Tel: 7676775624 | Mail: info@yellowandred.in

Language: EN KAN

    Follow us :


ತಾಳೆಯೋಲೆ ೦೯: ಅರಶಿನ (ಹರಿಷಿಣ)ವನ್ನು ಸರಿಯಾದ ಪ್ರಮಾಣದಲ್ಲಿ ಬಳಸುವ ಅಡಿಗೆಯು ಅಸಂಪೂರ್ಣವೆಂದು ಹೇಳುವುದು ಸರಿಯೇ ?

Posted date: 10 Aug, 2019

Powered by:     Yellow and Red

ತಾಳೆಯೋಲೆ ೦೯: ಅರಶಿನ (ಹರಿಷಿಣ)ವನ್ನು ಸರಿಯಾದ ಪ್ರಮಾಣದಲ್ಲಿ ಬಳಸುವ ಅಡಿಗೆಯು ಅಸಂಪೂರ್ಣವೆಂದು ಹೇಳುವುದು ಸರಿಯೇ ?

ಭಾರತೀಯ ಆಚಾರ ವ್ಯವಹಾರಗಳಲ್ಲಿ ಅಡಗಿರುವ ಶಾಸ್ತ್ರೀಯತೆ ಶಾಸ್ತ್ರೀಯ ದೃಷ್ಟಿಯಿಂದ ವಿಶ್ಲೇಷಿಸಿರುವ ಗ್ರಂಥ


*ಇಂಗ್ಲಿಷ್ ಮೂಲ ಲೇಖಕ: ಡಾ ವೆಂಗನೂರು ಬಾಲಕೃಷ್ಣನ್.

ಕನಡಕ್ಕೆ: ಊರುಕುಂಟೆ ನರಸಿಂಹ ಮೂರ್ತಿ*


ಅರಶಿನ (ಹರಿಷಿಣ)ವನ್ನು ಸರಿಯಾದ ಪ್ರಮಾಣದಲ್ಲಿ ಬಳಸುವ ಅಡಿಗೆಯು ಅಸಂಪೂರ್ಣವೆಂದು ಹೇಳುವುದು ಸರಿಯೇ ?


ಪ್ರಾಚೀನ ಕಾಲದಿಂದಲೂ ಭಾರತೀಯರು ಅಡುಗೆಯಲ್ಲಿ ಹರಿಷಿಣಕ್ಕೆ ಹೆಚ್ಚಿನ ಪ್ರಾಧಾನ್ಯತೆಯನ್ನು ನೀಡಿದ್ದಾರೆ.

ಆದರೆ ಈಗಿನ ಕಾಲದಲ್ಲಿ ಅದರ ಬಗ್ಗೆ ಗೊತ್ತಿಲ್ಲದ ಕಾರಣ ಹರಿಷಿಣದ ಪ್ರಾಧಾನ್ಯತೆಯನ್ನು ಕೆಲವರು ವಿಮರ್ಶಿಸುತ್ತಿದ್ದಾರೆ.


ಹರಿಷಿಣ ಕೇವಲ ಅಡುಗೆಗೆ ಬಣ್ಣ ಮಾತ್ರ ಕೊಡತಕ್ಕದಲ್ಲ, ಹರಿಷಿಣವನ್ನು ನೀರಿನಲ್ಲಿ ನಿಧಾನವಾಗಿ ಕಲಸಿ ಪೇಸ್ಟ್ ರೀತಿ ಮಾಡಿ ಕ್ರಮವಾಗಿ ಸೇವಿಸಿದರೆ ಶರೀರದ ಚುರುಕುತನವನ್ನು ಹೆಚ್ಚಿಸುತ್ತದೆಂದು ಆಯುರ್ವೇದದಲ್ಲಿ ಉಲ್ಲೇಖವಿದೆ. ಹರಿಷಿಣವನ್ನು ಉಪಯೋಗಿಸಿ ಮಾಡಿದ ಆಹಾರವು ಚರ್ಮ ರೋಗಗಳನ್ನು, ಮೂತ್ರ ಸಂಬಂಧ ಖಾಯಿಲೆಗಳನ್ನು ಮತ್ತು ಸೂಕ್ಷ್ಮ ಕ್ರಿಮಿಗಳನ್ನು ನಾಶ ಪಡಿಸುತ್ತದೆ. ಕೆಲವೊಮ್ಮೆ ನಾವು ಸೇವಿಸುವ ಆಹಾರದಲ್ಲಿ ವಿಷ ಮತ್ತು ಕೊಳೆಯ ಪದಾರ್ಥಗಳು ಸೇರಿರುತ್ತದೆ. ಸರಿಯಾದ ಪ್ರಮಾಣದಲ್ಲಿ ಬಳಸಿದ ಹರಿಷಿಣವು ವಿಷ ಅಥವಾ ಮಲಿನ ಪದಾರ್ಥಗಳನ್ನು ತೊಲಗಿಸುತ್ತದೆ.


ಗ್ಯಾಸ್ ಟ್ರಬಲ್ ಮತ್ತು ಹೊಟ್ಟೆಯಲ್ಲಿ ಉರಿಯಂತಹ ಸಮಸ್ಯೆಗಳನ್ನು ಹರಿಷಿಣವು ಒಂದು ಒಳ್ಳೆಯ ರೋಗ ನಿವಾರಣೆಯಾಗಿ ಗುರುತಿಸಲಾಗುತ್ತಿದೆ. ಸೌಂದರ್ಯವನ್ನು ವೃದ್ದಿಸುವ ಕೈಗಾರಿಕೆಗಳು ಸಹ ಹರಿಷಿಣಕ್ಕೆ ಚಿರ ಋಣಿಯಾಗಿವೆ. ಅದಕ್ಕಾಗಿಯೇ ಮನೆಗೆ ಬರುವ ಸುವಾಸಿನಿಯರಿಗೆ ಹರಿಷಿಣ ಕುಂಕುಮ ಕೊಟ್ಟು ಬೀಳ್ಕೊಡುವರು. ಹರಿಷಿಣವನ್ನು ಹಾಲಿನ ಕೆನೆಯಲ್ಲಿ ಕಲೆಸಿ ಮುಖಕ್ಕೆ ಲೇಪಿಸಿದರೆ ಮುಖದ ಕಾಂತಿ ಹೆಚ್ಚುತ್ತದೆ. ಗಾಯವಾದಾಗ ತಕ್ಷಣ ಹರಿಷಿಣವನ್ನು ಗಾಯದ ಮೇಲೆ ಹಚ್ಚಿದರೆ ಕೀವು ತುಂಬುವುದಿಲ್ಲ.


*ಈ ರೀತಿಯಾಗಿ ಹರಿಷಿಣ ಬಾಹ್ಯ ಮತ್ತು ಆಂತರಿಕ ಉಪಯೋಗಗಳಿಗೆ ಬಹಳ ಪ್ರಯೋಜನಕಾರಿಯಾಗಿದೆ.*


ಸಂಗ್ರಹ ಮತ್ತು ಪ್ರಚಾರ;

ಗೋ ರಾ ಶ್ರೀನಿವಾಸ...

ಮೊ:9845856139.

ಪ್ರತಿಕ್ರಿಯೆಗಳು

  • ನಿಮ್ಮ ಅಭಿಪ್ರಾಯ ತಿಳಿಸುವಲ್ಲಿ ನೀವು ಮೊದಲಿಗರಾಗಿ.

ನಿಮ್ಮ ಅಭಿಪ್ರಾಯಗಳನ್ನು ಬರೆಯಿರಿ/ತಿಳಿಸಿ.

Top Stories »  


Top ↑