Tel: 7676775624 | Mail: info@yellowandred.in

Language: EN KAN

    Follow us :


ತಾಳೆಯೋಲೆ ೦೧ : ಸಾಮೂಹಿಕ ಪ್ರಾರ್ಥನೆಗಳಿಂದ ಖಾಯಿಲೆಗಳು ನಿವಾರಣೆಯಾಗುವವೆ ?

Posted date: 01 Aug, 2019

Powered by:     Yellow and Red

ತಾಳೆಯೋಲೆ ೦೧ : ಸಾಮೂಹಿಕ ಪ್ರಾರ್ಥನೆಗಳಿಂದ ಖಾಯಿಲೆಗಳು ನಿವಾರಣೆಯಾಗುವವೆ ?

ಭಾರತೀಯ ಆಚಾರ ವ್ಯವಹಾರಗಳಲ್ಲಿ ಅಡಗಿರುವ ಶಾಸ್ತ್ರೀಯತೆ ಶಾಸ್ತ್ರೀಯ ದೃಷ್ಟಿಯಿಂದ ವಿಶ್ಲೇಷಿಸಿರುವ ಗ್ರಂಥ*


*ಇಂಗ್ಲಿಷ್ ಮೂಲ ಲೇಖಕ: ಡಾ ವೆಂಗನೂರು ಬಾಲಕೃಷ್ಣನ್.

ಕನಡಕ್ಕೆ: ಊರುಕುಂಟೆ ನರಸಿಂಹ ಮೂರ್ತಿ*


*ಸಾಮೂಹಿಕ ಪ್ರಾರ್ಥನೆಗಳಿಂದ ಖಾಯಿಲೆಗಳು ನಿವಾರಣೆಯಾಗುವವೆ ?*


ಸಾಮೂಹಿಕ ಪ್ರಾರ್ಥನೆಗಳಿಂದ ಖಾಯಿಲೆಗಳು ವಾಸಿಯಾಗುತ್ತವೆ ಎನ್ನುವ ನಂಬಿಕೆ ಮತ್ತು ವಿಶ್ವಾಸ ಬಹಳ ಜನರಲ್ಲಿದೆ. ಈ ರೀತಿಯಾದ ಪ್ರಾರ್ಥನೆಗಳಿಂದ ತಾತ್ಕಾಲಿಕವಾದ ಉಪಶಮನವಾಗುತ್ತದೆ ಎಂದು ಕೆಲವು ಘಟನೆಗಳಿಂದ ತಿಳಿದುಬರುತ್ತದೆ. ಸಾಮೂಹಿಕ ಪ್ರಾರ್ಥನೆ ಮಾಡುವಾಗ ವಿವಿಧ ರೀತಿಯ ಮನಸ್ಸತ್ವವುಳ್ಳ ಜನರು ಇರುವರು. ಅವರಲ್ಲಿ ಸಹೃದಯ ಪ್ರಾರ್ಥನೆ ಫಲಕಾರಿಯಾಗಬಹುದು.


ಅತೀಂದ್ರಯ ಘಟನೆಗಳನ್ನು ನಾವು ಆಗಾಗ ನೋಡುತ್ತೇವೆ ಅಥವಾ ಕೇಳುತ್ತೇವೆ. ಮೈಮೇಲಿನ ಬಾಸುಂಡೆಗಳು ಮಾಯವಾಗುವಿಕೆ, ಧೀರ್ಘಕಾಲಿಕ ಖಾಯಿಲೆಗಳು ವಾಸಿಯಾಗುವಿಕೆ, ಅಧಿಕ ರಕ್ತದೊತ್ತಡ ಹಾಗೂ ಹೃದಯಕ್ಕೆ ಸಂಬಂಧಿಸಿದ ತೊಂದರೆಗಳು ಸಾಮೂಹಿಕ ಪ್ರಾರ್ಥನೆಯಿಂದ ನಿವಾರಣೆ ಆದ ಹಾಗೆ ನಿರ್ಧಾರ ಆಗಿದೆ. ಇದರಲ್ಲಿ ನಂಬಿಕೆ ಅತಿ ಮುಖ್ಯ. ರೋಗಿಯು ತನಗಾಗಿ ಪ್ರಾರ್ಥನೆಯನ್ನು ಮಾಡಿದರೆ ಖಾಯಿಲೆ ವಾಸಿಯಾಗುತ್ತದೆ ಎನ್ನುವ ನಂಬಿಕೆ ಅವರಲ್ಲಿ ಮೂಡಿದರೆ ಮಾತ್ರ ಈ ಅದ್ಭುತಕ್ಕೆ ಅವಕಾಶ ಹೆಚ್ಚು.


ಸುಶ್ರಾವ್ಯವಾದ ಸಂಗೀತ, ಇಂಪಾದ ಹಾಡಿನ ಭವ್ಯ, ಲಯ ಮಾಧುರ್ಯದಲ್ಲಿ ರೋಗಿಯು ಮೈಮರೆತು ಒಂದು ವಿಚಿತ್ರವಾದ ಭಾವ ಸ್ಥಿತಿಗೆ ಹೋಗಿಬಿಡುತ್ತಾನೆ. ದೃಢ ವಿಶ್ವಾಸವು ರೋಗಿಯ ಮಾನಸಿಕ ಚಿಕಿತ್ಸೆಯ ಮೇಲೆ ಪ್ರಭಾವ ಬೀರುತ್ತದೆ. ಈ ರೀತಿಯಾದ ಚಿಕಿತ್ಸೆಯನ್ನು ಮಾನಸಿಕ ವೈದ್ಯರೂ ಸಹ ಗುರುತಿಸುತ್ತಾರೆ. ಈ ರೀತಿಯಾದ ಮಾನಸಿಕ ಚಿಕಿತ್ಸೆಗಳು ಖಾಯಿಲೆಗಳನ್ನು ವಾಸಿಮಾಡುವಲ್ಲಿ ಸಹಾಯವಾಗುತ್ತವೆ.

ಸಾಮೂಹಿಕ ಪ್ರಾರ್ಥನೆಗಳಲ್ಲಿ ಮಾನಸಿಕ ಚಿಕಿತ್ಸೆಗೆ ಸಂಬಂಧಿಸಿದ ವಿಷಯಗಳು ಅಡಗಿವೆ ಎಂದು ನಮಗೆ ಅರ್ಥವಾಗುತ್ತದೆ. ಆದ್ದರಿಂದ ಈ ಪ್ರಾರ್ಥನೆಗಳ ವಿಜಯವನ್ನು ಸಾಧಿಸಲು ಕಾರಣವಾಗಿವೆ.


ಸಂಗ್ರಹ ಮತ್ತು ಪ್ರಚಾರ:

ಗೋ ರಾ ಶ್ರೀನಿವಾಸ...

ಮೊ:9845856139.

ಪ್ರತಿಕ್ರಿಯೆಗಳು

  • ನಿಮ್ಮ ಅಭಿಪ್ರಾಯ ತಿಳಿಸುವಲ್ಲಿ ನೀವು ಮೊದಲಿಗರಾಗಿ.

ನಿಮ್ಮ ಅಭಿಪ್ರಾಯಗಳನ್ನು ಬರೆಯಿರಿ/ತಿಳಿಸಿ.

Top Stories »  


Top ↑