Tel: 7676775624 | Mail: info@yellowandred.in

Language: EN KAN

    Follow us :


ಚಾಮುಂಡೇಶ್ವರಿ ಬಸವಪ್ಪ ಕ್ಷೇತ್ರದಲ್ಲಿ ಲಕ್ಷ ದೀಪೋತ್ಸವ

Posted date: 25 Nov, 2022

Powered by:     Yellow and Red

ಚಾಮುಂಡೇಶ್ವರಿ ಬಸವಪ್ಪ ಕ್ಷೇತ್ರದಲ್ಲಿ ಲಕ್ಷ ದೀಪೋತ್ಸವ

ಚನ್ನಪಟ್ಟಣ: ತಾಲೂಕಿನ ಗೌಡಗೆರೆ ಗ್ರಾಮದ ಶ್ರೀ ಚಾಮುಂಡೇಶ್ವರಿ ಬಸವಪ್ಪನವರ ಪುಣ್ಯಕ್ಷೇತ್ರದಲ್ಲಿ ವೈಭವದ ಲಕ್ಷ ದೀಪೋತ್ಸವ ಕಾರ್ಯಕ್ರಮ ಬುಧವಾರ ರಾತ್ರಿ ಜರುಗಿತು.


ಕ್ಷೇತ್ರದ ಪವಾಡ ಬಸವಪ್ಪನವರ ಹುಟ್ಟು ಹಬ್ಬ ಹಾಗೂ ಕಾರ್ತಿಕ ಮಾಸದ ಅಮಾವಾಸ್ಯೆ ಪ್ರಯುಕ್ತ ನಡೆದ ಲಕ್ಷ ದೀಪೋತ್ಸವ ಕಾರ್ಯಕ್ರಮದಲ್ಲಿ ಸಹಸ್ರಾರು ಭಕ್ತರು ಭಾಗವಹಿಸುವ ಮೂಲಕ ಅದ್ದೂರಿ ಲಕ್ಷ ದೀಪೋತ್ಸವವನ್ನು ಕಣ್ತುಂಬಿಕೊಂಡರು.


ಲಕ್ಷ ದೀಪೋತ್ಸವ ಕಾರ್ಯಕ್ರಮದ ಪ್ರಯುಕ್ತ ಬುಧವಾರ ಬೆಳಿಗ್ಗೆಯಿಂದಲೇ ದೇವಸ್ಥಾನದಲ್ಲಿ ವಿವಿಧ ಧಾರ್ಮಿಕ ಕಾರ್ಯಕ್ರಮಗಳು ನಡೆದವು. ಚಾಮುಂಡೇಶ್ವರಿ ತಾಯಿಗೆ ಅಭಿಷೇಕ, ವಿಶೇಷ ಅಲಂಕಾರ, ತಾಯಿಯ ಮೆರವಣಿಗೆ, ಪವಾಡ ಬಸವಪ್ಪನ ಗದ್ದುಗೆಗೆ ಪೂಜೆ ಸೇರಿದಂತೆ ನಾನಾ ವಿಧವಾದ ಧಾರ್ಮಿಕ ಕಾರ್ಯಕ್ರಮಗಳು ನಡೆದವು. ಸಂಜೆ ನಡೆದ ದೀಪೋತ್ಸವ ಕಾರ್ಯಕ್ರಮಕ್ಕೆ ಕ್ಷೇತ್ರದ ಧರ್ಮದರ್ಶಿ ಡಾ.ಮಲ್ಲೇಶ್ ಗುರೂಜೀ ಹಾಗೂ ಗ್ರಾಮಾಂತರ ವೃತ್ತ ನಿರೀಕ್ಷಕ ಟಿ.ಬಿ.ಶಿವಕುಮಾರ್ ಚಾಲನೆ ನೀಡಿದರು. ಮಾಜಿ ಸಚಿವ, ವಿಧಾನ ಪರಿಷತ್ ಸದಸ್ಯ ಸಿ.ಪಿ.ಯೋಗೇಶ್ವರ್ ಸೇರಿದಂತೆ ವಿವಿಧ ಗಣ್ಯರು, ಸರ್ಕಾರಿ ಅಧಿಕಾರಿಗಳು ಹಾಗೂ ಸಾವಿರಾರು ಭಕ್ತರು ದೀಪೋತ್ಸವದಲ್ಲಿ ಭಾಗಿಯಾದರು.


ದೀಪೋತ್ಸವ ಅಂಗವಾಗಿ ಶ್ರೀ ಕ್ಷೇತ್ರದ ಆವರಣ ವಿದ್ಯುತ್ ದೀಪಾಲಂಕಾರದಿಂದ ಅಲಂಕೃತಗೊಂಡಿತ್ತು. ಚಾಮುಂಡೇಶ್ವರಿ ವಿಗ್ರಹದ ಮಂದೆ ಹಚ್ಚಿದ ಹಣತೆಗಳ ಸಾಲಿನ ದೃಶ್ಯ ಕಣ್ಮನ ಸೆಳೆಯುವಂತಿತ್ತು. ಹಣತೆಗಳ ಬೆಳಕಿನಲ್ಲಿ ತಾಯಿಯ ವಿಗ್ರಹ ಮನಮೋಹಕವಾಗಿ ಭಕ್ತಗಣದ ಮನ ಸೆಳೆಯಿತು. ಈ ಕಾರ್ಯಕ್ರಮಕ್ಕೆ ಜಿಲ್ಲೆಯಷ್ಟೇ ಅಲ್ಲದೇ ಅಕ್ಕಪಕ್ಕದ ಜಿಲ್ಲೆಯ ಸಾವಿರಾರು ಭಕ್ತಾಧಿಗಳು ಭಾಗವಹಿಸಿದ್ದರು. 


ಕ್ಷೇತ್ರದ ಆವರಣದಲ್ಲಿ ಸಿದ್ದಪಡಿಸಲಾಗಿದ್ದ ಸಾಲುಸಾಲು ದೀಪಗಳಿಗೆ ಎಣ್ಣೆ, ಬತ್ತಿ ಹಾಕಿ ದೀಪ ಬೆಳಗಿಸುವ ಮೂಲಕ ಭಕ್ತರು ತಮ್ಮ ಭಕ್ತಿಭಾವ ಮೆರೆದರು. ಇನ್ನು ಈ ಬಾರಿ ದೀಪೋತ್ಸವದ ಅಂಗವಾಗಿ ಬಾಣ ಬಿರುಸು ಪ್ರದರ್ಶನ ಹಾಗೂ ಮದ್ದು ಸಿಡಿಸುವ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು. ಇದರೊಂದಿಗೆ ನಗರದ ಶ್ರೀ ಭವಾನಿ‌ ಕಲಾನಿಕೇತನ ನೃತ್ಯ ಸಂಸ್ಥೆಯ ವತಿಯಿಂದ ಭರತನಾಟ್ಯ ಪ್ರದರ್ಶನ ಸಹ ಹಮ್ಮಿಕೊಳ್ಳಲಾಗಿತ್ತು.ಪುಟಾಣಿ ಮಕ್ಕಳ ನೃತ್ಯ ಪ್ರದರ್ಶನ ಕಲಾರಸಿಕರ ಗಮನ ಸೆಳೆಯಿತು.


ದೀಪೋತ್ಸವ ಕಾರ್ಯಕ್ರಮದಲ್ಲಿ ಆರ್ಶೀವಚನ ನೀಡಿದ ಕ್ಷೇತ್ರದ ಧರ್ಮದರ್ಶಿ ಡಾ.ಮಲ್ಲೇಶ್ ಗುರೂಜೀ, ದೀಪೋತ್ಸವಕ್ಕೆ ತನ್ನದೇ ಆದ ಮಹತ್ತರವಾದ ಇತಿಹಾಸವಿದೆ. ಕಾರ್ತಿಕ ಮಾಸದಲ್ಲಿ ಸಾಕಷ್ಟು ಕಡೆ ನಡೆಯುವ ದೀಪೋತ್ಸವಕ್ಕೆ ಸಾಕಷ್ಟು ಪ್ರಾಮುಖ್ಯತೆ ಇದೆ. ನಮ್ಮ ಕ್ಷೇತ್ರದಲ್ಲೂ ಶ್ರೀ ಪವಾಡ ಬಸಪ್ಪನವರ 

ಹುಟ್ಟು ಹಬ್ಬದ ಕಾರ್ಯಕ್ರಮ ಹಾಗೂ ಕಾರ್ತಿಕ 

ಮಾಸದ ಅಮಾವಾಸ್ಯೆ ಪ್ರಯುಕ್ತ ಲಕ್ಷ ದೀಪೋತ್ಸವವನ್ನು ಹಮ್ಮಿಕೊಳ್ಳಲಾಗಿದೆ. ಪ್ರತಿವರ್ಷವೂ ನಿರಂತರವಾಗಿ  ಈ ಕಾರ್ಯಕ್ರಮ ಹಮ್ಮಿಕೊಂಡು ಬರುತ್ತಿದ್ದೇವೆ. ಈ ಬಾರಿ ಅತಿಹೆಚ್ಚು ಭಕ್ತಾಧಿಗಳು ದೀಪೋತ್ಸವದಲ್ಲಿ ಭಾಗಿಯಾಗಿ ದೀಪ ಬೆಳಗಿಸಿದ್ದಾರೆ. ಇಡೀ ಸಮಾಜಕ್ಕೆ ಒಳಿತಾಗಲಿ ಎಂದು ತಾಯಿಯಲ್ಲಿ ಪ್ರಾರ್ಥಿಸಿ ದೀಪ ಬೆಳಗಲಾಗಿದೆ ಎಂದು ತಿಳಿಸಿದರು.


ಲಕ್ಷ ದೀಪೋತ್ಸವ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದ ಮಾಜಿ ಸಚಿವ, ವಿಧಾನ ಪರಿಷತ್ ಸದಸ್ಯ ಸಿ.ಪಿ.ಯೋಗೇಶ್ವರ್ ‌ಮಾತನಾಡಿ, ತಾಲೂಕಿನ ಪ್ರಸಿದ್ಧ ಪುಣ್ಯಕ್ಷೇತ್ರ ಎಂದು ಹೆಸರು ಪಡೆದಿರುವ ಗೌಡಗೆರೆ ಚಾಮುಂಡೇಶ್ವರಿ ಪುಣ್ಯ ಕ್ಷೇತ್ರಕ್ಕೆ ಬರುವ ಭಕ್ತಾದಿಗಳ ಸಂಖ್ಯೆ ಹೆಚ್ಚಾಗುತ್ತಿದೆ.ಪ್ರತಿದಿನವೂ ಸಾವಿರಾರು ಮಂದಿ ಭಕ್ತರು ವಿಶ್ವದ ಅತಿ ಎತ್ತರದ ಪಂಚ ಲೋಹದ ಪ್ರತಿಮೆಯನ್ನು ನೋಡಲು ತಾಲೂಕಿಗೆ ಬರುತ್ತಿರುವುದು ಸಂತಷದ ವಿಚಾರ. ಕ್ಷೇತ್ರದಲ್ಲಿ ನಡೆಯುವ ಪ್ರತಿಯೊಂದು ಧಾರ್ಮಿಕ ಕಾರ್ಯಕ್ರಮಗಳು ಸಹ ವಿಶೇಷವಾಗಿರುತ್ತವೆ. ಲಕ್ಷ ದೀಪೋತ್ಸವದಲ್ಲಿ ಭಾಗಿಯಾಗಿರುವುದು ಮನಸ್ಸನ್ನು ಉಲ್ಲಾಸಗೊಳಿಸಿದೆ ಎಂದರು.


ಗ್ರಾಮಾಂತರ ವೃತ್ತ ನಿರೀಕ್ಷಕ ಬಿ.ಶಿವಕುಮಾರ್ ಮಾತನಾಡಿ, ತಾಯಿಯ ಸನ್ನಿಧಾನದಲ್ಲಿ ಲಕ್ಷ ದೀಪೋತ್ಸವಕ್ಕೆ ಚಾಲನೆ ನೀಡಿದ್ದು ನನ್ನ ಜೀವನದ ಸೌಭಾಗ್ಯ. ವಿಶ್ವದ ಅತಿ ಎತ್ತರದ ಪಂಚಲೋಹದ 

ಪ್ರತಿಮೆ ಎಂದು ಹೆಸರುವಾಸಿಯಾಗಿರುವ ಗೌಡಗೆರೆ 

 ಕ್ಷೇತ್ರದ ಪಂಚಲೋಹ ಪ್ರತಿಮೆಯನ್ನು 

ವೀಕ್ಷಿಸಲು ಕರ್ನಾಟಕವಲ್ಲದೆ ಬೇರೆಬೇರೆ ರಾಜ್ಯದಿಂದಲೂ ಸಹ ಭಕ್ತರು ಆಗಮಿಸುತ್ತಿದ್ದಾರೆ. ಇದು ತಾಲೂಕಿಗೆ ಕಳಸಪ್ರಾಯ ಎಂದು ಬಣ್ಣಿಸಿದರು.


ಎಂಕೆ.ದೊಡ್ಡಿ ಠಾಣೆ ಪಿಎಸ್ ಐ ರತ್ಮಮ್ಮ, ದೇವಾಲಯದ ಆಡಳಿತ ಮಂಡಳಿ ಸದಸ್ಯರಾದ ದಯಾನಂದಸಾಗರ್, ಬಾಬು, ರಾಮಕೃಷ್ಣಪ್ಪ ಸೇರಿದಂತೆ ಹಲವರು ಉಪಸ್ಥಿತರಿದ್ದರು.


ಗೋ ರಾ ಶ್ರೀನಿವಾಸ...

ಮೊ:9845856139.

ಪ್ರತಿಕ್ರಿಯೆಗಳು

  • ನಿಮ್ಮ ಅಭಿಪ್ರಾಯ ತಿಳಿಸುವಲ್ಲಿ ನೀವು ಮೊದಲಿಗರಾಗಿ.

ನಿಮ್ಮ ಅಭಿಪ್ರಾಯಗಳನ್ನು ಬರೆಯಿರಿ/ತಿಳಿಸಿ.

Recent news in ramanagara »

ದಲಿತರಿಗೆ ಶವಸಂಸ್ಕಾರ ಮಾಡಲು ಬೇರೆ ಜಾಗ ನೀಡುವಂತೆ ರಾತ್ರಿವರೆಗೂ ತಹಶಿಲ್ದಾರ್ ಕಛೇರಿ ಮುಂದೆ ಶವವಿಟ್ಟು ಪ್ರತಿಭಟನೆ
ದಲಿತರಿಗೆ ಶವಸಂಸ್ಕಾರ ಮಾಡಲು ಬೇರೆ ಜಾಗ ನೀಡುವಂತೆ ರಾತ್ರಿವರೆಗೂ ತಹಶಿಲ್ದಾರ್ ಕಛೇರಿ ಮುಂದೆ ಶವವಿಟ್ಟು ಪ್ರತಿಭಟನೆ

ಚನ್ನಪಟ್ಟಣ: ತಾಲೂಕಿನ ಕೋಡಂಬಳ್ಳಿ ಗ್ರಾಮದಲ್ಲಿ ಸಾರ್ವಜನಿಕ ಸ್ಮಶಾನವಿದ್ದು, ದಲಿತರು ಕೆರೆ ಜಾಗದಲ್ಲಿ ಶವವನ್ನು ಹೂಳುತ್ತಿದ್ದು, ಆ ಜಾಗ ನಮಗೆ ಸ

ಹಂಪಿ‌ ಕನ್ನಡ ವಿವಿಯಿಂದ ಶಿಕ್ಷಕಿ ಎಂ.ಕಮಲಮ್ಮ‌ ಅವರಿಗೆ ಪಿಎಚ್.ಡಿ. ಪದವಿ
ಹಂಪಿ‌ ಕನ್ನಡ ವಿವಿಯಿಂದ ಶಿಕ್ಷಕಿ ಎಂ.ಕಮಲಮ್ಮ‌ ಅವರಿಗೆ ಪಿಎಚ್.ಡಿ. ಪದವಿ

ರಾಮನಗರ, ಡಿ.3- ಶಿಕ್ಷಕಿ ಎಂ.ಕಮಲಮ್ಮ‌ ಅವರು ಹಂಪಿ ಕನ್ನಡ ವಿಶ್ವವಿದ್ಯಾಲಯಕ್ಕೆ ಪ್ರಸ್ತುತ ಪಡಿಸಿದ \"ಮೈಸೂರು ಕರ್ನಾಟಕ ವೃತ್ತಿ ರಂಗಭೂಮಿಯಲ್ಲಿ

ಕನ್ನಡದ ಕಟ್ಟಾಳು ಸಿಂಲಿಂ ನಾಗರಾಜು ನಿಧನ ಮಾಜಿ ಪ್ರಧಾನಿ ಹೆಚ್ ಡಿ ದೇವೇಗೌಡ ಸೇರಿ ಹಲವರು ಭಾಗಿ
ಕನ್ನಡದ ಕಟ್ಟಾಳು ಸಿಂಲಿಂ ನಾಗರಾಜು ನಿಧನ ಮಾಜಿ ಪ್ರಧಾನಿ ಹೆಚ್ ಡಿ ದೇವೇಗೌಡ ಸೇರಿ ಹಲವರು ಭಾಗಿ

 ಚನ್ನಪಟ್ಟಣ:  ಚನ್ನಪಟ್ಟಣ ತಾಲ್ಲೂಕು ಅಷ್ಟೇ ಅಲ್ಲದೆ ರಾಜ್ಯಾದ್ಯಂತ ಹೋರಾಟದ ಛಾಪನ್

ನೆಲಬಾವಿಗೆ ಬಿದ್ದ ಕಾಡಾನೆ
ನೆಲಬಾವಿಗೆ ಬಿದ್ದ ಕಾಡಾನೆ

ಚನ್ನಪಟ್ಟಣ.ಡಿ.೦೩ :ತಾಲ್ಲೂಕಿನ ಕಾಡಂಚಿನ ಗ್ರಾಮಗಳಲ್ಲಿ ಆನೆಗಳ ದಾಳಿ ಮಿತಿಮೀರಿದ್ದು, ಅವು ಕೃಷಿಕರ ಜಮೀನಿಗೆ ಲಗ್ಗೆ ಇಟ್ಟು ಬೆಳೆ ಹಾನಿ ಮಾಡುವುದು ಸಾ

ಸಂವಿಧಾನ ನಮ್ಮೆಲ್ಲರ ಉಸಿರು ನ್ಯಾಯಾಧೀಶೆ ಶುಭಾ ಅಭಿಮತ
ಸಂವಿಧಾನ ನಮ್ಮೆಲ್ಲರ ಉಸಿರು ನ್ಯಾಯಾಧೀಶೆ ಶುಭಾ ಅಭಿಮತ

ಚನ್ನಪಟ್ಟಣ: ಸಂವಿಧಾನ ನಮ್ಮೆಲ್ಲರ ಉಸಿರು. ಸಂವಿಧಾನವನ್ನು ಎಲ್ಲರೂ ತಿಳಿದು ನಡೆದರೆ ಸ್ವಸ್ಥ ಸಮಾಜ ಕಟ್ಟಲು ಸಾಧ್ಯ. ಸರ್ವರಿಗೂ ಸಮಪಾಲು, ಸರ್ವರಿ

ವಿಶ್ವ ಏಡ್ಸ್ ದಿನದ ಪ್ರಯುಕ್ತ ಆಸ್ಪತ್ರೆಗೆ ಭೇಟಿ ನೀಡಿ, ಜಾಥಾ ಗೆ ಚಾಲನೆ ನೀಡಿದ ನ್ಯಾಯಾಧೀಶರುಗಳು
ವಿಶ್ವ ಏಡ್ಸ್ ದಿನದ ಪ್ರಯುಕ್ತ ಆಸ್ಪತ್ರೆಗೆ ಭೇಟಿ ನೀಡಿ, ಜಾಥಾ ಗೆ ಚಾಲನೆ ನೀಡಿದ ನ್ಯಾಯಾಧೀಶರುಗಳು

ಚನ್ನಪಟ್ಟಣ.ಡಿ.೦೧: ಇಂದು ವಿಶ್ವ ಏಡ್ಸ್ ದಿನಾಚರಣೆ ಅಂಗವಾಗಿ, ಸಾರ್ವಜನಿಕ ಆಸ್ಪತ್ರೆ, ಬಾಲು ಪಬ್ಲಿಕ್ ಶಾಲೆ, ಲಯನ್ಸ್ ಸಂಸ್ಥೆ ಸೇರಿದಂತೆ ವಿವಿಧ

ಒತ್ತುವರಿ ತೆರವುಗೊಳಿಸದೆ, ಚರಂಡಿ ನಿರ್ಮಿಸದೆ ರಸ್ತೆ ಕಾಮಗಾರಿ ಮಾರುತಿ ಬಡಾವಣೆ ನಿವಾಸಿಗಳ ಆರೋಪ
ಒತ್ತುವರಿ ತೆರವುಗೊಳಿಸದೆ, ಚರಂಡಿ ನಿರ್ಮಿಸದೆ ರಸ್ತೆ ಕಾಮಗಾರಿ ಮಾರುತಿ ಬಡಾವಣೆ ನಿವಾಸಿಗಳ ಆರೋಪ

ಚನ್ನಪಟ್ಟಣ:  ನಗರದ ಹೊಸ ನ್ಯಾಯಾಲಯ ಕಟ್ಟಡದ ಹಿಂಭಾಗದ ಹಾಗೂ ನಗರದ ಪ್ರಮುಖ ರಸ್ತೆಯಾದ ಚನ್ನಪಟ್ಟಣ- ತಿಟ್ಟಮಾರನಹಳ್ಳಿ- ಕುಣಿಗಲ್ ರಾಜ್ಯ ಹೆ

ಭಾಷೆ ಮತ್ತು ಕಲೆ ಉಳಿಸುವ ನಿಟ್ಟಿನಲ್ಲಿ ನೇರಳೂರು ಗ್ರಾಮದ ಯುವಕರು ಮುಂದಿದ್ದಾರೆ ಜಿಲ್ಲಾಧಿಕಾರಿ
ಭಾಷೆ ಮತ್ತು ಕಲೆ ಉಳಿಸುವ ನಿಟ್ಟಿನಲ್ಲಿ ನೇರಳೂರು ಗ್ರಾಮದ ಯುವಕರು ಮುಂದಿದ್ದಾರೆ ಜಿಲ್ಲಾಧಿಕಾರಿ

ಸ್ಥಳೀಯ ಭಾಷೆಗಳು, ಕಲೆಗಳು ಉಳಿದರೆ ಮಾತ್ರ ದೇಶ ಉನ್ನತ ಸ್ಥಾನಕ್ಕೆ ಮುಂದಡಿಯಡಿಯಲು ಸಾಧ್ಯವಾಗುತ್ತದೆ. ಗ್ರಾಮೀಣ ಭಾಗದಲ್ಲಿ 

ನಾಡಿನ ಸಂಸ್ಕøತಿ ಪರಂಪರೆಯನ್ನು ಉಳಿಸಿ ಬೆಳೆಸುವ ನಿ

ರಾಗಿ ಕಟಾವು ಯಂತ್ರಕ್ಕೆ ಪ್ರತಿ ಗಂಟೆಗೆ ರೂ. 2700/- ಬಾಡಿಗೆ ದರ ನಿಗದಿ: ಡಾ.ಅವಿನಾಶ್ ಮೆನನ್
ರಾಗಿ ಕಟಾವು ಯಂತ್ರಕ್ಕೆ ಪ್ರತಿ ಗಂಟೆಗೆ ರೂ. 2700/- ಬಾಡಿಗೆ ದರ ನಿಗದಿ: ಡಾ.ಅವಿನಾಶ್ ಮೆನನ್

ರಾಮನಗರ ನ.26: ರಾಮನಗರ ಜಿಲ್ಲೆಯಲ್ಲಿ 2022-23 ನೇ ಸಾಲಿನ ಮುಂಗಾರು ಹಂಗಾಮಿನಲ್ಲಿ ರಾಗಿ ಬೆಳೆಯು 66,719 ಹೆಕ್ಚೇರ್ ಪ್ರದೇಶದಲ್ಲಿ ಆವರಿಸಿದ್ದು

ಕಲೆ, ಸಂಸ್ಕೃತಿಯನ್ನು ಇನ್ನಷ್ಟು ಬೆಳಸಿ :ಶಿವಾನಂದ ಮೂರ್ತಿ
ಕಲೆ, ಸಂಸ್ಕೃತಿಯನ್ನು ಇನ್ನಷ್ಟು ಬೆಳಸಿ :ಶಿವಾನಂದ ಮೂರ್ತಿ

ರಾಮನಗರ ನ.26: ಮಹತ್ವಪೂರ್ಣವಾದ ಸುದಿನ,  ಸಂವಿದಾನ ಆಚರಣೆಗೆ ಬಂದ ಈ ಸುದಿನ, ಆದ್ದರಿಂದ ಈ ದಿನವನ್ನು ಜಾನಪದ ಕಲಾತಂಡದ ಮೂಲಕ ಜನಪರ ಉತ್ಸವ

Top Stories »  


Top ↑