Tel: 7676775624 | Mail: info@yellowandred.in

Language: EN KAN

    Follow us :


ತಾಳೆಯೋಲೆ ೦೫: ಋಷಿಗಳು ಬೋಧಿಸಿದ ಹಾಗೆ ಬ್ರಹ್ಮ ಮುಹೂರ್ತವು ವಿದ್ಯಾರ್ಥಿಗಳಿಗೆ ಲಾಭಕರವಾ?

Posted date: 06 Aug, 2019

Powered by:     Yellow and Red

ತಾಳೆಯೋಲೆ ೦೫: ಋಷಿಗಳು ಬೋಧಿಸಿದ ಹಾಗೆ ಬ್ರಹ್ಮ ಮುಹೂರ್ತವು ವಿದ್ಯಾರ್ಥಿಗಳಿಗೆ ಲಾಭಕರವಾ?

ಭಾರತೀಯ ಆಚಾರ ವ್ಯವಹಾರಗಳಲ್ಲಿ ಅಡಗಿರುವ ಶಾಸ್ತ್ರೀಯತೆ ಶಾಸ್ತ್ರೀಯ ದೃಷ್ಟಿಯಿಂದ ವಿಶ್ಲೇಷಿಸಿರುವ ಗ್ರಂಥ


ಇಂಗ್ಲಿಷ್ ಮೂಲ ಲೇಖಕ: ಡಾ ವೆಂಗನೂರು ಬಾಲಕೃಷ್ಣನ್.

ಕನಡಕ್ಕೆ: ಊರುಕುಂಟೆ ನರಸಿಂಹ ಮೂರ್ತಿ


ಋಷಿಗಳು ಬೋಧಿಸಿದ ಹಾಗೆ ಬ್ರಹ್ಮ ಮುಹೂರ್ತವು ವಿದ್ಯಾರ್ಥಿಗಳಿಗೆ ಲಾಭಕರವಾ?


ಬ್ರಹ್ಮ ಮುಹೂರ್ತದಲ್ಲಿ ಎದ್ದು ಓದು ಎಂದು ಪೋಷಕರು ಮಕ್ಕಳನ್ನು ಬಲವಂತ ಮಾಡಿದರೆ ಮಕ್ಕಳು ಹಿರಿಯರ ಮಾತನ್ನು ವಿರಳವಾಗಿ ಪಾಲಿಸುವರು. ಸೂರ್ಯೋದಯಕ್ಕೆ ಮುಂಚೆ ನಲವತ್ತೆಂಟು ನಿಮಿಷಗಳನ್ನು ಬ್ರಹ್ಮ ಮುಹೂರ್ತ ಎನ್ನುವರು. ಈ ಮುಹೂರ್ತದಲ್ಲಿ ವಿದ್ಯಾರ್ಥಿಗಳು ಎದ್ದು ಓದಿದರೆ ತುಂಬಾ ಒಳ್ಳೆಯದು ಎಂದು ಹಿರಿಯರು ಹೇಳುವರು.


ಇದರ ವಾಸ್ತವವೇನೆಂದರೆ, ಈ ಸಮಯದಲ್ಲಿ ಮಾಡಿದ ವಿದ್ಯಾಭ್ಯಾಸವು ಚನ್ನಾಗಿ ನೆನಪಿನಲ್ಲಿರುತ್ತದೆ. ಒಂದು ಪರಿಶೋಧನಾ ಸಂಸ್ಥೆ ವಿದ್ಯಾಭ್ಯಾಸದಲ್ಲಿ ಹಿಂದುಳಿದವರ ಮೇಲೆ ಅಧ್ಯಯನ ನಡೆಸಿ ಅಂತಹ ವಿದ್ಯಾರ್ಥಿಗಳು ಬ್ರಹ್ಮ ಮುಹೂರ್ತದಲ್ಲಿ ಓದಿದರೆ ಉನ್ನತ ಫಲ ದೊರೆಯುತ್ತದೆ ಎಂದು ನಿರ್ಧರಿಸಿದ್ದಾರೆ.


ಸೂರ್ಯೋದಯದ ನಲವತ್ತೆಂಟು ನಿಮಿಷಗಳ ಮುಂಚೆ ಬ್ರಾಹ್ಮಿ ಮುಹೂರ್ತ ಪ್ರಾರಂಭವಾಗುತ್ತದೆ. ಈ ಶುಭ ಕಾಲಕ್ಕೆ ವಿದ್ಯಾಧಿ ದೇವತೆಯಾದ ಸರಸ್ವತಿ ದೇವಿಯ ಪತಿಯ ಹೆಸರನ್ನು ಇಡಲಾಗಿದೆ. ಕಲಾಭ್ಯಾಸವೂ ಸಹ ಈ ಸಮಯದಲ್ಲಿ ಪ್ರಾರಂಭ ಮಾಡಬೇಕೆಂದು ಹೇಳಲಾಗಿದೆ. ಈ ಸಮಯವನ್ನು ಸರಸ್ವತಿ ಜಾವವೆಂದೂ ಕರೆಯಲಾಗುತ್ತದೆ.


ತಲೆಯ ಬಲಗಡೆಯಿರುವ ನಿಗದಿತ ಗ್ರಂಥಿಯೊಂದು ಜಾಗ್ರತಾವಸ್ಥೆಯಲ್ಲಿ ಇರುವಾಗ ಕಲಿಕೆಯ ಸಾಮರ್ಥ್ಯವನ್ನು ಹೆಚ್ಚಿಸುತ್ತದೆ. ಎಳ್ಳೆಣ್ಣೆ ಅಥವಾ ಹಸುವಿನ ತುಪ್ಪದ ದೀಪ ಬೆಳಗಿಸಿ, ಆ ದಿನದ ಕೆಲಸವನ್ನು ಪ್ರಾರಂಭಿಸಿದರೆ ಬಹಳ ಶುಭಕರವಾಗಿರುತ್ತದೆ. ಈ ರೀತಿ ಮಾಡುವುದರಿಂದ ದೀಪದಿಂದ ಹೊರಸೂಸುವ ಧನಾತ್ಮಕ ಶಕ್ತಿ ಆ ಪ್ರದೇಶದ ಸುತ್ತಲೂ ವ್ಯಾಪಿಸಿ ಮಾನಸಿಕ ಬಲ ಸಾಮರ್ಥ್ಯಗಳನ್ನು ಮತ್ತು ಬುದ್ದಿಶಕ್ತಿಯನ್ನು ಮೊನಚು ಮಾಡುತ್ತದೆ. ಈ ಕಾರಣದಿಂದಲೇ ಪ್ರಾಚೀನ ಮೇಧಾವಿಗಳು ಮತ್ತು ಈಗಿನ ಪರಿಶೋಧಕರು ವಿದ್ಯೆಯನ್ನು ಕಲಿಯಬೇಕೆನ್ನುವ ಕುತೂಹಲ ಉಳ್ಳವರನ್ನು ಬ್ರಹ್ಮ ಮುಹೂರ್ತದಲ್ಲಿ ಅಭ್ಯಸಿಸುವಂತೆ ಹೇಳುತ್ತಾರೆ.


ಸಂಗ್ರಹ ಮತ್ತು ಪ್ರಸಾರ;

ಗೋ ರಾ ಶ್ರೀನಿವಾಸ...

ಮೊ:9845856139.

ಪ್ರತಿಕ್ರಿಯೆಗಳು

  • ನಿಮ್ಮ ಅಭಿಪ್ರಾಯ ತಿಳಿಸುವಲ್ಲಿ ನೀವು ಮೊದಲಿಗರಾಗಿ.

ನಿಮ್ಮ ಅಭಿಪ್ರಾಯಗಳನ್ನು ಬರೆಯಿರಿ/ತಿಳಿಸಿ.

Top Stories »  


Top ↑