Tel: 7676775624 | Mail: info@yellowandred.in

Language: EN KAN

    Follow us :


ತಾಳೆಯೋಲೆ ೧೦: ಹಸಿ ಶುಂಠಿಯ ಮೇಲೋಗರವಿಲ್ಲದ ಊಟ ಅಸಂಪೂರ್ಣವೇ ?

Posted date: 12 Aug, 2019

Powered by:     Yellow and Red

ತಾಳೆಯೋಲೆ ೧೦: ಹಸಿ ಶುಂಠಿಯ ಮೇಲೋಗರವಿಲ್ಲದ ಊಟ ಅಸಂಪೂರ್ಣವೇ ?

ಭಾರತೀಯ ಆಚಾರ ವ್ಯವಹಾರಗಳಲ್ಲಿ ಅಡಗಿರುವ ಶಾಸ್ತ್ರೀಯತೆ ಶಾಸ್ತ್ರೀಯ ದೃಷ್ಟಿಯಿಂದ ವಿಶ್ಲೇಷಿಸಿರುವ ಗ್ರಂಥ


*ಇಂಗ್ಲಿಷ್ ಮೂಲ ಲೇಖಕ: ಡಾ ವೆಂಗನೂರು ಬಾಲಕೃಷ್ಣನ್.

ಕನಡಕ್ಕೆ: ಊರುಕುಂಟೆ ನರಸಿಂಹ ಮೂರ್ತಿ*


ಹಸಿ ಶುಂಠಿಯ ಮೇಲೋಗರವಿಲ್ಲದ ಊಟ ಅಸಂಪೂರ್ಣವೇ?


ಹಸಿ ಶುಂಠಿಯ ಮೇಲೋಗರ ಅಥವಾ ಪಚ್ಚಡಿ ಇಲ್ಲದ ಊಟ ಅಸಂಪೂರ್ಣವಲ್ಲದೇ ಅಶಾಸ್ತ್ರೀಯವೂ ಹೌದು ಎಂದು ನಮ್ಮ ಸಂಪ್ರದಾಯ ಹೇಳುತ್ತದೆ. ನಮ್ಮ ಪುರಾಣಗಳು ಮತ್ತು ಇತಿಹಾಸವೂ ಸಹ ಶುಂಠಿಯ ಹೆಚ್ಚುಗಾರಿಕೆಯನ್ನು ಪ್ರಕಾಶ ಪಡಿಸಿವೆ, *ಒಂದು ಶುಂಠಿಯ ಅಡುಗೆ ಇತರ ನೂರು ಅಡುಗೆ ಗಳಿಗಿಂತಲೂ ಎಷ್ಟೋ ಪ್ರಭಾವಿತ ಮತ್ತು ರುಚಿಯಾದದ್ದು.


ನಮ್ಮ ದೇಶದಲ್ಲಿ ಅನೇಕ ಪ್ರಾಂತ್ಯಗಳ ಪ್ರಜೆಗಳು ಬಾಳೆ ಎಲೆಯಲ್ಲಿ ಊಟ ಮಾಡುತ್ತಾರೆ. ಎಲೆಯ ಎಡಗಡೆ ಮೊದಲು ಶುಂಠಿಯಿಂದ ಮಾಡಿರುವ ತಿನಿಸನ್ನು ಬಡಿಸುವರು. ಊಟದ ಮೊದಲು ಮತ್ತು ಕೊನೆಯಲ್ಲಿ ರುಚಿ ನೋಡುವುದು ತಿನಿಸನ್ನು ಮಾತ್ರ.

ಬರಹ ಅಥವಾ ಶಾಸನ ರೀತಿಯಾಗಿ ಸಂಪ್ರದಾಯ ಎಲ್ಲಿ ಸಜೀವವಾಗಿ ಇರುವುದೋ ಅಲ್ಲಿ ಈ ಪದ್ದತಿ ಮುಂದುವರಿಯುತ್ತಲೇ ಇದೆ.


ಆಧುನಿಕ ವೈದ್ಯಶಾಸ್ತ್ರವೂ ಸಹ ಶುಂಠಿಯ ಔಷಧೀಯ ಗುಣಗಳನ್ನು ಪ್ರಕಟ ಪಡಿಸಿವೆ, *ಶುಂಠಿಯು ಸಣ್ಣ ಮತ್ತು ದೊಡ್ಡ ನರಗಳನ್ನು ಶುದ್ದಿ ಮಾಡುತ್ತದೆ.* *ಮೂಲವ್ಯಾಧಿ ಗೆ ಶುಂಠಿ-ಮೊಸರು ಪಚ್ಚಡಿಯನ್ನು ಕ್ರಮವಾಗಿ ಸೇವಿಸಿದರೆ ನಿವಾರಣೆ ಆಗುವುದು* ಎಂದು ಆಯುರ್ವೇದ ತಿಳಿಸುತ್ತದೆ. *ಜೀರ್ಣವಾಗದೆ ಹೊಟ್ಟೆಯಲ್ಲಿ ನಿಂತಿರುವ ಆಹಾರ ಪದಾರ್ಥಗಳು* ಶುಂಠಿ-ಮೊಸರು ಪಚ್ಚಡಿಯಿಂದ ಸುಲಭವಾಗಿ ಜೀರ್ಣವಾಗುತ್ತದೆ.


ಶುಂಠಿ-ಮೊಸರು ಪಚ್ಚಡಿ ತಯಾರು ಮಾಡುವುದಕ್ಕೆ ಎಷ್ಟು ಪ್ರಮಾಣದ ಮೊಸರಿದೆಯೋ ಅದಕ್ಕೆ ತಕ್ಕಂತೆ ಶುಂಠಿ, ಕರಿಬೇವು, ಹಸಿ ಮೆಣಸಿನಕಾಯಿ ಮತ್ತು ಈರುಳ್ಳಿಯನ್ನು ಸಣ್ಣದಾಗಿ ಕತ್ತರಿಸಿ ಉಪಯೋಗಿಸಬೇಕು.

ಪುಷ್ಟಿಯಾಗಿ ತಿಂದ ಬಳಿಕ ಶುಂಠಿ-ಮೊಸರು ಪಚ್ಚಡಿ ಉಪಯೋಗಿಸಿದರೆ ಸರಿಯಾಗಿ ಜೀರ್ಣವಾಗುತ್ತದೆ ಎಂದು *ಪಾಕಶಾಸ್ತ್ರ* ಹೇಳುತ್ತದೆ.


ಸಂಗ್ರಹ ಮತ್ತು ಪ್ರಚಾರ;

ಗೋ ರಾ ಶ್ರೀನಿವಾಸ...

ಮೊ:9845856139.

ಪ್ರತಿಕ್ರಿಯೆಗಳು

  • ನಿಮ್ಮ ಅಭಿಪ್ರಾಯ ತಿಳಿಸುವಲ್ಲಿ ನೀವು ಮೊದಲಿಗರಾಗಿ.

ನಿಮ್ಮ ಅಭಿಪ್ರಾಯಗಳನ್ನು ಬರೆಯಿರಿ/ತಿಳಿಸಿ.

Top Stories »  


Top ↑