Tel: 7676775624 | Mail: info@yellowandred.in

Language: EN KAN

    Follow us :


ತಾಳೆಯೋಲೆ ೦೮: ಸಸ್ಯಹಾರ ಊಟವು ಸಾತ್ವಿಕವಾದ ಆಹಾರವೇ ?

Posted date: 09 Aug, 2019

Powered by:     Yellow and Red

ತಾಳೆಯೋಲೆ ೦೮: ಸಸ್ಯಹಾರ ಊಟವು ಸಾತ್ವಿಕವಾದ ಆಹಾರವೇ ?

ಭಾರತೀಯ ಆಚಾರ ವ್ಯವಹಾರಗಳಲ್ಲಿ ಅಡಗಿರುವ ಶಾಸ್ತ್ರೀಯತೆ ಶಾಸ್ತ್ರೀಯ ದೃಷ್ಟಿಯಿಂದ ವಿಶ್ಲೇಷಿಸಿರುವ ಗ್ರಂಥ*


ಇಂಗ್ಲಿಷ್ ಮೂಲ ಲೇಖಕ: ಡಾ ವೆಂಗನೂರು ಬಾಲಕೃಷ್ಣನ್.

ಕನಡಕ್ಕೆ: ಊರುಕುಂಟೆ ನರಸಿಂಹ ಮೂರ್ತಿ


ಸಸ್ಯಹಾರ ಊಟವು ಸಾತ್ವಿಕವಾದ ಆಹಾರವೇ ?



ನಮ್ಮ ಋಷಿ ಮುನಿಗಳು ನಮ್ಮನ್ನು ಪ್ರಕೃತಿಗೆ ಅನುಕೂಲಕರವಾದ ಜೀವನವನ್ನು ನಡೆಸುವಂತೆ ಸೂಚಿಸಿರುವರು. ಅವರು ಸರ್ವ ಪ್ರಾಣಿಗಳ ಕ್ಷೇಮವನ್ನು ದೃಷ್ಟಿಯಲ್ಲಿಟ್ಟುಕೊಂಡು ಪ್ರಕೃತಿಯಲ್ಲಿ ಅನುಸಂಧಾನ ಪೂರ್ವಕ ಜೀವನ ವಿಧಾನವನ್ನು ಬೋಧಿಸಿದ್ದಾರೆ.


ಶಾಖಾಹಾರ ಊಟವು ವ್ಯಕ್ತಿಯಲ್ಲಿ ಸದ್ಭಾವನೆಯನ್ನು ಉಂಟು ಮಾಡುತ್ತದೆ. ಇದು ಮನಸ್ಸನ್ನು ಮತ್ತು ಶರೀರದ ಜೀವಕಳೆಯನ್ನು ಹೆಚ್ಚಿಸುತ್ತದೆ. ಸಸ್ಯಹಾರವನ್ನು ಸೇವಿಸುವವರು ಆರೋಗ್ಯಕರವಾಗಿ ಮತ್ತು ದೀರ್ಘಾಯಸ್ಸನ್ನು ಅನುಭವಿಸುತ್ತಾರೆಂದು ಪ್ರಕೃತಿ ವೈದ್ಯಕೀಯವನ್ನು ಸಾಧನೆ ಮಾಡಿದವರು ಹೇಳುತ್ತಾರೆ. ಭಾರತೀಯ *ತತ್ವಶಾಸ್ತ್ರಜ್ಞರು ದೇಹವನ್ನು ದೇವಾಲಯಕ್ಕೆ ಹೋಲಿಸುತ್ತಾರೆ.* ಈ ದೇಹವೆನ್ನುವ ದೇವಾಲಯವನ್ನು ಸೊಪ್ಪುಗಳು, ತರಕಾರಿಗಳು ಮತ್ತು ಹಾಲು ಹಣ್ಣುಗಳನ್ನು ಭುಜಿಸಿ ಪೋಷಿಸಬೇಕೆಂದು ಬೋಧಿಸಿದ್ದಾರೆ.


ತರಕಾರಿಗಳಲ್ಲಿನ ಕೊಬ್ಬು ಪದಾರ್ಥವು ನಮ್ಮ ಶರೀರಕ್ಕೆ ಬೇಕಾಗುವ ಸಂಪೂರ್ಣ ಶಕ್ತಿಯನ್ನು ಕೊಡುತ್ತದೆ. ಹಣ್ಣುಗಳು ಮತ್ತು ಬೇಳೆಕಾಳುಗಳು ಜೀರ್ಣ ವ್ಯವಸ್ಥೆಯನ್ನು ಹೆಚ್ಚಿಸುವ ಪ್ರೊಟೀನ್ (ಸಸಾರಜನಕ) ಗಳನ್ನು ಹೊಂದಿರುತ್ತವೆ. ಕೇವಲ ಸಸ್ಯಹಾರ ಭೋಜನದಲ್ಲಿ ಇರುವ ನಾರು ಪದಾರ್ಥಗಳು ಜೀರ್ಣಕೋಶ ಮತ್ತು ನರಗಳು ಚನ್ನಾಗಿ ಕಾರ್ಯ ನಿರ್ವಹಿಸುವಂತೆ ಮಾಡುತ್ತವೆ.


*ವರ್ಜಿನಿಯಾ ವಿಶ್ವವಿದ್ಯಾನಿಲಯವು ನಿರ್ವಹಿಸಿದ ಅಧ್ಯಯನದಂತೆ ಶಾಖಾಹಾರ ಸೇವಿಸುವವರಿಗೆ ಕ್ಯಾನ್ಸರ್ ನಂತಹ ಮಾರಕ ರೋಗಗಳು ಬರುವ ಸಾಧ್ಯತೆಗಳು ಬಹಳ ವಿರಳ ಎಂದು ನಿರ್ಧರಿಸಿದ್ದಾರೆ.*


ಸಂಗ್ರಹ ಮತ್ತು ಪ್ರಚಾರ;

ಗೋ ರಾ ಶ್ರೀನಿವಾಸ...

ಮೊ:9845856139.

ಪ್ರತಿಕ್ರಿಯೆಗಳು

  • ನಿಮ್ಮ ಅಭಿಪ್ರಾಯ ತಿಳಿಸುವಲ್ಲಿ ನೀವು ಮೊದಲಿಗರಾಗಿ.

ನಿಮ್ಮ ಅಭಿಪ್ರಾಯಗಳನ್ನು ಬರೆಯಿರಿ/ತಿಳಿಸಿ.

Top Stories »  


Top ↑