ಮುಟ್ಟು ಗುಟ್ಟಿನ ವಿಷಯವಲ್ಲ ಅದೊಂದು ಜೈವಿಕ ಕ್ರಿಯೆ; ಪದ್ಮರೇಖಾ

ರಾಮನಗರ: ಪ್ರತಿ ಹೆಣ್ಣಿನ ಮುಟ್ಟಿಗೂ ಒಂದು ಘನತೆ ಇದೆ. ಪ್ರತಿ ಮನುಷ್ಯನ ಹುಟ್ಟಿಗೂ ಮುಟ್ಟೇ ಕಾರಣವಾಗಿದೆ. ಮೂಡನಂಬಿಕೆ ಮತ್ತು ಕೀಳರಿಮೆಗಳನ್ನು ಬಿಟ್ಟು ಮುಟ್ಟಿನ ಬಗೆಗೆ ಅಗತ್ಯವಿರುವ ಸ್ವಚ್ಛತೆಯ ಕಡೆ ಮತ್ತು ತೆಗೆದುಕೊಳ್ಳಬೇಕಾದ ಕ್ರಮಗಳ ಬಗ್ಗೆ ತಿಳಿಯಬೇಕಿದೆ. ನಿಸರ್ಗದತ್ತವಾಗಿ ಬಂದಿರುವ ಜೈವಿಕ ಕ್ರಿಯೆಗೆ ಅಂಟು ಮುಟ್ಟಿನ ಸೋಂಕಿಲ್ಲ ಎಂದು ಸಾಮಾಜಿಕ ಕಾರ್ಯಕರ್ತ ಪದ್ಮರೇಖಾ ತಿಳಿಸಿದರು.
ಅವರು ಕೃಷ್ಣಾಪುರದೊಡ್ಡಿಯ ಕೆಎಸ್ ಮುದ್ದಪ್ಪ ಸ್ಮಾರಕ ಟ್ರಸ್ಟ್, ಈ ಎಸ್ ಎ ಎಫ್ ಫೌಂಡೇಶನ್, ಕಮ್ಯೂನಿಟಿ ಫಸ್ಟ್ ಫೌಂಡೇಶನ್ ಹಾಗೂ ಸರ್ಕಾರಿ ಪ್ರಥಮ ದರ್ಜೆ ಮಹಿಳಾ ಕಾಲೇಜು ಮಹಿಳಾ ಸಬಲೀಕರಣ ವಿಭಾಗ ಸಂಯುಕ್ತವಾಗಿ ಹಮ್ಮಿಕೊಂಡಿದ್ದ ಮುಟ್ಟಿನ ಆರೋಗ್ಯ ಕಾರ್ಯಕ್ರಮ ಕುರಿತು ಉಪನ್ಯಾಸ ನೀಡಿದರು.
ದೈಹಿಕವಾಗಿ ನಿರಂತರ ನಡೆಯುವ ಮುಟ್ಟಿನ ನಿರ್ವಹಣೆ ನಮ್ಮೆಲ್ಲರ ಜವಾಬ್ದಾರಿಯಾಗಬೇಕು, ಇದನ್ನು ಕೆಟ್ಟದ್ದು ಎಂದು ನೋಡದೆ, ಅವರಿಗೆ ಬಿಡುವು ಕೊಡುವುದರ ಜೊತೆಗೆ ಸಹಕಾರ ನೀಡಬೇಕು. ಮುಂದಿನ ಪೀಳಿಗೆಗೆ ಮುಟ್ಟಿನ ಬಗ್ಗೆ ಇರುವ ಮೂಢನಂಬಿಕೆ ತೊಲಗಿಸಿ, ವೈಜ್ಞಾನಿಕ ಮಾಹಿತಿ ನೀಡಬೇಕು ಎಂದರು.
ಮಾಜಿ ನಗರಸಭಾ ಅಧ್ಯಕ್ಷೆ ಬಿ ಸಿ ಪಾರ್ವತಮ್ಮ ಮಾತನಾಡಿ ಮುಟ್ಟನ್ನು ಕುರಿತು ಮತ್ತು ನೈರ್ಮಲ್ಯವನ್ನು ಕುರಿತು ಇಡೀ ಮಹಿಳಾ ಲೋಕಕ್ಕೆ ತಿಳಿಸಬೇಕಾದ ಅವಶ್ಯಕತೆ ಇದೆ. ಮುಟ್ಟಿನ ವಿಚಾರದಲ್ಲಿ ನಿರ್ಲಕ್ಷ್ಯ ಮಾಡಿ ಸಾವಿಗೀಡಾದ ಅನೇಕ ದಾಖಲೆಗಳು ನಮ್ಮಲ್ಲಿವೆ. ಆಧುನಿಕ ಯುಗದಲ್ಲಿ ಮುಟ್ಟನ್ನು ಗುಟ್ಟು ಮಾಡುವ ಅವಶ್ಯಕತೆ ಇಲ್ಲ ಎಂದರು.
ನಿಸರ್ಗದತ್ತವಾಗಿ ಉಂಟಾಗುವ ಮುಟ್ಟು ದೇಗುಲಗಳಾಚೆ ಇರಿಸಲು ಹೇಳಲ್ಲ. ಸೂಕ್ತವಾಗಿ ಅದರ ನಿರ್ವಹಣೆ ಮಾಡುವುದರಿಂದ ಎಲ್ಲ ಕಿರಿಕಿರಿಗಳಿಂದ ದೂರವಿರಬೇಕು ಎಂದರು.
ಜಾನಪದ ವಿದ್ವಾಂಸ ಡಾ. ಎಂ ಬೈರೇಗೌಡ ಮಾತನಾಡಿ ಮುಟ್ಟು ಸೂತಕವಲ್ಲ ಅದೊಂದು ಸಾಮಾನ್ಯ ಸಂಗತಿ. ಮುಟ್ಟನ್ನು ಗುಟ್ಟು ಮಾಡುವ ಅವಶ್ಯಕತೆಯಿಲ್ಲ ಎಂದರು.
ಕಾರ್ಯಕ್ರಮದಲ್ಲಿ
ಹ್ಯುಮಾನಿಟಿ ಫಸ್ಟ್ ಫೌಂಡೇಶನ್ ಅಧ್ಯಕ್ಷ ಉದಯ್ ಕುಮಾರ್ ಮಹಿಳಾ ಸಬಲೀಕರಣ ವಿಭಾಗದ ಸಂಚಾಲಕಿ ವೇದಾವತಿ ಕಾಲೇಜು ಕನ್ನಡ ವಿಭಾಗದ ರೂಪಾ ಇಎಸ್ಎಎಫ್ ಫೌಂಡೇಶನ್ ಸತೀಶ್ ಕಾಲೇಜು ಪ್ರಾಂಶುಪಾಲ ಮುದ್ದೀರಯ್ಯ ಅಧ್ಯಕ್ಷತೆ ವಹಿಸಿದ್ದರು ಕುಮಾರಿ ಭವ್ಯ ಕಾರ್ಯಕ್ರಮ ನಿರ್ವಹಿಸಿದರು.
ಗೋ ರಾ ಶ್ರೀನಿವಾಸ...
ಮೊ:9845856139.
Recent news in ramanagara »

೨೯ರಂದು ಕರ್ನಾಟಕ ಬಂದ್, ಪಕ್ಷಾತೀತ, ಜಾತ್ಯಾತೀತ, ಧರ್ಮಾತೀತವಾಗಿ ಒಗ್ಗೂಡಿ ಚನ್ನಪಟ್ಟಣ ಬಂದ್ ಗೆ ಕರೆ
ಚನ್ನಪಟ್ಟಣ: ಮಂಗಳವಾರ ಅಥವಾ ಗುರುವಾರದಂದು ಚನ್ನಪಟ್ಟಣ ಬಂದ್ ಗೆ ಕರೆ ನೀಡಲು ಉದ್ದೇಶಿಸಲಾಗಿದ್ದು, ೨೯ನೇ ತಾರೀಖಿನ ಶುಕ್ರವಾರ ಕರ್ನಾಟಕ ಬಂದ್ ಆಚ

ಸೆ.30 ರವರೆಗೆ ಬೆಳಿಗ್ಗೆ 8 ರಿಂದ ರಾತ್ರಿ 8 ರವರೆಗೆ ಉಪನೋಂದಣಾಧಿಕಾರಿಗಳ ಕಚೇರಿ ಕಾರ್ಯನಿರ್ವಹಣೆ
ಬೆಂಗಳೂರು:ಸೆ.22: ನೋಂದಣಿ ಮತ್ತು ಮುದ್ರಾಂಕ ಇಲಾಖೆಯ ಕೇಂದ್ರ ಮೌಲ್ಯ ಮಾಪನ ಸಮಿತಿಯ ( Valuation Committee) 2023-24ನೇ ಸಾಲಿನಲ್ಲಿ ಸ್ಥಿರಾಸ್ತಿಗಳ ಮಾ

ಅಮೇರಿಕಾದ ಖ್ಯಾತ ವೈದ್ಯ ಡಾ ಹೆಚ್ ಕೆ ಮರಿಯಪ್ಪ ರವರಿಗೆ ಗುರುವಾರ ಅಭಿನಂದನೆ
ಚನ್ನಪಟ್ಟಣ: ತಾಲ್ಲೂಕಿನ ಅವ್ವೇರಹಳ್ಳಿ ಗ್ರಾಮದ ಸ್ವಾತಂತ್ರ್ಯ ಹೋರಾಟಗಾರ ಹೆಚ್ ಕೆ ವೀರಣ್ಣಗೌಡ ರ ಸಹೋದರ ಡಾ.ಎಚ್.ಕೆ. ಮರಿಯಪ್ಪ ಅಭಿನಂದನಾ ಸಮಿತ

ಆಕ್ಷೇಪಣೆಗಳಿದ್ದಲ್ಲಿ ಅರ್ಜಿ ಸಲ್ಲಿಸಿ:
ರಾಮನಗರ; ಬೆಂಗಳೂರು ನಗರ, ಬೆಂಗಳೂರು ಗ್ರಾಮಾಂತರ ಹಾಗೂ ರಾಮನಗರ ಜಿಲ್ಲೆಗೆ ಸಂಬಂಧಪಟ್ಟ ಉಪ ನೋಂದಣಿ ಕಚೇರಿಗಳ ವ್ಯಾಪ್ತಿಯಲ್ಲಿ ಬರುವ ಸ್ಥಿರಾಸ್ತಿಗಳ ಅಂದಾಜು

ಜಮೀನಿನಲ್ಲಿ ಬೆಳೆಗೆ ನೀರು ಹಾಯಿಸಲು ಹೋಗಿದ್ದ ಮಹಿಳೆ ಶವವಾಗಿ ಪತ್ತೆ
ಚನ್ನಪಟ್ಟಣ: ತಮ್ಮ ಜಮೀನಿನಲ್ಲಿ ಬೆಳೆದಿದ್ದ ಬೆಳೆಗೆ ನೀರು ಹಾಯಿಸಲು ಹೋಗಿದ್ದ ಮಹಿಳೆಯೊಬ್ಬರು ಅವರದೇ ಹೊಲದ ಪೈಪು ಹೂಳಲು ತೆಗೆದಿದ್ದ ಕಾಲುವೆಯಲ್ಲಿ ಶವವಾಗಿ

ಆಹಾರ ಇಲ್ಲದೆ ಎರಡು ದಿನ ಬದುಕಬಹುದು, ನೀರಿಲ್ಲದೆ ಬದುಕುವುದು ಕಷ್ಟ, ತಾಪಂ ಇಓ
ಚನ್ನಪಟ್ಟಣ: ಒಂದೆರಡು ದಿನ ಆಹಾರವಿಲ್ಲದಿದ್ದರೂ ಮನುಷ್ಯ ಬದುಕುತ್ತಾನೆ ಆದರೆ, ನೀರಿಲ್ಲದೇ ಬದುಕಲಾರ. ಆದ್ದರಿಂದ ಜನರಿಗೆ ಶುದ್ಧನೀರು ಪೂರೈಕೆ ಮಾಡುವುದು ನ

ಹುಚ್ಚಯ್ಯನದೊಡ್ಡಿ ಗ್ರಾಮದಲ್ಲಿ ಅದ್ದೂರಿಯಾಗಿ ನಡೆದ ಮಾರಮ್ಮನ ಹಬ್ಬ
ಚನ್ನಪಟ್ಟಣ: ತಾಲ್ಲೂಕಿನ ವಿರುಪಾಕ್ಷಿಪುರ ಹೋಬಳಿಯ ಹುಚ್ಚಯ್ಯನದೊಡ್ಡಿ ಗ್ರಾಮದಲ್ಲಿ ಮಂಗಳವಾರ ಮಾರಮ್ಮನ ಹಬ್ಬ ಭಕ್ತಿಭಾವದಿಂದ ನೆರವೇರಿತು.
<

ರೋಟರಿ ಕ್ಲಬ್ ವತಿಯಿಂದ ಚಾರಣ
ಚನ್ನಪಟ್ಟಣ : ಜಂಜಾಟದ ಬದುಕಿನಲ್ಲಿ ಮನಷ್ಯರಿಗೆ ಮಾನಸಿಕ ಹಾಗೂ ದೈಹಿಕ ಆರೋಗ್ಯ ಎರಡು ಬಹು ಪ್ರಮುಖವಾಗಿದ್ದು ಇವುಗಳನ್ನು ಕಾಪಾಡಿಕೊಳ್ಳುವುದು ಕೋಟಿ ಸಂಪಾದನೆ

ಸೇವೆಯ ಮೂಲಕ ಜೀವನ ಸಾರ್ಥಕ ಪಡಿಸಿಕೊಳ್ಳಿ ನಿವೃತ್ತ ಶಿಕ್ಷಕ ವಸಂತ್ ಕುಮಾರ್ ಅಭಿನಂದನಾ ಸಮಾರಂಭದಲ್ಲಿ ಪ್ರೊ. ಜಯಪ್ರಕಾಶ್ ಗೌಡ ಅಭಿಮತ
ಚನ್ನಪಟ್ಟಣ: ಜನ ಮೆಚ್ಚುವಂತಹ ಹಾಗೂ ಶಾಶ್ವತವಾಗಿ ಉಳಿಯುವಂತಹ ಒಳ್ಳೆಯ ಸೇವಾ ಕೆಲಸಗಳನ್ನು ಮಾಡಿ ನಮ್ಮ ಜೀವನವನ್ನು ಸಾರ್ಥಕ ಪಡಿಸಿಕೊಳ್ಳಬೇಕು ಎಂದು ಮಂಡ್ಯ

ವಿವಿಧ ಕ್ಷೇತ್ರಗಳ ಸಾಧಕರಿಗೆ ‘ರಾಮನಗರ ರತ್ನ’ ಪ್ರಶಸ್ತಿ ಪ್ರದಾನ
ರಾಮನಗರ: ಜಾನಪದ ಕಲೆಗಳಿಗೆ ಸಾಮಾಜಿಕ ಬದಲಾವಣೆಯನ್ನು ತರುವ ಶಕ್ತಿ ಇದೆ. ಆ ಕಾರಣಕ್ಕಾಗಿಯೇ, ನಮ್ಮ ಹಿರಿಯರು ಕಲೆಗಳನ್ನು ಬಳಸಿಕೊಂಡು ಸಮಾಜದಲ್ಲಿ
ಪ್ರತಿಕ್ರಿಯೆಗಳು