Tel: 7676775624 | Mail: info@yellowandred.in

Language: EN KAN

    Follow us :


ಸನ್ ರೈಸಸ್ ಹೈದರಾಬಾದ್ ತಂಡಕ್ಕೆ ಜಯ

Posted date: 13 Apr, 2018

Powered by:     Yellow and Red

ಹೈದರಾಬಾದ್: ಅಂತಿಮ ಓವರ್​ನಲ್ಲಿ ಜಯ ಸಾಧಿಸಲು ಅಗತ್ಯವಿದ್ದ 11ರನ್ ಗಳಿಸಲು ಯಶಸ್ವಿಯಾದ ದೀಪಕ್ ಹೂಡಾ (32*ರನ್, 25ಎಸೆತ, 1 ಬೌಂಡರಿ, 1ಸಿಕ್ಸರ್) ಹಾಗೂ ಬಿಲ್ಲಿ ಸ್ಟಾನ್​ಲೇಕ್ (5*) ಜೋಡಿ, ಸನ್​ರೈಸರ್ಸ್ ಹೈದರಾಬಾದ್ ತಂಡಕ್ಕೆ ಐಪಿಎಲ್-11ರಲ್ಲಿ ಸತತ 2ನೇ ಜಯ ತಂದುಕೊಟ್ಟಿತು. ಕೊನೇ ಮೂರು ಓವರ್​ಗಳಲ್ಲಿ ಪಂದ್ಯ ನಾಟಕೀಯ ತಿರುವು ಪಡೆದರೂ ಸನ್​ರೈಸರ್ಸ್ ತಂಡ 1 ವಿಕೆಟ್ ರೋಚಕ ಗೆಲುವು ಪಡೆಯಲು ಯಶಸ್ವಿಯಾಯಿತು.

ಟಾಸ್ ಸೋತು ಬ್ಯಾಟಿಂಗ್ ಮಾಡಿದ ಮುಂಬೈ ಇಂಡಿಯನ್ಸ್ ತಂಡ 8 ವಿಕೆಟ್​ಗೆ 147 ರನ್​ಗಳಿಸಿತು. ಪ್ರತಿಯಾಗಿ ಯುವ ಬೌಲರ್ ಮಯಾಂಕ್ ಮಾರ್ಕಂಡೆ (23ಕ್ಕೆ 4) ಹಾಗೂ ಮುಸ್ತಾಫಿಜುರ್ ರೆಹಮಾನ್ (24ಕ್ಕೆ 3) ಮಾರಕ ದಾಳಿ ನಡುವೆಯೂ ಸನ್​ರೈಸರ್ಸ್ ತಂಡ 20 ಓವರ್​ಗಳಲ್ಲಿ 9 ವಿಕೆಟ್​ಗೆ 151 ರನ್ ಗಳಿಸಿ ಗೆಲುವಿನ ದಡ ಸೇರಿತು.

ಬಲಿಷ್ಠ ಬೌಲಿಂಗ್ ನಿರ್ವ ಹಣೆಯಿಂದ ಮುಂಬೈ ಇಂಡಿಯನ್ಸ್ ತಂಡವನ್ನು ಸಾಧಾರಣ ಮೊತ್ತಕ್ಕೆ ಕಟ್ಟಿ ಹಾಕಿದ ಬಳಿಕ ಬ್ಯಾಟಿಂಗ್ ಮಾಡಿದ ಸನ್​ರೈಸರ್ಸ್ ತಂಡಕ್ಕೆ ಆರಂಭಿಕರಾದ ವೃದ್ಧಿಮಾನ್ ಸಾಹ (22ರನ್, 20ಎಸೆತ, 3ಬೌಂಡರಿ) ಹಾಗೂ ಶಿಖರ್ ಧವನ್ (45ರನ್, 28ಎಸೆತ, 8 ಬೌಂಡರಿ)ಜೋಡಿ ಉತ್ತಮ ಆರಂಭ ನೀಡಿತು. ಈ ಜೋಡಿ ಎದುರಿಸಿದ 41 ಎಸೆತಗಳಲ್ಲಿ 62ರನ್ ಪೇರಿಸಿ ಬೇರ್ಪಟ್ಟಿತು. ಬಳಿಕ ಬಂದ ನಾಯಕ ಕೇನ್ ವಿಲಿಯಮ್ಸನ್ (6) ವೈಫಲ್ಯ ಅನುಭವಿಸಿದರು. ಬಳಿಕ ಮನೀಷ್ ಪಾಂಡೆ (11) ಹಾಗೂ ಶಕೀಬ್ ಅಲ್ ಹಸನ್ (12) ಬಂದಷ್ಟೇ ವೇಗವಾಗಿ ಡಗೌಟ್ ಸೇರಿಕೊಂಡರು. ಇದರಿಂದ ಸನ್​ರೈಸರ್ಸ್ ತಂಡ 107ರನ್​ಗಳಿಗೆ 5 ವಿಕೆಟ್ ಕಳೆದುಕೊಂಡಿತು. ಸನ್​ರೈಸರ್ಸ್ ತಂಡ ಕೊನೆಯ ಕೆಲ ಓವರ್​ಗಳಲ್ಲಿ ಪ್ರಮುಖ ವಿಕೆಟ್ ಕಳೆದುಕೊಂಡು ಸೋಲಿನ ಭೀತಿಯಲ್ಲಿತ್ತು.-ಏಜೆನ್ಸೀಸ್

ಸನ್​ರೈಸರ್ಸ್ ತಂಡ ಮಧ್ಯಮ ಕ್ರಮಾಂಕದಲ್ಲಿ ದಿಢೀರ್ ಕುಸಿತದಿಂದ ಕಂಗೆಟ್ಟಿದ್ದ ವೇಳೆ ಜತೆಯಾದ ದೀಪಕ್ ಹೂಡಾ ಹಾಗೂ ಅನುಭವಿ ಯೂಸುಫ್ ಕೆಲ ಕಾಲ ಇನಿಂಗ್ಸ್ ಆಧರಿಸಿದರು. ಆ ಬಳಿಕ ಕೇವಲ 1 ರನ್​ಗೆ 4 ವಿಕೆಟ್ ಕಳೆದುಕೊಂಡ ಸನ್​ರೈಸರ್ಸ್ ಸೋಲಿನ ಸುಳಿಗೆ ಸಿಲುಕಿತು. ಈ ವೇಳೆ ಏಕಾಂಗಿ ಹೋರಾಟ ಪ್ರದರ್ಶಿಸಿದ ದೀಪಕ್ ಹೂಡಾ ತಂಡದ ಗೆಲುವಿನಲ್ಲಿ ಪ್ರಮುಖ ಪಾತ್ರವಹಿಸಿದರು.

ಪ್ರತಿಕ್ರಿಯೆಗಳು

  • ನಿಮ್ಮ ಅಭಿಪ್ರಾಯ ತಿಳಿಸುವಲ್ಲಿ ನೀವು ಮೊದಲಿಗರಾಗಿ.

ನಿಮ್ಮ ಅಭಿಪ್ರಾಯಗಳನ್ನು ಬರೆಯಿರಿ/ತಿಳಿಸಿ.

Recent news in sports »

ನಗದು ಪುರಸ್ಕಾರದ ಅರ್ಜಿ ಸ್ವೀಕರಿಸುವ ಅವಧಿ ವಿಸ್ತರಣೆ
ನಗದು ಪುರಸ್ಕಾರದ ಅರ್ಜಿ ಸ್ವೀಕರಿಸುವ ಅವಧಿ ವಿಸ್ತರಣೆ

ರಾಮನಗರ:ಮೇ/೨೮/೨೦/ಗುರುವಾರ. ರಾಷ್ಟ್ರೀಯ ಮತ್ತು ಅಂತರಾಷ್ಟ್ರೀಯ ಮಟ್ಟದ ಕ್ರೀಡಾಕೂಟಗಳಲ್ಲಿ ಪದಕ ವಿಜೇತರಾದ ಜಿಲ್ಲೆಯ ಕ್ರೀಡಾಪಟುಗಳಿಗೆ ೨೦೧೮/೧೯

ಜಿಲ್ಲಾ ಲೇಖಕರ ವೇದಿಕೆ ವತಿಯಿಂದ ರೂಬಿಕ್ ಕ್ಯೂಬ್ ಸ್ಪರ್ಧೆಯಲ್ಲಿ ರಾಜ್ಯ ಮಟ್ಟದಲ್ಲಿ ಪ್ರಥಮ ಸ್ಥಾನಗಳಿಸಿರುವ ಎಸ್. ವಿಶ್ವವಿಧಾತ ಅವರಿಗೆ ಸನ್ಮಾನ
ಜಿಲ್ಲಾ ಲೇಖಕರ ವೇದಿಕೆ ವತಿಯಿಂದ ರೂಬಿಕ್ ಕ್ಯೂಬ್ ಸ್ಪರ್ಧೆಯಲ್ಲಿ ರಾಜ್ಯ ಮಟ್ಟದಲ್ಲಿ ಪ್ರಥಮ ಸ್ಥಾನಗಳಿಸಿರುವ ಎಸ್. ವಿಶ್ವವಿಧಾತ ಅವರಿಗೆ ಸನ್ಮಾನ

ರಾಮನಗರ : ಇತ್ತೀಚಿನ ದಿನಗಳಲ್ಲಿ ಭಾರತವು ವಿಶ್ವಗುರು ಸ್ಥಾನ ಪಡೆಯುವತ್ತ ಹೆಜ್ಜೆ ಇಡುತ್ತಿದೆ ಎಂದು ಅಖಿಲ ಭಾರತೀಯ ಸಾಹಿತ್ಯ ಪರಿಷತ್ತಿನ ಜಿಲ್ಲಾ ಸಮಿತಿಯ ಕಾರ್ಯದರ್ಶಿ ಕೆ.ಆರ್. ವಿನುತ ಹೇಳಿದರು.

ಯೆಲ್ಲೊ ಅಂಡ್ ರೆಡ್ ಫೌಂಡೇಷನ್ಸ್ ಆಯೋಜಿಸಿದ್ದ ರಾಮನಗರ ಮ್ಯಾರಥಾನ್ ಯಶಸ್ಸು
ಯೆಲ್ಲೊ ಅಂಡ್ ರೆಡ್ ಫೌಂಡೇಷನ್ಸ್ ಆಯೋಜಿಸಿದ್ದ ರಾಮನಗರ ಮ್ಯಾರಥಾನ್ ಯಶಸ್ಸು

ರಾಮನಗರ : ಫೆಬ್ರವರಿ 02, ಯೆಲ್ಲೋ ಅಂಡ್ ರೆಡ್ ಫೌಂಡೇಷನ್ಸ್ ವತಿಯಿಂದ ಇದೇ ಫೆಬ್ರವರ

ಕೆಲಸದ ಬಗ್ಗೆ ಹೆಚ್ಚು ಒತ್ತು ನೀಡಲು ಕ್ರೀಡೆ ಸಹಕಾರಿ ನ್ಯಾಯಮೂರ್ತಿ ನಟರಾಜ್
ಕೆಲಸದ ಬಗ್ಗೆ ಹೆಚ್ಚು ಒತ್ತು ನೀಡಲು ಕ್ರೀಡೆ ಸಹಕಾರಿ ನ್ಯಾಯಮೂರ್ತಿ ನಟರಾಜ್

ಚನ್ನಪಟ್ಟಣ: ಬೆಳಿಗ್ಗೆ ಯಿಂದ ಸಂಜೆಯವರೆಗೆ ಒಂದೇ ಕಡೆ ಕುಳಿತು ಕೆಲಸ ಮಾಡುವ ಸರ್ಕಾರಿ ನೌಕರರು ಕ್ರಿಯಾಶೀಲರಾಗಲು ಕ್ರೀಡೆ ಸಹಕಾರಿಯಾಗಿದ್ದು ಕನಿಷ

ಇಂಗ್ಲೆಂಡ್ ವಿರುದ್ಧ ಏಕದಿನ ಸರಣಿ ಸೋತ ಟೀಂ ಭಾರತ
ಇಂಗ್ಲೆಂಡ್ ವಿರುದ್ಧ ಏಕದಿನ ಸರಣಿ ಸೋತ ಟೀಂ ಭಾರತ

ಲೀಡ್ಸ್(ಇಂಗ್ಲೆಂಡ್): ಟೀಂ ಇಂಡಿಯಾ ಹಾಗೂ ಇಂಗ್ಲೆಂಡ್ ನಡುವಿನ ಮೂರನೇ ಹಾಗೂ ನಿರ್ಣಾಯಕ ಏಕದಿನ ಪಂದ್ಯದಲ್ಲಿ ಇಂಗ್ಲೆಂಡ್ 8 ವಿಕೆಟ್ ಗಳಿಂದ ಜಯ ಗಳಿಸಿದ್ದು ಸರಣಿ ಕೈವಶ ಮಾಡಿಕೊಂಡಿದೆ. 

ಟಾಸ್ ಸೋತು

ಕ್ರೊವೇಶಿಯಾ ವಿರುದ್ಧ ಗೆದ್ದ ಫ್ರಾನ್ಸ್ ಫಿಫಾ ವಿಶ್ವಕಪ್ ಚಾಂಪಿಯನ್
ಕ್ರೊವೇಶಿಯಾ ವಿರುದ್ಧ ಗೆದ್ದ ಫ್ರಾನ್ಸ್ ಫಿಫಾ ವಿಶ್ವಕಪ್ ಚಾಂಪಿಯನ್

ಮಾಸ್ಕೋ(ರಷ್ಯಾ): ತೀವ್ರ ಕುತೂಹಲ ಮೂಡಿಸಿದ್ದ ಫಿಫಾ ವಿಶ್ವಕಪ್ ಪಂದ್ಯಾವಳಿಯ ಫೈನಲ್ ಪಂದ್ಯದಲ್ಲಿ ಕ್ರೊವೇಶಿಯಾ ವಿರುದ್ಧ ಗೆಲುವು ಸಾಧಿಸುವ ಮೂಲಕ ಫ್ರಾನ್ಸ್ ಚಾಂಪಿಯನ್ ಆಗಿ ಹೊರಹೊಮ್ಮಿದೆ. 

ಫೈನಲ್

ಭಾರತದ ವಿರುದ್ಧ ಇಂಗ್ಲೆಂಡ್ ಗೆ ಜಯ
ಭಾರತದ ವಿರುದ್ಧ ಇಂಗ್ಲೆಂಡ್ ಗೆ ಜಯ

ಲಾರ್ಡ್ಸ್(ಇಂಗ್ಲೆಂಡ್): ಟೀಂ ಇಂಡಿಯಾದ ಹಾಗೂ ಇಂಗ್ಲೆಂಡ್ ನಡುವಿನ ದ್ವಿತೀಯ ಏಕದಿನ ಪಂದ್ಯದಲ್ಲಿ ಇಂಗ್ಲೆಂಡ್ 86 ರನ್ ಗಳಿಂದ ಜಯ ಗಳಿಸಿದೆ.  

ಕ್ರಿಕೆಟ್ ಕಾಶಿ ಲಾರ್ಡ್ಸ್ ನಲ್ಲಿ ನಡೆದ ಎರಡನ

ಇಂಗ್ಲೆಂಡ್ ವಿರುದ್ಧ ಭಾರತಕ್ಕೆ 8 ವಿಕೆಟ್ ಗಳ ಭರ್ಜರಿ ಜಯ
ಇಂಗ್ಲೆಂಡ್ ವಿರುದ್ಧ ಭಾರತಕ್ಕೆ 8 ವಿಕೆಟ್ ಗಳ ಭರ್ಜರಿ ಜಯ

ನಾಟಿಂಗ್ ಹ್ಯಾಮ್: ಟ್ರೆಂಟ್ ಬ್ರಿಡ್ಜ್ ನಲ್ಲಿ ನಡೆಯುತ್ತಿರುವ ಮೊದಲ ಏಕದಿನ ಪಂದ್ಯದಲ್ಲಿ ಇಂಗ್ಲೆಂಡ್ ತಂಡದ ವಿರುದ್ಧ ಭಾರತ ತಂಡ 8 ವಿಕೆಟ್ ಗಳ ಭರ್ಜರಿ ಜಯ ಸಾಧಿಸಿದೆ.

ಇಂಗ್ಲೆಂಡ್ ನೀಡಿದ್ದ 269 ರನ್ ಗ

ಕಿಂಗ್ಸ್ ಇಲೆವೆನ್ ಪಂಜಾಬ್ ತಂಡಕ್ಕೆ ನಾಲ್ಕು ರನ್ ಜಯ

ನವದೆಹಲಿ: ಐಪಿಎಲ್​ ಟಿ20 ಪಂದ್ಯಾವಳಿಯಲ್ಲಿ ಕಿಂಗ್ಸ್​ ಇಲೆವೆನ್​ ಪಂಜಾಬ್​ ತಂಡ ಡೆಲ್ಲಿ ಡೇರ್​ ಡೆವಿಲ್ಸ್​ ವಿರುದ್ಧ ನಾಲ್ಕು ರನ್ ಗಳ ಗೆಲುವು ದಾಖಲಿಸಿದೆ.

ಇಂದು ಫಿರೋಜ್​ ಷಾ ಕೋಟ್ಲಾ ಮೈದಾನದಲ್ಲಿ ನ

ಆರ್ ಸಿ ಬಿ ತಂಡಕ್ಕೆ ಜಯ

ಬೆಂಗಳೂರು: ಎಬಿಡಿ ವಿಲಿಯರ್ಸ್ ಆಕರ್ಷಕ ಅರ್ಧಶತಕದ ನೆರವಿನೊಂದಿಗೆ ರಾಯಲ್​ ಚಾಲೆಂಜರ್ಸ್​ ಬೆಂಗಳೂರು(ಆರ್ ಸಿಬಿ) ತಂಡ ಡೆಲ್ಲಿ ಡೇರ್​ ಡೆವಿಲ್ಸ್​ ವಿರುದ್ಧ ಆರು ವಿಕೆಟ್​ಗಳ ಭರ್ಜರಿ ಜಯ ಸಾಧಿಸಿದೆ.  

Top Stories »  


Top ↑