Tel: 7676775624 | Mail: info@yellowandred.in

Language: EN KAN

    Follow us :


ಎಳೆ ಕರುಗಳ ರಕ್ಷಿಸಿದ ಸಂಚಾರಿ ಪೋಲಿಸರು

Posted date: 07 Aug, 2019

Powered by:     Yellow and Red

ಎಳೆ ಕರುಗಳ ರಕ್ಷಿಸಿದ ಸಂಚಾರಿ ಪೋಲಿಸರು

ಚನ್ನಪಟ್ಟಣ: ನಗರದ ಸಂಚಾರಿ ಪೊಲೀಸರು ಸಮಯ ಪ್ರಜ್ಞೆಯಿಂದ ಇಂದು ಹಸುವಿನ ಮೂರು ಎಳೆಯ ಕರುಗಳನ್ನು ರಕ್ಷಿಸಿದ್ದಾರೆ.


ಸಂಚಾರಿ ಪೊಲೀಸರು ತಮ್ಮ ಕರ್ತವ್ಯದಲ್ಲಿದ್ದಾಗ ಅನುಮಾನಗೊಂಡು ಪರಿಶೀಲಿಸಲು ಮುಂದಾದಾಗ, ಆಟೋ ಚಾಲಕ ಆಟೋ ನಿಲ್ಲಿಸದೆ ಕಾಲ್ಕಿತ್ತಿದ್ದಾನೆ. ಪೊಲೀಸರು ಸಿನಿಮೀಯ ರೀತಿಯಲ್ಲಿ ಬೆನ್ನಟ್ಟಿ ಆಟೋ ಹಿಡಿದು ಪರಿಶೀಲಿಸಿದಾಗ ಕರುಗಳನ್ನು ಪ್ಲಾಸ್ಟಿಕ್ ಚೀಲದಲ್ಲಿ ತುಂಬಿ, ಚೀಲದ ಬಾಯನ್ನು ಬಿಗಿದು ಕಟ್ಟಿರುವುದನ್ನು ಗಮನಿಸಿದ್ದಾರೆ. ನಂತರ ಗೋ ಸಾಗಾಣೆ ಮಾಡುತ್ತಿದ್ದ ಆಟೋ (ಕೆಎ೪೨-೫೯೪೩) ಮೂರು ಕರು ಹಾಗೂ ಆಟೋ ಚಾಲಕನನ್ನು ಚನ್ನಪಟ್ಟಣ ಗ್ರಾಮಾಂತರ ಪೊಲೀಸ್ ಠಾಣೆಯ ವಶಕ್ಕೆ ನೀಡಿದ್ದಾರೆ.


ಚನ್ನಪಟ್ಟಣ ಸಂಚಾರಿ ಪೊಲೀಸರ ಸಮಯಪ್ರಜ್ಞೆಯಿಂದ ಕಸಾಯಿ ಖಾನೆಗೆ ಹೋಗುತ್ತಿದ್ದ ಮೂರು ಎಳೆಯ ಕರುಗಳನ್ನು ರಕ್ಷಿಸಿದ ಸಂಚಾರಿ ಪೋಲಿಸರಿಗೆ ಗೋರಕ್ಷಕರಾದ ಗಜೇಂದ್ರ ಸಿಂಗ್, ವಕೀಲ ಸುರೇಶ್, ರೈತ ಸಂಘದ ಪದಾಧಿಕಾರಿಗಳು ಅಭಿನಂದನೆ ಸಲ್ಲಿಸಿದರು.


ಇದೇ ವೇಳೆ ಮಾತನಾಡಿದ ವಕೀಲ ಸುರೇಶ್ ಮತ್ತು ಗಜೇಂದ್ರ ಸಿಂಗ್ ರವರು ಇಂತಹ ಎಳೆಯ ಕರುಗಳನ್ನು ಮಾರುವ ಹೈನುಗಾರರು ನಿಜಕ್ಕೂ ಕ್ರೂರ ವ್ಯಕ್ತಿಗಳೇ ಸರಿ, ಅಗತ್ಯವಾಗಿ ಮಾರಲೇ ಬೇಕಾದವರು ಹತ್ತಿರದ ಗೋ ಶಾಲೆಗೆ ಬಿಡುವುದು ಒಳಿತು ಎಂದು ಅಭಿಪ್ರಾಯ ಪಟ್ಟರು.


ಗೋ ರಾ ಶ್ರೀನಿವಾಸ...

ಮೊ:9845856139.

ಪ್ರತಿಕ್ರಿಯೆಗಳು

  • ನಿಮ್ಮ ಅಭಿಪ್ರಾಯ ತಿಳಿಸುವಲ್ಲಿ ನೀವು ಮೊದಲಿಗರಾಗಿ.

ನಿಮ್ಮ ಅಭಿಪ್ರಾಯಗಳನ್ನು ಬರೆಯಿರಿ/ತಿಳಿಸಿ.

Top Stories »  


Top ↑