ಮಾಗಡಿ ತಾಲ್ಲೂಕು ಆರೋಗ್ಯಾಧಿಕಾರಿ ಡಾ. ಚಂದ್ರಶೇಖರಯ್ಯ ವಿರುದ್ಧ ಅಸಭ್ಯ ವರ್ತನೆ ಆರೋಪ

Magadi: Magadi Taluk Health Officer Dr Chandrasekharaiah Alleged of indecent behavior.
ರಾಮನಗರ ಮಾಗಡಿ: ಮಹಿಳಾ ಸಿಬ್ಬಂದಿ ಯೊಂದಿಗೆ ಅಸಭ್ಯವರ್ತನೆ ಹಾಗೂ ಏಕ ವಚನ ಪದ ಬಳಕೆ ಆರೋಪ ಮಾಗಡಿ ತಾಲೂಕು ಆರೋಗ್ಯಾಧಿಕಾರಿ ಡಾ.ಚಂದ್ರಶೇಖರಯ್ಯ ವಿರುದ್ಧ ಜಿಲ್ಲಾ ಆರೋಗ್ಯಾಧಿಕಾರಿಗೆ ದೂರು ನೀಡಲಾಗಿದೆ.
ಜಿಲ್ಲಾ ಮಾನಸಿಕ ಆರೋಗ್ಯ ವಿಭಾಗದಲ್ಲಿ ಮನೋ ವೈದ್ಯಕೀಯ ಕಾರ್ಯಕರ್ತೆಯಾಗಿ ಸೇವೆ ಸಲ್ಲಿಸುತ್ತಿರುವ ಪದ್ಮ ರೇಖಾ. ಎಸ್ ಎಂಬುವವರು ಜಿಲ್ಲಾ ಆರೋಗ್ಯಾಧಿಕಾರಿಗೆ ಮಾಗಡಿ ತಾಲ್ಲೂಕು ಆರೋಗ್ಯಾಧಿಕಾರಿ ಡಾ.ಚಂದ್ರಶೇಖರಯ್ಯ ವಿರುದ್ಧ ಕಳೆದ ತಿಂಗಳ 19ರಂದು ದೂರು ನೀಡಿದ್ಧಾರೆ. ಆದರೆ, ಈ ತನಕ ಮಾತ್ರ ಯಾವುದೇ ಪ್ರಯೋಜನವಾಗಿಲ್ಲ ಎಂದು ಅವರು ದೂರಿದ್ದಾರೆ.
ಡಾ.ಚಂದ್ರಶೇಖರಯ್ಯ ಅವರ ವರ್ತನೆ ಅತೀರೇಕದಿಂದ ಕೂಡಿದೆ. ಇಲಾಖೆಯ ಮಹಿಳಾ ಸಿಬ್ಬಂದಿಯನ್ನು ಏಕ ವಚನದಲ್ಲಿ ಸಂಬೋಧಿಸುತ್ತಿದ್ದಾರೆ. ಅತೀರೇಕದಿಂದ ವರ್ತಿಸುತ್ತಿದ್ದಾರೆ. ಸಾರ್ವಜನಿಕವಾಗಿ ಅವಮಾನಿಸುವ ಕೆಲಸ ಮಾಡುತ್ತಿದ್ದಾರೆ. ಕಾರ್ಯಕ್ರಮಕ್ಕೆ 15 ನಿಮಿಷ ತಡವಾಗಿ ಆಗಮಿಸಿದ್ದಕ್ಕೆ ಎಲ್ಲರೆದುರು ಅವಾಚ್ಯ ಶಬ್ದಗಳಿಂದ ನಿಂದಿಸಿದ್ದಾರೆ ಇದರಿಂದ ಮಾನಸಿಕ ಆಘಾತ ಉಂಟಾಗಿದೆ ಎಂದು ಎಸ್. ಪದ್ಮರೇಖಾ ಆರೋಪಿಸಿದ್ಧಾರೆ.
ಡಾ. ಚಂದ್ರಶೇಖರಯ್ಯ
ಮಹಿಳಾ ಸಿಬ್ಬಂದಿಯನ್ನು ಏಕ ವಚನದಲ್ಲಿ ಮಾತನಾಡಿಸುವುದು, ಹೋಗೇ ಬಾರೇ ಎಂದು ಸಂಬೋಧಿಸುವುದು. ನಿನ್ನನ್ನು ಕೆಲಸದಿಂದ ಕಿತ್ತುಹಾಕುತ್ತೇನೆ ಎಂದು ಹೀಯಾಳಿಸುವುದು, ಮಾನಸಿಕ ಹಿಂಸೆ ನೀಡುವುದು ಇವರ ಚಾಳಿಯಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಚಂದ್ರಶೇಖರ್ ಅವರ ವಿರುದ್ಧ ಜಿಲ್ಲಾ ಆರೋಗ್ಯಾಧಿಕಾರಿಗೆ ಕಳೆದ ತಿಂಗಳೇ ದೂರು ನೀಡಿದ್ಧಾರೆ. ಆದರೂ ಯಾವುದೇ ಪ್ರಯೋಜನವಾಗಿಲ್ಲ. ಇಲಾಖೆಯಲ್ಲಿ ಸಿಬ್ಬಂದಿಯು ಇಲಾಖೆಯಲ್ಲಿ ಕೆಲಸ ಮಾಡುತ್ತಿದ್ದಾರೆ ಎಂದರೆ ಹುದ್ದೆಗೆ ತಕ್ಕ ವಿದ್ಯಾಭ್ಯಾಸ ಮತ್ತು ಕೌಶಲ್ಯವನ್ನು ಪಡೆದುಕೊಂಡಿರುತ್ತಾರೆ, ಹಾಗೂ ಸಮಾಜದಲ್ಲಿ ಅವರದೇ ಆದ ಸ್ಥಾನಮಾನ ಹೊಂದಿರುತ್ತಾರೆ. ಇಂತಹ ಅಧೀನ ಸಿಬ್ಬಂದಿಗಳಿಗೆ ನಿಂದಿಸುವುದು ಅವಮಾನ ಮಾಡುವುದು ಒಬ್ಬ ಅಧಿಕಾರಿಗೆ ಗೌರವ ತಂದುಕೊಡುವ ವರ್ತನೆಯಲ್ಲ. ಅದರಲ್ಲೂ ಮಹಿಳಾ ಸಿಬ್ಬಂದಿಗಳು ಉದ್ಯೋಗದ ಸ್ಥಳದಲ್ಲಿ ಘನತೆಯಿಂದ ಕೆಲಸ ನಿರ್ವಹಿಸುವ ಎಲ್ಲ ಹಕ್ಕನ್ನು ಹೊಂದಿರುತ್ತಾಳೆ. ಸುರಕ್ಷಿತ ಔದ್ಯೋಗಿಕ ವಾತಾವರಣ ನಿರ್ಮಿಸಿಕೊಡಬೇಕಾದ ಅಧಿಕಾರಿಗಳೇ ಇಂತಹ ದುರ್ವರ್ತನೆ ತೋರಿದರೆ ಬೇಲಿಯೇ ಎದ್ದು ಹೊಲ ಮೇಯ್ದಂತೆ. ಇಂತಹ ಘಟನೆಗಳು ನಡೆದಾಗ ಮಹಿಳೆಯರು ಧೈರ್ಯವಾಗಿ ಎದುರಿಸಬೇಕು ಎಂದು ಹೇಳುವ ಜಿಲ್ಲಾ ಮಟ್ಟದ ಅಧಿಕಾರಿಗಳೇ ಏನೂ ಕ್ರಮ ಜರುಗಿಸದಿರುವುದು ಪ್ರಶ್ನೆ ಮಾಡುವಂತಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
*ಆತ್ಮಹತ್ಯೆಗೆ ಯತ್ನ:*
ಈ ಹಿಂದೆ ಚಂದ್ರಶೇಖರಯ್ಯ ಅವರ ಮಾನಸಿಕ ಕಿರುಕುಳಕ್ಕೆ ಬೇಸತ್ತಿದ್ದ ಮಾಗಡಿ ತಿಪ್ಪಸಂದ್ರ ಪ್ರಾಥಮಿಕ ಆರೋಗ್ಯ ಕೇಂದ್ರದ ಶುಶ್ರೂಷಕಿ ಯೊಬ್ಬರು ಆತ್ಮಹತ್ಯೆಗೆ ಯತ್ನಿಸಿದ್ದ ಘಟನೆಯು ಜರುಗಿತ್ತು. ಆಗಲೂ ಅಧಿಕಾರಿ ವಿರುದ್ಧ ಯಾವುದೇ ಕ್ರಮ ಕೈಗೊಂಡಿಲ್ಲ.
ಟಿಎಚ್ಒ ಅವರು ಉದ್ಯೋಗದಲ್ಲಿದ್ದುಕೊಂಡೇ ಸರ್ಕಾರೀ ಹಣದಿಂದ ಎಂಡಿ ಇನ್ ಜನರಲ್ ಮೆಡಿಸನ್ ವ್ಯಾಸಂಗ ಮಾಡಿದ್ದಾರೆ. ಆದರೆ, ಆಡಳಿತಾತ್ಮಕ ಕರ್ತವ್ಯ ನಿರ್ವಹಿಸುತ್ತಿದ್ದಾರೆ. ಫಿಜಿಶಿಯನ್ ಸೇವೆಯು ತಾಲೂಕು ಮಟ್ಟದ ಸಾರ್ವಜನಿಕ ಆಸ್ಪತ್ರೆಯಲ್ಲಿ ಅತ್ಯಗತ್ಯವಾದ ವೈದ್ಯಕೀಯ ಸೇವೆಯಾಗಿದ್ದು ಇಂತಹ ತಜ್ಞರಾದ ಇವರು ಆಡಳಿತಾತ್ಮಕ ಸೇವೆಯ ಬದಲಿಗೆ ಸಾರ್ವಜನಿಕರಿಗೆ ಸೇವೆ ನೀಡಬೇಕೆಂದು ಸಾರ್ವಜನಿಕರು ಆಗ್ರಹಿಸಿದ್ದಾರೆ.
ಗೋ ರಾ ಶ್ರೀನಿವಾಸ...
ಮೊ:9845856139.
Recent news in ramanagara »

ನಗರದಲ್ಲಿ ಒಂಟಿ ಮಹಿಳೆಯನ್ನು ಕೊಲೆ ಮಾಡಿ ಪರಾರಿಯಾಗಿದ್ದ ಆರೋಪಿ ಸೆರೆ ಮುಂದುವರಿದ ತನಿಖೆ
ಚನ್ನಪಟ್ಟಣ: ಗಂಡನ ಸೋದರಳಿಯನೇ ಕಾಮಾಂಧನಾಗಿ ಮಹಿಳೆಯನ್ನು ಕೊಲೆಗೈದು ಪರಾರಿಯಾಗಿದ್ದ. ಆತನನ್ನು ಬಂಧಿಸಿ ವಿಚಾರಣೆ ನಡೆಸಿದಾಗ ಆತ ತಾನೇ ಕೊಲೆ ಮಾಡ

ಹನುಮಾಪುರದೊಡ್ಡಿ ಗ್ರಾಮದಲ್ಲಿನ ಸ್ಮಶಾನ ಖಾಸಗಿ ವ್ಯಕ್ತಿ ಪಾಲು. ತಾಲ್ಲೂಕು ಕಛೇರಿ ಮುಂದೆ ಶವವಿಟ್ಟು ಪ್ರತಿಭಟನೆ
ಚನ್ನಪಟ್ಟಣ.ಆ.೦೯: ತಾಲೂಕಿನ ಹನುಮಾಪುರದದೊಡ್ಡಿ ಗ್ರಾಮದಲ್ಲಿ ಸ್ಮಶಾನ ಜಾಗವನ್ನು ಖಾಸಗಿ ವ್ಯಕ್ತಿಯೊಬ್ಬರು ಆಕ್ರಮಿಸಿಕೊಂಡು, ಶವಸಂಸ್ಕಾರಕ

ರಾಮನಗರ ಜಿಲ್ಲೆ: ಸತತ ಮಳೆಯಿಂದ 178 ಮನೆಗಳಿಗೆ ಹಾನಿ, 1.14 ಕೋಟಿ ರೂ. ಪರಿಹಾರ ವಿತರಣೆ
ರಾಮನಗರ: ಸತತ ಮಳೆಯಿಂದ ಜಿಲ್ಲೆಯಲ್ಲಿ 178 ಮನೆಗಳಿಗೆ ಹಾನಿಯಾಗಿದ್ದು, ಇದಕ್ಕೆ ಸಂಬಂಧಿಸಿದಂತೆ 1.14 ಕೋಟಿ ರೂಪಾಯಿ ಪರಿಹಾರ ವಿತರಿಸಲಾಗಿದೆ. ಜೊ

ರಾಮನಗರ ಜಿಲ್ಲೆ: ನೆರೆಪೀಡಿತ ಪ್ರದೇಶಗಳಿಗೆ ಉಸ್ತುವಾರಿ ಸಚಿವರ ಭೇಟಿ
ರಾಮನಗರ: ಸತತ ಮತ್ತು ಮೇರೆ ಮೀರಿದ ಮಳೆಯಿಂದಾಗಿ ಕಂಗೆಟ್ಟಿರುವ ಜಿಲ್ಲೆಯ ನಾನಾ ಪ್ರದೇಶಗಳಿಗೆ ಉಸ್ತುವಾರಿ ಸಚಿವ ಡಾ.ಸಿ ಎನ್ ಅಶ್ವತ್ಥ ನಾರಾಯಣ ಅವರು ಸೋಮವಾರ ಭೇಟಿ ನೀಡಿದರು.

ನಾವು ಸಮ್ಮಿಶ್ರ ಸರ್ಕಾರದಲ್ಲಿ ಮುಖ್ಯಮಂತ್ರಿ ಸ್ಥಾನವನ್ನು ಜೆಡಿಎಸ್ಗೆ ಬಿಟ್ಟು ಕೊಟ್ಟಿದ್ದೆವು; ಅದನ್ನು ಉಳಿಸಿಕೊಂಡಿರಾ ಕುಮಾರಸ್ವಾಮಿ?: ಸಿದ್ದರಾಮಯ್ಯ
August 7, 2022: ಮೈಸೂರು: ಬೇರೆಯವರು ಹಚ್ಚಿದ ಬೆಂಕಿಯಲ್ಲಿ ಮೈಕೈ ಬಿಸಿ ಮಾಡಿಕೊಳ್ಳುವುದು ಜೆಡಿಎಸ್ ಪಕ್ಷ

ಗೋಡೆ ಕುಸಿದು ಇಬ್ಬರು ಮಕ್ಕಳು ಸಾವು
ಮಾಗಡಿ: ದನದ ಕೊಟ್ಟಿಗೆಯ ಗೋಡೆ ಕುಸಿದು ಇಬ್ಬರು ಮಕ್ಕಳು ದಾರುಣ ಸಾವನ್ನಪ್ಪಿರುವ ಘಟನೆ ತಾಲೂಕಿನ ಸೋಲೂರು ಗ್ರಾಮದಲ್ಲಿ ಜರುಗಿದೆ.

ಜಗದೀಪ್ ಧನಕರ್ ಭಾರತದ 14ನೇ ನೂತನ ಉಪರಾಷ್ಟ್ರಪತಿ
ಉಪರಾಷ್ಟ್ರಪತಿ ಚುನಾವಣೆಯಲ್ಲಿ ಎನ್.ಡಿ.ಎ. ಅಭ್ಯರ್ಥಿ ಜಗದೀಪ್ ಧನಕರ್ ಗೆಲುವು ಸಾಧಿಸಿದ್ದಾರೆ. ಈ ಮೂಲಕ ಯುಪಿಎ ಒಕ್ಕೂಟದ ಅಭ್ಯರ್ಥಿ ಕರ್ನಾಟಕದ ಮಾರ್ಗರೇಟ್ ಆಳ್ವ ಸೋಲನ್ನುಕಂಡಿದ್ದಾರೆ.

ಪಟ್ಲು ಗ್ರಾಮದಲ್ಲಿ ಕಾಣಿಸಿಕೊಂಡ ಹೆಬ್ಬಾವು ರಕ್ಷಿಸಿದ ಸ್ನೇಕ್ ನಾಗೇಶ್ ಮತ್ತು ಸಂತು
ಚನ್ನಪಟ್ಟಣ: ತಾಲೂಕಿನ ಪಟ್ಲು ಗ್ರಾಮದಲ್ಲಿ 10 ಅಡಿ ಉದ್ದದ ಹೆಬ್ಬಾವು ಕಾಣಿಸಿಕೊಂಡಿದ್ದು, ನಾಗೇಶ್ ಸಂತು ಅದನ್ನು ರಕ್ಷಿಸಿ ಅರಣ್ಯಕ್ಕೆ ಬ

ಮಾಗಡಿ ತಾಲ್ಲೂಕು ಆರೋಗ್ಯಾಧಿಕಾರಿ ಡಾ. ಚಂದ್ರಶೇಖರಯ್ಯ ವಿರುದ್ಧ ಅಸಭ್ಯ ವರ್ತನೆ ಆರೋಪ
ರಾಮನಗರ ಮಾಗಡಿ: ಮಹಿಳಾ ಸಿಬ್ಬಂದಿ ಯೊಂದಿಗೆ ಅಸಭ್ಯವರ್ತನೆ ಹಾಗೂ ಏಕ ವಚನ ಪದ ಬಳಕೆ ಆರೋಪ ಮಾಗಡಿ ತಾಲೂಕು ಆರೋಗ್ಯಾಧಿಕಾರಿ ಡಾ.ಚಂದ್ರಶೇಖರಯ್ಯ ವಿ

ತಾಲ್ಲೂಕಿನಲ್ಲಿ ನಿಲ್ಲದ ಮಳೆ: ಗ್ರಾಮಗಳಲ್ಲಿ ಹರಿದ ನೀರಿನ ಹೊಳೆ
ಚನ್ನಪಟ್ಟಣ: ಕಳೆದ ಏಪ್ರಿಲ್ ತಿಂಗಳಿನಲ್ಲೇ ಮಳೆ ಆರಂಭವಾದರು ಜುಲೈ ಕೊನೆಯ ದಿನ ಮತ್ತು ಆಗಸ್ಟ್ ಮೊದಲ ವಾರದಲ್ಲಿ ಮಳೆಯ ಆರ್ಭಟ ಜೋರಾಗಿದೆ. ಕೆಲ ದಿ
ಪ್ರತಿಕ್ರಿಯೆಗಳು