Tel: 7676775624 | Mail: info@yellowandred.in

Language: EN KAN

    Follow us :


ಭಾಷೆ ಮತ್ತು ಕಲೆ ಉಳಿಸುವ ನಿಟ್ಟಿನಲ್ಲಿ ನೇರಳೂರು ಗ್ರಾಮದ ಯುವಕರು ಮುಂದಿದ್ದಾರೆ ಜಿಲ್ಲಾಧಿಕಾರಿ

Posted date: 27 Nov, 2022

Powered by:     Yellow and Red

ಭಾಷೆ ಮತ್ತು ಕಲೆ ಉಳಿಸುವ ನಿಟ್ಟಿನಲ್ಲಿ ನೇರಳೂರು ಗ್ರಾಮದ ಯುವಕರು ಮುಂದಿದ್ದಾರೆ ಜಿಲ್ಲಾಧಿಕಾರಿ

ಸ್ಥಳೀಯ ಭಾಷೆಗಳು, ಕಲೆಗಳು ಉಳಿದರೆ ಮಾತ್ರ ದೇಶ ಉನ್ನತ ಸ್ಥಾನಕ್ಕೆ ಮುಂದಡಿಯಡಿಯಲು ಸಾಧ್ಯವಾಗುತ್ತದೆ. ಗ್ರಾಮೀಣ ಭಾಗದಲ್ಲಿ 

ನಾಡಿನ ಸಂಸ್ಕøತಿ ಪರಂಪರೆಯನ್ನು ಉಳಿಸಿ ಬೆಳೆಸುವ ನಿಟ್ಟಿನಲ್ಲಿ ನೇರಳೂರು ಗ್ರಾಮದ

ಇಷ್ಟೊಂದು ಯುವಕರು ಐಕ್ಯತಾ ಭಾವನೆಯಿಂದ ಸಂಘಟನೆ ಮಾಡಿ ಭಾವೈಕ್ಯತೆ ಮೂಡಿಸುತ್ತಿರುವುದು ಮಾದರಿ ಕೆಲಸವಾಗಿದ್ದು ನಾಡು-ನುಡಿಯ 

ಕಂಪನ್ನು ನಿರಂತರವಾಗಿ ಅರಳಿಸಲಿ ಎಂದು ಜಿಲ್ಲಾಧಿಕಾರಿ ಡಾ ಅವಿನಾಶ್ ಮೆನನ್ ರಾಜೇಂದ್ರ ಅಭಿಪ್ರಾಯಿಸಿದರು.


ತಾಲ್ಲೂಕಿನ ನೇರಳೂರು ಗ್ರಾಮದ ನೃಪತುಂಗ ಕನ್ನಡ ಸೇವಾಸಂಘ, ಕನ್ನಡ ಮತ್ತು ಸಂಸ್ಕøತಿ ಇಲಾಖೆಯ ಸಹಭಾಗಿತ್ವದಲ್ಲಿ ಆಯೋಜಿಸಿದ್ದ 67ನೇ ಅದ್ದೂರಿ ಕನ್ನಡ ರಾಜ್ಯೋತ್ಸವದ ಪ್ರಯುಕ್ತ 

ಏರ್ಪಡಿಸಿದ್ದ ಸಾಂಸ್ಕøತಿಕ ಹಬ್ಬದ ಸಮಾರೋಪ ಸಮಾರಂಭದ ವೇದಿಕೆ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.


ಜಿಲ್ಲಾ ಪೊಲೀಸ್ ವರಿಷ್ಟಾಧಿಕಾರಿಗಳಾದ ಕೆ.ಸಂತೋಷಬಾಬು ರವರು ವೇದಿಕೆಯ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿ ಕನ್ನಡದ ಹಬ್ಬ ನಿತ್ಯೋತ್ಸವವಾಗಿದ್ದು ಅದನ್ನು ನಿಜವಾಗಿಯೂ ಹಬ್ಬದಂತೆ ಆಚರಿಸುತ್ತಿರುವುದು ಸಮಾಜಮುಖಿ ಚಿಂತಕ ಯುವಕರ ಸಾರ್ಥಕತೆಯ ಪ್ರತಿಬಿಂಬವಾಗಿದೆ. ಈ ಸಂಸ್ಥೆ ಗ್ರಾಮದ ಅಭಿವೃದ್ಧಿಗೆ 

ಪೂರಕವಾಗಿ ಯುವಕರು ಶ್ರಮಿಸುತ್ತಿದ್ದಾರೆ, ಆರ್ಥಿಕ ಸ್ವಾವಲಂಬಿ ಗ್ರಾಮವಾಗಿ ಶಿಕ್ಷಣ, ಆರೋಗ್ಯ, ಶುದ್ಧ ಜಲದತ್ತ ಗಮನಹರಿಸಿ ಸದೃಡ ಸಂಘಟನೆಯಾಗಲಿ ಎಂದು ಆಶಿಸಿದರು.


ಕಾರ್ಯಕ್ರಮದಲ್ಲಿ ಅಭಿನಂದನೆ ಸ್ವೀಕರಿಸಿ ಮಾತನಾಡಿದ ಕರ್ನಾಟಕ ರಾಜ್ಯ ಒಕ್ಕಲಿಗರ ಸಂಘದ ನಿರ್ದೇಶಕರಾದ ಸಿ.ವಿ. ವೆಂಕಟರಾಮೇಗೌಡ ಕನ್ನಡ ಭಾಷೆಗೆ ಎರಡು ಸಾವಿರ ವರ್ಷಗಳ ಇತಿಹಾಸವಿದ್ದು, ಸುಲಿದ ಬಾಳೆ ಹಣ್ಣಿನಂತೆ ಜೇನಿನ ತುಪ್ಪದಂತೆ 

ಮನಸ್ಸಿಗೆ ಮುದ, ಸ್ಪೂರ್ತಿ ಭಾವೈಕ್ಯತೆಯನ್ನು ಬಿಂಬಿಸುವ ಕನ್ನಡ ಭಾಷೆಯು ಹಬ್ಬ ನಿತ್ಯೋತ್ಸವವಾಗಲಿ ಎಂದು ಬಯಸಿ ಗ್ರಾಮದ 

ಯುವಕರೊಟ್ಟಿಗೆ ಅಭಿವೃದ್ಧಿ ವಿಚಾರದಲ್ಲಿ ಸದಾ ನಿಮ್ಮೊಡನಿರುವೆ ಎಂದು ಭರವಸೆ ನೀಡಿದರು.


ಬಮೂಲ್ ಮತ್ತು ರಾಜ್ಯ ಒಕ್ಕಲಿಗರ ಸಂಘದ ನಿರ್ದೇಶಕರಾದ ಹೆಚ್.ಸಿ.ಜಯಮುತ್ತು ಮಾತನಾಡಿ ಪರಸ್ಪರ ಅಪನಂಬಿಕೆಯ ಸಂದರ್ಭದಲ್ಲೂ ನೇರಳೂರು ಗ್ರಾಮದ ನೃಪತುಂಗ ಕನ್ನಡ ಸೇವಾ 

ಸಂಘದ ಗೆಳೆಯರು ಸಂಘಟಿತರಾಗಿ ಇಷ್ಟೊಂದು ಅದ್ದೂರಿಯಾಗಿ ನಾಡು ನುಡಿ ಹಬ್ಬ ಆಚರಿಸುತ್ತಿರುವುದು ಮಾದರಿಯಾಗಿದೆ ಎಂದರು.


ರಾಜ್ಯ ರೈತ ಸಂಘದ ಹಿರಿಯ ಮುಖಂಡ ಸಿ.ಪುಟ್ಟಸ್ವಾಮಿ ಮುಖ್ಯ ಅತಿಥಿಗಳ ನುಡಿಯನ್ನಾಡಿ ಇಂದಿಗೂ ಸೃಜನಶೀಲತೆಯ ಸಂಸ್ಕøತಿಯನ್ನು ಮುಂದುವರೆಸಿಕೊಂಡು ಹೋಗುವ ಹಲವು 

ಆಯಾಮಗಳನ್ನು ಈ ಸಂದರ್ಭದಲ್ಲಿ ನಾನು ಕಂಡಿದ್ದು, ದಕ್ಷ ಜಿಲ್ಲಾಧಿಕಾರಿಗಳು ಮತ್ತು ವರಿಷ್ಠಾಧಿಕಾರಿಗಳ ನೇತೃತ್ವದಲ್ಲಿ ಅರತಿ 

ಎತ್ತುವ ಕಾರ್ಯಕ್ರಮ ನಡೆಸುತ್ತಿರುವುದು ನೃಪತುಂಗ ಕನ್ನಡ ಸೇವಾ ಸಂಘದ ಪದಾಧಿಕಾರಿಗಳ ಇಚ್ಚಾಶಕ್ತಿಗೆ ಸಾಕ್ಷಿ ಎಂದರು.


ವೇದಿಕೆಯಲ್ಲಿ ಗ್ರಾಮಾಂತರ ವೃತ್ತ ನಿರೀಕ್ಷಕ ಟಿ ಬಿ ಶಿವಕುಮಾರ್, ಸೋಗಾಲ 

ಪಿಎಸಿಎಸ್ ನಿರ್ದೇಶಕ ಶಶಿಧರ್, ಗ್ರಾ.ಪಂ. ಸದಸ್ಯರಾದ ಶಿವಪ್ರಕಾಶ್, ಶಿಲ್ಪಿ ಅಭಿಷೇಕ್, ವಕೀಲರಾದ ವಸಂತ್‍ಕುಮಾರ್, 

ಶಿಕ್ಷಕರಾದ ಎಂ.ಆರ್.ಸುರೇಶ್ ಗ್ರಾಮದ ಮುಖಂಡ ಶಿವಕುಮಾರ್, ಪತ್ರಕರ್ತ ಗೋ.ರಾ.ಶ್ರೀನಿವಾಸ್ ಮುಂತಾದವರು ಹಾಜರಿದ್ದರು.

ಸೇವಾ ಬಳಗದ ಮುಖಂಡರಾದ ದೇವರಾಜು, ಸುರೇಶ್, ಪುಟ್ಟಸ್ವಾಮಿ, ಲೋಕೇಶ್, ರವಿಕುಮಾರ್, ರಾಮು, ಶಿವರಾಜು, ಶಿವಲಿಂಗಯ್ಯ, ಶಿವಲಿಂಗ.ಕೆ ಇನ್ನು ಮುಂತಾದ ಸದಸ್ಯರು ಹಾಜರಿದ್ದರು. 

ಕಾರ್ಯಕ್ರಮಕ್ಕೆ ಗಾಯಕ ಸಾಕ್ಯವಂಶಿ ಪ್ರಾರ್ಥಿಸಿ, ಉಪನ್ಯಾಸಕ ಬಿ.ಪಿ.ಸುರೇಶ್ ನಿರೂಪಿಸಿದರು. ಸರ್ಕಾರಿ ಪದವಿ ಪೂರ್ವ ಕಾಲೇಜು 

ಪ್ರಾಂಶುಪಾಲ ಪಿ.ಸುರೇಶ್ ಪ್ರಾಸ್ತಾವಿಕ ನುಡಿಯನ್ನಾಡಿ ನೃಪತುಂಗ ಕನ್ನಡ ಸೇವಾ ಸಂಘದ ವಿಶ್ವನಾಥ್ ಸ್ವಾಗತಿಸಿ ನೃಪತುಂಗ ಸೇವಾ 

ಬಳಗದ ಸಂ.ಕಾರ್ಯದರ್ಶಿ ಶ್ರೀನಿವಾಸ್ ವಂದಿಸಿದರು.


ಮುಂಜಾನೆ ಒಂಭತ್ತು ಗಂಟೆಯಿಂದಲೇ ಕಾರ್ಯಕ್ರಮ ಆರಂಭವಾಗಿದ್ದು ಗ್ರಾಮದ ಯಜಮಾನರಾದ ಕಡಜೇಗೌಡರು ಉದ್ಘಾಟಿಸಿದರು. ನಾಟಕ, ಹಾಸ್ಯ, ಶಾಲಾ ಮಕ್ಕಳ ಕಾರ್ಯಕ್ರಮ, ಬೈಕ್ ರ್ಯಾಲಿ ಸೇರಿದಂತೆ ವಿವಿಧ ಕಾರ್ಯಕ್ರಮಗಳು ಜರುಗಿದವು. ವೇದಿಕೆ ಕಾರ್ಯಕ್ರಮ ಮುಗಿದ ನಂತರ ತುಮಕೂರು ಆಶಾ ಆರ್ಕೆಸ್ಟ್ರಾ ತಂಡದಿಂದ ರಸಮಂಜರಿ ಕಾರ್ಯಕ್ರಮವು ಅದ್ದೂರಿಯಾಗಿ ಜರುಗಿತು.


ಗೋ ರಾ ಶ್ರೀನಿವಾಸ...

ಮೊ:9845856139.

ಪ್ರತಿಕ್ರಿಯೆಗಳು

  • ನಿಮ್ಮ ಅಭಿಪ್ರಾಯ ತಿಳಿಸುವಲ್ಲಿ ನೀವು ಮೊದಲಿಗರಾಗಿ.

ನಿಮ್ಮ ಅಭಿಪ್ರಾಯಗಳನ್ನು ಬರೆಯಿರಿ/ತಿಳಿಸಿ.

Recent news in ramanagara »

ಬಮೂಲ್ ಕಛೇರಿಯಲ್ಲಿ ನಿರ್ದೇಶಕರು ಮತ್ತು ಬೆಂಬಲಿಗರ ನಡುವೆ ಜಟಾಪಟಿ
ಬಮೂಲ್ ಕಛೇರಿಯಲ್ಲಿ ನಿರ್ದೇಶಕರು ಮತ್ತು ಬೆಂಬಲಿಗರ ನಡುವೆ ಜಟಾಪಟಿ

ಚನ್ನಪಟ್ಟಣ.ಜ.೨೭: ನಗರದಲ್ಲಿನ ಬಮೂಲ್ ಕಛೇರಿಯಲ್ಲಿ ಶುಕ್ರವಾರ ಬೆಳಿಗ್ಗೆ ಚುನಾಯಿತ ಬಮೂಲ್ ನಿರ್ದೇಶಕ ಹೆಚ್ ಸಿ ಜಯಮುತ್ತು ಮತ್ತು ಇತ್ತೀಚೆಗೆ ಸರ

ಹತ್ತನೇ ತರಗತಿ ವಿದ್ಯಾರ್ಥಿಗಳಿಗೆ ರಸಪ್ರಶ್ನೆ ಕಾರ್ಯಕ್ರಮ
ಹತ್ತನೇ ತರಗತಿ ವಿದ್ಯಾರ್ಥಿಗಳಿಗೆ ರಸಪ್ರಶ್ನೆ ಕಾರ್ಯಕ್ರಮ

ಚನ್ನಪಟ್ಟಣ: ಕರ್ನಾಟಕ ರಾಜ್ಯ ಪ್ರೌಢಶಾಲಾ ಸಹ ಶಿಕ್ಷಕರ ಸಂಘ( ರಿ) ತಾಲ್ಲೂಕು ಘಟಕ ಚನ್ನಪಟ್ಟಣ ಹಾಗೂ ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ ಚನ್

ಪೌರಕಾರ್ಮಿಕರಿಗೆ ಸೌಲಭ್ಯಗಳನ್ನು ಒದಗಿಸಿ: ಡಾ.ಅವಿನಾಶ‍್ ಮೆನನ್
ಪೌರಕಾರ್ಮಿಕರಿಗೆ ಸೌಲಭ್ಯಗಳನ್ನು ಒದಗಿಸಿ: ಡಾ.ಅವಿನಾಶ‍್ ಮೆನನ್

ರಾಮನಗರ, ಜ. 2:     ಪೌರಕಾರ್ಮಿಕರಿಗೆ ಸರ್ಕಾರದಿಂದ ಸಿಗುವಂತಹ ಸೌಲಭ್ಯಗಳನ್ನು ನೀಡುವಂತೆ ಜಿಲ್ಲಾಧಿಕಾರಿ ಡಾ.ಅವಿನಾಶ್ ಮೆನನ್ ರಾಜೇಂದ್ರನ್ ತಿಳಿಸಿದರು.


<

ಜಿಲ್ಲೆಯ ಕೆರೆಗಳನ್ನು ತುಂಬಿಸಲು ನೀರಾವರಿ ಯೋಜನೆಗಳಿಗೆ ವೇಗ: ಡಾ ಸಿ ಎನ್ ಅಶ್ವತ್ಥನಾರಾಯಣ
ಜಿಲ್ಲೆಯ ಕೆರೆಗಳನ್ನು ತುಂಬಿಸಲು ನೀರಾವರಿ ಯೋಜನೆಗಳಿಗೆ ವೇಗ: ಡಾ ಸಿ ಎನ್ ಅಶ್ವತ್ಥನಾರಾಯಣ

ರಾಮನಗರ, ಜ. 2: ಜಿಲ್ಲೆಯಲ್ಲಿರುವ 2,500 ಕೆರೆಗಳಿಗೆ ನೀರು ತುಂಬಿಸುವ ಗುರಿಯೊಂದಿಗೆ ಹಲವಾರು ನೀರಾವರಿ ಯೋಜನೆಗಳನ್ನು ತ್ವರಿತವಾಗಿ ಕಾರ್ಯಗತಗೊಳಿಸಲು ಒತ್ತುಕೊಡಲಾಗಿದೆ ಎಂದು ಜಿಲ್ಲಾ ಉಸ್ತುವಾರಿ ಸಚಿ

ಹಳೆ ದ್ವೇಷದ ಹಿನ್ನೆಲೆ. ಕಣ್ಣಿಗೆ ಖಾರದ ಪುಡಿ ಎರಚಿ, ಮಚ್ಚು ಬೀಸಿ ಕತ್ತು ಕೊಯ್ದು ಮಾರಣಾಂತಿಕ ಹಲ್ಲೆ
ಹಳೆ ದ್ವೇಷದ ಹಿನ್ನೆಲೆ. ಕಣ್ಣಿಗೆ ಖಾರದ ಪುಡಿ ಎರಚಿ, ಮಚ್ಚು ಬೀಸಿ ಕತ್ತು ಕೊಯ್ದು ಮಾರಣಾಂತಿಕ ಹಲ್ಲೆ

ಮದ್ದೂರು: ೨೪-೨೩; ಜನನಿಬಿಡ ಪ್ರದೇಶವಾದ ತಾಲೂಕು ಕಚೇರಿಯ ಆವರಣದಲ್ಲಿ, ಸಾರ್ವಜನಿಕರ ಎದುರಲ್ಲೇ ವ್ಯಕ್ತಿಯೋರ್ವ ತನ್ನ ದಾಯಾದಿ ಮೇಲೆ ಕಣ್ಣಿಗೆ ಖಾ

ನಗರದಲ್ಲಿ ದರೋಡೆಗೆ ಹೊಂಚು ಹಾಕುತ್ತಿದ್ದ ನಾಲ್ವರ ಬಂಧನ
ನಗರದಲ್ಲಿ ದರೋಡೆಗೆ ಹೊಂಚು ಹಾಕುತ್ತಿದ್ದ ನಾಲ್ವರ ಬಂಧನ

ಚನ್ನಪಟ್ಟಣ.ಜ.೨೩: ನಗರದ ಸಾರಿಗೆ ಬಸ್ ನಿಲ್ದಾಣದಲ್ಲಿ ದರೋಡೆಗೆ ಹೊಂಚು ಹಾಕುತ್ತಿದ್ದ ನಾಲ್ವರನ್ನು ಪುರ ಪೋಲಿಸರು ಬಂಧಿಸಿ ಪ್ರಕರಣ ದಾಖಲಿಸಿಕೊಂಡ

ಉಜ್ಜನಹಳ್ಳಿ ಗ್ರಾಮದ ಬಳಿ ಬೋನಿಗೆ ಬಿದ್ದ ಚಿರತೆ
ಉಜ್ಜನಹಳ್ಳಿ ಗ್ರಾಮದ ಬಳಿ ಬೋನಿಗೆ ಬಿದ್ದ ಚಿರತೆ

ಚನ್ನಪಟ್ಟಣ: ಜನ-ಜಾನುವಾರುಗಳಿಗೆ ಉಪಟಳ ನೀಡುತ್ತಿದ್ದ ಚಿರತೆಯನ್ನು ಸೆರೆ ಹಿಡಿಯುವಲ್ಲಿ ಅರಣ್ಯ ಇಲಾಖೆಯ ಸಿಬ್ಬಂದಿಗಳು ಯಶಸ್ವಿಯಾಗಿದ್ದಾರೆ. ತಾಲ್ಲೂಕಿನ ಉಜ್ಜನಹಳ್ಳಿ ಗ್ರಾಮದ ಬಳಿಯ ತೋಟವೊಂದರಲ್ಲಿ ಅರಣ್

ಯಶಸ್ವಿಯಾಗಿ ಜರುಗಿದ ಶ್ರೀ ಕೆಂಗಲ್ ಲಕ್ಷ್ಮೀವೆಂಕಟೇಶ್ವರಸ್ವಾಮಿ ಬ್ರಹ್ಮ ರಥೋತ್ಸವ ಜಿಲ್ಲಾಡಳಿತ ಭಾಗಿ
ಯಶಸ್ವಿಯಾಗಿ ಜರುಗಿದ ಶ್ರೀ ಕೆಂಗಲ್ ಲಕ್ಷ್ಮೀವೆಂಕಟೇಶ್ವರಸ್ವಾಮಿ ಬ್ರಹ್ಮ ರಥೋತ್ಸವ ಜಿಲ್ಲಾಡಳಿತ ಭಾಗಿ

ಚನ್ನಪಟ್ಟಣ: ತಾಲ್ಲೂಕಿನ ಇತಿಹಾಸ ಹಾಗೂ ಪುರಾಣ ಪ್ರಸಿದ್ಧ ಶ್ರೀ ಕೆಂಗಲ್ ಆಂಜನೇಯ ಸ್ವಾಮಿ ದೇವಾಲಯದಲ್ಲಿ ಧಾರ್ಮಿಕ ದತ್ತಿ ಇಲಾಖೆ, ಜಿಲ್ಲಾಡಳಿತ,

ಕೆಂಗಲ್ ಜಾತ್ರೆ ರದ್ದುಗೊಳಿಸಿದರೂ ಕಳೆಗಟ್ಟುತ್ತಿರುವ ಜಾನುವಾರುಗಳು
ಕೆಂಗಲ್ ಜಾತ್ರೆ ರದ್ದುಗೊಳಿಸಿದರೂ ಕಳೆಗಟ್ಟುತ್ತಿರುವ ಜಾನುವಾರುಗಳು

ಚನ್ನಪಟ್ಟಣ: ಜಾನುವಾರುಗಳಿಗೆ ಇತ್ತೀಚೆಗೆ ರಾಜ್ಯದಾದ್ಯಂತ ಚರ್ಮಗಂಟು ರೋಗ ಹರಡಿದ ಹಿನ್ನೆಲೆಯಲ್ಲಿ ರಾಮನಗರ ಜಿಲ್ಲಾಡಳಿತ ಇತಿಹಾಸ ಪ್ರಸಿದ್ಧ ಕೆಂಗ

Top Stories »  


Top ↑