Tel: 7676775624 | Mail: info@yellowandred.in

Language: EN KAN

    Follow us :


ತಾಳೆಯೋಲೆ ೧೨: ರಾತ್ರಿಯಲ್ಲಿ ಅರಳುವ ಮರಗಳನ್ನು ಮನೆಯ ಸುತ್ತಮುತ್ತ ಬೆಳೆಸಬಹುದಾ?

Posted date: 14 Aug, 2019

Powered by:     Yellow and Red

ತಾಳೆಯೋಲೆ ೧೨: ರಾತ್ರಿಯಲ್ಲಿ ಅರಳುವ ಮರಗಳನ್ನು ಮನೆಯ ಸುತ್ತಮುತ್ತ ಬೆಳೆಸಬಹುದಾ?

ಭಾರತೀಯ ಆಚಾರ ವ್ಯವಹಾರಗಳಲ್ಲಿ ಅಡಗಿರುವ ಶಾಸ್ತ್ರೀಯತೆ ಶಾಸ್ತ್ರೀಯ ದೃಷ್ಟಿಯಿಂದ ವಿಶ್ಲೇಷಿಸಿರುವ ಗ್ರಂಥ


*ಇಂಗ್ಲಿಷ್ ಮೂಲ ಲೇಖಕ: ಡಾ ವೆಂಗನೂರು ಬಾಲಕೃಷ್ಣನ್.

ಕನಡಕ್ಕೆ: ಊರುಕುಂಟೆ ನರಸಿಂಹ ಮೂರ್ತಿ*


ರಾತ್ರಿಯಲ್ಲಿ ಅರಳುವ ಮರಗಳನ್ನು ಮನೆಯ ಸುತ್ತಮುತ್ತ ಬೆಳೆಸಬಹುದಾ ?

ಪ್ರಾಚೀನ ಕಾಲದಲ್ಲಿ ಈ ರೀತಿಯಾದ ಮರಗಳನ್ನು ಬೇಕೆಂದೆ ಬೆಳೆಸುತ್ತಿದ್ದರು. ಈ ವಿಷಯವನ್ನು ಆಧುನಿಕ ಶಾಸ್ತ್ರವೂ ಸಹ ಅನುಮೋದಿಸುತ್ತದೆ.

ಈ ಮರಗಳಿಂದ ಉಂಟಾಗುವ ಫಲಿತವನ್ನು ದೃಷ್ಟಿಯಲ್ಲಿಟ್ಟುಕೊಂಡು ಸೂರ್ಯನು ಹಗಲಿನಲ್ಲಿ ಯಾವ ರೀತಿಯಾಗಿ ಪ್ರಕೃತಿಯನ್ನು ಶುಭಮಯ ಮಾಡುತ್ತಾನೋ ನಮಗೆ ತಿಳಿಯದು. ಆದರೆ ರಾತ್ರಿ ವೇಳೆ ಪ್ರಕೃತಿಯಲ್ಲಿನ ಗಾಳಿಯನ್ನು ಶುಭ್ರ ಮಾಡುವ ಕೆಲಸ ಮತ್ತು ವ್ಯತಿರೇಖ ಶಕ್ತಿ ತರಂಗಗಳನ್ನು ಪರಿಸರದ ಸುತ್ತ ಇಲ್ಲದಂತೆ ಮಾಡುವ ಕೆಲಸವನ್ನು ರಾತ್ರಿಯಲ್ಲಿ ಅರಳುವ ಮರಗಳು ಮಾಡುತ್ತವೆ. ಈ ವಿಷಯವನ್ನು ಆಧುನಿಕ ಪರಿಶೋಧನೆಗಳು ಅಂಗೀಕರಿಸುತ್ತಿವೆ.


ಕೆಲವು ಪ್ರತ್ಯೇಕ ಜಾತಿಗೆ ಸೇರಿದ ಇಂತಹ ಗಿಡ ಗಿಡಮರಗಳನ್ನು ಮನೆಯ ಪರಿಸರದಲ್ಲಿ ಬೆಳೆಸುವುದಕ್ಕೆ ಅಂಗೀಕರಿಸುವುದಿಲ್ಲ. ಆದರೂ ಕೆಲವು ಜಾತಿಯ ಗಿಡ ಮರಗಳನ್ನು ಮನೆಯ ಪರಿಸರಗಳಲ್ಲಿ ಬೆಳೆಸಬಹುದು. ಉತ್ತರ ಭಾರತದಲ್ಲಿ ಸಿಗುವ *ಕಾಸರ್ಕಿ* *(Nurvomica, Terminatia)* *ಕೆಲವು ರೀತಿಯ ಬೇವಿನ‌ ಮರಗಳು,* *ನಾಗದಾಳಿ, ಮತ್ತು ಪಾಪಸುಕಳ್ಳಿ,* *ತಾಳೆ, ಈಚಲು* ಮುಂತಾದ ಗಿಡ ಮರಗಳನ್ನು ಮನೆಯ ಪರಿಸರದಲ್ಲಿ ಬೆಳೆಸಬಹುದು.


ಈ ರೀತಿಯಾದ ಗಿಡ ಮರಗಳು ಭೂಸಾರವನ್ನು ನಾಶ ಪಡಿಸುತ್ತದೆಂದು, ವಿಷ ಕ್ರಿಮಿಗಳು‌ ಸೇರುತ್ತವೆಂದೂ, ಸರೀಸೃಪಗಳಿಗೆ ಆಶ್ರಯ‌ ಕೊಡುತ್ತವೆಂಬ ಭಾವನೆಯಿಂದ ಈ ರೀತಿಯಾದ ಗಿಡ ಮರಗಳನ್ನು ಮನೆಯ ಪರಿಸರದಲ್ಲಿ ಬೆಳೆಸಲು ಇಷ್ಟಪಡುವುದಿಲ್ಲ. ಆದರೆ ಈ‌ ಗಿಡ ಮರಗಳಿಂದ ಉಂಟಾಗುವ ಒಳ್ಳೆಯದನ್ನು ನಾವು ದೃಷ್ಟಿಯಲ್ಲಿ ಇಟ್ಟುಕೊಳ್ಳಬೇಕು.


ಸಂಗ್ರಹ ಮತ್ತು ಪ್ರಚಾರ;

ಗೋ ರಾ ಶ್ರೀನಿವಾಸ...

ಮೊ:9845856139.

ಪ್ರತಿಕ್ರಿಯೆಗಳು

  • ನಿಮ್ಮ ಅಭಿಪ್ರಾಯ ತಿಳಿಸುವಲ್ಲಿ ನೀವು ಮೊದಲಿಗರಾಗಿ.

ನಿಮ್ಮ ಅಭಿಪ್ರಾಯಗಳನ್ನು ಬರೆಯಿರಿ/ತಿಳಿಸಿ.

Top Stories »  


Top ↑