ವಿಶ್ವ ಏಡ್ಸ್ ದಿನದ ಪ್ರಯುಕ್ತ ಆಸ್ಪತ್ರೆಗೆ ಭೇಟಿ ನೀಡಿ, ಜಾಥಾ ಗೆ ಚಾಲನೆ ನೀಡಿದ ನ್ಯಾಯಾಧೀಶರುಗಳು

ಚನ್ನಪಟ್ಟಣ.ಡಿ.೦೧: ಇಂದು ವಿಶ್ವ ಏಡ್ಸ್ ದಿನಾಚರಣೆ ಅಂಗವಾಗಿ, ಸಾರ್ವಜನಿಕ ಆಸ್ಪತ್ರೆ, ಬಾಲು ಪಬ್ಲಿಕ್ ಶಾಲೆ, ಲಯನ್ಸ್ ಸಂಸ್ಥೆ ಸೇರಿದಂತೆ ವಿವಿಧ ಸಂಘ ಸಂಸ್ಥೆಗಳ ಸಹಯೋಗದಲ್ಲಿ ಏಡ್ಸ್ ಜಾಗೃತಿ ಜಾಥಾ ವನ್ನು ಇಲ್ಲಿನ ಜೆಎಂಎಫ್ಸಿ ಹಾಗೂ ಸಿವಿಲ್ ನ್ಯಾಯಾಧೀಶರಾದ ಮಹೇಂದ್ರ ಹಾಗೂ ಉಷಾರಾಣಿಯವರು ಸಾರ್ವಜನಿಕ ಆಸ್ಪತ್ರೆಯ ಮುಂಭಾಗ ಚಾಲನೆ ನೀಡಿದರು.
ಏಡ್ಸ್ ಹರಡುವಿಕೆಯನ್ನು ತಡೆಗಟ್ಟಿ, ಅಸಮಾನತೆಗಳನ್ನು ಹೋಗಲಾಡಿಸಲು ಪ್ರತಿಯೊಬ್ಬರೂ ಆರೋಗ್ಯದಿಂದರಲೂ ಹಾಗೂ ಎಲ್ಲರೂ ಖುಷಿಯಾಗಿರಲು ವಿಶ್ವವು ಒಂದಾಗಬೇಕು ಎಂಬ ನಿಟ್ಟಿನಲ್ಲಿ ವಿಶ್ವ ಏಡ್ಸ್ ದಿನಾಚರಣೆಯನ್ನು ಆಚರಿಸಲಾಗುತ್ತಿದೆ, ಈ ನಿಟ್ಟಿನಲ್ಲಿ ಈ ಆಶಯವನ್ನು ಎಲ್ಲರೂ ಮನಗಂಡು ಆದಷ್ಟು ಆರೋಗ್ಯವಂತರಾಗಿ ಜೀವನ ನಡೆಸಲು ಮುಂದಾಗಬೇಕು ಎಂದು ಕರೆ ನೀಡಿದರು. ಏಡ್ಸ್ ಎಂಬ ಮಹಾಮಾರಿಯಿಂದ ದೂರ ಇರಲು ವೈದ್ಯರು ಕೊಡುವ ಸಲಹೆಗಳನ್ನು ಎಚ್ಚರಿಕೆಯಿಂದ ಗಮನಿಸಬೇಕು ಎಂದರು.
ಇದೇ ಸಂದರ್ಭದಲ್ಲಿ ಇತ್ತೀಚಿಗೆ ನಡೆದ ಜಿಲ್ಲಾಧಿಕಾರಿಗಳ ನಡೆ ಹಳ್ಳಿಯ ಕಡೆ ಕಾರ್ಯಕ್ರಮದಲ್ಲಿ ಸಂತೇಮೊಗೇನಹಳ್ಳಿಯಲ್ಲಿ ವೃದ್ಧ ತಾಯಿ ತಾಯಮ್ಮ (೯೦)ನನ್ನು ಮಕ್ಕಳು ಮನೆಯಿಂದ ಹೊರಗೆ ಹಾಕಿದ ಪ್ರಕರಣದ ಸಂಬಂಧ ಆಕೆಯನ್ನು ಆಸ್ಪತ್ರೆಗೆ ಸೇರಿಸಲಾಗಿದೆ. ಅವರನ್ನು ಭೇಟಿ ಮಾಡಿದ ನ್ಯಾಯಾಧೀಶರುಗಳು ಅವಳ ಕಷ್ಟವನ್ನು ಕೇಳಿ ಸಾಂತ್ವನ ಹೇಳಿದರು.
ತಕ್ಷಣ ಪೊಲೀಸ್ ವೃತ್ತ ನಿರೀಕ್ಷಕ ಟಿ.ಟಿ ಕೃಷ್ಣ ಅವರನ್ನು ಕರೆಸಿ, ತಕ್ಷಣ ಇವರ ಸಂಬಂಧಿತರನ್ನು ಕರೆಸಿ, ಸಮಸ್ಯೆ ಪರಿಹಾರಕ್ಕೆ ಸೂಚಿಸಿದರು. ಅವರು ನಿಮ್ಮ ಕರೆಗೆ ಬೆಲೆ ಕೊಡದಿದ್ದರೆ ಮುಂದೆ ಏನು ಮಾಡಬೇಕು ಎಂಬುದರ ಬಗ್ಗೆ ನ್ಯಾಯಾಲಯ ಯೋಚಿಸುತ್ತದೆ ಎಂಬ ಸೂಚನೆಯನ್ನು ನೀಡಿದರು.
ಸಂದರ್ಭದಲ್ಲಿ ಆಸ್ಪತ್ರೆಯ ವೈದ್ಯಾಧಿಕಾರಿ ವಿಜಯನರಸಿಂಹ, ಡಿ.ಹೆಚ್.ಓ ರಾಜು ಸೇರಿದಂತೆ ಸಂಘ ಸಂಸ್ಥೆಗಳ ಪದಾಧಿಕಾರಿಗಳು ಹಾಜರಿದ್ದರು.
ಇದೇ ಸಂದರ್ಭದಲ್ಲಿ ಹಲವಾರು ಸಂಘಸಂಸ್ಥೆಗಳೊಡಗೂಡಿ ಆಸ್ಪತ್ರೆಯ ಸಭಾಂಗಣದಲ್ಲಿ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು.
ಏಡ್ಸ್ ರೋಗ ಬಂದ ರೀತಿ, ಅದು ಹರಡುವ ರೀತಿ, ಚಿಕಿತ್ಸೆ, ಸರ್ಕಾರ ಮತ್ತು ಸರ್ಕಾರೇತರ ಸಂಸ್ಥೆಗಳ ಪಾತ್ರ ಕುರಿತು ನವೀನ್ ಕುಮಾರ್ ರವರು ತಿಳಿಸಿಕೊಟ್ಟರು.
ದಂತವೈದ್ಯೆ ಸುಗುಣ ರವರು ಮಾತನಾಡಿ, ಏಡ್ಸ್ ಎಂಬ ರೋಗ ಬಂದಾಗ ಜನ ದಿಗ್ ಭ್ರಾಂತರಾಗಿದ್ದರು. ಆಗ ಸಾಯುವವರ ಸಂಖ್ಯೆಯು ಹೆಚ್ಚಾಗಿತ್ತು. ಈ ಹಿನ್ನೆಲೆಯಲ್ಲಿ ಏಡ್ಸ್ ರೋಗ ಕುರಿತು ಅರಿವು ಮೂಡಿಸುವ ಸಲುವಾಗಿ ಡಿಸೆಂಬರ್ ಒಂದನೇ ತಾರೀಖಿನಂದು ವಿಶ್ವ ಏಡ್ಸ್ ದಿನವನ್ನು ಆಚರಿಸಲಾಗುತ್ತಿದೆ ಎಂದು ಮಾಹಿತಿ ನೀಡಿದರು.
ವೇದಿಕೆಯಲ್ಲಿ ಡಾ ವಿಜಯನರಸಿಂಹ, ಡಾ ಸೋಮಸುಂದರ್, ಲಯನ್ಸ್ ಸಂಸ್ಥೆಯ ತಿಪ್ರೆಗೌಡ ಮತ್ತಿತರರು ಉಪಸ್ಥಿತರಿದ್ದರು.
ಗೋ ರಾ ಶ್ರೀನಿವಾಸ...
ಮೊ:9845856139.
Recent news in ramanagara »

ಬಮೂಲ್ ಕಛೇರಿಯಲ್ಲಿ ನಿರ್ದೇಶಕರು ಮತ್ತು ಬೆಂಬಲಿಗರ ನಡುವೆ ಜಟಾಪಟಿ
ಚನ್ನಪಟ್ಟಣ.ಜ.೨೭: ನಗರದಲ್ಲಿನ ಬಮೂಲ್ ಕಛೇರಿಯಲ್ಲಿ ಶುಕ್ರವಾರ ಬೆಳಿಗ್ಗೆ ಚುನಾಯಿತ ಬಮೂಲ್ ನಿರ್ದೇಶಕ ಹೆಚ್ ಸಿ ಜಯಮುತ್ತು ಮತ್ತು ಇತ್ತೀಚೆಗೆ ಸರ

ಹತ್ತನೇ ತರಗತಿ ವಿದ್ಯಾರ್ಥಿಗಳಿಗೆ ರಸಪ್ರಶ್ನೆ ಕಾರ್ಯಕ್ರಮ
ಚನ್ನಪಟ್ಟಣ: ಕರ್ನಾಟಕ ರಾಜ್ಯ ಪ್ರೌಢಶಾಲಾ ಸಹ ಶಿಕ್ಷಕರ ಸಂಘ( ರಿ) ತಾಲ್ಲೂಕು ಘಟಕ ಚನ್ನಪಟ್ಟಣ ಹಾಗೂ ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ ಚನ್

ಪೌರಕಾರ್ಮಿಕರಿಗೆ ಸೌಲಭ್ಯಗಳನ್ನು ಒದಗಿಸಿ: ಡಾ.ಅವಿನಾಶ್ ಮೆನನ್
ರಾಮನಗರ, ಜ. 2: ಪೌರಕಾರ್ಮಿಕರಿಗೆ ಸರ್ಕಾರದಿಂದ ಸಿಗುವಂತಹ ಸೌಲಭ್ಯಗಳನ್ನು ನೀಡುವಂತೆ ಜಿಲ್ಲಾಧಿಕಾರಿ ಡಾ.ಅವಿನಾಶ್ ಮೆನನ್ ರಾಜೇಂದ್ರನ್ ತಿಳಿಸಿದರು.

ಜಿಲ್ಲೆಯ ಕೆರೆಗಳನ್ನು ತುಂಬಿಸಲು ನೀರಾವರಿ ಯೋಜನೆಗಳಿಗೆ ವೇಗ: ಡಾ ಸಿ ಎನ್ ಅಶ್ವತ್ಥನಾರಾಯಣ
ರಾಮನಗರ, ಜ. 2: ಜಿಲ್ಲೆಯಲ್ಲಿರುವ 2,500 ಕೆರೆಗಳಿಗೆ ನೀರು ತುಂಬಿಸುವ ಗುರಿಯೊಂದಿಗೆ ಹಲವಾರು ನೀರಾವರಿ ಯೋಜನೆಗಳನ್ನು ತ್ವರಿತವಾಗಿ ಕಾರ್ಯಗತಗೊಳಿಸಲು ಒತ್ತುಕೊಡಲಾಗಿದೆ ಎಂದು ಜಿಲ್ಲಾ ಉಸ್ತುವಾರಿ ಸಚಿ

ವಸ್ತು, ವ್ಯಕ್ತಿ ಆರಿಸಿಕೊಳ್ಳಲು ಯೋಚಿಸುತ್ತೇವೆ ಜನಪ್ರತಿನಿಧಿ ಆರಿಸಲು ಎಡಗುತ್ತಿದ್ದೇವೆ. ನ್ಯಾ ಎಂ ಮಹೇಂದ್ರ
ಚನ್ನಪಟ್ಟಣ: ಜ:೨೫:೨೩. ಒಂದು ನಿರ್ಜೀವ, ಸಜೀವ

ಹಳೆ ದ್ವೇಷದ ಹಿನ್ನೆಲೆ. ಕಣ್ಣಿಗೆ ಖಾರದ ಪುಡಿ ಎರಚಿ, ಮಚ್ಚು ಬೀಸಿ ಕತ್ತು ಕೊಯ್ದು ಮಾರಣಾಂತಿಕ ಹಲ್ಲೆ
ಮದ್ದೂರು: ೨೪-೨೩; ಜನನಿಬಿಡ ಪ್ರದೇಶವಾದ ತಾಲೂಕು ಕಚೇರಿಯ ಆವರಣದಲ್ಲಿ, ಸಾರ್ವಜನಿಕರ ಎದುರಲ್ಲೇ ವ್ಯಕ್ತಿಯೋರ್ವ ತನ್ನ ದಾಯಾದಿ ಮೇಲೆ ಕಣ್ಣಿಗೆ ಖಾ

ನಗರದಲ್ಲಿ ದರೋಡೆಗೆ ಹೊಂಚು ಹಾಕುತ್ತಿದ್ದ ನಾಲ್ವರ ಬಂಧನ
ಚನ್ನಪಟ್ಟಣ.ಜ.೨೩: ನಗರದ ಸಾರಿಗೆ ಬಸ್ ನಿಲ್ದಾಣದಲ್ಲಿ ದರೋಡೆಗೆ ಹೊಂಚು ಹಾಕುತ್ತಿದ್ದ ನಾಲ್ವರನ್ನು ಪುರ ಪೋಲಿಸರು ಬಂಧಿಸಿ ಪ್ರಕರಣ ದಾಖಲಿಸಿಕೊಂಡ

ಉಜ್ಜನಹಳ್ಳಿ ಗ್ರಾಮದ ಬಳಿ ಬೋನಿಗೆ ಬಿದ್ದ ಚಿರತೆ
ಚನ್ನಪಟ್ಟಣ: ಜನ-ಜಾನುವಾರುಗಳಿಗೆ ಉಪಟಳ ನೀಡುತ್ತಿದ್ದ ಚಿರತೆಯನ್ನು ಸೆರೆ ಹಿಡಿಯುವಲ್ಲಿ ಅರಣ್ಯ ಇಲಾಖೆಯ ಸಿಬ್ಬಂದಿಗಳು ಯಶಸ್ವಿಯಾಗಿದ್ದಾರೆ. ತಾಲ್ಲೂಕಿನ ಉಜ್ಜನಹಳ್ಳಿ ಗ್ರಾಮದ ಬಳಿಯ ತೋಟವೊಂದರಲ್ಲಿ ಅರಣ್

ಯಶಸ್ವಿಯಾಗಿ ಜರುಗಿದ ಶ್ರೀ ಕೆಂಗಲ್ ಲಕ್ಷ್ಮೀವೆಂಕಟೇಶ್ವರಸ್ವಾಮಿ ಬ್ರಹ್ಮ ರಥೋತ್ಸವ ಜಿಲ್ಲಾಡಳಿತ ಭಾಗಿ
ಚನ್ನಪಟ್ಟಣ: ತಾಲ್ಲೂಕಿನ ಇತಿಹಾಸ ಹಾಗೂ ಪುರಾಣ ಪ್ರಸಿದ್ಧ ಶ್ರೀ ಕೆಂಗಲ್ ಆಂಜನೇಯ ಸ್ವಾಮಿ ದೇವಾಲಯದಲ್ಲಿ ಧಾರ್ಮಿಕ ದತ್ತಿ ಇಲಾಖೆ, ಜಿಲ್ಲಾಡಳಿತ,

ಕೆಂಗಲ್ ಜಾತ್ರೆ ರದ್ದುಗೊಳಿಸಿದರೂ ಕಳೆಗಟ್ಟುತ್ತಿರುವ ಜಾನುವಾರುಗಳು
ಚನ್ನಪಟ್ಟಣ: ಜಾನುವಾರುಗಳಿಗೆ ಇತ್ತೀಚೆಗೆ ರಾಜ್ಯದಾದ್ಯಂತ ಚರ್ಮಗಂಟು ರೋಗ ಹರಡಿದ ಹಿನ್ನೆಲೆಯಲ್ಲಿ ರಾಮನಗರ ಜಿಲ್ಲಾಡಳಿತ ಇತಿಹಾಸ ಪ್ರಸಿದ್ಧ ಕೆಂಗ
ಪ್ರತಿಕ್ರಿಯೆಗಳು