Tel: 7676775624 | Mail: info@yellowandred.in

Language: EN KAN

    Follow us :


ಸಚಿವ ಜಮೀರ್ ಅಹ್ಮದ್ ಖಾನ್ ವಿರುದ್ಧ ಹೇಳಿಕೆ; ಅಲ್ಪಸಂಖ್ಯಾತ ಕಾಂಗ್ರೆಸ್ ಮುಖಂಡರಿಂದ ಪ್ರತಿಭಟನೆಯ ಎಚ್ಚರಿಕೆ

Posted date: 05 Oct, 2023

Powered by:     Yellow and Red

ಸಚಿವ ಜಮೀರ್ ಅಹ್ಮದ್ ಖಾನ್ ವಿರುದ್ಧ ಹೇಳಿಕೆ; ಅಲ್ಪಸಂಖ್ಯಾತ ಕಾಂಗ್ರೆಸ್ ಮುಖಂಡರಿಂದ ಪ್ರತಿಭಟನೆಯ ಎಚ್ಚರಿಕೆ

ರಾಮನಗರ:ಚನ್ನಪಟ್ಟಣ: ವಸತಿ ಹಾಗೂ ವಕ್ಫ್ ಸಚಿವ ಮೇಲಾಗಿ ಮುಸ್ಲಿಂ ಸಮುದಾಯದ ರಾಜ್ಯ ಮುಖಂಡ ಜಮೀರ್ ಅಹ್ಮದ್ ಖಾನ್ ಅವರ ವಿರುದ್ಧ ಜೆಡಿಎಸ್ ಅಲ್ಪಸಂಖ್ಯಾತರ ಘಟಕದ ತಾಲೂಕು ಅಧ್ಯಕ್ಷ ಸೈಯದ್ ಫಾಸಿಲ್ ನೀಡಿರುವ ಹೇಳಿಕೆಗೆ ಈ ಕೂಡಲೇ ಕ್ಷಮೆ ಕೇಳಬೇಕು, ಇಲ್ಲವಾದರೆ ಪ್ರತಿಭಟನೆ ಮಾಡಬೇಕಾಗುತ್ತದೆ ಎಂದು ನಗರಸಭೆ ಕಾಂಗ್ರೆಸ್ ಸದಸ್ಯ ವಾಸಿಲಾಲಿಖಾನ್ ಎಚ್ಚರಿಕೆ ನೀಡಿದರು.


ನಗರದಲ್ಲಿ ಆಯೋಜಿಸಿದ್ದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಮಾಜಿ ಮುಖ್ಯಮಂತ್ರಿ ಹೆಚ್.ಡಿ. ಕುಮಾರಸ್ವಾಮಿ ಅವರ ಹೇಳಿಕೆಯನ್ನು ಸಮರ್ಥಿಸುವ ನಿಟ್ಟಿನಲ್ಲಿ, ಫಾಜಿಲ್ ಸಚಿವ ಜಮೀರ್ ಅಹ್ಮದ್ ವಿರುದ್ದ ಹಗುರವಾಗಿ ಮಾತನಾಡಿರುವುದು ಸರಿಯಿಲ್ಲ ಎಂದು ಕಿಡಿ ಕಾರಿದರು. ವಸತಿ ಸಚಿವ ಜಮೀರ್ ಅಹ್ಮದ್ ಖಾನ್ ಕುರಿತು ಹಗುರವಾಗಿ ಮಾತನಾಡಿರುವ ಸೈಯ್ಯದ್ ಫಾಜಿಲ್ ಈ ಕೂಡಲೇ ಬೇಷರತ್ ಕ್ಷಮೆಯಾಚಿಸಬೇಕು. ಇಲ್ಲದಿದ್ದಲ್ಲಿ ಅವರ ವಿರುದ್ಧ ಪ್ರತಿಭಟನೆ ನಡೆಸಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದರು.


ಈ ಹಿಂದೆ ಹೆಚ್.ಡಿ. ಕುಮಾರಸ್ವಾಮಿ ಅವರು ಮೊದಲ ಬಾರಿ ಮುಖ್ಯಮಂತ್ರಿ ಆಗಲು ಜಮೀರ್ ಅಹ್ಮದ್, ಮಾಗಡಿ ಶಾಸಕ ಎಚ್.ಸಿ.ಬಾಲಕೃಷ್ಣ, ಸಚಿವ ಚಲುವರಾಯಸ್ವಾಮಿ ಮುಂತಾದವರು ಕಾರಣರಾಗಿದ್ದರು. ಅಂದು ಕುಮಾರಸ್ವಾಮಿಯನ್ನು ಬೆಂಬಲಿಸದಿದ್ದಲ್ಲಿ ಅವರು ಸಿಎಂ ಆಗುತ್ತಲೇ ಇರಲಿಲ್ಲ ಎಂದರು. ಕಾಲಕಾಲಕ್ಕೆ ಈ ತಂಡ ಕುಮಾರಸ್ವಾಮಿ ಅವರನ್ನು ಬೆಂಬಲಿಸಿದ ಕಾರಣಕ್ಕೆ ಅವರು ಬೆಳೆದರು. ಇದರ ಅರಿವಿಲ್ಲದೇ ಫಾಜಿಲ್ ಜಮೀರ್ ಅಹ್ಮದ್ ಅವರ ಕುರಿತು ಹೇಳಿಕೆ ನೀಡಿರುವುದು ಖಂಡನೀಯ ಎಂದರು.


ಆಗ ಅಟಲ್ ಬಿಹಾರಿ ವಾಜಪೇಯಿ, ಯಡಿಯೂರಪ್ಪ ಅವರಂತಹ ನಾಯಕರು ಇದ್ದರು, ಈ ಹಿಂದೆ ಕುಮಾರಸ್ವಾಮಿ ಬಿಜೆಪಿಯೊಂದಿಗೆ ಕೈಜೋಡಿಸಿ ಅಧಿಕಾರ ನಡೆಸಿದಾಗ ಬಿಜೆಪಿ ಇಷ್ಟರ ಮಟ್ಟದ ಕೋಮುವಾದಿ ಪಕ್ಷವಾಗಿರಲಿಲ್ಲ. ಅಂದಿನ ನಾಯಕರು ಎಲ್ಲಾ ಸಮುದಾಯದ ಜನರನ್ನು ಒಂದಾಗಿ ಕಾಣುತ್ತಿದ್ದರು. ಆದರೆ, ಬಸವರಾಜ ಬೊಮ್ಮಾಯಿ ಸರ್ಕಾರ ಬಂದ ನಂತರ ರಾಜ್ಯದಲ್ಲಿ ಕೋಮು ಸೌಹಾರ್ದತೆ ಹಾಳಾಯಿತು. ಇಂಥ ಹೊತ್ತಿನಲ್ಲಿ ಬಿಜೆಪಿಯೊಂದಿಗೆ ಜೆಡಿಎಸ್ ಕೈಜೋಡಿಸಿರುವುದು ನಮ್ಮ ಸಮುದಾಯಕ್ಕೆ ಬೇಸರ ತರಿಸಿದೆ ಎಂದರು.


ನಗರಸಭೆಯ ಮಾಜಿ ಸದಸ್ಯ ಭಾವಸಾ ಮಾತನಾಡಿ ಈ ಹಿಂದಿನಿಂದಲೂ ಅಲ್ಪಸಂಖ್ಯಾತ ಸಮುದಾಯ ಜೆಡಿಎಸ್ ಅನ್ನು ಬೆಂಬಲಿಸಿಕೊಂಡು ಬಂದಿತ್ತು. ಹೆಚ್.ಡಿ.ದೇವೇಗೌಡರು ಮುಖ್ಯಮಂತ್ರಿಯಾಗಲು, ಕುಮಾರಸ್ವಾಮಿ ಎರಡು ಬಾರಿ ರಾಜ್ಯದ ಮುಖ್ಯಮಂತ್ರಿಯಾಗುವಲ್ಲಿ ಮುಸ್ಲಿಂ ಸಮುದಾಯದ ಕೊಡುಗೆ ಹೆಚ್ಚಿದೆ. ವಿಧಾನಸಭೆ ಚುನಾವಣೆಯಲ್ಲಿ ರಾಮನಗರದಲ್ಲಿ ತಮ್ಮ ಪುತ್ರ ನಿಖಿಲ್ ಕುಮಾರಸ್ವಾಮಿ ಸೋತ ಕಾರಣಕ್ಕೆ ಕುಮಾರಸ್ವಾಮಿ ಬಿಜೆಪಿಯೊಂದಿಗೆ ಮೈತ್ರಿ ಮಾಡಿಕೊಳ್ಳುವ ನಿರ್ಧಾರ ಮಾಡಿದ್ದಾರೆ.  ಅವರ ಈ ನಿರ್ಧಾರ ಸರಿಯೋ ತಪ್ಪೋ ಎಂಬುದನ್ನು ಮುಂದಿನ ದಿನಗಳಲ್ಲಿ ರಾಜ್ಯದ ಜನರೇ ತೀರ್ಮಾನಿಸಲಿದ್ದಾರೆ ಎಂದರು.


ನಂತರ ನಗರಸಭೆ ಸದಸ್ಯ ಲಿಯಾಕತ್ ಆಲಿಖಾನ್ ಮಾತನಾಡಿ, ಕುಮಾರಸ್ವಾಮಿಯವರಿಗೆ ರಾಮನಗರದಲ್ಲಿ ತಮ್ಮ ಮಗ ಗೆಲ್ಲಬೇಕಿತ್ತು ಅಷ್ಟೇ. ಆದರೆ ಅವರು ಸೋತರು. ಅದಕ್ಕಾಗಿ ಈಗ ಲೋಕಸಭೆ ಚುನಾವಣೆಯಲ್ಲಿ ಸಂಸದ ಡಿ.ಕೆ.ಸುರೇಶ್ ಅವರನ್ನು ಸೋಲಿಸುವ ನಿಟ್ಟಿನಲ್ಲಿ ಬಿಜೆಪಿಯೊಂದಿಗೆ ಮೈತ್ರಿ ಮಾಡಿಕೊಂಡಿದ್ದಾರೆ ಎಂದು ಬೇಸರ ವ್ಯಕ್ತಪಡಿಸಿದರು.


ಈ ಸಂದರ್ಭದಲ್ಲಿ ನಗರಸಭೆ ಸದಸ್ಯ ಮಥೀನ್ ಖಾನ್, ಸಾಬೀಲ್, ಲೋಕೇಶ್ ಮತ್ತಿತರರು ಉಪಸ್ಥಿತರಿದ್ದರು.


ಗೋ ರಾ ಶ್ರೀನಿವಾಸ...

ಮೊ:9845856139.

ಪ್ರತಿಕ್ರಿಯೆಗಳು

  • ನಿಮ್ಮ ಅಭಿಪ್ರಾಯ ತಿಳಿಸುವಲ್ಲಿ ನೀವು ಮೊದಲಿಗರಾಗಿ.

ನಿಮ್ಮ ಅಭಿಪ್ರಾಯಗಳನ್ನು ಬರೆಯಿರಿ/ತಿಳಿಸಿ.

Recent news in ramanagara »

ಕನ್ನಡದ ಕಟ್ಟಾಳು, ಸಹಕಾರಿ ಧುರೀಣ ಸಿಂ ಲಿಂ ನಾಗರಾಜು ಸ್ಮರಣ ಕಾರ್ಯಕ್ರಮ
ಕನ್ನಡದ ಕಟ್ಟಾಳು, ಸಹಕಾರಿ ಧುರೀಣ ಸಿಂ ಲಿಂ ನಾಗರಾಜು ಸ್ಮರಣ ಕಾರ್ಯಕ್ರಮ

ಚನ್ನಪಟ್ಟಣ:  ಹಲವಾರು ಕ್ಷೇತ್ರಗಳಲ್ಲಿ ತಮ್ಮನ್ನು ತೊಡಗಿಸಿಕೊಂಡಿದ್ದ ಸಿಂ.ಲಿಂ.ನಾಗರಾಜು ಅವರು ವಯಕ್ತಿಕವಾಗಿ ಹಾಗೂ

ಕೌಟುಂಬಿಕವಾಗಿ ತಮಗೆ ಏ

ಬುಧವಾರ ಕೆಆರ್ ಪೇಟೆಯಲ್ಲಿ ನಡೆಯುವ ಕಸಾಪ ದತ್ತಿ ಪ್ರಶಸ್ತಿ ಸ್ವೀಕರಿಸಲಿರುವ ಜಿಲ್ಲೆಯ ಜಾನಪದ ಕಲಾವಿದೆ ಲಕ್ಷ್ಮಿ ಶ್ರೀನಿವಾಸ
ಬುಧವಾರ ಕೆಆರ್ ಪೇಟೆಯಲ್ಲಿ ನಡೆಯುವ ಕಸಾಪ ದತ್ತಿ ಪ್ರಶಸ್ತಿ ಸ್ವೀಕರಿಸಲಿರುವ ಜಿಲ್ಲೆಯ ಜಾನಪದ ಕಲಾವಿದೆ ಲಕ್ಷ್ಮಿ ಶ್ರೀನಿವಾಸ

ರಾಮನಗರ/ಚನ್ನಪಟ್ಟಣ:ಕನ್ನಡ ಸಾಹಿತ್ಯ ಪರಿಷತ್ತು (ಕಸಾಪ) ೨೦೨೦ ೨೦೨೧ ಹಾಗೂ ೨೦೨೨ ನೇ ಸಾಲಿನ "ದಿ. ಶ್ರೀಮತಿ ತಾಯಮ್ಮ ಎಸ್.ಸಿ. ಮಲ್ಲಯ್ಯ ಜಾನಪದ ದತ್ತಿ ಪ್ರಶ

ತಾಲ್ಲೂಕು ಆಡಳಿತ ಸಂಪೂರ್ಣ ನಿಷ್ಕ್ರಿಯವಾಗಿದೆ ರೈತ ಸಂಘದ ವಿಭಾಗೀಯ ಅಧ್ಯಕ್ಷ ಮಲ್ಲಯ್ಯ
ತಾಲ್ಲೂಕು ಆಡಳಿತ ಸಂಪೂರ್ಣ ನಿಷ್ಕ್ರಿಯವಾಗಿದೆ ರೈತ ಸಂಘದ ವಿಭಾಗೀಯ ಅಧ್ಯಕ್ಷ ಮಲ್ಲಯ್ಯ

ಚನ್ನಪಟ್ಟಣ: ತಾಲ್ಲೂಕು ಆಡಳಿತ ಸಂಪೂರ್ಣವಾಗಿ ನಿಷ್ಕ್ರಿಯವಾಗಿದೆ, ಇಡೀ ತಾಲ್ಲೂಕನ್ನು ನಿಯಂತ್ರಿಸಬೇಕಾದ ದಂಡಾಧಿಕಾರಿಗಳು ತೆಪ್ಪಗಿದ್ದಾರೆ. ಇದಕ್ಕೆ ಇತ್ತೀಚ

ಚಾಲಕನ ನಿಯಂತ್ರಣ ತಪ್ಪಿದ ಸಾರಿಗೆ ಬಸ್, ಡಿಪೋ ತಡೆಗೋಡೆಗೆ ಢಿಕ್ಕಿ
ಚಾಲಕನ ನಿಯಂತ್ರಣ ತಪ್ಪಿದ ಸಾರಿಗೆ ಬಸ್, ಡಿಪೋ ತಡೆಗೋಡೆಗೆ ಢಿಕ್ಕಿ

ಚನ್ನಪಟ್ಟಣ: ಇತ್ತೀಚೆಗೆ ತಾಲ್ಲೂಕಿನಾದ್ಯಂತ ಸಾರಿಗೆ ಬಸ್ಸುಗಳ ಅಪಘಾತ ಹೆಚ್ಚಾಗುತ್ತಿದ್ದು, ಅಮಾಯಕರ ಪ್ರಾಣವನ್ನು ಬಲಿ ಪಡೆಯುತ್ತಿವೆ. ರಸ್ತೆಯ ಮೇಲೆ ಸಂಚರಿ

ದೀಪಾವಳಿ ನೆಪದಲ್ಲಿ ಅನಾಥವಾದ ನೆಹರು/ಮಕ್ಕಳ ಜಯಂತಿ
ದೀಪಾವಳಿ ನೆಪದಲ್ಲಿ ಅನಾಥವಾದ ನೆಹರು/ಮಕ್ಕಳ ಜಯಂತಿ

ರಾಮನಗರ: ಇಂದು ನವೆಂಬರ್ ೧೪ ಮಕ್ಕಳ ದಿನಾಚರಣೆ, ಚಾಚಾಜಿ ಅಡ್ಡ ಹೆಸರಿನ ಸ್ವತಂತ್ರ ಭಾರತದ ಪ್ರಪ್ರಥಮ ಪ್ರಧಾನಮಂತ್ರಿ ಜವಾಹರಲಾಲ್ ನೆಹರು ರವರ ಹೆಸರಿನಲ್ಲಿ ರ

ಸಾರಿಗೆ ಬಸ್ ಸ್ಟಿಯರಿಂಗ್ ಕಟ್, ಸ್ಕೂಟರ್ ಗೆ ಢಿಕ್ಕಿ ಇಬ್ಬರ ಸಾವು, ಚಾಲಕನ ಸಮಯ ಪ್ರಜ್ಞೆಯಿಂದ ಪ್ರಯಾಣಿಕರ ಪಾರು
ಸಾರಿಗೆ ಬಸ್ ಸ್ಟಿಯರಿಂಗ್ ಕಟ್, ಸ್ಕೂಟರ್ ಗೆ ಢಿಕ್ಕಿ ಇಬ್ಬರ ಸಾವು, ಚಾಲಕನ ಸಮಯ ಪ್ರಜ್ಞೆಯಿಂದ ಪ್ರಯಾಣಿಕರ ಪಾರು

ಚನ್ನಪಟ್ಟಣ: ನಗರಕ್ಕೆ ಹೊಂದಿಕೊಂಡಿರುವ ತಿಟ್ಟಮಾರನಹಳ್ಳಿ ಗ್ರಾಮದ ನಡುವಿನ ರಾಮಮ್ಮ ನ ಕೆರೆ ಏರಿಯ ಮೇಲೆ ಸೋಮವಾರ ಮುಂಜಾನೆ ಸಾರಿಗೆ ಬಸ್ ಮತ್ತು ಸ್ಕೂಟರ್ ನಡ

ತಾಲ್ಲೂಕು ವಕೀಲರ ಸಂಘದ ನೂತನ ಅಧ್ಯಕ್ಷರಾಗಿ ಟಿ ವಿ ಗಿರೀಶ್ ಆಯ್ಜೆ, ಹಲವರಿಂದ ಅಭಿನಂದನೆ
ತಾಲ್ಲೂಕು ವಕೀಲರ ಸಂಘದ ನೂತನ ಅಧ್ಯಕ್ಷರಾಗಿ ಟಿ ವಿ ಗಿರೀಶ್ ಆಯ್ಜೆ, ಹಲವರಿಂದ ಅಭಿನಂದನೆ

ಚನ್ನಪಟ್ಟಣ:ನಗರದ ನ್ಯಾಯಾಲಯದಲ್ಲಿರುವ ವಕೀಲರ ಸಂಘದ ಕಛೇರಿಯಲ್ಲಿ ತಾಲ್ಲೂಕು ವಕೀಲರ ಸಂಘದ ಚುನಾವಣೆಯು ಶನಿವಾರ ಜರುಗಿದ್ದು ಅತ್ಯಧಿಕ ಮತಗಳನ್ನು ಪಡೆಯುವ ಮೂಲ

ಸಿಂ ಲಿಂ ನಾಗರಾಜು ಸತ್ಯಸಂಧರು, ವಾಟಾಳ್ ನಾಗರಾಜು ಅಭಿಮತ
ಸಿಂ ಲಿಂ ನಾಗರಾಜು ಸತ್ಯಸಂಧರು, ವಾಟಾಳ್ ನಾಗರಾಜು ಅಭಿಮತ

ಚನ್ನಪಟ್ಟಣ; ಸಿಂ ಲಿಂ ನಾಗರಾಜು ಸತ್ಯಸಂಧರು, ಯೋಗ್ಯರು, ನಂಬಿಕಸ್ತರು, ವಿವೇಕವುಳ್ಳವರು, ವಿಚಾರವಂತರು, ಸರಳಜೀವಿ ಇಂತಹವರು ನನ್ನ ಸ್ನೇಹಿತರಾಗಿ, ಒಡನಾಡಿಯಾ

ತೌಟನಹಳ್ಳಿ ಬಳಿ ಹತ್ತಾರು ಎಕರೆ ಸರ್ಕಾರಿ ಗುಡ್ಡೆ, ದಲಿತರ ಜಮೀನು ಒತ್ತುವರಿ ಮಾಡಿದ ಬಿಜೆಪಿ ಮುಖಂಡ, ಕ್ರಮಕ್ಕೆ ಆಗ್ರಹ
ತೌಟನಹಳ್ಳಿ ಬಳಿ ಹತ್ತಾರು ಎಕರೆ ಸರ್ಕಾರಿ ಗುಡ್ಡೆ, ದಲಿತರ ಜಮೀನು ಒತ್ತುವರಿ ಮಾಡಿದ ಬಿಜೆಪಿ ಮುಖಂಡ, ಕ್ರಮಕ್ಕೆ ಆಗ್ರಹ

ಚನ್ನಪಟ್ಟಣ: ತಾಲ್ಲೂಕಿನ ಮಳೂರು ಹೋಬಳಿ ಯ ತೌಟನಹಳ್ಳಿ ಗ್ರಾಮದ ಸರ್ವೇ ನಂಬರ್ ೭೪ ರಲ್ಲಿ ೧೭೦ ಎಕರೆ ಸರ್ಕಾರಿ ಜಮೀನು ಇದ್ದು, ಸ್ಥಳೀಯ ರೈತರ ಜಾನುವಾರುಗಳಿಗೆ

ಹಲವು ಎಡವಟ್ಟುಗಳೊಂದಿಗೆ ರಾಜ್ಯೋತ್ಸವ ಆಚರಿಸಿದ ತಾಲ್ಲೂಕು ಆಡಳಿತ
ಹಲವು ಎಡವಟ್ಟುಗಳೊಂದಿಗೆ ರಾಜ್ಯೋತ್ಸವ ಆಚರಿಸಿದ ತಾಲ್ಲೂಕು ಆಡಳಿತ

ಚನ್ನಪಟ್ಟಣ: ಚನ್ನಪಟ್ಟಣ ನಗರ ಮತ್ತು ತಾಲ್ಲೂಕು ಕೇಂದ್ರವೂ ಪುರಾಣ, ಇತಿಹಾಸ, ಚಳವಳಿ ಸೇರಿದಂತೆ ಅನೇಕ ವಿಚಾರಗಳಲ್ಲಿ ಸ್ವಾತಂತ್ರ್ಯ ಪೂರ್ವ ಹಾಗೂ

Top Stories »  


Top ↑