Tel: 7676775624 | Mail: info@yellowandred.in

Language: EN KAN

    Follow us :

ರೈತಮಹಿಳೆ ಕೊಲೆ ಮಾಡಿ ಪರಾರಿಯಾಗಿದ್ದ ಆರೋಪಿಗಳ ಬಂಧನ

Posted date: 12 Sep, 2022

Powered by:     Yellow and Red

ರೈತಮಹಿಳೆ ಕೊಲೆ ಮಾಡಿ ಪರಾರಿಯಾಗಿದ್ದ ಆರೋಪಿಗಳ ಬಂಧನ

ರಾಮನಗರ.ಸೆ.೧೨: ದುಶ್ಚಟಗಳಿಗೆ ಬಲಿಯಾಗಿ ಹಲವಾರು ಮಂದಿಗಳಿಂದ ಮಾಡಿದ್ದ ಕೈ ಸಾಲ ತೀರಿಸಲು ಹಾಗೂ ಸಾಲ ಕೊಟ್ಟಿದ್ದನ್ನು ವಾಪಸ್ಸು ಕೇಳಿದ ಮಹಿಳೆಯನ್ನು ಕೊಂದು ಚಿನ್ನಾಭರಣ ದೋಚಿದ್ದ ಬಾಲಪರಾಧಿ ಸೇರಿದಂತೆ ಮೂರು ಜನ ಆರೋಪಿಗಳನ್ನು ರಾಮನಗರ ಗ್ರಾಮಾಂತರ ಪೊಲೀಸರು ಬಂಧಿಸಿದ್ದಾರೆ.

ತಾಲ್ಲೂಕಿನ ಅಚ್ಚಲು ಕಾಲೋನಿ ನಿವಾಸಿ ಕೆಂಪಮ್ಮ(೪೫) ಎಂಬ ಮಹಿಳೆಯು ದನ ಮೇಯಿಸಲು ಹೋಗಿದ್ದ ಸಂದರ್ಭದಲ್ಲಿ ಕೊಲೆಗೈದು, ಮೃತದೇಹವನ್ನು ಮೂಟೆಯಲ್ಲಿ ಕಟ್ಟಿ ಅರ್ಕಾವತಿ ನದಿಗೆ ಎಸೆದು, ಮೈಮೇಲೆ ಇದ್ದ ಒಡವೆಯನ್ನು ಕಿತ್ತುಕೊಂಡು ಆರೋಪಿಗಳು ಪರಾರಿಯಾಗಿದ್ದರು.

ಈ ಸಂಬಂಧ ರಾಮನಗರ ಜಿಲ್ಲಾ ಪೋಲೀಸ್ ಕಛೇರಿಯಲ್ಲಿ ಸುದ್ದಿಗೋಷ್ಠಿ ನಡೆಸಿ ಮಾಹಿತಿ ನೀಡಿದ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಸಂತೋಷ್ ಬಾಬು ಅವರು, ಆರೋಪಿ ಲಿಂಗರಾಜು ಬಿನ್ ಗುರುಮೂರ್ತಿ(೧೯) ಕೈ ಸಾಲ ಮಾಡಿಕೊಂಡಿದ್ದು, ಅಲ್ಲದೆ ಕೊಲೆಯಾದ ಮಹಿಳೆಯ ಅಂಗಡಿಯಲ್ಲಿ ೬೦೦ ರೂ ಸಾಲ ಮಾಡಿದ್ದು, ಅದನ್ನು ಅಂದು ಬೆಳಿಗ್ಗೆ ಆತನನ್ನು ಕೇಳಿ ರಂಪ ಮಾಡಿರುತ್ತಾಳೆ. ಅದನ್ನೇ ಜಿದ್ದಿನಲ್ಲಿ ಇಟ್ಟುಕೊಂಡಿದ್ದಾನೆ. ಹಾಗೂ ಮತ್ತೊಮ್ಮ ಆರೋಪಿ ರವಿ ಬಿನ್ ಚಿಕ್ಕವೀರಯ್ಯ(೨೦) ಎಂಬಾತ ಹೊರಗಡೆ ಸುಮಾರು ೧೫ ಸಾವಿರದಷ್ಟು ಸಾಲ ಮಾಡಿಕೊಂಡಿದ್ದು, ಈಕೆಯ ಮೈಮೇಲಿದ್ದ ಒಡವೆಗಳನ್ನು ಗಮನಿಸಿದ ಆರೋಪಿಗಳು ಈಕೆಯನ್ನು ಸಾಯಿಸಿ ಒಡೆವೆಗಳನ್ನು ದೋಚಿದರೆ ಸಾಲ ತೀರಿಸಬಹುದು ಎಂಬ ದುರಾಸೆಯಿಂದ ಈ ಕೃತ್ಯ ಎಸಗಿದ್ದಾರೆ.

ಆಕೆ ಪ್ರತಿದಿನ ಅರ್ಕಾವತಿ ನದಿ ದಡದಲ್ಲಿ ಹಸು ಮೇಯಿಸಲು ಹೋಗುತ್ತಿದ್ದುದನ್ನು ಗಮನಿಸಿದ್ದ ಆರೋಪಿಗಳು ಆಕೆಯ ಕುತ್ತಿಗೆಗೆ  ಪ್ಲಾಸ್ಟಿಕ್ ಹಗ್ಗದಿಂದ ಸುತ್ತಿ ಉಸಿರುಗಟ್ಟಿಸಿ ಕೊಲೆ ಮಾಡಿ, ಪ್ಲಾಸ್ಟಿಕ್ ಚೀಲದಲ್ಲಿ ಸುತ್ತಿ ನದಿ ದಡದಲ್ಲಿ ಎಸೆದಿದ್ದರು. ಪೋಷಕರು ನೀಡಿದ ದೂರಿನ ಮೇರೆಗೆ ಈ ತನಿಖೆಯನ್ನು ಎಸ್‌ಪಿ ಸಂತೋಷ್ ಬಾಬು ಮಾರ್ಗದರ್ಶನದಲ್ಲಿ, ರಾಮನಗರ ಡಿವೈಎಸ್ಪಿ  ಮೋಹನ್ ಕುಮಾರ್  ನೇತೃತ್ವದಲ್ಲಿ ಪಿಎಸ್‌ಐ ಗಿರಿರಾಜ್ ಮತ್ತು ತಂಡ ಬೇದಿಸಿದೆ.

ವಿಚಾರಣೆ ನಂತರ ಆರೋಪಿಗಳನ್ನು ನ್ಯಾಯಾಂಗ ಬಂಧನಕ್ಕೆ ನೀಡಲಾಗಿದ್ದು, ಆರೋಪಿಗಳನ್ನು ಶೀಘ್ರವಾಗಿ ಬಂಧಿಸಲು ಯಶಸ್ವಿಯಾದ ಪೋಲೀಸ್ ಅಧಿಕಾರಿಗಳು ಮತ್ತು ಸಿಬ್ಬಂದಿಗಳನ್ನು ಎಸ್ ಪಿ ಸಂತೋಷ್ ಬಾಬು ರವರು ಅಭಿನಂದಿಸಿದ್ದಾರೆ.

ಗೋ ರಾ ಶ್ರೀನಿವಾಸ...

ಮೊ:9845856139.

ಪ್ರತಿಕ್ರಿಯೆಗಳು

  • ನಿಮ್ಮ ಅಭಿಪ್ರಾಯ ತಿಳಿಸುವಲ್ಲಿ ನೀವು ಮೊದಲಿಗರಾಗಿ.

ನಿಮ್ಮ ಅಭಿಪ್ರಾಯಗಳನ್ನು ಬರೆಯಿರಿ/ತಿಳಿಸಿ.

Recent news in ramanagara »

ಮಹರ್ಷಿ ವಾಲ್ಮೀಕಿ ಜಯಂತಿಯ ಅರ್ಥಪೂರ್ಣ ಆಚರಣೆಗೆ ಅಗತ್ಯ ಸಿದ್ಧತೆ ಕೈಗೊಳ್ಳಿ: ಜವರೇಗೌಡ.ಟಿ
ಮಹರ್ಷಿ ವಾಲ್ಮೀಕಿ ಜಯಂತಿಯ ಅರ್ಥಪೂರ್ಣ ಆಚರಣೆಗೆ ಅಗತ್ಯ ಸಿದ್ಧತೆ ಕೈಗೊಳ್ಳಿ: ಜವರೇಗೌಡ.ಟಿ

ರಾಮನಗರ-ಸೆ.೨೬: ಜಿಲ್ಲಾಡಳಿತ ವತಿಯಿಂದ ಮಹರ್ಷಿ ವಾಲ್ಮೀಕಿ ಜಯಂತಿಯನ್ನು ಡಾ.ಬಿ.ಆರ್ ಅಂಬೇಡ್ಕರ್ ಭವನದಲ್ಲಿ ಅಕ್ಟೋಬರ್ ೯ ರಂದು ಅರ್ಥಪೂರ್ಣವಾಗಿ ಆಚರಿಸಲು ನಿರ್ಧರಿಸಿದ್ದು ಆಚರಣೆಗೆ ಬೇಕಾದ ಅಗತ್ಯ ಸಿದ

ಕಾಡುಗೊಲ್ಲ ಸಮುದಾಯದಲ್ಲಿ, ಹೆಣ್ಣು ಸಬಲೆ ಎಂಬ ಮಾತು ಕಲ್ಪನೆಗೂ ನಿಲುಕದ ಸಂಗತಿ:ಡಾ.ಟಿ. ಯಲ್ಲಪ್ಪ
ಕಾಡುಗೊಲ್ಲ ಸಮುದಾಯದಲ್ಲಿ, ಹೆಣ್ಣು ಸಬಲೆ ಎಂಬ ಮಾತು ಕಲ್ಪನೆಗೂ ನಿಲುಕದ ಸಂಗತಿ:ಡಾ.ಟಿ. ಯಲ್ಲಪ್ಪ

ರಾಮನಗರ : ಆರ್ಥಿಕವಾಗಿ, ಸಾಮಾಜಿಕವಾಗಿ, ರಾಜಕೀಯವಾಗಿ ಹಾಗೂ ಶೈಕ್ಷಣಿಕವಾಗಿ ತೀರ ಹಿಂದುಳಿದಿರುವ ಈ ಸಮುದಾಯದಲ್ಲಿ, ಹೆಣ್ಣು ಸಬಲೆ ಎಂಬ ಮಾತು ಕಲ್ಪನೆಗೂ ನಿಲುಕದ ಸಂಗತಿ

ಸರ್ಕಾರಿ ಶಾಲೆಗಳು ಉತ್ಕೃಷ್ಠ ಗುಣಮಟ್ಟದ ಶಿಕ್ಷಣವನ್ನು ನೀಡುತ್ತಿದೆ : ನಿವೃತ್ತ ಮುಖ್ಯಶಿಕ್ಷಕ ಟಿ.ಎಸ್. ಶಿವಲಿಂಗಯ್ಯ
ಸರ್ಕಾರಿ ಶಾಲೆಗಳು ಉತ್ಕೃಷ್ಠ ಗುಣಮಟ್ಟದ ಶಿಕ್ಷಣವನ್ನು ನೀಡುತ್ತಿದೆ : ನಿವೃತ್ತ ಮುಖ್ಯಶಿಕ್ಷಕ ಟಿ.ಎಸ್. ಶಿವಲಿಂಗಯ್ಯ

ರಾಮನಗರ : ಸರ್ಕಾರಿ ಶಾಲೆಗಳು ಉತ್ಕೃಷ್ಠ ಗುಣಮಟ್ಟದ ಶಿಕ್ಷಣವನ್ನು ನೀಡುತ್ತಿದ್ದು ಪೋಷಕರು ಖಾಸಗಿ ಶಾಲೆಗಳಿಗೆ ಮೊರೆ ಹೋಗದೆ ಸರ್ಕಾರಿ ಸೌಲಭ್ಯಗಳನ್ನು ಬಳಸಿಕೊಂಡು ಮಕ್ಕಳಿಗೆ ಉತ್ತಮ ಶಿಕ್ಷಣ ಕೊಡಿಸಬೇಕು

ರಾಮನಗರ ಜಿಲ್ಲಾ ಮಂಗಳ ಮುಖಿಯರ ಅಧ್ಯಕ್ಷರಾಗಿ ರಚನಾ ಮತ್ತು ಮಧುಶ್ರೀ ಆಯ್ಕೆ
ರಾಮನಗರ ಜಿಲ್ಲಾ ಮಂಗಳ ಮುಖಿಯರ ಅಧ್ಯಕ್ಷರಾಗಿ ರಚನಾ ಮತ್ತು ಮಧುಶ್ರೀ ಆಯ್ಕೆ

ರಾಮನಗರ: ನಗರದ ಕಲ್ಯಾಣ ಮಂಟಪದಲ್ಲಿ ಎರಡು ದಿನಗಳ ಕಾಲ ನಡೆದ ಮಂಗಳಮುಖಿಯರ ವಿವಿಧ ಕಾರ್ಯಕ್ರಮದಲ್ಲಿ ಇಬ್ಬರು ಮಂಗಳಮುಖಿಯರನ್ನು ಜಿಲ್ಲಾ ಅಧ್ಯಕ್ಷರ

ರೈತಮಹಿಳೆ ಕೊಲೆ ಮಾಡಿ ಪರಾರಿಯಾಗಿದ್ದ ಆರೋಪಿಗಳ ಬಂಧನ
ರೈತಮಹಿಳೆ ಕೊಲೆ ಮಾಡಿ ಪರಾರಿಯಾಗಿದ್ದ ಆರೋಪಿಗಳ ಬಂಧನ

ರಾಮನಗರ.ಸೆ.೧೨: ದುಶ್ಚಟಗಳಿಗೆ ಬಲಿಯಾಗಿ ಹಲವಾರು ಮಂದಿಗಳಿಂದ ಮಾಡಿದ್ದ ಕೈ ಸಾಲ ತೀರಿಸಲು ಹಾಗೂ ಸಾಲ ಕೊಟ್ಟಿದ್ದನ್ನು ವಾಪಸ್ಸು ಕೇಳಿದ ಮಹಿಳೆಯನ್

ವಿದ್ಯಾರ್ಥಿಗಳಿಗೆ ಅರ್ಜಿ ಸಲ್ಲಿಸಲು ದಿನಾಂಕ ವಿಸ್ತರಣೆ
ವಿದ್ಯಾರ್ಥಿಗಳಿಗೆ ಅರ್ಜಿ ಸಲ್ಲಿಸಲು ದಿನಾಂಕ ವಿಸ್ತರಣೆ

ರಾಮನಗರ, ಸೆ.09: 2022-23ನೇ ಸಾಲಿಗೆ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯ ಮೆಟ್ರಿಕ್ ನಂತರದ ವಿದ್ಯಾರ್ಥಿನಿಲಯಗಳಲ್ಲಿ ಹೊಸದಾಗಿ ಪ್ರವೇಶ ಬಯಸುವ ಸಾಮಾನ್ಯ ಪದವಿ ಕೋರ್ಸಿನ  ವಿದ್ಯಾರ್ಥಿ ನಿಲಯಗಳ

ನಿಕ್ಷಯ್ ಮಿತ್ರ-2.0 ಯೋಜನೆಗೆ ಸಹಕರಿಸಿ: ಡಾ. ಕುಮಾರ್
ನಿಕ್ಷಯ್ ಮಿತ್ರ-2.0 ಯೋಜನೆಗೆ ಸಹಕರಿಸಿ: ಡಾ. ಕುಮಾರ್

ರಾಮನಗರ, ಸೆ.09: ಚುನಾಯಿತ ಪ್ರತಿನಿಧಿಗಳು, ಖಾಸಗಿ ಸ್ವಯಂ ಸೇವಾ ಸಂಸ್ಥೆಗಳು, ಮತ್ತು ಖಾಸಗಿ ಸಂಘ-ಸಂಸ್ಥೆಗಳು ಕ್ಷಯರೋಗಿಗಳನ್ನು ಗುರುತಿಸಿ ದತ್ತುಪಡೆದು ನಿಕ್ಷಯ್ ಪೋಷಣ್ ಲಿಂಕ್‌ನಲ್ಲಿ ನೊಂದಾಯಿಸಿ ಅವ

ನೂತನ ಕನ್ನಡ ಸಾಹಿತ್ಯ ಪರಿಷತ್ತು ಘಟಕ ಉದ್ಘಾಟನೆ
ನೂತನ ಕನ್ನಡ ಸಾಹಿತ್ಯ ಪರಿಷತ್ತು ಘಟಕ ಉದ್ಘಾಟನೆ

ರಾಮನಗರ, ಸೆ.09: ಶಾಲಾ ಪಠ್ಯದ ವಿಚಾರಗಳನ್ನು ಶಿಕ್ಷಕರು ಹೇಳಿಕೊಡ್ತಾರೆ. ಸಾಹಿತ್ಯ ಪರಿಷತ್ತೂ ಒಳಗೊಂಡಂತೆ ನಾಡಿನ ವಿವಿಧ ಸಂಘ ಸಂಸ್ಟೆಗಳು ಸಾಕಷ್

ಜಿಲ್ಲೆಯಲ್ಲಿ ನಡೆಯುತ್ತಿರುವ ಮತಾಂತರ ತಡೆಗಟ್ಟಲು ಸೂಕ್ತ ಕ್ರಮಕೈಗೊಳ್ಳುವಂತೆ ಮನವಿ
ಜಿಲ್ಲೆಯಲ್ಲಿ ನಡೆಯುತ್ತಿರುವ ಮತಾಂತರ ತಡೆಗಟ್ಟಲು ಸೂಕ್ತ ಕ್ರಮಕೈಗೊಳ್ಳುವಂತೆ ಮನವಿ

ಚನ್ನಪಟ್ಟಣ: ಜಿಲ್ಲೆಯಲ್ಲಿ ಅವ್ಯವಾಹಿತವಾಗಿ ನಡೆಯುತ್ತಿರುವ ಮತಾಂತರ ಕಾರ್ಯವನ್ನು ತಡೆಯುವ ನಿಟ್ಟಿನಲ್ಲಿ ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ಹಿಂದು ಜಾ

ಅತೀವೃಷ್ಠಿಯಿಂದ ಹಾನಿಗೊಳಗಾದ ಪ್ರದೇಶಗಳಿಗೆ ಶೀಘ್ರ ಪರಿಹಾರ: ಅವಿನಾಶ್ ಮೆನನ್
ಅತೀವೃಷ್ಠಿಯಿಂದ ಹಾನಿಗೊಳಗಾದ ಪ್ರದೇಶಗಳಿಗೆ ಶೀಘ್ರ ಪರಿಹಾರ: ಅವಿನಾಶ್ ಮೆನನ್

ರಾಮನಗರ, ಸೆ.೦೯: ಜಿಲ್ಲೆಯಲ್ಲಿ ಕಳೆದ ಬಾರಿಗಿಂತ ಆಗಸ್ಟ್ ಮಾಹೆಯಲ್ಲಿ ಹಾಗೂ ಸೆಪ್ಟೆಂಬರ್ ಮಾಹೆಯ ಒಂಭತ್ತು ದಿನಗಳಲ್ಲಿ ಸಾಮಾನ್ಯ ಮಳೆಗಿಂತ ಶೇ.2.5 ಪಟ್ಟು ಹೆಚ್ಚು ಮಳೆಯಾಗಿದ್ದು, ರಾಷ್ಟ್ರೀಯ ಹೆದ್ದಾರ

Top Stories »  

Top ↑