇ ಕಾಮಾಂಧನಾಗಿ ಮಹಿಳೆಯನ್ನು ಕೊಲೆಗೈದು ಪರಾರಿಯಾಗಿದ್ದ. ಆತನನ್ನು ಬಂಧಿಸಿ ವಿಚಾರಣೆ ನಡೆಸಿದಾಗ ಆತ ತಾನೇ ಕೊಲೆ ಮಾಡ

ಹನುಮಾಪುರದೊಡ್ಡಿ ಗ್ರಾಮದಲ್ಲಿನ ಸ್ಮಶಾನ ಖಾಸಗಿ ವ್ಯಕ್ತಿ ಪಾಲು. ತಾಲ್ಲೂಕು ಕಛೇರಿ ಮುಂದೆ ಶವವಿಟ್ಟು ಪ್ರತಿಭಟನೆ
ಹನುಮಾಪುರದೊಡ್ಡಿ ಗ್ರಾಮದಲ್ಲಿನ ಸ್ಮಶಾನ ಖಾಸಗಿ ವ್ಯಕ್ತಿ ಪಾಲು. ತಾಲ್ಲೂಕು ಕಛೇರಿ ಮುಂದೆ ಶವವಿಟ್ಟು ಪ್ರತಿಭಟನೆ

ಚನ್ನಪಟ್ಟಣ.ಆ.೦೯: ತಾಲೂಕಿನ ಹನುಮಾಪುರದದೊಡ್ಡಿ ಗ್ರಾಮದಲ್ಲಿ  ಸ್ಮಶಾನ ಜಾಗವನ್ನು ಖಾಸಗಿ ವ್ಯಕ್ತಿಯೊಬ್ಬರು ಆಕ್ರಮಿಸಿಕೊಂಡು, ಶವಸಂಸ್ಕಾರಕ

ರಾಮನಗರ ಜಿಲ್ಲೆ: ಸತತ ಮಳೆಯಿಂದ 178 ಮನೆಗಳಿಗೆ ಹಾನಿ, 1.14 ಕೋಟಿ ರೂ. ಪರಿಹಾರ ವಿತರಣೆ
ರಾಮನಗರ ಜಿಲ್ಲೆ: ಸತತ ಮಳೆಯಿಂದ 178 ಮನೆಗಳಿಗೆ ಹಾನಿ, 1.14 ಕೋಟಿ ರೂ. ಪರಿಹಾರ ವಿತರಣೆ

ರಾಮನಗರ: ಸತತ ಮಳೆಯಿಂದ ಜಿಲ್ಲೆಯಲ್ಲಿ 178 ಮನೆಗಳಿಗೆ ಹಾನಿಯಾಗಿದ್ದು, ಇದಕ್ಕೆ ಸಂಬಂಧಿಸಿದಂತೆ 1.14 ಕೋಟಿ ರೂಪಾಯಿ ಪರಿಹಾರ ವಿತರಿಸಲಾಗಿದೆ. ಜೊ

ರಾಮನಗರ ಜಿಲ್ಲೆ: ನೆರೆಪೀಡಿತ ಪ್ರದೇಶಗಳಿಗೆ ಉಸ್ತುವಾರಿ ಸಚಿವರ ಭೇಟಿ
ರಾಮನಗರ ಜಿಲ್ಲೆ: ನೆರೆಪೀಡಿತ ಪ್ರದೇಶಗಳಿಗೆ ಉಸ್ತುವಾರಿ ಸಚಿವರ ಭೇಟಿ

ರಾಮನಗರ: ಸತತ ಮತ್ತು ಮೇರೆ ಮೀರಿದ ಮಳೆಯಿಂದಾಗಿ ಕಂಗೆಟ್ಟಿರುವ ಜಿಲ್ಲೆಯ ನಾನಾ ಪ್ರದೇಶಗಳಿಗೆ ಉಸ್ತುವಾರಿ ಸಚಿವ ಡಾ.ಸಿ ಎನ್ ಅಶ್ವತ್ಥ ನಾರಾಯಣ ಅವರು ಸೋಮವಾರ ಭೇಟಿ ನೀಡಿದರು.


ಗೋಡೆ ಕುಸಿದು ಇಬ್ಬರು ಮಕ್ಕಳು ಸಾವು
ಗೋಡೆ ಕುಸಿದು ಇಬ್ಬರು ಮಕ್ಕಳು ಸಾವು

ಮಾಗಡಿ: ದನದ ಕೊಟ್ಟಿಗೆಯ ಗೋಡೆ ಕುಸಿದು ಇಬ್ಬರು ಮಕ್ಕಳು ದಾರುಣ ಸಾವನ್ನಪ್ಪಿರುವ ಘಟನೆ ತಾಲೂಕಿನ ಸೋಲೂರು ಗ್ರಾಮದಲ್ಲಿ ಜರುಗಿದೆ.

ಜಗದೀಪ್ ಧನಕರ್ ಭಾರತದ 14ನೇ ನೂತನ ಉಪರಾಷ್ಟ್ರಪತಿ
ಜಗದೀಪ್ ಧನಕರ್ ಭಾರತದ 14ನೇ ನೂತನ ಉಪರಾಷ್ಟ್ರಪತಿ

ಉಪರಾಷ್ಟ್ರಪತಿ ಚುನಾವಣೆಯಲ್ಲಿ ಎನ್.ಡಿ.ಎ. ಅಭ್ಯರ್ಥಿ ಜಗದೀಪ್ ಧನಕರ್ ಗೆಲುವು ಸಾಧಿಸಿದ್ದಾರೆ. ಈ ಮೂಲಕ ಯುಪಿಎ ಒಕ್ಕೂಟದ ಅಭ್ಯರ್ಥಿ ಕರ್ನಾಟಕದ ಮಾರ್ಗರೇಟ್ ಆಳ್ವ ಸೋಲನ್ನುಕಂಡಿದ್ದಾರೆ.

ಪಟ್ಲು ಗ್ರಾಮದಲ್ಲಿ ಕಾಣಿಸಿಕೊಂಡ ಹೆಬ್ಬಾವು ರಕ್ಷಿಸಿದ ಸ್ನೇಕ್ ನಾಗೇಶ್ ಮತ್ತು ಸಂತು
ಪಟ್ಲು ಗ್ರಾಮದಲ್ಲಿ ಕಾಣಿಸಿಕೊಂಡ ಹೆಬ್ಬಾವು ರಕ್ಷಿಸಿದ ಸ್ನೇಕ್ ನಾಗೇಶ್ ಮತ್ತು ಸಂತು

ಚನ್ನಪಟ್ಟಣ: ತಾಲೂಕಿನ ಪಟ್ಲು ಗ್ರಾಮದಲ್ಲಿ 10 ಅಡಿ ಉದ್ದದ ಹೆಬ್ಬಾವು ಕಾಣಿಸಿಕೊಂಡಿದ್ದು, ನಾಗೇಶ್ ಸಂತು ಅದನ್ನು ರಕ್ಷಿಸಿ  ಅರಣ್ಯಕ್ಕೆ ಬ

ಮಾಗಡಿ ತಾಲ್ಲೂಕು ಆರೋಗ್ಯಾಧಿಕಾರಿ ಡಾ. ಚಂದ್ರಶೇಖರಯ್ಯ ವಿರುದ್ಧ ಅಸಭ್ಯ ವರ್ತನೆ ಆರೋಪ
ಮಾಗಡಿ ತಾಲ್ಲೂಕು ಆರೋಗ್ಯಾಧಿಕಾರಿ ಡಾ. ಚಂದ್ರಶೇಖರಯ್ಯ ವಿರುದ್ಧ ಅಸಭ್ಯ ವರ್ತನೆ ಆರೋಪ

ರಾಮನಗರ ಮಾಗಡಿ: ಮಹಿಳಾ ಸಿಬ್ಬಂದಿ ಯೊಂದಿಗೆ ಅಸಭ್ಯವರ್ತನೆ ಹಾಗೂ ಏಕ ವಚನ ಪದ ಬಳಕೆ ಆರೋಪ ಮಾಗಡಿ ತಾಲೂಕು ಆರೋಗ್ಯಾಧಿಕಾರಿ ಡಾ.ಚಂದ್ರಶೇಖರಯ್ಯ ವಿ

ತಾಲ್ಲೂಕಿನಲ್ಲಿ ನಿಲ್ಲದ ಮಳೆ: ಗ್ರಾಮಗಳಲ್ಲಿ ಹರಿದ ನೀರಿನ ಹೊಳೆ
ತಾಲ್ಲೂಕಿನಲ್ಲಿ ನಿಲ್ಲದ ಮಳೆ: ಗ್ರಾಮಗಳಲ್ಲಿ ಹರಿದ ನೀರಿನ ಹೊಳೆ

ಚನ್ನಪಟ್ಟಣ: ಕಳೆದ ಏಪ್ರಿಲ್ ತಿಂಗಳಿನಲ್ಲೇ ಮಳೆ ಆರಂಭವಾದರು ಜುಲೈ ಕೊನೆಯ ದಿನ ಮತ್ತು ಆಗಸ್ಟ್ ಮೊದಲ ವಾರದಲ್ಲಿ ಮಳೆಯ ಆರ್ಭಟ ಜೋರಾಗಿದೆ. ಕೆಲ ದಿ

Top Stories »  


Top ↑