Tel: 7676775624 | Mail: info@yellowandred.in

Language: EN KAN

    Follow us :

ಸರ್ಕಾರಿ ಶಾಲೆಗಳು ಉತ್ಕೃಷ್ಠ ಗುಣಮಟ್ಟದ ಶಿಕ್ಷಣವನ್ನು ನೀಡುತ್ತಿದೆ : ನಿವೃತ್ತ ಮುಖ್ಯಶಿಕ್ಷಕ ಟಿ.ಎಸ್. ಶಿವಲಿಂಗಯ್ಯ

Posted date: 22 Sep, 2022

Powered by:     Yellow and Red

ಸರ್ಕಾರಿ ಶಾಲೆಗಳು ಉತ್ಕೃಷ್ಠ ಗುಣಮಟ್ಟದ ಶಿಕ್ಷಣವನ್ನು ನೀಡುತ್ತಿದೆ : ನಿವೃತ್ತ ಮುಖ್ಯಶಿಕ್ಷಕ ಟಿ.ಎಸ್. ಶಿವಲಿಂಗಯ್ಯ

ರಾಮನಗರ : ಸರ್ಕಾರಿ ಶಾಲೆಗಳು ಉತ್ಕೃಷ್ಠ ಗುಣಮಟ್ಟದ ಶಿಕ್ಷಣವನ್ನು ನೀಡುತ್ತಿದ್ದು ಪೋಷಕರು ಖಾಸಗಿ ಶಾಲೆಗಳಿಗೆ ಮೊರೆ ಹೋಗದೆ ಸರ್ಕಾರಿ ಸೌಲಭ್ಯಗಳನ್ನು ಬಳಸಿಕೊಂಡು ಮಕ್ಕಳಿಗೆ ಉತ್ತಮ ಶಿಕ್ಷಣ ಕೊಡಿಸಬೇಕು ಎಂದು ನಿವೃತ್ತ ಮುಖ್ಯಶಿಕ್ಷಕ ಟಿ.ಎಸ್. ಶಿವಲಿಂಗಯ್ಯ ತಿಳಿಸಿದರು.

ತಾಲ್ಲೂಕಿನ ಕೂಟಗಲ್ ಹೋಬಳಿಯ ತಿಮ್ಮಸಂದ್ರ ಗ್ರಾಮದ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಯಲ್ಲಿ ಜಿಲ್ಲಾ ಲೇಖಕರ ವೇದಿಕೆ ವತಿಯಿಂದ ಹಮ್ಮಿಕೊಂಡಿದ್ದ ನೋಟ್ ಬುಕ್ ವಿತರಣೆ, ಉಪನ್ಯಾಸ ಹಾಗೂ ಗೀತಗಾಯನ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮತನಾಡಿದರು.

ಪ್ರತಿಯೊಂದು ಮಗುವಿಗೆ ಉತ್ತಮ ಶಿಕ್ಷಣ ದೊರೆಯಬೇಕೆಂಬ ನಿಟ್ಟಿನಲ್ಲಿ ಸರ್ಕಾರಿ ಬಿಸಿಯೂಟ, ಉಚಿತ ಬೈಸಿಕಲ್, ಹೆಣ್ಣು ಮಕ್ಕಳಿಗೆ ಉಚಿತ ಶಿಕ್ಷಣ ಸೇರಿದಂತೆ ಹಲವು ಯೋಜನೆಗಳನ್ನು ರೂಪಿಸಿದ್ದು ಗ್ರಾಮೀಣ ಭಾಗದ ಪೋಷಕರು ಹೆಚ್ಚಿನ ರೀತಿಯಲ್ಲಿ ಅನುಕೂಲ ಪಡೆದುಕೊಳ್ಳಬೇಕು ಎಂದರು.

ಖಾಸಗಿ ಶಾಲೆಗಳು ಬಣ್ಣ ಬಣ್ಣದ ಪೋಷಾಕುಗಳನ್ನು ನೀಡುವ ಮೂಲಕ ಪೋಷಕರನ್ನು ಮರಳು ಮಾಡುತ್ತಿದ್ದಾರೆಯೇ ವಿನಹ ಗುಣಮಟ್ಟದ ಶಿಕ್ಷಕರಿಂದ ಮಕ್ಕಳಿಗೆ ಶಿಕ್ಷಣ ನೀಡುತ್ತಿಲ್ಲ. ಭಾಹ್ಯ ಅಂದಕ್ಕೆ ಮರಳಾಗಿ ಪೋಷಕರು ಮಕ್ಕಳ ಭವಿಷ್ಯವನ್ನು ಬಲಿಕೊಡಬಾರದು ಎಂದು ಸಲಹೆ ನೀಡಿದರು. 

ನಿವೃತ್ತ ಸಹಾಯಕ ಶಿಕ್ಷಣಾಧಿಕಾರಿ ಕೆ.ಪಿ. ಶಿವಪ್ಪ ಮಾತನಾಡಿ ಪ್ರತಿಯೊಂದು ಮಕ್ಕಳಿಗೆ ಸಮಾನತೆಯ ದೃಷ್ಠಿಕೋನವನ್ನು ಬೆಳೆಸುವ ಏಕೈಕ ಕೇಂದ್ರ ಎಂದರೆ ಶಿಕ್ಷಣ ಸಂಸ್ಥೆಗಳು ಮಾತ್ರವಾಗಿದ್ದು ಶಿಕ್ಷಕರು ಮಕ್ಕಳಲ್ಲಿ ಪ್ರತಿಭೆಯನ್ನು ಗುರ್ತಿಸಿ ವೈಚಾರಿಕ ಮತ್ತು ವೈಜ್ಞಾನಿಕ ಮನೋಭಾವನೆಯನ್ನು ಬೆಳೆಸಬೇಕು. ಇದರಿಂದ ಮಾತ್ರ ಉತ್ತಮ ಸಮಾಜ ನಿರ್ಮಿಸಲು ಸಾಧ್ಯವಾಗುತ್ತದೆ ಎಂದರು.

ಮಕ್ಕಳ ಕಲಿಕೆ ಎನ್ನುವುದು ನಿರಂತರ ಪ್ರಕ್ರಿಯೆಯಾಗಬೇಕೆ ಹೊರತು ನಾಲ್ಕು ಗೋಡೆಗೆ ಸೀಮಿತವಾಗಬಾರದು ಎಂದು ತಿಳಿಸಿದರು. 

ಕಾರ್ಯಕ್ರಮದಲ್ಲಿ ಜಿಲ್ಲಾ ಲೇಖಕರ ವೇದಿಕೆಯ ಸಂಸ್ಥಾಪಕ ಅಧ್ಯಕ್ಷ ಕೂ.ಗಿ. ಗಿರಿಯಪ್ಪ, ಪ್ರಧಾನ ಕಾರ್ಯದರ್ಶಿ ಎಸ್. ರುದ್ರೇಶ್ವರ, ಸಾಹಿತಿಗಳಾದ ಪೂರ್ಣಚಂದ್ರ, ಎಂ.ಸಿ. ಶಿವಲಿಂಗಪ್ಪ, ಎಸ್‌ಡಿಎಂಸಿ ಅಧ್ಯಕ್ಷ ಗಣೇಶ್, ಗ್ರಂಥಪಾಲಕಿ ಕಲಾವತಿ, ಶಾಲೆಯ ಮುಖ್ಯಶಿಕ್ಷಕಿ ಸುಜಾತ, ಶಿಕ್ಷಕ ರಾಮಣ್ಣ, ಗಾಯಕರಾದ ಟಿ.ಎಂ. ಕಮಲಾಕ್ಷಿ, ಕೆಂಗಲ್ ವಿನಯ್ ಕುಮಾರ್, ಇರುಳಿಗ ಸಮುದಾಯದ ಮುಖಂಡ ಶಿವು, ಗೋಪಾಲ್ ಇತರರು ಇದ್ದರು. 

ಸನ್ಮಿತ್ರ ಅವರಿಂದ ಸಂಬಂಧಿತ ವೀಡಿಯೊಗಳು

ಪ್ರತಿಕ್ರಿಯೆಗಳು

  • ನಿಮ್ಮ ಅಭಿಪ್ರಾಯ ತಿಳಿಸುವಲ್ಲಿ ನೀವು ಮೊದಲಿಗರಾಗಿ.

ನಿಮ್ಮ ಅಭಿಪ್ರಾಯಗಳನ್ನು ಬರೆಯಿರಿ/ತಿಳಿಸಿ.

Recent news in ramanagara »

ಮಹರ್ಷಿ ವಾಲ್ಮೀಕಿ ಜಯಂತಿಯ ಅರ್ಥಪೂರ್ಣ ಆಚರಣೆಗೆ ಅಗತ್ಯ ಸಿದ್ಧತೆ ಕೈಗೊಳ್ಳಿ: ಜವರೇಗೌಡ.ಟಿ
ಮಹರ್ಷಿ ವಾಲ್ಮೀಕಿ ಜಯಂತಿಯ ಅರ್ಥಪೂರ್ಣ ಆಚರಣೆಗೆ ಅಗತ್ಯ ಸಿದ್ಧತೆ ಕೈಗೊಳ್ಳಿ: ಜವರೇಗೌಡ.ಟಿ

ರಾಮನಗರ-ಸೆ.೨೬: ಜಿಲ್ಲಾಡಳಿತ ವತಿಯಿಂದ ಮಹರ್ಷಿ ವಾಲ್ಮೀಕಿ ಜಯಂತಿಯನ್ನು ಡಾ.ಬಿ.ಆರ್ ಅಂಬೇಡ್ಕರ್ ಭವನದಲ್ಲಿ ಅಕ್ಟೋಬರ್ ೯ ರಂದು ಅರ್ಥಪೂರ್ಣವಾಗಿ ಆಚರಿಸಲು ನಿರ್ಧರಿಸಿದ್ದು ಆಚರಣೆಗೆ ಬೇಕಾದ ಅಗತ್ಯ ಸಿದ

ಕಾಡುಗೊಲ್ಲ ಸಮುದಾಯದಲ್ಲಿ, ಹೆಣ್ಣು ಸಬಲೆ ಎಂಬ ಮಾತು ಕಲ್ಪನೆಗೂ ನಿಲುಕದ ಸಂಗತಿ:ಡಾ.ಟಿ. ಯಲ್ಲಪ್ಪ
ಕಾಡುಗೊಲ್ಲ ಸಮುದಾಯದಲ್ಲಿ, ಹೆಣ್ಣು ಸಬಲೆ ಎಂಬ ಮಾತು ಕಲ್ಪನೆಗೂ ನಿಲುಕದ ಸಂಗತಿ:ಡಾ.ಟಿ. ಯಲ್ಲಪ್ಪ

ರಾಮನಗರ : ಆರ್ಥಿಕವಾಗಿ, ಸಾಮಾಜಿಕವಾಗಿ, ರಾಜಕೀಯವಾಗಿ ಹಾಗೂ ಶೈಕ್ಷಣಿಕವಾಗಿ ತೀರ ಹಿಂದುಳಿದಿರುವ ಈ ಸಮುದಾಯದಲ್ಲಿ, ಹೆಣ್ಣು ಸಬಲೆ ಎಂಬ ಮಾತು ಕಲ್ಪನೆಗೂ ನಿಲುಕದ ಸಂಗತಿ

ಸರ್ಕಾರಿ ಶಾಲೆಗಳು ಉತ್ಕೃಷ್ಠ ಗುಣಮಟ್ಟದ ಶಿಕ್ಷಣವನ್ನು ನೀಡುತ್ತಿದೆ : ನಿವೃತ್ತ ಮುಖ್ಯಶಿಕ್ಷಕ ಟಿ.ಎಸ್. ಶಿವಲಿಂಗಯ್ಯ
ಸರ್ಕಾರಿ ಶಾಲೆಗಳು ಉತ್ಕೃಷ್ಠ ಗುಣಮಟ್ಟದ ಶಿಕ್ಷಣವನ್ನು ನೀಡುತ್ತಿದೆ : ನಿವೃತ್ತ ಮುಖ್ಯಶಿಕ್ಷಕ ಟಿ.ಎಸ್. ಶಿವಲಿಂಗಯ್ಯ

ರಾಮನಗರ : ಸರ್ಕಾರಿ ಶಾಲೆಗಳು ಉತ್ಕೃಷ್ಠ ಗುಣಮಟ್ಟದ ಶಿಕ್ಷಣವನ್ನು ನೀಡುತ್ತಿದ್ದು ಪೋಷಕರು ಖಾಸಗಿ ಶಾಲೆಗಳಿಗೆ ಮೊರೆ ಹೋಗದೆ ಸರ್ಕಾರಿ ಸೌಲಭ್ಯಗಳನ್ನು ಬಳಸಿಕೊಂಡು ಮಕ್ಕಳಿಗೆ ಉತ್ತಮ ಶಿಕ್ಷಣ ಕೊಡಿಸಬೇಕು

ರಾಮನಗರ ಜಿಲ್ಲಾ ಮಂಗಳ ಮುಖಿಯರ ಅಧ್ಯಕ್ಷರಾಗಿ ರಚನಾ ಮತ್ತು ಮಧುಶ್ರೀ ಆಯ್ಕೆ
ರಾಮನಗರ ಜಿಲ್ಲಾ ಮಂಗಳ ಮುಖಿಯರ ಅಧ್ಯಕ್ಷರಾಗಿ ರಚನಾ ಮತ್ತು ಮಧುಶ್ರೀ ಆಯ್ಕೆ

ರಾಮನಗರ: ನಗರದ ಕಲ್ಯಾಣ ಮಂಟಪದಲ್ಲಿ ಎರಡು ದಿನಗಳ ಕಾಲ ನಡೆದ ಮಂಗಳಮುಖಿಯರ ವಿವಿಧ ಕಾರ್ಯಕ್ರಮದಲ್ಲಿ ಇಬ್ಬರು ಮಂಗಳಮುಖಿಯರನ್ನು ಜಿಲ್ಲಾ ಅಧ್ಯಕ್ಷರ

ರೈತಮಹಿಳೆ ಕೊಲೆ ಮಾಡಿ ಪರಾರಿಯಾಗಿದ್ದ ಆರೋಪಿಗಳ ಬಂಧನ
ರೈತಮಹಿಳೆ ಕೊಲೆ ಮಾಡಿ ಪರಾರಿಯಾಗಿದ್ದ ಆರೋಪಿಗಳ ಬಂಧನ

ರಾಮನಗರ.ಸೆ.೧೨: ದುಶ್ಚಟಗಳಿಗೆ ಬಲಿಯಾಗಿ ಹಲವಾರು ಮಂದಿಗಳಿಂದ ಮಾಡಿದ್ದ ಕೈ ಸಾಲ ತೀರಿಸಲು ಹಾಗೂ ಸಾಲ ಕೊಟ್ಟಿದ್ದನ್ನು ವಾಪಸ್ಸು ಕೇಳಿದ ಮಹಿಳೆಯನ್

ವಿದ್ಯಾರ್ಥಿಗಳಿಗೆ ಅರ್ಜಿ ಸಲ್ಲಿಸಲು ದಿನಾಂಕ ವಿಸ್ತರಣೆ
ವಿದ್ಯಾರ್ಥಿಗಳಿಗೆ ಅರ್ಜಿ ಸಲ್ಲಿಸಲು ದಿನಾಂಕ ವಿಸ್ತರಣೆ

ರಾಮನಗರ, ಸೆ.09: 2022-23ನೇ ಸಾಲಿಗೆ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯ ಮೆಟ್ರಿಕ್ ನಂತರದ ವಿದ್ಯಾರ್ಥಿನಿಲಯಗಳಲ್ಲಿ ಹೊಸದಾಗಿ ಪ್ರವೇಶ ಬಯಸುವ ಸಾಮಾನ್ಯ ಪದವಿ ಕೋರ್ಸಿನ  ವಿದ್ಯಾರ್ಥಿ ನಿಲಯಗಳ

ನಿಕ್ಷಯ್ ಮಿತ್ರ-2.0 ಯೋಜನೆಗೆ ಸಹಕರಿಸಿ: ಡಾ. ಕುಮಾರ್
ನಿಕ್ಷಯ್ ಮಿತ್ರ-2.0 ಯೋಜನೆಗೆ ಸಹಕರಿಸಿ: ಡಾ. ಕುಮಾರ್

ರಾಮನಗರ, ಸೆ.09: ಚುನಾಯಿತ ಪ್ರತಿನಿಧಿಗಳು, ಖಾಸಗಿ ಸ್ವಯಂ ಸೇವಾ ಸಂಸ್ಥೆಗಳು, ಮತ್ತು ಖಾಸಗಿ ಸಂಘ-ಸಂಸ್ಥೆಗಳು ಕ್ಷಯರೋಗಿಗಳನ್ನು ಗುರುತಿಸಿ ದತ್ತುಪಡೆದು ನಿಕ್ಷಯ್ ಪೋಷಣ್ ಲಿಂಕ್‌ನಲ್ಲಿ ನೊಂದಾಯಿಸಿ ಅವ

ನೂತನ ಕನ್ನಡ ಸಾಹಿತ್ಯ ಪರಿಷತ್ತು ಘಟಕ ಉದ್ಘಾಟನೆ
ನೂತನ ಕನ್ನಡ ಸಾಹಿತ್ಯ ಪರಿಷತ್ತು ಘಟಕ ಉದ್ಘಾಟನೆ

ರಾಮನಗರ, ಸೆ.09: ಶಾಲಾ ಪಠ್ಯದ ವಿಚಾರಗಳನ್ನು ಶಿಕ್ಷಕರು ಹೇಳಿಕೊಡ್ತಾರೆ. ಸಾಹಿತ್ಯ ಪರಿಷತ್ತೂ ಒಳಗೊಂಡಂತೆ ನಾಡಿನ ವಿವಿಧ ಸಂಘ ಸಂಸ್ಟೆಗಳು ಸಾಕಷ್

ಜಿಲ್ಲೆಯಲ್ಲಿ ನಡೆಯುತ್ತಿರುವ ಮತಾಂತರ ತಡೆಗಟ್ಟಲು ಸೂಕ್ತ ಕ್ರಮಕೈಗೊಳ್ಳುವಂತೆ ಮನವಿ
ಜಿಲ್ಲೆಯಲ್ಲಿ ನಡೆಯುತ್ತಿರುವ ಮತಾಂತರ ತಡೆಗಟ್ಟಲು ಸೂಕ್ತ ಕ್ರಮಕೈಗೊಳ್ಳುವಂತೆ ಮನವಿ

ಚನ್ನಪಟ್ಟಣ: ಜಿಲ್ಲೆಯಲ್ಲಿ ಅವ್ಯವಾಹಿತವಾಗಿ ನಡೆಯುತ್ತಿರುವ ಮತಾಂತರ ಕಾರ್ಯವನ್ನು ತಡೆಯುವ ನಿಟ್ಟಿನಲ್ಲಿ ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ಹಿಂದು ಜಾ

ಅತೀವೃಷ್ಠಿಯಿಂದ ಹಾನಿಗೊಳಗಾದ ಪ್ರದೇಶಗಳಿಗೆ ಶೀಘ್ರ ಪರಿಹಾರ: ಅವಿನಾಶ್ ಮೆನನ್
ಅತೀವೃಷ್ಠಿಯಿಂದ ಹಾನಿಗೊಳಗಾದ ಪ್ರದೇಶಗಳಿಗೆ ಶೀಘ್ರ ಪರಿಹಾರ: ಅವಿನಾಶ್ ಮೆನನ್

ರಾಮನಗರ, ಸೆ.೦೯: ಜಿಲ್ಲೆಯಲ್ಲಿ ಕಳೆದ ಬಾರಿಗಿಂತ ಆಗಸ್ಟ್ ಮಾಹೆಯಲ್ಲಿ ಹಾಗೂ ಸೆಪ್ಟೆಂಬರ್ ಮಾಹೆಯ ಒಂಭತ್ತು ದಿನಗಳಲ್ಲಿ ಸಾಮಾನ್ಯ ಮಳೆಗಿಂತ ಶೇ.2.5 ಪಟ್ಟು ಹೆಚ್ಚು ಮಳೆಯಾಗಿದ್ದು, ರಾಷ್ಟ್ರೀಯ ಹೆದ್ದಾರ

Top Stories »  

Top ↑