Tel: 7676775624 | Mail: info@yellowandred.in

Language: EN KAN

    Follow us :


ತಾಳೆಯೋಲೆ ೦೪: ಬಿಲ್ವಪತ್ರೆಯ ಮಹತ್ವ

Posted date: 05 Aug, 2019

Powered by:     Yellow and Red

ತಾಳೆಯೋಲೆ ೦೪: ಬಿಲ್ವಪತ್ರೆಯ ಮಹತ್ವ

ಭಾರತೀಯ ಆಚಾರ ವ್ಯವಹಾರಗಳಲ್ಲಿ ಅಡಗಿರುವ ಶಾಸ್ತ್ರೀಯತೆ ಶಾಸ್ತ್ರೀಯ ದೃಷ್ಟಿಯಿಂದ ವಿಶ್ಲೇಷಿಸಿರುವ ಗ್ರಂಥ


*ಇಂಗ್ಲಿಷ್ ಮೂಲ ಲೇಖಕ: ಡಾ ವೆಂಗನೂರು ಬಾಲಕೃಷ್ಣನ್.

ಕನಡಕ್ಕೆ: ಊರುಕುಂಟೆ ನರಸಿಂಹ ಮೂರ್ತಿ*


 *ಬಿಲ್ವಪತ್ರೆಯ ಮಹತ್ವ*


ಬಿಲ್ವ ವೃಕ್ಷವು ಶಿವನಿಗೆ ಅತಿ ಪ್ರಿಯವಾದುದು ಎಂದು ಹೇಳುವವರು. ಆದ್ದರಿಂದ ಶಿವಾಲಯಗಳಲ್ಲಿ ಬಿಲ್ವಪತ್ರೆಯು ಪೂಜೆಗೆ ಉನ್ಮತ ಸ್ಥಾನದಲ್ಲಿದೆ. ಈ ಮರದ ಮುಳ್ಳು ಶಕ್ತಿಯ(ಮಾತೆಯ)ನ್ನು ಕೊಂಬೆಗಳು, ವೇದಗಳನ್ನು ಬೇರುಗಳು, ರುದ್ರನನ್ನು ಅಂದರೆ ಶಿವನನ್ನು ಸೂಚಿಸುವುದು. ಬಿಲ್ವಪತ್ರೆ ಗೆ ಮೂರು ದಳಗಳು ಇರುವವು. ಈ ಮೂರು ದಳಗಳು ಮೂರು ಗುಣಗಳಾದ *ಸತ್ವ, ರಜೋ ಮತ್ತು ತಮಾ* ವನ್ನು ಸೂಚಿಸುತ್ತವೆ. ಭಕ್ತರು ಈ ಮೂರು ದಳಗಳನ್ನು ಸ್ವಾಮಿಯ ತ್ರಿನೇತ್ರಗಳಾಗಿ ಭಾವಿಸುತ್ತಾರೆ.


ಬಿಲ್ವ ವೃಕ್ಷದ ಸ್ಪರ್ಶ ಮತ್ತು ಅದರ ಎಲೆಗಳಿಂದ ಶಿವಾರಾಧನೆಯನ್ನು ಮಾಡಿದರೆ ಜೀವನ ಪರ್ಯಂತ ಮಾಡಿರುವ ಪಾಪಗಳು ನಾಶವಾಗುವವು, ಆದ್ದರಿಂದ ‌ಬಿಲ್ವ ವೃಕ್ಷವು ಬಹಳ ಪವಿತ್ರವಾದುದ್ದೆಂದು ಭಾವಿಸುತ್ತಾರೆ.


ಒಂದು ನಂಬಿಕೆಯ ಪ್ರಕಾರ ಅಮವಾಸ್ಯೆ ಮತ್ತು ಹುಣ್ಣಿಮೆಯ ದಿನ ಬಿಲ್ವ ಪತ್ರೆಯನ್ನು ಕೀಳಬಾರದು. ಯಾಕೆಂದರೆ ಈ ದಿನಗಳಲ್ಲಿ ಉಂಟಾಗುವ ಪ್ರಕೃತಿಗೆ ಸಂಬಂಧಿಸಿದ ಬದಲಾವಣೆಗಳು ಬಿಲ್ವ ವೃಕ್ಷದ ಮೇಲೆ ತಮ್ಮ ಪ್ರಭಾವವನ್ನು ತೋರಿಸಿತ್ತದೆ. ಬಿಲ್ವ ವೃಕ್ಷದ ಪ್ರತಿಯೊಂದು ಭಾಗವೂ ಬಹಳ ಪ್ರಭಾವಿತವಾದ ಔಷಧೀಯ ಗುಣಗಳದ್ದಾಗಿದೆ ಎಂದು ಆಯುರ್ವೇದ ವೈದ್ಯಶಾಸ್ತ್ರ ಹೇಳುತ್ತದೆ.


ಸೈನ್ಸ್ ಟುಡೇ ಪತ್ರಿಕೆ ನೀಡಿದ ಸಮಾಚಾರದ ಪ್ರಕಾರ ವ್ಯವಸಾಯಕ್ಕೆ ಸಂಬಂಧಿಸಿದ ಅನೇಕ ವಿಶ್ವವಿದ್ಯಾನಿಲಯಗಳು ಬಿಲ್ವ ವೃಕ್ಷದ ವೈದ್ಯಕೀಯ ಗುಣಗಳನ್ನು ಗುರುತಿಸಿ ಬೆಳೆಸುತ್ತಿದ್ದಾರೆ. ವಾತರೋಗ ಹಾಗೂ ಕೀಲುವಾತ, ವಾಂತಿ ಭೇದಿ, ಕ್ಷಯ ಮುಂತಾದ ರೋಗಗಳನ್ನು ಬಿಲ್ವ ವೃಕ್ಷದ ಔಷಧಿಯಲ್ಲಿ ವಾಸಿ ಮಾಡಬಹುದು.


ಮಧುಮೇಹ ವ್ಯಾಧಿ ಚಿಕಿತ್ಸೆಯಲ್ಲಿ ಬಿಲ್ವ ಉತ್ತಮ ಪಾತ್ರವನ್ನು ಹೊಂದಿರುತ್ತದೆ. ಬಿಲ್ವ ಪತ್ರೆ ರಸದಲ್ಲಿ ಎಣ್ಣೆಯನ್ನು ಕಾಯಿಸಿ ಉಪಯೋಗಿಸಿದರೆ ನೋವು, ಕಿವಿಯಲ್ಲಿನ ಕೀವು ಮುಂತಾದ ಸಮಸ್ಯೆಗಳು‌ ನಿವಾತಣೆ ಆಗುವುದೆಂದು ಆಯುರ್ವೇದ ವೈದ್ಯರು ಸೂಚಿಸುತ್ತಿದ್ದಾರೆ.


ಸಂಗ್ರಹ ಮತ್ತು ಪ್ರಚಾರ

ಗೋ ರಾ ಶ್ರೀನಿವಾಸ...

ಮೊ:9845856139.

ಪ್ರತಿಕ್ರಿಯೆಗಳು

  • ನಿಮ್ಮ ಅಭಿಪ್ರಾಯ ತಿಳಿಸುವಲ್ಲಿ ನೀವು ಮೊದಲಿಗರಾಗಿ.

ನಿಮ್ಮ ಅಭಿಪ್ರಾಯಗಳನ್ನು ಬರೆಯಿರಿ/ತಿಳಿಸಿ.

Top Stories »  


Top ↑