Tel: 7676775624 | Mail: info@yellowandred.in

Language: EN KAN

    Follow us :


ಉಜ್ಜನಹಳ್ಳಿ ಗ್ರಾಮದ ಬಳಿ ಬೋನಿಗೆ ಬಿದ್ದ ಚಿರತೆ

Posted date: 21 Jan, 2023

Powered by:     Yellow and Red

ಉಜ್ಜನಹಳ್ಳಿ ಗ್ರಾಮದ ಬಳಿ ಬೋನಿಗೆ ಬಿದ್ದ ಚಿರತೆ

ಚನ್ನಪಟ್ಟಣ: ಜನ-ಜಾನುವಾರುಗಳಿಗೆ ಉಪಟಳ ನೀಡುತ್ತಿದ್ದ ಚಿರತೆಯನ್ನು ಸೆರೆ ಹಿಡಿಯುವಲ್ಲಿ ಅರಣ್ಯ ಇಲಾಖೆಯ ಸಿಬ್ಬಂದಿಗಳು ಯಶಸ್ವಿಯಾಗಿದ್ದಾರೆ. ತಾಲ್ಲೂಕಿನ ಉಜ್ಜನಹಳ್ಳಿ ಗ್ರಾಮದ ಬಳಿಯ ತೋಟವೊಂದರಲ್ಲಿ ಅರಣ್ಯ ಇಲಾಖೆ ಅಧಿಕಾರಿಗಳು ಇಟ್ಟಿದ್ದ ಬೋನಿಗೆ ಗುರುವಾರ ರಾತ್ರಿ ಚಿರತೆಯೊಂದು ಬಿದ್ದಿದೆ.


ಈ ಭಾಗದಲ್ಲಿ ಚಿರತೆಯೊಂದು ಜನ ಜಾನುವಾರುಗಳಿಗೆ ದುಸ್ವಪ್ನವಾಗಿ ಕಾಡುತ್ತಿತ್ತು. ಜೊತೆಗೆ ಕೆಲವು ಜಾನುವಾರುಗಳ ಮೇಲೆ ದಾಳಿ ನಡೆಸಿ ಕೊಂದು ಹಾಕಿತ್ತು. ಜೊತೆಗೆ ಈ ಭಾಗದಲ್ಲಿ ತೋಟಗಳಲ್ಲಿ ಹಗಲು ಹೊತ್ತಿನಲ್ಲಿಯೆ ಕಾಣಿಸಿಕೊಂಡು ಭೀತಿ ಹುಟ್ಟಿಸಿತ್ತು.

ಈ ಬಗ್ಗೆ ಈ ಭಾಗದ ರೈತರು ಹಾಗೂ ಸಾರ್ವಜನಿಕರು ನೀಡಿದ್ದ ದೂರಿನ ಮೇರೆಗೆ ಅರಣ್ಯ ಇಲಾಖೆ ಅಧಿಕಾರಿಗಳು ಉಜ್ಜನಹಳ್ಳಿ ಗ್ರಾಮದ ತೋಟವೊಂದರಲ್ಲಿ ಬೋನು ಇಟ್ಟಿದ್ದರು. ಗುರುವಾರ ರಾತ್ರಿ ಆಹಾರ ಅರಸುತ್ತಾ ಬಂದಿರುವ ಚಿರತೆ ಬೋನಿಗೆ ಬಿದ್ದಿದೆ. ಚಿರತೆ ಸೆರೆಸಿಕ್ಕಿರುವ ವಿಷಯ ತಿಳಿದು ಗ್ರಾಮಸ್ಥರು ಹಾಗೂ ಅಕ್ಕಪಕ್ಕದ ಗ್ರಾಮಸ್ಥರು ತಂಡೋಪತಂಡವಾಗಿ ಆಗಮಿಸಿ ಫೋಟೋ ಹಾಗೂ ವೀಡಿಯೋ ಮಾಡಿಕೊಂಡರು. ಜೊತೆಗೆ ಕಿರುಕುಳ ನೀಡುತ್ತಿದ್ದ ಚಿರತೆ ಸೆರೆ ಸಿಕ್ಕಿರುವ ವಿಷಯ ತಿಳಿದು ಈ ಭಾಗದ ಜನತೆ ನಿಟ್ಟುಸಿರು ಬಿಟ್ಟರು.


ಸುಮಾರು ಒಂದೂವರೆ ವರ್ಷದ ಗಂಡು ಚಿರತೆ ಇದಾಗಿದ್ದು, ಸೆರೆ ಸಿಕ್ಕಿರುವ ಚಿರತೆಯನ್ನು ಮೇಲಧಿಕಾರಿಗಳ ಸೂಚನೆಯಂತೆ ನಿಗದಿತ ಅರಣ್ಯವೊಂದಕ್ಕೆ ಬಿಡಲಾಗುವುದು ಎಂದು ತಾಲ್ಲೂಕು ವಲಯ ಅರಣ್ಯಾಧಿಕಾರಿ ಕಿರಣ್ ಕುಮಾರ್ ತಿಳಿಸಿದ್ದಾರೆ 


ಗೋ ರಾ ಶ್ರೀನಿವಾಸ...

ಮೊ:9845856139.

ಪ್ರತಿಕ್ರಿಯೆಗಳು

  • ನಿಮ್ಮ ಅಭಿಪ್ರಾಯ ತಿಳಿಸುವಲ್ಲಿ ನೀವು ಮೊದಲಿಗರಾಗಿ.

ನಿಮ್ಮ ಅಭಿಪ್ರಾಯಗಳನ್ನು ಬರೆಯಿರಿ/ತಿಳಿಸಿ.

Recent news in ramanagara »

ಬಮೂಲ್ ಕಛೇರಿಯಲ್ಲಿ ನಿರ್ದೇಶಕರು ಮತ್ತು ಬೆಂಬಲಿಗರ ನಡುವೆ ಜಟಾಪಟಿ
ಬಮೂಲ್ ಕಛೇರಿಯಲ್ಲಿ ನಿರ್ದೇಶಕರು ಮತ್ತು ಬೆಂಬಲಿಗರ ನಡುವೆ ಜಟಾಪಟಿ

ಚನ್ನಪಟ್ಟಣ.ಜ.೨೭: ನಗರದಲ್ಲಿನ ಬಮೂಲ್ ಕಛೇರಿಯಲ್ಲಿ ಶುಕ್ರವಾರ ಬೆಳಿಗ್ಗೆ ಚುನಾಯಿತ ಬಮೂಲ್ ನಿರ್ದೇಶಕ ಹೆಚ್ ಸಿ ಜಯಮುತ್ತು ಮತ್ತು ಇತ್ತೀಚೆಗೆ ಸರ

ಹತ್ತನೇ ತರಗತಿ ವಿದ್ಯಾರ್ಥಿಗಳಿಗೆ ರಸಪ್ರಶ್ನೆ ಕಾರ್ಯಕ್ರಮ
ಹತ್ತನೇ ತರಗತಿ ವಿದ್ಯಾರ್ಥಿಗಳಿಗೆ ರಸಪ್ರಶ್ನೆ ಕಾರ್ಯಕ್ರಮ

ಚನ್ನಪಟ್ಟಣ: ಕರ್ನಾಟಕ ರಾಜ್ಯ ಪ್ರೌಢಶಾಲಾ ಸಹ ಶಿಕ್ಷಕರ ಸಂಘ( ರಿ) ತಾಲ್ಲೂಕು ಘಟಕ ಚನ್ನಪಟ್ಟಣ ಹಾಗೂ ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ ಚನ್

ಪೌರಕಾರ್ಮಿಕರಿಗೆ ಸೌಲಭ್ಯಗಳನ್ನು ಒದಗಿಸಿ: ಡಾ.ಅವಿನಾಶ‍್ ಮೆನನ್
ಪೌರಕಾರ್ಮಿಕರಿಗೆ ಸೌಲಭ್ಯಗಳನ್ನು ಒದಗಿಸಿ: ಡಾ.ಅವಿನಾಶ‍್ ಮೆನನ್

ರಾಮನಗರ, ಜ. 2:     ಪೌರಕಾರ್ಮಿಕರಿಗೆ ಸರ್ಕಾರದಿಂದ ಸಿಗುವಂತಹ ಸೌಲಭ್ಯಗಳನ್ನು ನೀಡುವಂತೆ ಜಿಲ್ಲಾಧಿಕಾರಿ ಡಾ.ಅವಿನಾಶ್ ಮೆನನ್ ರಾಜೇಂದ್ರನ್ ತಿಳಿಸಿದರು.


<

ಜಿಲ್ಲೆಯ ಕೆರೆಗಳನ್ನು ತುಂಬಿಸಲು ನೀರಾವರಿ ಯೋಜನೆಗಳಿಗೆ ವೇಗ: ಡಾ ಸಿ ಎನ್ ಅಶ್ವತ್ಥನಾರಾಯಣ
ಜಿಲ್ಲೆಯ ಕೆರೆಗಳನ್ನು ತುಂಬಿಸಲು ನೀರಾವರಿ ಯೋಜನೆಗಳಿಗೆ ವೇಗ: ಡಾ ಸಿ ಎನ್ ಅಶ್ವತ್ಥನಾರಾಯಣ

ರಾಮನಗರ, ಜ. 2: ಜಿಲ್ಲೆಯಲ್ಲಿರುವ 2,500 ಕೆರೆಗಳಿಗೆ ನೀರು ತುಂಬಿಸುವ ಗುರಿಯೊಂದಿಗೆ ಹಲವಾರು ನೀರಾವರಿ ಯೋಜನೆಗಳನ್ನು ತ್ವರಿತವಾಗಿ ಕಾರ್ಯಗತಗೊಳಿಸಲು ಒತ್ತುಕೊಡಲಾಗಿದೆ ಎಂದು ಜಿಲ್ಲಾ ಉಸ್ತುವಾರಿ ಸಚಿ

ಹಳೆ ದ್ವೇಷದ ಹಿನ್ನೆಲೆ. ಕಣ್ಣಿಗೆ ಖಾರದ ಪುಡಿ ಎರಚಿ, ಮಚ್ಚು ಬೀಸಿ ಕತ್ತು ಕೊಯ್ದು ಮಾರಣಾಂತಿಕ ಹಲ್ಲೆ
ಹಳೆ ದ್ವೇಷದ ಹಿನ್ನೆಲೆ. ಕಣ್ಣಿಗೆ ಖಾರದ ಪುಡಿ ಎರಚಿ, ಮಚ್ಚು ಬೀಸಿ ಕತ್ತು ಕೊಯ್ದು ಮಾರಣಾಂತಿಕ ಹಲ್ಲೆ

ಮದ್ದೂರು: ೨೪-೨೩; ಜನನಿಬಿಡ ಪ್ರದೇಶವಾದ ತಾಲೂಕು ಕಚೇರಿಯ ಆವರಣದಲ್ಲಿ, ಸಾರ್ವಜನಿಕರ ಎದುರಲ್ಲೇ ವ್ಯಕ್ತಿಯೋರ್ವ ತನ್ನ ದಾಯಾದಿ ಮೇಲೆ ಕಣ್ಣಿಗೆ ಖಾ

ನಗರದಲ್ಲಿ ದರೋಡೆಗೆ ಹೊಂಚು ಹಾಕುತ್ತಿದ್ದ ನಾಲ್ವರ ಬಂಧನ
ನಗರದಲ್ಲಿ ದರೋಡೆಗೆ ಹೊಂಚು ಹಾಕುತ್ತಿದ್ದ ನಾಲ್ವರ ಬಂಧನ

ಚನ್ನಪಟ್ಟಣ.ಜ.೨೩: ನಗರದ ಸಾರಿಗೆ ಬಸ್ ನಿಲ್ದಾಣದಲ್ಲಿ ದರೋಡೆಗೆ ಹೊಂಚು ಹಾಕುತ್ತಿದ್ದ ನಾಲ್ವರನ್ನು ಪುರ ಪೋಲಿಸರು ಬಂಧಿಸಿ ಪ್ರಕರಣ ದಾಖಲಿಸಿಕೊಂಡ

ಉಜ್ಜನಹಳ್ಳಿ ಗ್ರಾಮದ ಬಳಿ ಬೋನಿಗೆ ಬಿದ್ದ ಚಿರತೆ
ಉಜ್ಜನಹಳ್ಳಿ ಗ್ರಾಮದ ಬಳಿ ಬೋನಿಗೆ ಬಿದ್ದ ಚಿರತೆ

ಚನ್ನಪಟ್ಟಣ: ಜನ-ಜಾನುವಾರುಗಳಿಗೆ ಉಪಟಳ ನೀಡುತ್ತಿದ್ದ ಚಿರತೆಯನ್ನು ಸೆರೆ ಹಿಡಿಯುವಲ್ಲಿ ಅರಣ್ಯ ಇಲಾಖೆಯ ಸಿಬ್ಬಂದಿಗಳು ಯಶಸ್ವಿಯಾಗಿದ್ದಾರೆ. ತಾಲ್ಲೂಕಿನ ಉಜ್ಜನಹಳ್ಳಿ ಗ್ರಾಮದ ಬಳಿಯ ತೋಟವೊಂದರಲ್ಲಿ ಅರಣ್

ಯಶಸ್ವಿಯಾಗಿ ಜರುಗಿದ ಶ್ರೀ ಕೆಂಗಲ್ ಲಕ್ಷ್ಮೀವೆಂಕಟೇಶ್ವರಸ್ವಾಮಿ ಬ್ರಹ್ಮ ರಥೋತ್ಸವ ಜಿಲ್ಲಾಡಳಿತ ಭಾಗಿ
ಯಶಸ್ವಿಯಾಗಿ ಜರುಗಿದ ಶ್ರೀ ಕೆಂಗಲ್ ಲಕ್ಷ್ಮೀವೆಂಕಟೇಶ್ವರಸ್ವಾಮಿ ಬ್ರಹ್ಮ ರಥೋತ್ಸವ ಜಿಲ್ಲಾಡಳಿತ ಭಾಗಿ

ಚನ್ನಪಟ್ಟಣ: ತಾಲ್ಲೂಕಿನ ಇತಿಹಾಸ ಹಾಗೂ ಪುರಾಣ ಪ್ರಸಿದ್ಧ ಶ್ರೀ ಕೆಂಗಲ್ ಆಂಜನೇಯ ಸ್ವಾಮಿ ದೇವಾಲಯದಲ್ಲಿ ಧಾರ್ಮಿಕ ದತ್ತಿ ಇಲಾಖೆ, ಜಿಲ್ಲಾಡಳಿತ,

ಕೆಂಗಲ್ ಜಾತ್ರೆ ರದ್ದುಗೊಳಿಸಿದರೂ ಕಳೆಗಟ್ಟುತ್ತಿರುವ ಜಾನುವಾರುಗಳು
ಕೆಂಗಲ್ ಜಾತ್ರೆ ರದ್ದುಗೊಳಿಸಿದರೂ ಕಳೆಗಟ್ಟುತ್ತಿರುವ ಜಾನುವಾರುಗಳು

ಚನ್ನಪಟ್ಟಣ: ಜಾನುವಾರುಗಳಿಗೆ ಇತ್ತೀಚೆಗೆ ರಾಜ್ಯದಾದ್ಯಂತ ಚರ್ಮಗಂಟು ರೋಗ ಹರಡಿದ ಹಿನ್ನೆಲೆಯಲ್ಲಿ ರಾಮನಗರ ಜಿಲ್ಲಾಡಳಿತ ಇತಿಹಾಸ ಪ್ರಸಿದ್ಧ ಕೆಂಗ

Top Stories »  


Top ↑