Tel: 7676775624 | Mail: info@yellowandred.in

Language: EN KAN

    Follow us :


ಸ್ವಾತಂತ್ರ್ಯ ಸ್ವೇಚ್ಚಕಾರಿ ಸಲ್ಲ, ಅದು ಭಾರತೀಯ ಹೋರಾಟಗಾರರ ರಕ್ತದಿಂದ ಬಂದದ್ದು, ರಂಗಸ್ವಾಮಿ

Posted date: 15 Aug, 2019

Powered by:     Yellow and Red

ಸ್ವಾತಂತ್ರ್ಯ ಸ್ವೇಚ್ಚಕಾರಿ ಸಲ್ಲ, ಅದು ಭಾರತೀಯ ಹೋರಾಟಗಾರರ ರಕ್ತದಿಂದ ಬಂದದ್ದು, ರಂಗಸ್ವಾಮಿ

ಚನ್ನಪಟ್ಟಣ: ನಮಗಿಂದು ಸಂದಿರುವ ಸ್ವಾತಂತ್ರ್ಯ ವನ್ನು ಸ್ವೇಚ್ಚಕಾರಿಗಾಗಿ ಬಳಸದೇ ಅದರ ಹಿಂದಿರುವ ಭಾರತೀಯರ ರಕ್ತದೋಕುಳಿಯ ಇತಿಹಾಸ ಅರಿಯುವ ಮೂಲಕ ಸ್ವಾತಂತ್ರ್ಯ ಪಡೆದುಕೊಂಡ ಬಗ್ಗೆ ತಿಳಿದುಕೊಳ್ಳಬೇಕೆಂದು ತಾಲ್ಲೂಕಿನ ಬೇವೂರು ಗ್ರಾಮದ ಸಿದ್ದರಾಮೇಶ್ವರ ಶಾಲೆಯ ಟಿ ಆರ್ ರಂಗಸ್ವಾಮಿ ಯವರು ವಿದ್ಯಾರ್ಥಿಗಳಿಗೆ ಕರೆ ನೀಡಿದರು.

ಅವರು ಇಂದು ಬಾಲಕರ ಪದವಿ ಪೂರ್ವ ಕಾಲೇಜಿನ ಆವರಣದಲ್ಲಿ ತಾಲ್ಲೂಕು ಆಡಳಿತ ಮಂಡಳಿ ಹಾಗೂ ರಾಷ್ಟ್ರೀಯ ಹಬ್ಬಗಳ ಆಚರಣಾ ಸಮಿತಿ ವಿಜೃಂಭಣೆಯಿಂದ ಹಮ್ಮಿಕೊಂಡಿದ್ದ ಎಪ್ಪತ್ಮೂರನೇ ವರ್ಷದ ಸ್ವಾತಂತ್ರ್ಯ ದಿನಾಚರಣೆಯಲ್ಲಿ ಮುಖ್ಯ ಭಾಷಣಕಾರರಾಗಿ ಮಾತನಾಡಿದರು.


ಬ್ರಿಟೀಷರ ವಿರುದ್ದ ಹೋರಾಡಿದ ಎಲ್ಲಾ ಅಸಂಖ್ಯ ದೇಶ ಭಕ್ತ ನಾಯಕರು ಸಹ ಬ್ರಿಟೀಷರ ಗುಂಡುಗಳಿಗೆ ಹಸನ್ಮುಖಿಯಾಗಿ ಎದೆಯೊಡ್ಡಿದವರು, ಲಾಲ್, ಬಾಲ್ ಮತ್ತು ಪಾಲ್ ತ್ರಯರು, ಭಗತ್ ಸಿಂಗ್, ಝಾನ್ಸಿ ರಾಣಿ ಲಕ್ಷ್ಮೀಬಾಯಿ, ಕಿತ್ತೂರು ರಾಣಿ ಚನ್ನಮ್ಮ, ಹಾಗೂ ಶಾಂತಿಯಿಂದ ಸ್ವಾತಂತ್ರ್ಯ ಪಡೆದ ಮಹಾತ್ಮ ಗಾಂಧಿ ಸೇರಿದಂತೆ ಎಲ್ಲರೂ ಸಹ ನಮ್ಮ ಇಂದಿನ ಸ್ವಾತಂತ್ರ್ಯ ಕ್ಕೆ ತಮ್ಮ ಜೀವವನ್ನು ಬಲಿಕೊಟ್ಟಿದ್ದಾರೆ.

ಹಲವಾರು ಚಳವಳಿಗಳನ್ನು ಹುಟ್ಟುಹಾಕಿ ಸ್ವಾತಂತ್ರ್ಯ ದೊರಕಿಸಿಕೊಟ್ಟ ಹಾಗೂ ಹುತಾತ್ಮರಾದ ಸೈನಿಕರುಗಳಿಗೆ ಸಹ ನಾವುಗಳು ಚಿರ ಋಣಿಯಾಗಿರಬೇಕೆಂದರು.


ವೇದಿಕೆಯ ಅಧ್ಯಕ್ಷತೆ ವಹಿಸಿ ಅಧ್ಯಕ್ಷ ಭಾಷಣ ಮಾಡಿದ ತಾಲ್ಲೂಕು ಪಂಚಾಯತಿ ಅಧ್ಯಕ್ಷ ಹರೂರು ರಾಜಣ್ಷ ೧೯೪೭ ರಲ್ಲಿ ಸಿಕ್ಕ ಸ್ವಾತಂತ್ರ್ಯ ಕ್ಕಿಂತ ಹೆಚ್ಚಿನ ಸ್ವಾತಂತ್ರ್ಯ ಇಂದು ನಮಗೆ ಪ್ರಧಾನಮಂತ್ರಿ ನರೇಂದ್ರ ಮೋದಿಯವರಿಂದ ದೊರೆತಿದೆ, ಒಂದು ದೇಶ ಒಂದು ಧ್ವಜ ಎನ್ನುವ ರೀತಿಯಲ್ಲಿ ದೇಶದ ಮುಕುಟಮಣಿ ಕಾಶ್ಮೀರದಲ್ಲಿದ್ದ ೩೭೦ ನೇ ವಿಧಿ ರದ್ದುಪಡಿಸುವ ಮೂಲಕ ದೇಶದ ಐಕ್ಯತೆಯನ್ನು ಎತ್ತಿ ಹಿಡಿದು ಮತ್ತೊಮ್ಮೆ ಸ್ವಾತಂತ್ರ್ಯ ದೊರಕಿಸಿಕೊಟ್ಟಿದ್ದಾರೆ ಎಂದು ಸ್ಮರಿಸಿದರು.


ಅನೇಕ ಇಲಾಖೆಯ ಅಧಿಕಾರಿಗಳು, ಸಾರ್ವಜನಿಕ ಜೀವನದಲ್ಲಿ ತೊಡಗಿಸಿಕೊಂಡಿರುವ ಗಣ್ಯರಿಗೆ, ಉತ್ತಮ ಅಂಕಗಳಿಸಿದ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ, ಉನ್ನತ ಶ್ರೇಣಿಯಲ್ಲಿ ಉತ್ತೀರ್ಣರಾದ ಮಕ್ಕಳಿಗೆ ಲ್ಯಾಪ್‌ಟಾಪ್ ನೀಡಿ ಸನ್ಮಾನಿಸಲಾಯಿತು.


ಪ್ರತಿ ವರ್ಷದಂತೆ ಈ ಬಾರಿಯೂ‌ ಸಹ ಮೈಸೂರಿನ ಅಂಚೆ ಇಲಾಖೆಯ ಅಧೀಕ್ಷಕ ಎನ್ ಪ್ರಕಾಶ್ ರವರು ಉತ್ತಮ ಶ್ರೇಣಿಯಲ್ಲಿ ಉತ್ತೀರ್ಣರಾದ ವಿದ್ಯಾರ್ಥಿಯೋರ್ವನಿಗೆ ೫,೦೦೦ ರೂಪಾಯಿ ನೀಡುವ ಮೂಲಕ ತಮ್ಮ ಅಭಿಮಾನ ಮೆರೆದರು.



ನಗರದ ಅನೇಕ ಶಾಲೆಯ ಮಕ್ಕಳು ಶಿಸ್ತು ಬದ್ದತೆಯಿಂದ ಮೆರವಣಿಗೆಯಲ್ಲಿ ಪಾಲ್ಗೊಂಡಿದ್ದರು, ಎಲ್ಲಾ ಶಾಲೆಯ ಮಕ್ಕಳನ್ನು ಅಧಿಕಾರಿಗಳು ಮತ್ತು ನಾಯಕರು ಹಸ್ತಲಾಘವ ನೀಡುವ ಮೂಲಕ ಪರಿಚಯ ಮಾಡಿಕೊಂಡರು.

ದಂಡಾಧಿಕಾರಿ ಸುದರ್ಶನ್ ರವರು ಧ್ವಜಾರೋಹಣ ಮಾಡಿದರು, ಕ್ಷೇತ್ರ ಶಿಕ್ಷಣಾಧಿಕಾರಿ ಸೀತಾರಾಮು ರವರು ಗಣ್ಯರಿಗೆ ಸ್ವಾಗತ ಕೋರಿದರು, ಶಿಕ್ಷಕ ರಾಜಶೇಖರ ನಿರೂಪಿಸಿದರು. ನಂತರ ಹಲವಾರು ಶಾಲೆಯ ಮಕ್ಕಳು ದೇಶಭಕ್ತಿ ಗೀತೆಗಳಿಗೆ ನೃತ್ಯ ಮಾಡುವ ಮೂಲಕ ಗಣ್ಯರು ಮತ್ತು ನೆರೆದ ಸಾರ್ವಜನಿಕರಿಗೆ ರಸದೌತಣ ನೀಡಿದರು.


ವೇದಿಕೆಯಲ್ಲಿ ತಾಲ್ಲೂಕು ಪಂಚಾಯತಿ ಕಾರ್ಯನಿರ್ವಹಣಾಧಿಕಾರಿ ರಾಮಕೃಷ್ಣ, ನಗರಸಭೆಯ ಪ್ರಭಾರ ಆಯುಕ್ತ ಮಾಯಣ್ಣಗೌಡ, ಶಿರಸ್ತೇದಾರ ಮಹದೇವಯ್ಯ, ಸಮಾಜ ಕಲ್ಯಾಣ ಇಲಾಖೆಯ ಕಿರಣ್, ಶಿಶು ಅಭಿವೃದ್ಧಿ ಅಧಿಕಾರಿ ಕಾಂತರಾಜು, ಶಿಕ್ಷಕ ರಂಗನಾಥ್, ಎನ್ ಸಿ ಸಿ ಯ ಅನಿಲ್ ಕುಮಾರ್, ಎಪಿಎಂಸಿ ಅಧ್ಯಕ್ಷ ಯಾಲಕ್ಕಿಗೌಡ, ಪಿ ಎಲ್ ಡಿ ಬ್ಯಾಂಕ್ ಅಧ್ಯಕ್ಷ ನಾಗರಾಜು ಸೇರಿದಂತೆ ಅನೇಕ ಅಧಿಕಾರಿಗಳು ಮತ್ತು ಗಣ್ಯರು ಭಾಗವಹಿಸಿದ್ದರು.


ಗೋ ರಾ ಶ್ರೀನಿವಾಸ...

ಮೊ:9845856139.

ಪ್ರತಿಕ್ರಿಯೆಗಳು

  • ನಿಮ್ಮ ಅಭಿಪ್ರಾಯ ತಿಳಿಸುವಲ್ಲಿ ನೀವು ಮೊದಲಿಗರಾಗಿ.

ನಿಮ್ಮ ಅಭಿಪ್ರಾಯಗಳನ್ನು ಬರೆಯಿರಿ/ತಿಳಿಸಿ.

Top Stories »  


Top ↑