Tel: 7676775624 | Mail: info@yellowandred.in

Language: EN KAN

    Follow us :


ವರಮಹಾಲಕ್ಷ್ಮಿ ಆರಾಧನೆಯ ಖರೀದಿಗೆ ಮಾರುಕಟ್ಟೆಗೆ ಮುಗಿಬಿದ್ದ ಮಹಿಳೆಯರು

Posted date: 08 Aug, 2019

Powered by:     Yellow and Red

ವರಮಹಾಲಕ್ಷ್ಮಿ ಆರಾಧನೆಯ ಖರೀದಿಗೆ ಮಾರುಕಟ್ಟೆಗೆ ಮುಗಿಬಿದ್ದ ಮಹಿಳೆಯರು

ಚನ್ನಪಟ್ಟಣ: ನಾಳೆ ಅಂದರೆ ಶುಭ ಶುಕ್ರವಾರ ದಂದು ತಂತಮ್ಮ ಮನೆಯಲ್ಲಿ ಐಶ್ವರ್ಯ ದೇವತೆ ಶ್ರೀ ವರಮಹಾಲಕ್ಷ್ಮಿ ದೇವಿಯ ಪ್ರತಿರೂಪವನ್ನು ಸಿಂಗರಿಸಿ ಅವರವರ ಅಂತಸ್ತಿಗೆ ತಕ್ಕಂತೆ ಕೂರಿಸಿ ಆರಾಧಿಸಲೋಸುಗ ನಗರದ ಮಾರುಕಟ್ಟೆಯ ತುಂಬಾ ಮಹಿಳೆಯರು ಹೂವು, ಹಣ್ಣು ಮತ್ತು ಸಿಂಗಾರದ ವಸ್ತುಗಳನ್ನು ಕೊಳ್ಳಲು ಮುಗಿ ಬಿದ್ದಿದ್ದರು.


ಕೆಲವು ಶ್ರೀಮಂತರನ್ನು ಹೊರತುಪಡಿಸಿ ಮಧ್ಯಮ ಮತ್ತು ಸಾಮಾನ್ಯ ವರ್ಗದ ಜನರಿಗೆ ದೇವಿಯ ಆರಾಧನೆ ಇಷ್ಟವಾದರೂ ಹೂವು, ಹಣ್ಣು ಮತ್ತು ಸಿಂಗಾರದ ಸಾಮಾನುಗಳ ಬೆಲೆ ದುಬಾರಿಯಾದ ಕಾರಣ ಭರದ ಖರೀದಿಗೆ ಕಡಿವಾಣ ಹಾಕಿ ಕಾಸಿದ್ದಷ್ಟೇ ಕೈಚಾಚಿ ಖರೀದಿಸಿದರು.


ಮಹಾತ್ಮ ಗಾಂಧಿ ರಸ್ತೆ, ಡಿ ಟಿ ರಾಮು ವೃತ್ತ, ಜಯಚಾಮರಾಜೇಂದ್ರ ರಸ್ತೆ ಮತ್ತು ನಿಂಬೆಹಣ್ಣು ವೃತ್ತ, ಅಂಚೆ ಕಛೇರಿ ರಸ್ತೆ ಬದಿಯಲ್ಲಿ ಬಾಳೆ ಕಂಬಗಳನ್ನು ರಾಶಿ ಹಾಕಿ ಮಾರುತ್ತಿದ್ದರೆ ಬೀದಿ ಬದಿಯ ಬಹುತೇಕ ಎಲ್ಲಾ ಹಣ್ಣಿನ ಅಂಗಡಿಗಳಲ್ಲಿ ಖರೀದಿಯ ಭರಾಟೆ ಜೋರಾಗಿತ್ತು.

ಬೆಳಗ್ಗಿನಿಂದ ಜಿಟಿಜಿಟಿ ತುಂತುರು ಮಳೆ ಬೀಳುತ್ತಿದ್ದರಿಂದ ಖರೀದಿದಾರರು ಮತ್ತು ವ್ಯಾಪಾರಿಗಳಿಗೆ ಕಿರಿಕಿರಿಯಾಗಿದ್ದು ಬಿಟ್ಟರೆ ನಾಳೆಯ ಹಬ್ಬದ ತಯಾರಿಗೆ ಇಂದೇ ಚಾಲನೆ ನೀಡಿದಂತಾಗಿದೆ.


ಗೋ ರಾ ಶ್ರೀನಿವಾಸ...

ಮೊ:9845856139.

ಪ್ರತಿಕ್ರಿಯೆಗಳು

  • ನಿಮ್ಮ ಅಭಿಪ್ರಾಯ ತಿಳಿಸುವಲ್ಲಿ ನೀವು ಮೊದಲಿಗರಾಗಿ.

ನಿಮ್ಮ ಅಭಿಪ್ರಾಯಗಳನ್ನು ಬರೆಯಿರಿ/ತಿಳಿಸಿ.

Top Stories »  


Top ↑