
ಸಾರ್ವಜನಿಕರನ್ನು ಕಛೇರಿಗೆ ಅಲೆದಾಡಿಸುವುದನ್ನು ಸರಿಯಲ್ಲಾ, ಡಿ ಕೆ ಸುರೇಶ್
ಚನ್ನಪಟ್ಟಣ: ತಮ್ಮ ಕೆಲಸ ಕಾರ್ಯಗಳಿಗಾಗಿ ಜನರನ್ನು ಅಧಿಕಾರಿಗಳು ಕಚೇರಿಗೆ ಅಲೆದಾಡಿಸುವುದು ಸರಿಯಲ್ಲ.. ಅಧಿಕಾರಿಗಳು ಈ ಹಿಂದೆ ಯಾವ ರೀತಿ ಕೆಲಸ ಮಾಡಿದರೋ ಗೊತ್ತಿಲ್ಲ, ಆದರೆ, ಇನ್ನು ಮುಂದೆ ಜನರ ಕೆಲಸಗಳನ್ನು ತ್ವರಿತವಾಗಿ ಮಾಡಿಕೊಡಿ ಎಂದು ಸಂಸದ ಡಿ.ಕೆ.ಸುರೇಶ್ ಅಧಿಕಾರಿಗಳಿಗೆ ತಾಕೀತು ಮಾಡಿದರು.ತಾಲೂಕಿನ ವಂದಾರಗುಪ್ಪೆ ಗ್ರಾಮದಲ್ಲಿ ಹಮ್ಮಿಕೊಂಡಿದ್ದ ಜನಸಂಪರ್ಕ ಸಭೆಯಲ್ಲಿ

ಆಹಾರ ಇಲ್ಲದೆ ಎರಡು ದಿನ ಬದುಕಬಹುದು, ನೀರಿಲ್ಲದೆ ಬದುಕುವುದು ಕಷ್ಟ, ತಾಪಂ ಇಓ
ಚನ್ನಪಟ್ಟಣ: ಒಂದೆರಡು ದಿನ ಆಹಾರವಿಲ್ಲದಿದ್ದರೂ ಮನುಷ್ಯ ಬದುಕುತ್ತಾನೆ ಆದರೆ, ನೀರಿಲ್ಲದೇ ಬದುಕಲಾರ. ಆದ್ದರಿಂದ ಜನರಿಗೆ ಶುದ್ಧನೀರು ಪೂರೈಕೆ ಮಾಡುವುದು ನಮ್ಮ ಆದ್ಯತೆ ಆಗಿದ್ದು, ನೀರಿನ ಗುಣಮಟ್ಟದಲ್ಲಿ ವ್ಯತ್ಯಾಸವಾಗದಂತೆ ನೋಡಿಕೊಳ್ಳುವುದು ನೀರುಗಂಟಿಗಳ ಜವಬ್ದಾರಿಯಾಗಿದ್ದು, ಇದನ್ನು ಸಮರ್ಪಕವಾಗಿ ನಿರ್ವಹಿಸುವಂತೆ ತಾಲೂಕು ಪಂಚಾಯಿತಿ ಕಾರ್ಯನಿರ್ವಾಹಣಾಧಿಕಾರಿ ಶಿವಕುಮಾರ್ ಸೂಚನೆ ನೀಡಿದರು.

ಹೊಂಗನೂರು, ಕೋಡಂಬಳ್ಳಿ ಗ್ರಾಮದಲ್ಲಿ ಪರವಾನಗಿ ಇಲ್ಲದ ಖಾಸಗಿ ಆಸ್ಪತ್ರೆಗಳಿಗೆ ಬೀಗ ಜಡಿದ ಟಿಹೆಚ್‌ಓ
ಚನ್ನಪಟ್ಟಣ: ತಾಲ್ಲೂಕಿನ ಹೊಂಗನೂರು ಗ್ರಾಮದಲ್ಲಿ ಗೋಪಿ ಕ್ಲಿನಿಕ್ ಎಂಬ ಖಾಸಗಿ ಆಸ್ಪತ್ರೆ ಇದ್ದು, ಗೋಪಿ ಎಂಬುವವರು ವೈದ್ಯರಾಗಿ ಸೇವೆ ನಿರ್ವಹಿಸುತ್ತಿದ್ದಾರೆ. ವೈದ್ಯಕೀಯಕ್ಕೆ ಸಂಬಂಧಿಸಿದ ಯಾವುದೇ ಪದವಿ ಪಡೆದಿಲ್ಲ ಎಂದು ಸಾಮಾಜಿಕ ಜಾಲತಾಣದಲ್ಲಿ ಇತ್ತೀಚಿನ ದಿನಗಳಲ್ಲಿ ವಿಡಿಯೋ ವೈರಲ್ ಆಗಿತ್ತು. ಸಾರ್ವಜನಿಕರ ದೂರಿನ ಮೇರೆಗೆ ತಾಲೂಕು ವೈದ್ಯಾಧಿಕಾರಿ ರಾಜು ಅವರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸ

ಮಹಾಪೌರ್ಣಿಮೆ ನಾಟಕ ಬಡಜನರ ದನಿಯಾಗಿದೆ, ಪ್ರೊ ಹೊನ್ನು ಸಿದ್ದಾರ್ಥ
ಬೆಂಗಳೂರು: ರಂಗ ನಿರ್ದೇಶಕ ಶಿವಲಿಂಗಯ್ಯ ನವರು ನಿರ್ದೇಶಿಸಿದ ಮಹಾಪೌರ್ಣಿಮೆ ನಾಟಕವು ಬಡಜನರ ದನಿಯಾಗಿದೆ, ಒಂದಲ್ಲಾ ಹತ್ತು ಬಾರಿ ನೋಡಿದರೂ ಮತ್ತೊಮ್ಮೆ ನೋಡಬೇಕಿನಿಸುತ್ತದೆ. ಅವರ ಮತ್ತೊಂದು ಅತ್ಯುತ್ತಮ ನಾಟಕವೆಂದರೆ ದೇವನಾಂಪ್ರಿಯ ಅಶೋಕ, ಆ ನಾಟಕವನ್ನು ನೋಡುವಾಗ ನಾವು ಗತಕಾಲದಲ್ಲಿದ್ದೇವೆ ಎಂಬ ಭಾಸವಾಗುತ್ತದೆ. ಇಂದಿನ ಮತ್ತು ಮುಂದಿನ ಪೀಳಿಗೆಗೆ ಇಂತಹ ಸಂದೇಶವಿರುವ ನಾಟಕಗಳ ಅವಶ್ಯಕತೆ ತುಂಬಾ ಇದ್ದು, ಅ

೨೦೨೪ರ ಮೊದಲ ತಿಂಗಳಲ್ಲಿ ಕಾಡಾನೆಗಳ ಹಾವಳಿಗೆ ಪೂರ್ಣ ವಿರಾಮ ನೀಡುತ್ತೇವೆ, ರೈತರ ಸಭೆಯಲ್ಲಿ ಅರಣ್ಯಾಧಿಕಾರಿ ಭರವಸೆ
ರಾಮನಗರ: ೨೦೨೪ ರ ಜನವರಿ ತಿಂಗಳೊಳಗೆ ಕಾಡಾನೆಗಳು ರೈತರ ಜಮೀನಿಗೆ ಲಗ್ಗೆ ಇಟ್ಟು ಬೆಳೆ ನಾಶ ಪ್ರಾಣಹಾನಿ ಮಾಡುವುದನ್ನು ತಪ್ಪಿಸಲು ಪಣತೊಟ್ಟಿದ್ದು, 4 ತಿಂಗಳೊಳಗೆ ಕಾಡಾನೆ ಹಾವಳಿಗೆ ಸಂಪೂರ್ಣ ವಿರಾಮ ಹಾಕುವುದಲ್ಲದೆ ರೈತರಿಗೆ ಈಗಾಗಲೇ ನಷ್ಟವಾಗಿರುವ ಬೆಳೆಗಳಿಗೆ ಪರಿಹಾರ ನೀಡಲಾಗುವುದು ಎಂದುಅರಣ್ಯಾಧಿಕಾರಿಗಳು-ರೈತರ ಸಭೆಯಲ್ಲಿ ಭರವಸೆ ನೀಡಿದರು. ಕಾಡಾನೆ ಹಾವಳಿಗೆ ಕಡಿವಾಣ ಹಾಕದ ಅಧಿಕಾರಿಗ

ಹುಚ್ಚಯ್ಯನದೊಡ್ಡಿ ಗ್ರಾಮದಲ್ಲಿ ಅದ್ದೂರಿಯಾಗಿ ನಡೆದ ಮಾರಮ್ಮನ ಹಬ್ಬ
ಚನ್ನಪಟ್ಟಣ: ತಾಲ್ಲೂಕಿನ ವಿರುಪಾಕ್ಷಿಪುರ ಹೋಬಳಿಯ ಹುಚ್ಚಯ್ಯನದೊಡ್ಡಿ ಗ್ರಾಮದಲ್ಲಿ ಮಂಗಳವಾರ ಮಾರಮ್ಮನ ಹಬ್ಬ ಭಕ್ತಿಭಾವದಿಂದ ನೆರವೇರಿತು.ಹಬ್ಬದ ಪ್ರಯುಕ್ತ ಗ್ರಾಮದ ಮಹಿಳೆಯರು ಮಡಿಯುಟ್ಟು ತಂಬಿಟ್ಟಿನ ಆರತಿಯನ್ನು ಇಟ್ಟು ಪೂಜೆ ಸಲ್ಲಿಸಿದರು. ಗ್ರಾಮದಲ್ಲಿ ಪ್ರತಿವರ್ಷ ಮಾರಮ್ಮನ ಹಬ್ಬ ಆಚರಣೆ ಮಾಡುತ್ತಿದ್ದು, ಈ ವರ್ಷ ಉತ್ತಮವಾಗಿ ಮಳೆ ಬೆಳೆಯಾಗಿ ರೈತನ ಬದುಕು ಹಸನಾಗಲಿ ಎಂದ

ನಗರಸಭೆ ಆವರಣದಲ್ಲಿ ಅನುಪಯುಕ್ತ ವಸ್ತುಗಳ ಹರಾಜು
ಚನ್ನಪಟ್ಟಣ: ಇಲ್ಲಿನ ನಗರಸಭೆ ಆವರಣದಲ್ಲಿ ಮಂಗಳವಾರ 2023-24 ನೇ ಸಾಲಿನ ನಿರುಪಯುಕ್ತ ವಸ್ತುಗಳ ಬಹಿರಂಗ ಹರಾಜು ಪ್ರಕ್ರಿಯೆ ಹಮ್ಮಿಕೊಳ್ಳಲಾಗಿದ್ದು, ಹಳೇ ಕಬ್ಬಿಣ ಹಾಗೂ ಗುಜರಿ ವಸ್ತುಗಳ ಖರೀದಿಗಾಗಿ ಬಿಡ್ಡರ್ ಗಳು ಮುಗಿಬಿದ್ದ ಪ್ರಸಂಗ ನಡೆಯಿತು.ನಗರಸಭೆ ಆವರಣದಲ್ಲಿ ಆರೋಗ್ಯ ಶಾಖೆಯ ನಿರುಪಯುಕ್ತ ವಸ್ತುಗಳಾದ 14 ಆಟೋ ಟಿಪ್ಪರ್ ಹಾಗೂ ಡಂಪರ್ ಪೆಸ್ಲರ್ ವಾಹನ, 38 ವಿವಿಧ ಬಗೆ

ಅಕ್ಕೂರು ಮತ್ತು ಸುತ್ತಮುತ್ತಲಿನ ಗ್ರಾಮಗಳಲ್ಲಿ ಕಾಡಾನೆಗಳಿಂದ ಬೆಳೆ ನಾಶ
ಚನ್ನಪಟ್ಟಣ : ತಾಲೂಕಿನ ಅಕ್ಕೂರು, ಸಾದರಹಳ್ಳಿ, ಸೋಮನಾಥಪುರ, ಹೊಸಹಳ್ಳಿ, ಎಸ್.ಎಂ.ಹಳ್ಳಿ ಸೇರಿದಂತೆ ಈ ಭಾಗದ ಹಲವು ಗ್ರಾಮಗಳಲ್ಲಿ ಸೋಮವಾರ ರಾತ್ರಿ ಹಾಗೂ ಮಂಗಳವಾರ ಮತ್ತು ಬುಧವಾರ ಬೆಳಿಗ್ಗೆ ಐದರಿಂದ ಏಳು ಕಾಡಾನೆಗಳ ಹಿಂಡು ದಾಂಧಲೆ ಎಬ್ಬಿಸುವುದರ ಜೊತೆಗೆ ಸಾರ್ವಜನಿಕರಲ್ಲಿ ಭಯದ ವಾತಾವರಣ ಮೂಡಿಸುತ್ತಾ ಅರಣ್ಯ ಇಲಾಖೆಗೆ ತಲೆನೋವಾಗಿ ಪರಿಣಮಿಸಿದೆ.ಕಳೆದ ಒಂದು ತಿಂಗಳಿನಿಂದ ನ

ಉತ್ತಮ ಆರೋಗ್ಯಕ್ಕೆ ಆಯುರ್ವೇದವೇ ದಿವ್ಯ ಔಷಧ ಡಾ ಸಹನಾ ಕೃಷ್ಣ
ಚನ್ನಪಟ್ಟಣ: ಪುರಾಣೇತೀಹಾಸದಿಂದಲೂ ಪ್ರಖ್ಯಾತವಾಗಿರುವ ಔಷಧ ಎಂದರೆ ಅದು ಆಯುರ್ವೇದ ಔಷಧ, ಜಗತ್ತಿನ ಅತ್ಯಂತ ಪ್ರಾಚೀನ ಔಷಧವೂ ಹೌದು, ನಮ್ಮ ಪ್ರಕೃತಿ ಹೇಗೆ ಸಮತೋಲನ ಕಾಯ್ದುಕೊಳ್ಳುತ್ತಿದೆಯೋ ಹಾಗೆ ಆಯುರ್ವೇದ ಔಷಧವೂ ಸಹ ರೋಗಿಯ ದೇಹದ ಸಮತೋಲನವನ್ನು ಕಾಯ್ದುಕೊಳ್ಳುತ್ತದೆ.ಪುರಾತನ ಹಿನ್ನೆಲೆಯುಳ್ಳ ಆಯುರ್ವೇದ ಔಷಧಿಗಳಿಗೆ ಇಂದಿಗೂ ಸಾಕಷ್ಟು ಶಕ್ತಿಯಿದೆ. ಆದರೆ, ಇದರ ಬಗ್ಗೆ ಆಳವಾದ ಅರಿವು ಇಲ

ಸಾರ್ವಜನಿಕರ ತೆರಿಗೆ ಹಣವನ್ನು ಜ್ಞಾನಾರ್ಜನೆಗೆ ಬಳಸಬೇಕು ಪ್ರೊ ಕಾಳೇಗೌಡ ನಾಗವಾರ.
ಚನ್ನಪಟ್ಟಣ: ಸಾರ್ವಜನಿಕರ ತೆರಿಗೆ ಹಣವನ್ನು ಸರ್ಕಾರಗಳು ವಿದ್ಯಾಭ್ಯಾಸಕ್ಕೆ, ಆಸ್ಪತ್ರೆಗೆ, ಸಾರ್ವಜನಿಕರ ಮೂಲಭೂತ ಸೌಕರ್ಯಗಳಿಗೆ ಹಾಗೂ ಅಭಿವೃದ್ಧಿಗಾಗಿ ಬಳಸಬೇಕೆ ವಿನಹ ಯಾವುದೇ ಧರ್ಮದ ದೇವಾಲಯಗಳಿಗೆ ಬಳಸಬಾರದು ಎಂದು ಜಾನಪದ ಅಕಾಡೆಮಿ ಮಾಜಿ ಅಧ್ಯಕ್ಷರು, ವಿಶ್ರಾಂತ ಪ್ರಾಧ್ಯಾಪಕರು, ಜಾನಪದ ವಿದ್ವಾಂಸರು ಆದ ಡಾ ಕಾಳೇಗೌಡ ನಾಗವಾರ ರವರು ತಿಳಿಸಿದರು. ಅವರು ಸೋಮವಾರ ವಂದಾರಗುಪ್ಪೆ ಗ್ರಾಮದ ಬಳಿ ಇರುವ ಹೊಂಬ