Tel: 7676775624 | Mail: info@yellowandred.in

Language: EN KAN

    Follow us :


ಅಂಧಕಾರದಲ್ಲಿ ಇತಿಹಾಸದ ಪಾಲಿಟೆಕ್ನಿಕ್ ಕಾಲೇಜು

Posted date: 04 Mar, 2019

Powered by:     Yellow and Red

ಅಂಧಕಾರದಲ್ಲಿ ಇತಿಹಾಸದ ಪಾಲಿಟೆಕ್ನಿಕ್ ಕಾಲೇಜು

೧೯೬೪ ರಲ್ಲಿ ಅಂದಿನ ಕೇಂದ್ರ ಸಚಿವರಾದ ಲಾಲ್ ಬಹಾದ್ದೂರ್ ಶಾಸ್ತ್ರಿ ಯವರು ಮತ್ತು ಅಂದಿನ ಭಾರತ ರಾಷ್ಟ್ರೀಯ ಕಾಂಗ್ರೆಸ್ ಪಕ್ಷದ ಅಧ್ಯಕ್ಷರಾದ ಕೆ ಕಾಮರಾಜ ರವರು ಚನ್ನಪಟ್ಟಣದಲ್ಲಿ ಉದ್ಘಾಟಿಸಿದ ಪಾಲಿಟೆಕ್ನಿಕ್ ಕಾಲೇಜು ನಗರದ ಹೃದಯ ಭಾಗದಲ್ಲಿದ್ದರೂ ಸಹ ಹಾಳು ಕೊಂಪೆಯಾಗಿ, ಭೂತಬಂಗಲೆಗಳಾಗಿ, ಬೀಡಾಡಿ ಹಸು, ಹಂದಿ, ನಾಯಿಗಳ ವಾಸಸ್ಥಾನವಾಗಿ ದಟ್ಟವಾದ ಕಾಡಿನ ಮಧ್ಯದಲ್ಲಿರುವಂತೆ ಗೋಚರಿಸುತ್ತಿದೆ.


ಅರವತ್ತು ವರ್ಷ ಹಳೆಯದು

ಹಿರಿಯರು ಹೇಳುವಂತೆ ೧೯೫೮ ರಲ್ಲೇ ಪ್ರಾರಂಭವಾದ ಪಾಲಿಟೆಕ್ನಿಕ್ ಕಾಲೇಜು ೨೬/೦೩/೧೯೬೧ ರಂದು ಅಂದಿನ ಕೇಂದ್ರ ಶಿಕ್ಷಣ ಮಂತ್ರಿಯಾದ ಅಣ್ಣಾರಾವ್ ಗಂಗಾಮುಖಿ ಮತ್ತು ರಾಜ್ಯದ ವಿಧಾನ ಪರಿಷತ್ ಸದಸ್ಯ ಹಾಗೂ ಮಾಜಿ ವಿದ್ಯಾಮಂತ್ರಿಯಾಗಿದ್ದ ವಿ ವೆಂಕಟಪ್ಪನವರು ಕಟ್ಟಡದ ಶಂಕುಸ್ಥಾಪನೆ ನೆರವೇರಿಸಿದರೆ ೨೦/೦೫/೧೯೬೪ ರಂದು ಅಪ್ಪಟ ರಾಷ್ಟ್ರವಾದಿಗಳಾದ ಕೇಂದ್ರ ಸಚಿವ ಲಾಲ್ ಬಹಾದ್ದೂರ್ ಶಾಸ್ತ್ರಿ ಮತ್ತು ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ ಪಕ್ಷದ ಅಧ್ಯಕ್ಷರಾದ ಕೆ ಕಾಮರಾಜ ರವರು ಉದ್ಘಾಟಿಸಿ ಹಳೆ ಮೈಸೂರು ಭಾಗದ ಇಂಜಿನಿಯರ್ ವಿದ್ಯಾರ್ಥಿಗಳಿಗೆ ಸಮರ್ಪಿಸಿದ್ದರು.


ಭವಿಷ್ಯದ ವಿದ್ಯಾರ್ಥಿಗಳಿಗೆ ಆತಂಕ ಮೂಡಿಸಿದ ಎಐಸಿಟಿಇ

ದೆಹಲಿಯಲ್ಲಿರುವ ದೇಶದ ಎಲ್ಲಾ ಇಂಜಿನಿಯರಿಂಗ್ ಕಾಲೇಜುಗಳ ಭವಿಷ್ಯ ರೂಪಿಸುವ ಏಕೈಕ ಸಂಸ್ಥೆ ಎಐಸಿಟಿಇ, ಈ ಸಂಸ್ಥೆಯ ಕೆಲವು ಅಧಿಕಾರಿಗಳು ದೇಶಾದ್ಯಂತ ಇರುವ ಎಲ್ಲಾ ಸರ್ಕಾರಿ ಇಂಜಿನಿಯರಿಂಗ್ ಕಾಲೇಜುಗಳಿಗೆ ಭೇಟಿ ನೀಡಿ ಪರಿಶೀಲಿಸಿ ನೋಟೀಸ್ ಜಾರಿ ಮಾಡಿದ್ದಾರೆ, ಅದೇ ರೀತಿ ಚನ್ನಪಟ್ಟಣದ ಪಾಲಿಟೆಕ್ನಿಕ್ ಕಾಲೇಜಿಗೂ ನೋಟಿಸ್ ಕಳುಹಿಸಿರುವ ಸಂಸ್ಥೆಯು ಬಹಳ ಮುಖ್ಯವಾಗಿ ಇಡೀ ಕಟ್ಟಡದ ನೀಲನಕ್ಷೆ (plan approval) ಜೊತೆಗೆ ಮೇಲ್ದರ್ಜೆಗೆ ಏರಿಸದೇ ಇರಲು ಕಾರಣ, ವಿದ್ಯಾರ್ಥಿಗಳ ಸಂಖ್ಯೆಗನುಗುಣವಾಗಿ ಕಟ್ಟಡಗಳು, ಕಂಪ್ಯೂಟರ್ ಗಳು ಇನ್ನಿತರ ಸೌಲಭ್ಯಗಳು ಇಲ್ಲದಿರುವುದರಿಂದ ಮುಂದಿನ ವರ್ಷದ ದಾಖಲಾತಿ ಅನುಮತಿಯನ್ನು ಯಾಕೆ ರದ್ದುಗೊಳಿಸಬಾರದು ಎಂದು ನೋಟೀಸ್ ಜಾರಿ ಮಾಡಿರುವುದಾಗಿ ತಿಳಿದುಬಂದಿದೆ.


ಮನವಿ

ಈ ನೋಟೀಸ್ ಗೆ ಸಂಬಂಧಿಸಿದಂತೆ ಪಾಲಿಟೆಕ್ನಿಕ್ ಕಾಲೇಜಿನ ನಿರ್ದೇಶಕರಿಗೆ, ರಾಜ್ಯ ಸರ್ಕಾರದ ಮುಖ್ಯ ಕಾರ್ಯದರ್ಶಿಗಳಿಗೆ ಪತ್ರ ಬರೆದಿರುವುದಲ್ಲದೆ ಕಳೆದ ವಾರ ನಗರಕ್ಕೆ ಆಗಮಿಸಿದ ಮುಖ್ಯ ಮಂತ್ರಿ ಕುಮಾರಸ್ವಾಮಿಯವರಿಗೂ ಸಹ ಕಾಲೇಜಿನ ಆಡಳಿತ ಮಂಡಳಿ ಮನವಿ ನೀಡಿದೆ. ಹಾಗೇಯೇ ಬಹುತೇಕ ಸಂಸದರಿಗೂ ಸಹ ಖುದ್ದು ಭೇಟಿ ಮಾಡಿ ಮನವಿ ಸಲ್ಲಿಸಲು ತೀರ್ಮಾನಿಸಲಾಗಿದೆಯಂತೆ.


ಆವರಣ ಮತ್ತು ಎಲ್ಲಾ ಕೊಠಡಿಗಳು ಅಂಧಕಾರದಲ್ಲಿ

ಇಡೀ ಕಾಲೇಜಿನ ಆವರಣ ಒಂಭತ್ತೂವರೆ ಎಕರೆ ಪ್ರದೇಶದಲ್ಲಿ ಹರಡಿಕೊಂಡಿದ್ದು ಡಿಪ್ಲೊಮಾ ಕೋಸ್೯ ಗೆ ಸಂಬಂಧಿಸಿದ ಕೊಠಡಿಗಳು, ಸಿಬ್ಬಂದಿಗಳಿಗೆ ಬೇಕಾದ ಕೊಠಡಿಗಳು, ವಿದ್ಯಾರ್ಥಿ ನಿಲಯ, ವಸತಿ, ಲ್ಯಾಬ್ ಸೇರಿದಂತೆ ಅನೇಕ ಕಟ್ಟಡಗಳು ತಲೆ ಎತ್ತಿದ್ದು ಎಲ್ಲವೂ ಶಿಥಿಲಗೊಳ್ಳುತ್ತಿವೆ, ಹೊಸದಾಗಿ ನಿರ್ಮಿಸಲಾಗುತ್ತಿರುವ ಡಿಜಿಟಲ್ ಲೈಬ್ರರಿ ಆರ್ ಸಿ ಸಿ ಹಂತದಲ್ಲಿ ನಿಂತುಹೋಗಿದ್ದರೆ ಮಹಿಳೆಯರ ವಸತಿ ನಿಲಯ ಶುರುವಾಗಿ ಹತ್ತು ವರ್ಷಗಳು ಕಳೆದರೂ ಗೋಡೆಗಷ್ಟೆ ಸೀಮಿತವಾಗಿ ಪ್ರಾಣಿಗಳ ವಾಸಸ್ಥಾನವಾಗಿದೆ.

ಎಲ್ಲಾ ಕೊಠಡಿಗಳು ರಿಪೇರಿಯಿಲ್ಲದೇ, ಸುಣ್ಣ ಬಣ್ಣ ಕಾಣದೇ ಮುರಿದ ಕಿಟಕಿ, ಒಡೆದ ಗಾಜುಗಳು, ಇಟ್ಟಿಗೆ ಕಾಣುವ ಗೋಡೆ, ಕಬ್ಬಿಣ ಕಾಣುವ ಆರ್ ಸಿ ಸಿ ಗಳೇ ಕಟ್ಟಡಗಳ ಕಥೆ ಹೇಳುತ್ತವೆ.


ವಸತಿ ನಿಲಯ ಮತ್ತು ವಸತಿ ಗೃಹಗಳು

ಇದೇ ಆವರಣದಲ್ಲಿ ಇರುವ ಪುರುಷ ವಿದ್ಯಾರ್ಥಿ ನಿಲಯವನ್ನು ನೆನೆಸಿಕೊಳ್ಳುವುದೇ ಅಪರಾಧವೇನೋ ಎನಿಸುವಷ್ಟು ಗಬ್ಬು ನಾರುತ್ತಿದೆ, ದೂರದ ಮೈಸೂರು, ಗುಲ್ಬರ್ಗಾ ಜಿಲ್ಲೆಯ ಮಕ್ಕಳು ಸೇರಿದಂತೆ ಅನೇಕ ಜಿಲ್ಲೆಯ ಇಪ್ಪತ್ತಕ್ಕೂ ಹೆಚ್ಚು ಮಕ್ಕಳು ಇಲ್ಲಿ ಉಳಿದುಕೊಂಡಿದ್ದಾರೆ, ಅವರ ಕೊಠಡಿ ಅವರೇ ಸ್ವಚ್ಛ ಮಾಡಿಕೊಳ್ಳುತ್ತರಾದರೂ ಬೇರೆ ಯಾವ ರೀತಿಯ ಸೌಲಭ್ಯಗಳು ಇಲ್ಲಿಲ್ಲಾ, ಇಪ್ಪತ್ತನಾಲ್ಕು ಗಂಟೆಯೂ ನೀರು ಸುರಿದು ಗಬ್ಬು ನಾರುವ ಕಕ್ಕಸು ಮತ್ತು ಸ್ನಾನದ ಮನೆ, ಬೆಳಿಗ್ಗೆ, ಮಧ್ಯಾಹ್ನ ಮತ್ತು ಸಂಜೆ ಅನ್ನದ ಊಟ ( Rice item) ಬಿಟ್ಟರೆ ಬೇರೆ ಊಟವನ್ನೇ ಕಾಣದ ಮಕ್ಕಳು ಅಬ್ಬಾ !?

ಇನ್ನು ಇರುವ ಮೂರು ವಸತಿ ಗೃಹಗಳಲ್ಲಿ ಒಂದು ಮಾತ್ರ ಉಪಯೋಗಿಸುತ್ತಿದ್ದು ಇನ್ನೆರಡು ಮನೆಗಳು ಖಾಲಿ ಉಳಿದು ಪಾಳು ಬಂಗಲೆಯಂತಾಗಿವೆ.


ಸಣ್ಣ ಅರಣ್ಯ

ಬಹು ವಿಸ್ತೀರ್ಣದ ಆವರಣವಿದ್ದು ಸ್ವಚ್ಚತೆಗೆ ಆದ್ಯತೆಯನ್ನೇ ಕೊಟ್ಟಿರದ ಕಾರಣ ಮಿನಿ ಕಾಡು ಸೃಷ್ಟಿಯಾಗಿಬಿಟ್ಟಿದೆ ! ತಡೆಗೋಡೆಯನ್ನು ಸೀಳಿ ಹೋಗುವಂತಹ ಬೃಹತ್ ಮರಗಳು, ಹಾವುಗಳು ಸೇರಿದಂತೆ ಅನೇಕ ಸರೀಸೃಪಗಳು ವಾಸಿಸುವ ಕುರುಚಲು ಗಿಡಗಳು ಬೆಳೆದು ನಿಂತಿದ್ದು ಹಗಲು ಬೆಳಗಿನಲ್ಲೇ ಓಡಾಡಲು ಭಯಪಡಬೇಕಾದ ಸ್ಥಿತಿ ಒಂದೆಡೆಯಾದರೆ, ಕಾಲೇಜಿನ ಕಟ್ಟಡದೊಳಗಿನ ಆವರಣವೂ ಸಹ ಸ್ವಚತೆ ಮತ್ತು ನೀರಿಲ್ಲದೆ ಸೊರಗಿ ಹೋಗಿದೆ.


ಉತ್ತಮ ಶಿಕ್ಷಕರು ಮತ್ತು ಸಲಕರಣೆಗಳು

ಕಾಲೇಜಿನ ಬಹು ಮುಖ್ಯ ಅಂಶವೆಂದರೆ ಪಾಠಪ್ರವಚನಗಳು, ಬಹುತೇಕ ವಿದ್ಯಾರ್ಥಿಗಳು ಒಳ್ಳೆಯ ಟೀಚರ್ ಇದ್ದಾರೆ, ಉತ್ತಮ ಉಪಕರಣಗಳಿವೆ ಎಂಬುದಾಗಿ ಹೇಳುತ್ತಾರೆ, ಇದು ಸತ್ಯವೂ ಹೌದು, ಅದಕ್ಕಾಗಿಯೇ ರಾಜ್ಯದಲ್ಲಿಯೇ ನಂಬರ್ ಒನ್ ಕಾಲೇಜು ಎಂದು ಗುರುತಿಸಿಕೊಂಡಿದೆ, ಇಂದಿನ ಅನೇಕ ಅಧಿಕಾರಿಗಳು ಈ ಕಾಲೇಜಿನ ಪದವೀಧರರೇ ಆಗಿರುವುದೇ ಸಾಕ್ಷಿ.


ಹಳೆಯ ವಿದ್ಯಾರ್ಥಿ ಸಂಘದ ಸದಸ್ಯರು ಸಹ ಈ ಬಾರಿ ಇಪ್ಪತ್ತಕ್ಕೂ ಹೆಚ್ಚು ಕಂಪ್ಯೂಟರ್ ಗಳನ್ನು ಕೊಟ್ಟಿದ್ದಾರೆ, ಮಾಜಿ ಉಪಸಭಾಪತಿ ಪುಟ್ಟಣ್ಣ ನವರು ಸಹ ತಮ್ಮ ಅನುದಾನದಲ್ಲಿ ಇಪ್ಪತ್ತು ಕಂಪ್ಯೂಟರ್ ಕೊಡಿಸಲಿದ್ದಾರೆ, ಜೊತೆಗೆ ಇಲ್ಲಿನ ಹಾಲಿ ಶಿಕ್ಷಕರು ಸಹ ಕಂಪ್ಯೂಟರ್ ಗಳನ್ನು ಕೊಡಲು ಮುಂದಾಗಿದ್ದರೆ, ಆದ್ದರಿಂದ ಇಲ್ಲಿನ ಮಕ್ಕಳು ಸಹ ಕಲಿಕೆಯಲ್ಲಿ ಮುಂದಿದ್ದಾರೆ ಎಂಬುದು ಸಂತಸದ ಸಂಗತಿಯಾಗಿದೆ.


ನೀರು ಮತ್ತು ಡಿ ಗ್ರೂಪ್ ನೌಕರರು ಇಲ್ಲ

ಇದು ಜೌಗು ಪ್ರದೇಶ, ಪರಿಣಿತರನ್ನು ಕರೆಸಿ ಪರೀಕ್ಷಿಸಲಾಗಿ ಇಲ್ಲೆಲ್ಲೂ ಬೋರ್ ವೆಲ್ ಕೊರೆಸಿದರೆ ನೀರು ಬರುವುದಿಲ್ಲ ಎಂದು ಹೇಳುತ್ತಾರೆ ಎಂದರೆ ಇದು ನಂಬುವ ಮಾತಲ್ಲ, ಆದರೂ ಇಲ್ಲಿ ನೀರಿನ ಕೊರತೆ ಬಹಳಷ್ಟಿದೆ, ಹಾಗೆ ನಾಲ್ಕನೇ ದರ್ಜೆಯ ನೌಕರರ ಹುದ್ದೆಯಲ್ಲಿ ಒಬ್ಬನೇ ಇರುವುದು, ಗುತ್ತಿಗೆ ಆಧಾರದ ಮೇಲೆ ಹನ್ನೊಂದು ಮಂದಿ ಇದ್ದರೂ ಸಹ ಹತ್ತು ಮಂದಿ ಮಾತ್ರ ಕೆಲಸ ನಿರ್ವಹಿಸುತ್ತಿದ್ದಾರೆ, ಅವರೆಲ್ಲರೂ ಲ್ಯಾಬ್ ಸಹಾಯಕರಾಗಿ ಕೆಲವರು, ಮತ್ತು ರಾತ್ರಿ ಪಾಳಿಯ ಭದ್ರತಾ ಸಿಬ್ಬಂದಿಗಳಾಗಿ ಕೆಲವರು ಕೆಲಸ ನಿರ್ವಹಿಸುತ್ತಿರುವುದರಿಂದ ಒಳಾಂಗಣ ಮತ್ತು ಹೊರಾಂಗಣ ಶುಚಿಯ ಕಡೆ ಗಮನಕೊಡಲಾಗಿಲ್ಲ ಎಂದು ಇನ್ನು ಮುಂದೆ ಸಂಪೂರ್ಣವಾಗಿ ಶುಚಿಯಾಗಿಟ್ಟುಕೊಳ್ಳುವುದರ ಜೊತೆಗೆ ಎಐಸಿಟಿಇ ರವರು ಕೇಳಿರುವ ಎಲ್ಲಾ ಮಾಹಿತಿಗಳು, ದಾಖಲಾತಿಗಳು ಮತ್ತು ಉಪಕರಣಗಳನ್ನು ಕ್ರೋಢಿಕರಿಸಿ ಇನ್ನೂ ಉತ್ತಮ ದರ್ಜೆಗೆ ಕೊಂಡೊಯ್ಯುವುದಾಗಿ ಕಾಲೇಜಿನ ಪ್ರಾಂಶುಪಾಲ ಆಯೂಬ್ ಖಾನ್ ಹಲವಾರು ವಿಭಾಗಗಳ ಮುಖ್ಯಸ್ಥರಾದ ನಾಗಭೂಷಣ, ಅನುರಾಧ, ನಂಜುಂಡಯ್ಯ, ಬಿ ಎಲ್ ಸುರೇಶ್ ಮುಂತಾದವರು ಭರವಸೆ ವ್ಯಕ್ತಪಡಿಸಿದರು.


*ಅಧೀಕ್ಷಕರು ಸುಮ್ಮನಿರುವುದೇಕೆ ?*


ಪ್ರಾಂಶುಪಾಲರನ್ನು ಹೊರತುಪಡಿಸಿದರೇ ಸಂಪೂರ್ಣ ಜವಾಬ್ದಾರಿ ಕಾಲೇಜಿನ ಅಧೀಕ್ಷಕರದು, ಅಧೀಕ್ಷಕರಾದ ನಂಜುಂಡಯ್ಯ ನವರು ಸಹ ಕಾಲೇಜಿನ ಅವ್ಯವಸ್ಥೆಯ ಬಗ್ಗೆ ಸ್ವಲ್ಪವೂ ತಲೆ ಕೆಡಿಸಿಕೊಳ್ಳದಿರುವುದು ಯಾವ ಕಾರಣಕ್ಕೆ, ಇಡೀ ಕಾಲೇಜಿನ ಆವರಣ, ಮಕ್ಕಳ ವಸತಿ ನಿಲಯ ಹಾಗೂ ಯಾವುದೇ ರೀತಿಯ ಅವ್ಯವಸ್ಥೆಯನ್ನು ಗಮನಿಸಿ ಸೂಕ್ತ ಕ್ರಮ ಕೈಗೊಳ್ಳದೇ ಭವಿಷ್ಯದ ನಾಗರೀಕ ಅಧಿಕಾರಿಗಳ ಜೊತೆ ಚಲ್ಲಾಟವಾಡುತ್ತಿರುವುದು ಯಾವ ಕಾರಣಕ್ಕೆ !?


ಈ ಇತಿಹಾಸದ ಕಾಲೇಜು ಇಷ್ಟೊಂದು ಅವ್ಯವಸ್ಥೆಗೆ ಇಳಿಯಲು ಒಟ್ಟಾರೆ ಆಡಳಿತ ಮಂಡಳಿಯ ಗಂಟೆ ಹೊಡಿ ಸಂಬಳ ತಗೋ (ಶಿಕ್ಷಣ ಹೊರತುಪಡಿಸಿ) ಎಂಬ ಮನಸ್ಥಿತಿಯವರು ಎಂಬುದು ಮೇಲ್ನೋಟಕ್ಕೆ ತಿಳಿಯುತ್ತದೆ.


ಏನಾದರಾಗಲಿ ರಾಜ್ಯದಲ್ಲಿಯೇ ಉತ್ತಮ ಕಾಲೇಜು ಎಂದು ಹೆಸರಾಗಿರುವ ಷಟ್ ವರ್ಷಗಳ ಕಾಲೇಜು ಎಲ್ಲಾ ಅಡೆತಡೆಗಳನ್ನು ದಾಟಿ ದೇಶದ ನಂಬರ್ ಒನ್ ಕಾಲೇಜಾಗಿ ಮಾರ್ಪಾಡಾಗಲಿ ಎಂಬುದೇ ನಮ್ಮ ಆಶಯ


ಗೋ ರಾ ಶ್ರೀನಿವಾಸ...

ಮೊ:9845856139.

ಪ್ರತಿಕ್ರಿಯೆಗಳು

  • ನಿಮ್ಮ ಅಭಿಪ್ರಾಯ ತಿಳಿಸುವಲ್ಲಿ ನೀವು ಮೊದಲಿಗರಾಗಿ.

ನಿಮ್ಮ ಅಭಿಪ್ರಾಯಗಳನ್ನು ಬರೆಯಿರಿ/ತಿಳಿಸಿ.

Recent news in ramanagara »

ಅಣ್ಣನ ನೆನಪು ನಾಟಕ ಅದ್ಭುತ, ವಿಚಾರ ಹಂಚುವಲ್ಲಿ ವಿಫಲ
ಅಣ್ಣನ ನೆನಪು ನಾಟಕ ಅದ್ಭುತ, ವಿಚಾರ ಹಂಚುವಲ್ಲಿ ವಿಫಲ

ರಾಮನಗರ/ಚನ್ನಪಟ್ಟಣ: (ವಿಮರ್ಶಾತ್ಮಕ ಲೇಖನ)

ನಗರದ ಶತಮಾನೋತ್ಸವ ಭವನದಲ್ಲಿ ಬೆಂಗಳೂರಿನ ಪ್ರವರ ಹವ್ಯಾಸಿ ನಾಟಕ ತಂಡವು ನಡೆಸಿಕೊಟ್ಟ ಪೂರ್ಣ ಚ

ಪೌರಾಣಿಕ ನಾಟಕದಲ್ಲಿ ಜನಮನ ಸೂರೆಗೊಂಡು ಇತಿಹಾಸ ನಿರ್ಮಿಸಿದ ಮಹಿಳಾ ಕಲಾವಿದರು.
ಪೌರಾಣಿಕ ನಾಟಕದಲ್ಲಿ ಜನಮನ ಸೂರೆಗೊಂಡು ಇತಿಹಾಸ ನಿರ್ಮಿಸಿದ ಮಹಿಳಾ ಕಲಾವಿದರು.

ಚನ್ನಪಟ್ಟಣ :  ಚನ್ನಪಟ್ಟಣದಲ್ಲಿ ಮಹಿಳೆಯರೇ ಪೌರಾಣಿಕ ನಾಟಕವನ್ನು ಅಭ್ಯಾಸ ಮಾಡಿ ಬಯಲು ಮಂದಿರದಲ್ಲಿ ಪ್ರಸ್ತುತ ಪಡಿಸುತ್ತಿರುವುದು ವಿಶೇಷವಾಗಿದೆ. ಪೌರಾಣಿಕ

ಮಹಿಳೆಯರಿಂದಲೇ ಪೌರಾಣಿಕ ನಾಟಕ ಪ್ರದರ್ಶನ, ಇತಿಹಾಸ ಸೃಷ್ಟಿಸುವ ಸಾಧ್ಯತೆ ದಟ್ಟವಾಗಿದೆ. ಭಾವಿಪ ಪದಾಧಿಕಾರಿಗಳು
ಮಹಿಳೆಯರಿಂದಲೇ ಪೌರಾಣಿಕ ನಾಟಕ ಪ್ರದರ್ಶನ, ಇತಿಹಾಸ ಸೃಷ್ಟಿಸುವ ಸಾಧ್ಯತೆ ದಟ್ಟವಾಗಿದೆ. ಭಾವಿಪ ಪದಾಧಿಕಾರಿಗಳು

ಚನ್ನಪಟ್ಟಣ: ನಗರದ ಶ್ರೀ ಕೊಲ್ಲಾಪುರದಮ್ಮನ ದೇವಸ್ಥಾನದ ಆವರಣದಲ್ಲಿ ಇದೇ ಮಾರ್ಚ್ ತಿಂಗಳ ಹತ್ತನೇ ತಾರಿಖಿನ ಭಾನುವಾರ ಮಧ್ಯಾಹ್ನ ತಾಲೂಕಿನಲ್ಲಿ ಇದೇ ಪ್ರಪ್ರಥ

ವರ್ಣ ನೀತಿ ಮತ್ತು ಜಾತಿಯತೆಯನ್ನು ಮೀರಿದವರು ಮಾತ್ರ ಮನುಷ್ಯ ಜಾತಿಯಾಗಲು ಸಾಧ್ಯ –ಪ್ರೊ. ಕೆ.ಎಸ್.ಭಗವಾನ್
ವರ್ಣ ನೀತಿ ಮತ್ತು ಜಾತಿಯತೆಯನ್ನು ಮೀರಿದವರು ಮಾತ್ರ ಮನುಷ್ಯ ಜಾತಿಯಾಗಲು ಸಾಧ್ಯ –ಪ್ರೊ. ಕೆ.ಎಸ್.ಭಗವಾನ್

ರಾಮನಗರ: ಶೂದ್ರರನ್ನು ವರ್ಣ ನೀತಿಯಿಂದಲೆ ವೈದಿಕರು ಆಳಿದರು. ಇಂದಿಗೂ ಸಹ ವೈದಿಕರು ರಾಮನನ್ನು ನಮ್ಮ ಮೇಲೆ ಹೇರುವ ಮೂಲಕ ಮತ್ತೆ ಪೂರ್ವಕಾಲಕ್ಕೆ ಕರೆದು

ಬೆಂಗಳೂರು ಶಿಕ್ಷಕರ ಕ್ಷೇತ್ರದ ಉಪ ಚುನಾವಣೆ: ಜಿಲ್ಲೆಯಲ್ಲಿ ಶೇ.95.77 ಮತದಾನ
ಬೆಂಗಳೂರು ಶಿಕ್ಷಕರ ಕ್ಷೇತ್ರದ ಉಪ ಚುನಾವಣೆ: ಜಿಲ್ಲೆಯಲ್ಲಿ ಶೇ.95.77 ಮತದಾನ

ರಾಮನಗರ, ಫೆ. 16  ರಾಜ್ಯ ವಿಧಾನ ಪರಿಷತ್ತಿಗೆ ಬೆಂಗಳೂರು ಶಿಕ್ಷಕರ ಕ್ಷೇತ್ರದಿಂದಫೆ.16ರ ಶುಕ್ರವಾರ ಬೆಳಿಗ್ಗೆ 8 ರಿಂದ ಸಂಜೆ 4 ಗಂಟೆಯ ವರೆಗೆನಡೆದ ಉಪ ಚುನ

ವೈಜ್ಞಾನಿಕ ಮನೋವೃತ್ತಿ:ಸಾಂವಿಧಾನಿಕ ಕರ್ತವ್ಯ ಪ್ರೊ. ಎಂ.ಅಬ್ದುಲ್ ರೆಹಮಾನ್ ಪಾಷ

ರಾಮನಗರ; ಮಾನವ ಹಕ್ಕುಗಳನ್ನು ಯಾರೂ ಕೊಡುವುದಿಲ್ಲ, ವ್ಯಕ್ತಿಗಳಿಗೆ ಅವುಗಳಿಗೆ ಜನ್ಮತಃ ದಕ್ಕಿರುತ್ತವೆ. ಅವುಗಳನ್ನು ಯಾರೂ ಕೊಡುವುದಿಲ್ಲವಾದ್ದರಿ

ನಾಳೆ ನಡೆಯುವ ಶಿಕ್ಷಕರ ಕ್ಷೇತ್ರದ ಚುನಾವಣೆ ಪ್ರಯುಕ್ತ ಮತಗಟ್ಟೆಗಳತ್ತ ತೆರಳಿದ ಸಿಬ್ಬಂದಿ
ನಾಳೆ ನಡೆಯುವ ಶಿಕ್ಷಕರ ಕ್ಷೇತ್ರದ ಚುನಾವಣೆ ಪ್ರಯುಕ್ತ ಮತಗಟ್ಟೆಗಳತ್ತ ತೆರಳಿದ ಸಿಬ್ಬಂದಿ

ರಾಮನಗರ: ರಾಜ್ಯ ವಿಧಾನ ಸಭೆ ಶಿಕ್ಷಕರ ಕ್ಷೇತ್ರದ ಚುನಾವಣೆ ಕಾವೇರಿದ್ದು,  ಬಹಿರಂಗ ಪ್ರಚಾರ ಕೊನೆಗೊಂಡ ನಂತರ ಇಂದು ಮಸ್ಟರಿಂಗ್ ಕಾರ್ಯ ಮುಗಿದು, ಮತಗಟ್ಟೆ ಸ

ವೈದ್ಯ ಸಿಬ್ಬಂದಿ ನಿರ್ಲಕ್ಷ್ಯ ಹಸುಗೂಸು ಸಾವು
ವೈದ್ಯ ಸಿಬ್ಬಂದಿ ನಿರ್ಲಕ್ಷ್ಯ ಹಸುಗೂಸು ಸಾವು

ರಾಮನಗರ: ಚನ್ನಪಟ್ಟಣ: ವೈದ್ಯ ಸಿಬ್ಬಂದಿಯಾದ ಕಿರಿಯ ಮಹಿಳಾ ಆರೋಗ್ಯ ಸಹಾಯಕಿಯ ನಿರ್ಲಕ್ಷ್ಯದಿಂದ ಒಂದು ತಿಂಗಳು 20 ದಿನಗಳ ಗಂಡು ಶಿಶುವೊಂದು ಪ್ರಾಣ ಕಳೆದುಕೊ

ಗ್ರೇಟ್ ಬೆಂಗಳೂರು ಜಿಲ್ಲೆ, ಮತ್ತೇ ಮುನ್ನಲೆಗೆ ತಂದ : ಡಿ,ಸಿ.ಎಂ. ಡಿ.ಕೆ.ಶಿವಕುಮಾರ್
ಗ್ರೇಟ್ ಬೆಂಗಳೂರು ಜಿಲ್ಲೆ, ಮತ್ತೇ ಮುನ್ನಲೆಗೆ ತಂದ : ಡಿ,ಸಿ.ಎಂ. ಡಿ.ಕೆ.ಶಿವಕುಮಾರ್

ರಾಮನಗರ, ಫೆ. 12:   ನಾವು ರಾಮನಗರ ಜಿಲ್ಲೆಯವರಲ್ಲಾ ನಾವೆಲ್ಲರೂ ಬೆಂಗಳೂರು ಜಿಲ್ಲೆಯವರು. ಗ್ರೇಟ್ ಬೆಂಗಳೂರು ಜಿಲ್ಲೆ ಮಾಡುವ ಬಗ್ಗೆ ಲೋಕಸಭಾ ಚ

ನಮ್ಮದು ಬಹುತ್ವ ಭಾರತ, ಹಿಂದುತ್ವ ಹೇರಿಕೆ ಸರಿಯಲ್ಲ – ಡಾ. ಚಕ್ಕೆರೆ ಶಿವಶಂಕರ್
ನಮ್ಮದು ಬಹುತ್ವ ಭಾರತ, ಹಿಂದುತ್ವ ಹೇರಿಕೆ ಸರಿಯಲ್ಲ – ಡಾ. ಚಕ್ಕೆರೆ ಶಿವಶಂಕರ್


ರಾಮನಗರ : ಫೆ 10 ನಮ್ಮದು ಬಹುತ್ವ ಭಾರತ, ಇಲ್ಲಿ ಎಲ್ಲಾ ಧರ್ಮೀಯರು ಇದ್ದಾರೆ. ಕೇವಲ ಹಿಂದುತ್ವವನ್ನು ಬಲವಂತವಾಗಿ ಹೇರುವುದು ಸರಿಯಲ್ಲ. ಭಾರತದ

Top Stories »  


Top ↑