Tel: 7676775624 | Mail: info@yellowandred.in

Language: EN KAN

    Follow us :


ಜಿಲ್ಲೆಯಲ್ಲಿ ನಡೆಯುತ್ತಿರುವ ಮತಾಂತರ ತಡೆಗಟ್ಟಲು ಸೂಕ್ತ ಕ್ರಮಕೈಗೊಳ್ಳುವಂತೆ ಮನವಿ

Posted date: 10 Sep, 2022

Powered by:     Yellow and Red

ಜಿಲ್ಲೆಯಲ್ಲಿ ನಡೆಯುತ್ತಿರುವ ಮತಾಂತರ ತಡೆಗಟ್ಟಲು ಸೂಕ್ತ ಕ್ರಮಕೈಗೊಳ್ಳುವಂತೆ ಮನವಿ

ಚನ್ನಪಟ್ಟಣ: ಜಿಲ್ಲೆಯಲ್ಲಿ ಅವ್ಯವಾಹಿತವಾಗಿ ನಡೆಯುತ್ತಿರುವ ಮತಾಂತರ ಕಾರ್ಯವನ್ನು ತಡೆಯುವ ನಿಟ್ಟಿನಲ್ಲಿ ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ಹಿಂದು ಜಾಗರಣಾ ವೇದಿಕೆ ಪದಾಧಿಕಾರಿಗಳು ಅಗ್ರಹಿಸಿದ್ದಾರೆ.

ನಗರದ ಪ್ರವಾಸಿ ಮಂದಿರದಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ವೇದಿಕೆ ಪದಾಧಿಕಾರಿಗಳು, ಮತಾಂತರ ನಿಷೇಧ ಕಾಯಿದೆಯನ್ನು ಸಮರ್ಪಕವಾಗಿ ಅನುಷ್ಠಾನಗೊಳಿಸುವ ಮೂಲಕ ಮತಾಂತರ ಕಾರ್ಯಗಳಿಗೆ ಕಡಿವಾಣ ಹಾಕಬೇಕು ಎಂದು ಒತ್ತಾಯಿಸಿದರು.


ಜಿಲ್ಲೆಯಲ್ಲಿ ಮತಾಂತರ ಕಾರ್ಯ ಎಗ್ಗಿಲ್ಲದೇ ನಡೆದಿದೆ. ಈ ಕುರಿತು ದೂರುಗಳನ್ನು ನೀಡಿದರೆ ಪೊಲೀಸರು ಸರಿಯಾದ ಕ್ರಮ ಕೈಗೊಳ್ಳುತ್ತಿಲ್ಲ. ಕೆಲವು ಮಿಷನರಿಗಳು ಗ್ರಾಮಗಳಲ್ಲಿ ಜಾತಿಗಳ ಮಧ್ಯೆ ವಿಷ ಬೀಜ ಬಿತ್ತುವ ಕೆಲಸ ಮಾಡುತ್ತಿದ್ದಾರೆ. ಬಡವರು ಮತ್ತು ಹೆಣ್ಣು ಮಕ್ಕಳಿಗೆ ಆಮಿಷ ತೋರಿಸಿ ಮತಾಂತರ ಕಾರ್ಯವನ್ನು ನಡೆಸುತ್ತಿದ್ದಾರೆ. ಇವರ ವಿರುದ್ಧ ಪೊಲೀಸರು ಕಠಿಣ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದರು.


ಮತಾಂತರ ನಡೆಸುವ ವ್ಯಾಪಕ ಜಾಲವೇ ಜಿಲ್ಲೆಯಲ್ಲಿ ಕಾರ್ಯನಿರ್ವಹಿಸುತ್ತಿದೆ. ಈ ಕುರಿತು ಸಾಕಷ್ಟು ದೂರುಗಳು ದಾಖಲಾಗಿದ್ದರು ಸಹ ಪೊಲೀಸರು ಯಾವುದೇ ಕ್ರಮ ಕೈಗೊಳ್ಳುತ್ತಿಲ್ಲ. ಪೊಲೀಸರು ಇದನ್ನು ಗಂಭೀರವಾಗಿ ಪರಿಗಣಿಸಿ, ಕಾಯ್ದೆಯ ಅನುಸಾರ ಕ್ರಮ ಕೈಗೊಳ್ಳಬೇಕು ಈ ಕಾರ್ಯ ನಿಲ್ಲಿಸುವ  ನಿಟ್ಟಿನಲ್ಲಿ ಶೀಘ್ರದಲ್ಲೇ ಇದರ ವಿರುದ್ಧ  ಹಿಂದೂ ಜಾಗರಣಾ ವೇದಿಕೆ ಸಮರ ಆರಂಭಿಸಲಿದೆ ಎಂದರು.


ತುಳಸಿನಾಯಕ್ ಅಲಿಯಾಸ್ ಯೇಸುದಾಸ್ ಸೇರಿದಂತೆ ಸಾಕಷ್ಟು ಹೆಸರುಗಳನ್ನು ಇಟ್ಟುಕೊಂಡಿರುವ ವ್ಯಕ್ತಿಯೊಬ್ಬ ಮನೆ ನಿರ್ಮಿಸುತ್ತೇನೆ ಎಂದು ಲಂಬಾಣಿ ತಾಂಡ್ಯದಲ್ಲಿ ನಿವೇಶನ ಪಡೆದು ಅಲ್ಲಿ ಮನೆಯ ಮೇಲೆ ಚರ್ಚ್ ನಿರ್ಮಿಸಿ ಗ್ರಾಮದ ಜನರಿಗೆ ಮತಾಂತರಗೊಳ್ಳುವಂತೆ ಆಮಿಷಗಳನ್ನು ಒಡ್ಡುತ್ತಿದ್ದಾನೆ. ಈತನ ಆಮೀಷಗಳಿಗೆ ಬಗ್ಗದ ಹಿನ್ನೆಲೆಯಲ್ಲಿ ಮೊನ್ನೆ ಇಬ್ಬರು ಗ್ರಾಮಸ್ಥರನ್ನು ಅವಾಚ್ಯ ಪದಗಳಿಂದ ನಿಂದಿಸಿ, ಬೆದರಿಕೆ ಹಾಕಿದ್ದಾನೆ. ಈತನ ವಿರುದ್ಧ ದೂರು ನೀಡಿದ್ದು, ಬಂಧನಗೊಂಡ ಎರಡನೇ ದಿನಕ್ಕೆ ಈತ ಆಚೆ ಬಂದಿದ್ದಾನೆ ಎಂದು ಲಂಭಾಣಿ ತಾಂಡ್ಯದ ಗ್ರಾಮಸ್ಥರು ಆರೋಪಿಸಿದರು.


ಈತನ ಚರ್ಚ್‍ಗೆ ಪ್ರತಿ ಭಾನುವಾರ ಎಲ್ಲೆಂದಿಲೋ ಜನ ಆಗಮಿಸುತ್ತಾರೆ. ಗ್ರಾಮ ಸೇರಿದಂತೆ ಈತ ಸಾಕಷ್ಟು ಕಡೆ ಆಸ್ತಿ ಮಾಡಿದ್ದಾನೆ. ಈತನ ಆದಾಯ ಮೂಲದ ಬಗ್ಗೆ ಸೂಕ್ತ ತನಿಖೆ ನಡೆಸಬೇಕು ಎಂದು ಆಗ್ರಹಿಸಿದರು/

ಈ ಸಂದರ್ಭದಲ್ಲಿ ಹಿಂದುಜಾಗರಣಾ ವೇದಿಕೆಯ ವಿಭಾಗೀಯ ಸಂಯೋಜಕ ಅನಿಲ್ ಕುಮಾರ್, ಜಿಲ್ಲಾ ಸಂಯೋಜಕ ಸತೀಶ್,  ಪದಾಧಿಕಾರಿಗಳಾದ ಯೋಗೇಶ್ ಕುಮಾರ್ ಎಂ.ಡಿ. ಪಾರ್ಥಸಾರಥಿ, ಮನೋಹರ್ ಟಿ.ಸಿ, ಲಂಬಾಣಿ ತಾಂಡ್ಯ ಗ್ರಾಮದ ವೆಂಕಟೇಶ್, ಗುರುರಾಜ್, ಶಿವನಾಯಕ, ಬಾಲಾಜಿ ನಾಯಕ, ರೈತ ಮುಖಂಡ ಮಹೇಶ್ ಮುಂತಾದವರು ಇದ್ದರು.


ಗೋ ರಾ ಶ್ರೀನಿವಾಸ...

ಮೊ:9845856139.

ಪ್ರತಿಕ್ರಿಯೆಗಳು

  • ನಿಮ್ಮ ಅಭಿಪ್ರಾಯ ತಿಳಿಸುವಲ್ಲಿ ನೀವು ಮೊದಲಿಗರಾಗಿ.

ನಿಮ್ಮ ಅಭಿಪ್ರಾಯಗಳನ್ನು ಬರೆಯಿರಿ/ತಿಳಿಸಿ.

Recent news in ramanagara »

ದಲಿತರಿಗೆ ಶವಸಂಸ್ಕಾರ ಮಾಡಲು ಬೇರೆ ಜಾಗ ನೀಡುವಂತೆ ರಾತ್ರಿವರೆಗೂ ತಹಶಿಲ್ದಾರ್ ಕಛೇರಿ ಮುಂದೆ ಶವವಿಟ್ಟು ಪ್ರತಿಭಟನೆ
ದಲಿತರಿಗೆ ಶವಸಂಸ್ಕಾರ ಮಾಡಲು ಬೇರೆ ಜಾಗ ನೀಡುವಂತೆ ರಾತ್ರಿವರೆಗೂ ತಹಶಿಲ್ದಾರ್ ಕಛೇರಿ ಮುಂದೆ ಶವವಿಟ್ಟು ಪ್ರತಿಭಟನೆ

ಚನ್ನಪಟ್ಟಣ: ತಾಲೂಕಿನ ಕೋಡಂಬಳ್ಳಿ ಗ್ರಾಮದಲ್ಲಿ ಸಾರ್ವಜನಿಕ ಸ್ಮಶಾನವಿದ್ದು, ದಲಿತರು ಕೆರೆ ಜಾಗದಲ್ಲಿ ಶವವನ್ನು ಹೂಳುತ್ತಿದ್ದು, ಆ ಜಾಗ ನಮಗೆ ಸ

ಹಂಪಿ‌ ಕನ್ನಡ ವಿವಿಯಿಂದ ಶಿಕ್ಷಕಿ ಎಂ.ಕಮಲಮ್ಮ‌ ಅವರಿಗೆ ಪಿಎಚ್.ಡಿ. ಪದವಿ
ಹಂಪಿ‌ ಕನ್ನಡ ವಿವಿಯಿಂದ ಶಿಕ್ಷಕಿ ಎಂ.ಕಮಲಮ್ಮ‌ ಅವರಿಗೆ ಪಿಎಚ್.ಡಿ. ಪದವಿ

ರಾಮನಗರ, ಡಿ.3- ಶಿಕ್ಷಕಿ ಎಂ.ಕಮಲಮ್ಮ‌ ಅವರು ಹಂಪಿ ಕನ್ನಡ ವಿಶ್ವವಿದ್ಯಾಲಯಕ್ಕೆ ಪ್ರಸ್ತುತ ಪಡಿಸಿದ \"ಮೈಸೂರು ಕರ್ನಾಟಕ ವೃತ್ತಿ ರಂಗಭೂಮಿಯಲ್ಲಿ

ಕನ್ನಡದ ಕಟ್ಟಾಳು ಸಿಂಲಿಂ ನಾಗರಾಜು ನಿಧನ ಮಾಜಿ ಪ್ರಧಾನಿ ಹೆಚ್ ಡಿ ದೇವೇಗೌಡ ಸೇರಿ ಹಲವರು ಭಾಗಿ
ಕನ್ನಡದ ಕಟ್ಟಾಳು ಸಿಂಲಿಂ ನಾಗರಾಜು ನಿಧನ ಮಾಜಿ ಪ್ರಧಾನಿ ಹೆಚ್ ಡಿ ದೇವೇಗೌಡ ಸೇರಿ ಹಲವರು ಭಾಗಿ

 ಚನ್ನಪಟ್ಟಣ:  ಚನ್ನಪಟ್ಟಣ ತಾಲ್ಲೂಕು ಅಷ್ಟೇ ಅಲ್ಲದೆ ರಾಜ್ಯಾದ್ಯಂತ ಹೋರಾಟದ ಛಾಪನ್

ನೆಲಬಾವಿಗೆ ಬಿದ್ದ ಕಾಡಾನೆ
ನೆಲಬಾವಿಗೆ ಬಿದ್ದ ಕಾಡಾನೆ

ಚನ್ನಪಟ್ಟಣ.ಡಿ.೦೩ :ತಾಲ್ಲೂಕಿನ ಕಾಡಂಚಿನ ಗ್ರಾಮಗಳಲ್ಲಿ ಆನೆಗಳ ದಾಳಿ ಮಿತಿಮೀರಿದ್ದು, ಅವು ಕೃಷಿಕರ ಜಮೀನಿಗೆ ಲಗ್ಗೆ ಇಟ್ಟು ಬೆಳೆ ಹಾನಿ ಮಾಡುವುದು ಸಾ

ಸಂವಿಧಾನ ನಮ್ಮೆಲ್ಲರ ಉಸಿರು ನ್ಯಾಯಾಧೀಶೆ ಶುಭಾ ಅಭಿಮತ
ಸಂವಿಧಾನ ನಮ್ಮೆಲ್ಲರ ಉಸಿರು ನ್ಯಾಯಾಧೀಶೆ ಶುಭಾ ಅಭಿಮತ

ಚನ್ನಪಟ್ಟಣ: ಸಂವಿಧಾನ ನಮ್ಮೆಲ್ಲರ ಉಸಿರು. ಸಂವಿಧಾನವನ್ನು ಎಲ್ಲರೂ ತಿಳಿದು ನಡೆದರೆ ಸ್ವಸ್ಥ ಸಮಾಜ ಕಟ್ಟಲು ಸಾಧ್ಯ. ಸರ್ವರಿಗೂ ಸಮಪಾಲು, ಸರ್ವರಿ

ವಿಶ್ವ ಏಡ್ಸ್ ದಿನದ ಪ್ರಯುಕ್ತ ಆಸ್ಪತ್ರೆಗೆ ಭೇಟಿ ನೀಡಿ, ಜಾಥಾ ಗೆ ಚಾಲನೆ ನೀಡಿದ ನ್ಯಾಯಾಧೀಶರುಗಳು
ವಿಶ್ವ ಏಡ್ಸ್ ದಿನದ ಪ್ರಯುಕ್ತ ಆಸ್ಪತ್ರೆಗೆ ಭೇಟಿ ನೀಡಿ, ಜಾಥಾ ಗೆ ಚಾಲನೆ ನೀಡಿದ ನ್ಯಾಯಾಧೀಶರುಗಳು

ಚನ್ನಪಟ್ಟಣ.ಡಿ.೦೧: ಇಂದು ವಿಶ್ವ ಏಡ್ಸ್ ದಿನಾಚರಣೆ ಅಂಗವಾಗಿ, ಸಾರ್ವಜನಿಕ ಆಸ್ಪತ್ರೆ, ಬಾಲು ಪಬ್ಲಿಕ್ ಶಾಲೆ, ಲಯನ್ಸ್ ಸಂಸ್ಥೆ ಸೇರಿದಂತೆ ವಿವಿಧ

ಒತ್ತುವರಿ ತೆರವುಗೊಳಿಸದೆ, ಚರಂಡಿ ನಿರ್ಮಿಸದೆ ರಸ್ತೆ ಕಾಮಗಾರಿ ಮಾರುತಿ ಬಡಾವಣೆ ನಿವಾಸಿಗಳ ಆರೋಪ
ಒತ್ತುವರಿ ತೆರವುಗೊಳಿಸದೆ, ಚರಂಡಿ ನಿರ್ಮಿಸದೆ ರಸ್ತೆ ಕಾಮಗಾರಿ ಮಾರುತಿ ಬಡಾವಣೆ ನಿವಾಸಿಗಳ ಆರೋಪ

ಚನ್ನಪಟ್ಟಣ:  ನಗರದ ಹೊಸ ನ್ಯಾಯಾಲಯ ಕಟ್ಟಡದ ಹಿಂಭಾಗದ ಹಾಗೂ ನಗರದ ಪ್ರಮುಖ ರಸ್ತೆಯಾದ ಚನ್ನಪಟ್ಟಣ- ತಿಟ್ಟಮಾರನಹಳ್ಳಿ- ಕುಣಿಗಲ್ ರಾಜ್ಯ ಹೆ

ಭಾಷೆ ಮತ್ತು ಕಲೆ ಉಳಿಸುವ ನಿಟ್ಟಿನಲ್ಲಿ ನೇರಳೂರು ಗ್ರಾಮದ ಯುವಕರು ಮುಂದಿದ್ದಾರೆ ಜಿಲ್ಲಾಧಿಕಾರಿ
ಭಾಷೆ ಮತ್ತು ಕಲೆ ಉಳಿಸುವ ನಿಟ್ಟಿನಲ್ಲಿ ನೇರಳೂರು ಗ್ರಾಮದ ಯುವಕರು ಮುಂದಿದ್ದಾರೆ ಜಿಲ್ಲಾಧಿಕಾರಿ

ಸ್ಥಳೀಯ ಭಾಷೆಗಳು, ಕಲೆಗಳು ಉಳಿದರೆ ಮಾತ್ರ ದೇಶ ಉನ್ನತ ಸ್ಥಾನಕ್ಕೆ ಮುಂದಡಿಯಡಿಯಲು ಸಾಧ್ಯವಾಗುತ್ತದೆ. ಗ್ರಾಮೀಣ ಭಾಗದಲ್ಲಿ 

ನಾಡಿನ ಸಂಸ್ಕøತಿ ಪರಂಪರೆಯನ್ನು ಉಳಿಸಿ ಬೆಳೆಸುವ ನಿ

ರಾಗಿ ಕಟಾವು ಯಂತ್ರಕ್ಕೆ ಪ್ರತಿ ಗಂಟೆಗೆ ರೂ. 2700/- ಬಾಡಿಗೆ ದರ ನಿಗದಿ: ಡಾ.ಅವಿನಾಶ್ ಮೆನನ್
ರಾಗಿ ಕಟಾವು ಯಂತ್ರಕ್ಕೆ ಪ್ರತಿ ಗಂಟೆಗೆ ರೂ. 2700/- ಬಾಡಿಗೆ ದರ ನಿಗದಿ: ಡಾ.ಅವಿನಾಶ್ ಮೆನನ್

ರಾಮನಗರ ನ.26: ರಾಮನಗರ ಜಿಲ್ಲೆಯಲ್ಲಿ 2022-23 ನೇ ಸಾಲಿನ ಮುಂಗಾರು ಹಂಗಾಮಿನಲ್ಲಿ ರಾಗಿ ಬೆಳೆಯು 66,719 ಹೆಕ್ಚೇರ್ ಪ್ರದೇಶದಲ್ಲಿ ಆವರಿಸಿದ್ದು

ಕಲೆ, ಸಂಸ್ಕೃತಿಯನ್ನು ಇನ್ನಷ್ಟು ಬೆಳಸಿ :ಶಿವಾನಂದ ಮೂರ್ತಿ
ಕಲೆ, ಸಂಸ್ಕೃತಿಯನ್ನು ಇನ್ನಷ್ಟು ಬೆಳಸಿ :ಶಿವಾನಂದ ಮೂರ್ತಿ

ರಾಮನಗರ ನ.26: ಮಹತ್ವಪೂರ್ಣವಾದ ಸುದಿನ,  ಸಂವಿದಾನ ಆಚರಣೆಗೆ ಬಂದ ಈ ಸುದಿನ, ಆದ್ದರಿಂದ ಈ ದಿನವನ್ನು ಜಾನಪದ ಕಲಾತಂಡದ ಮೂಲಕ ಜನಪರ ಉತ್ಸವ

Top Stories »  


Top ↑