Tel: 7676775624 | Mail: info@yellowandred.in

Language: EN KAN

    Follow us :


ತಾಳೆಯೋಲೆ ೧೧: ಕಾಫಿ ಜ್ಞಾಪಕ ಶಕ್ತಿಯನ್ನು ಉಂಟು ಮಾಡಬಹುದೆ ?

Posted date: 13 Aug, 2019

Powered by:     Yellow and Red

ತಾಳೆಯೋಲೆ ೧೧: ಕಾಫಿ ಜ್ಞಾಪಕ ಶಕ್ತಿಯನ್ನು ಉಂಟು ಮಾಡಬಹುದೆ ?

ಭಾರತೀಯ ಆಚಾರ ವ್ಯವಹಾರಗಳಲ್ಲಿ ಅಡಗಿರುವ ಶಾಸ್ತ್ರೀಯತೆ ಶಾಸ್ತ್ರೀಯ ದೃಷ್ಟಿಯಿಂದ ವಿಶ್ಲೇಷಿಸಿರುವ ಗ್ರಂಥ


*ಇಂಗ್ಲಿಷ್ ಮೂಲ ಲೇಖಕ: ಡಾ ವೆಂಗನೂರು ಬಾಲಕೃಷ್ಣನ್.

ಕನಡಕ್ಕೆ: ಊರುಕುಂಟೆ ನರಸಿಂಹ ಮೂರ್ತಿ*


*ಕಾಫಿ ಜ್ಞಾಪಕ ಶಕ್ತಿಯನ್ನು ಉಂಟು ಮಾಡಬಹುದೆ ?*


ನಮ್ಮ ಸಂಪ್ರದಾಯಸ್ಥರು ಇದು *ನಿಜವೇ?* ಎಂದು ಹೇಳುವರು. ಸಾಮಾನ್ಯವಾಗಿ ನಮ್ಮ ದೇಶದವರು ಬಹಳಷ್ಟು ಜನ ಬಿಸಿ ಬಿಸಿ ಕಾಫಿಯಿಂದ ತಮ್ಮ ದಿನಚರ್ಯೆಯನ್ನು ಆರಂಭಿಸುತ್ತಾರೆ. ಈ ಕಾಫಿ ಪಾನೀಯವು ಅವರನ್ನು ಆ ದಿನವೆಲ್ಲ ಚುರುಕಾಗಿ ಮತ್ತು ತಾಜಾವಾಗಿ ಇರಿಸುತ್ತದೆಂಬ ವಿಶ್ವಾಸ ಇದೆ.


ಈ ಮಧ್ಯ ಕಾಲದಲ್ಲಿ ಕಾಫಿ ಮೇಲೆ ದಿನಪತ್ರಿಕೆಗಳಲ್ಲಿ ಬಂದ ಲೇಖನಗಳು, ಕಾಫಿಯ ಮೌಲ್ಯವನ್ನು ಮತ್ತಷ್ಟು ಹೆಚ್ಚಿಸಿದೆ. ಈ ಲೇಖನಗಳ ಪ್ರಕಾರ ಕಾಫಿ ಮನುಷ್ಯನ ಜ್ಞಾಪಕ ಶಕ್ತಿಯನ್ನು ಹೆಚ್ಚಿಸುವುದಕ್ಕೆ ಸಹಾಯಕವಾಗುತ್ತದೆ. *ಅರಿಸೋನ ವಿಶ್ವವಿದ್ಯಾಲಯವು* ಅಧ್ಯಯನ ಮಾಡಿ ವಿಷಯವನ್ನು ನಿರೂಪಿಸುತ್ತಾ ಕಾಫಿಯ ಹೆಚ್ಚುಗಾರಿಕೆಯನ್ನು ಪ್ರಕಟಿಸಿದೆ.


ಅರವತ್ತೈದು (೬೫) ವರ್ಷ ಮೇಲ್ಪಟ್ಟ ವಯಸ್ಸಿನವರಲ್ಲೂ ಸಹ ಕಾಫಿಯಲ್ಲಿರುವ *ಕೆಫಿನ್* ಎನ್ನುವ ರಾಸಾಯನಿಕ ಜ್ಞಾಪಕ ಶಕ್ತಿಯನ್ನು ಚೈತನ್ಯವಂತರನ್ನಾಗಿ ಮಾಡುತ್ತದೆ. ಸಹಜವಾಗಿ ವಯಸ್ಸು ಹೆಚ್ಚಾದಂತೆ ಜ್ಞಾಪಕ ಶಕ್ತಿ ಕ್ಷೀಣಿಸುತ್ತದೆ. ಅಂತಹವರಿಗೆ ಬೆಳಗಿನ ಸಮಯ ಜ್ಞಾಪಕ ಶಕ್ತಿ ಚನ್ನಾಗಿ ಕೆಲಸ ಮಾಡುತ್ತದೆ. ನಂತರ ಕ್ರಮವಾಗಿ ಕ್ಷೀಣಿಸುತ್ತಾ ಹೋಗುತ್ತದೆ. ಕಾಫಿಯಲ್ಲಿನ ಕೆಫೀನ್ ಬೆಳಗಿನ ಸಮಯ ಆದ ನಂತರ ‌ಕಡಿಮೆಯಾಗಿ, ಜ್ಞಾಪಕ ಶಕ್ತಿಯನ್ನು ಕಡಿಮೆ ಮಾಡಿ ಮನಸ್ಸಿಗೆ ಕಳವಳವನ್ನು ಉಂಟು ಮಾಡುತ್ತದೆ. ಒಂದೇ ಮಾತಿನಲ್ಲಿ ಹೇಳುವುದಾದರೆ ನಮ್ಮ ಪೂರ್ವಿಕರು ತಮ್ಮ ಬುದ್ದಿ‌ಬಲಕ್ಕೆ ಕ್ಷೇಮ ಉಂಟು ಮಾಡುವ ಪಾನೀಯವನ್ನು ಉಪಯೋಗಿಸಿದ್ದೇ ಅಲ್ಲದೇ ಮುಂದಿನ ಪೀಳಿಗೆಯವರಿಗೂ ಸಹ ಈ ವಿಷಯದ ಬಗ್ಗೆ ತಿಳಿಸಿರುವರು.


ಸಂಗ್ರಹ ಮತ್ತು ಪ್ರಚಾರ;

ಗೋ ರಾ ಶ್ರೀನಿವಾಸ...

ಮೊ:9845856139.

ಪ್ರತಿಕ್ರಿಯೆಗಳು

  • ನಿಮ್ಮ ಅಭಿಪ್ರಾಯ ತಿಳಿಸುವಲ್ಲಿ ನೀವು ಮೊದಲಿಗರಾಗಿ.

ನಿಮ್ಮ ಅಭಿಪ್ರಾಯಗಳನ್ನು ಬರೆಯಿರಿ/ತಿಳಿಸಿ.

Top Stories »  


Top ↑