Tel: 7676775624 | Mail: info@yellowandred.in

Language: EN KAN

    Follow us :


ತಾಳೆಯೋಲೆ ೦೬: ಪ್ರಶಾಂತವಾದ ಮನಸ್ಸು ದೇಹಾರೋಗ್ಯಕ್ಕೆ ನೆರವಾಗುವುದೆ ?

Posted date: 07 Aug, 2019

Powered by:     Yellow and Red

ತಾಳೆಯೋಲೆ ೦೬: ಪ್ರಶಾಂತವಾದ ಮನಸ್ಸು ದೇಹಾರೋಗ್ಯಕ್ಕೆ ನೆರವಾಗುವುದೆ ?

ಭಾರತೀಯ ಆಚಾರ ವ್ಯವಹಾರಗಳಲ್ಲಿ ಅಡಗಿರುವ ಶಾಸ್ತ್ರೀಯತೆ ಶಾಸ್ತ್ರೀಯ ದೃಷ್ಟಿಯಿಂದ ವಿಶ್ಲೇಷಿಸಿರುವ ಗ್ರಂಥ*


ಇಂಗ್ಲಿಷ್ ಮೂಲ ಲೇಖಕ: ಡಾ ವೆಂಗನೂರು ಬಾಲಕೃಷ್ಣನ್.

ಕನಡಕ್ಕೆ: ಊರುಕುಂಟೆ ನರಸಿಂಹ ಮೂರ್ತಿ


ಭಾರತೀಯ ಮಹರ್ಷಿಗಳು ಬಲವಾಗಿ ನಂಬಿದ್ದೇನೆಂದರೆ *ಮನಸ್ಸು ಪ್ರಶಾಂತವಾಗಿದ್ದರೆ ದೇಹವೂ ಸಹ ಆರೋಗ್ಯವಾಗಿರುತ್ತದೆ* ಎಂದು. ಈ ವಿಷಯ ಏನು ಹೇಳುತ್ತದೆಂದರೆ ರೋಗ ರುಜಿನಗಳಿಂದ ದೂರವಾಗಿರಬೇಕೆಂದರೆ ಮನಸ್ಸನ್ನು ಪ್ರಶಾಂತವಾಗಿರಿಸಿಕೊಳ್ಳಬೇಕು. ಹಾಗೆ ನಿಶ್ಚಲ ಸ್ಥಿತಿ ಹೊಂದಿದ ಮನಸ್ಸು ಮಾತ್ರವೇ ಭೌತಿಕ ಶರೀರವನ್ನು ಪ್ರಸನ್ನ ಸ್ಥಿತಿಯಲ್ಲಿ ಇರಿಸುತ್ತದೆ. *ಆಧುನಿಕ ವೈದ್ಯಶಾಸ್ತ್ರದ* ಪ್ರಕಾರವಾಗಿ ಇಂದಿನ ಮಾನವನನ್ನು ಹಿಂಬಾಲಿಸುತ್ತಿರುವ ಅನೇಕ ರೋಗಗಳಿಗೆ ಮುಖ್ಯ ಕಾರಣವೇನೆಂದರೆ ಮಾನಸಿಕ ಪ್ರಶಾಂತತೆಯ ಲೋಪ.


ನಾನಾ ರೀತಿಯಿಂದ ಆಂದೋಳನಗಳು ಮತ್ತು ಒತ್ತಡಗಳು ದೀರ್ಘಕಾಲಿಕ ರೋಗಗಳಾಗಿ ಪರಿಣಮಿಸುತ್ತವೆ. ಅಲ್ಸರ್ ಕಾಯಿಲೆಯು ಕೂಡ ಈ ರೀತಿಯ ಫಲಿತಾಂಶದಿಂದಲೇ ಹೆಚ್ಚಾಗಿ ಬರುತ್ತದೆ. ಆಂದೋಳನ ಹೆಚ್ಚಿದಷ್ಟೂ ಶರೀರದಲ್ಲಿನ ಹೈಡ್ರೋಕ್ಲೋರಿಕ್ ಆಮ್ಲ ಸಹ ಹೆಚ್ಚಾಗುತ್ತದೆ. ಸಾಮಾನ್ಯವಾಗಿ ಈ ಆಮ್ಲವು ಸಣ್ಣ ಕರುಳಿನ ಒಳ ಭಾಗದ *ಪೊರೆಗೆ ಹಾನಿ* ಉಂಟು ಮಾಡಿ ಅಲ್ಲಿ ಒಂದು *ಹುಣ್ಣನ್ನು* ಉಂಟು ಮಾಡುತ್ತದೆ. ಕಾಲ ಕ್ರಮೇಣವಾಗಿ ಈ ಹುಣ್ಣು *ಅಲ್ಸರ್* ಆಗಿ ಪರಿಣಮಿಸುತ್ತದೆ, ಹಾಗೆಯೇ *ಕ್ಯಾನ್ಸರ್ ಹುಣ್ಣಾಗಿ* ಕೂಡ ಪರಿವರ್ತನೆ ಆಗುವುದು.


ಈ ರೋಗಗಳನ್ನು ಮಾನಸಿಕ ಕಾಯಿಲೆಗಳಿಂದ ಉಂಟಾಗುವ ರೋಗಗಳೆಂದು ಗುರುತಿಸಲಾಗಿದೆ. ಮನಸ್ಸು ಶರೀರದ ಮೇಲೆ ಯಾವ ರೀತಿ ಪ್ರಭಾವವನ್ನು ಬೀರುತ್ತದೆ ಎಂದು ನಾವು ತಿಳಿದೆವು. ಆದ್ದರಿಂದ ಮಾನಸಿಕ ಪ್ರಶಾಂತತೆಯನ್ನು ಉಂಟು ಮಾಡುವ ಜೀವನವನ್ನು ನಾವು ನಡೆಸಬೇಕು.


ಸಂಗ್ರಹ ಮತ್ತು ಪ್ರಸಾರ;

ಗೋ ರಾ ಶ್ರೀನಿವಾಸ...

ಮೊ:9845856139.

ಪ್ರತಿಕ್ರಿಯೆಗಳು

  • ನಿಮ್ಮ ಅಭಿಪ್ರಾಯ ತಿಳಿಸುವಲ್ಲಿ ನೀವು ಮೊದಲಿಗರಾಗಿ.

ನಿಮ್ಮ ಅಭಿಪ್ರಾಯಗಳನ್ನು ಬರೆಯಿರಿ/ತಿಳಿಸಿ.

Top Stories »  


Top ↑