Tel: 7676775624 | Mail: info@yellowandred.in

Language: EN KAN

    Follow us :


ತಾಳೆಯೋಲೆ ೧೪: ಸಾವಿಗೆ ಹೋಗಿ ಬಂದು ಸ್ನಾನ ಮಾಡದೆ ಮನೆಯೊಳಗೆ ಪ್ರವೇಶಿಸಬಹುದೇ ?

Posted date: 17 Aug, 2019

Powered by:     Yellow and Red

ತಾಳೆಯೋಲೆ ೧೪: ಸಾವಿಗೆ ಹೋಗಿ ಬಂದು ಸ್ನಾನ ಮಾಡದೆ ಮನೆಯೊಳಗೆ ಪ್ರವೇಶಿಸಬಹುದೇ ?

ಭಾರತೀಯ ಆಚಾರ ವ್ಯವಹಾರಗಳಲ್ಲಿ ಅಡಗಿರುವ ಶಾಸ್ತ್ರೀಯತೆ ಶಾಸ್ತ್ರೀಯ ದೃಷ್ಟಿಯಿಂದ ವಿಶ್ಲೇಷಿಸಿರುವ ಗ್ರಂಥ


*ಇಂಗ್ಲಿಷ್ ಮೂಲ ಲೇಖಕ: ಡಾ ವೆಂಗನೂರು ಬಾಲಕೃಷ್ಣನ್.

ಕನಡಕ್ಕೆ: ಊರುಕುಂಟೆ ನರಸಿಂಹ ಮೂರ್ತಿ*


ಸಾವಿಗೆ ಹೋಗಿ ಬಂದು ಸ್ನಾನ ಮಾಡದೆ ಮನೆಯೊಳಗೆ ಪ್ರವೇಶಿಸಬಹುದೇ ?


ಪೂರ್ವ ಕಾಲದಲ್ಲಿ ಈ ಪ್ರಶ್ನೆಗೆ ಖಂಡಿತವಾಗಿಯೂ ಪ್ರವೇಶ ಮಾಡಬಾರದು ಎಂದಿತ್ತು, ಈ ಕಾಲದಲ್ಲಿ ಕೆಲವರು ಇದನ್ನು ವಿಮರ್ಶೆ ಮಾಡಿದ್ದಾರೆ.


ಅಂತ್ಯಕ್ರಿಯೆಗೆ ಹೋಗಿ ಬಂದವರು ಇಲ್ಲವೇ ಸ್ಮಶಾನದಿಂದ ಹಿಂತಿರುಗಿ ಬಂದವರು *ಶರೀರದ ಮೇಲೆ ಬಟ್ಟೆಗಳಿದ್ದಂತೆಯೇ* ಸ್ನಾನ ಮಾಡಬೇಕೆಂದು ಸಂಪ್ರದಾಯದ ನಂಬಿಕೆ. ಇಲ್ಲದಿದ್ದರೆ ಮರಣ ಹೊಂದಿದ್ದ ಆತ್ಮ ಅವನನ್ನು ಹಿಂಬಾಲಿಸುತ್ತದೆಂದು ಹೇಳುತ್ತಾರೆ. ಆತ್ಮ ಹಿಂಬಾಲಿಸುವುದು ಮೂರ್ಖತ್ವವೇ ಆಗಬಹುದು. ಆದರೆ ಈ ನಂಬಿಕೆಯ ಹಿಂದೆ ಒಂದು ಖಚಿತವಾದ ವಿಷಯ ಅಡಗಿದೆ.


ಅದೇನೆಂದರೆ ಒಬ್ಬ ವ್ಯಕ್ತಿ ಮರಣಿಸಿದ ನಂತರ ಮೃತ ಶರೀರದಿಂದ ಅನೇಕ ರೀತಿಯ *ವಿಷ ಕ್ರಿಮಿಗಳು* ಹೊರಗೆ ಬರುತ್ತಿರುತ್ತವೆ. ಅವು ದೇಹದ ಸುತ್ತಲೂ ಆವರಿಸಿರುತ್ತವೆ. ಯಾರು ಶವವನ್ನು ಮುಟ್ಟುತ್ತಾರೋ ಅವರ ಮೇಲೆ ಈ ವಿಷ ಕ್ರಿಮಿಗಳು ಮುತ್ತುತ್ತವೆ. ಈ ವಿಷ ಕ್ರಿಮಿಗಳನ್ನು ಹೋಗಲಾಡಿಸಲು ಹಾಕಿಕೊಂಡಿರುವ ಬಟ್ಟೆ ಸಹಿತ ಸ್ನಾನ ಮಾಡಬೇಕೆಂದು ಹೇಳಲಾಗಿದೆ. ಇಲ್ಲದಿದ್ದರೆ ಈ ಕ್ರಿಮಿಗಳು ಖಾಯಿಲೆಗಳನ್ನು ಉಂಟುಮಾಡುತ್ತವೆ.


ತಲೆಯ ಮೇಲಿಂದ ತಣ್ಣನೆಯ ನೀರು ಹಾಕಿಕೊಳ್ಳಿವುದರಿಂದ ಮೆದುಳಿನಿಂದ ಉತ್ಪತ್ತಿಯಾದ ಶಕ್ತಿ ತರಂಗಗಳು ಪೂರ್ತಿ ಶರೀರವನ್ನು ವ್ಯಾಪಿಸಿ ವಿಷಕ್ರಿಮಿಗಳನ್ನು ನಾಶಪಡಿಸುತ್ತವೆ. ಈ ಕ್ರಿಮಿಗಳು ಬಟ್ಟೆಗಳ ಮೇಲೆಯೂ ಇರುತ್ತಾವಾದ್ದರಿಂದ ಆ ಬಟ್ಟೆಗಳನ್ನು ಸಹ ಒದ್ದೆ ಮಾಡಿಕೊಂಡು ಸ್ನಾನ ಮಾಡಬೇಕೆಂದು ಹೇಳುತ್ತಾರೆ.

ಈ ರೀತಿಯಾಗಿ ಈ ನಂಬಿಕೆಯಲ್ಲಿ ಪರಿಶುಭ್ರತೆ ಮತ್ತು ಖಾಯಿಲೆಗಳಿಂದ ರಕ್ಷಿಸುವ ವಿಜ್ಞಾನದಾಯಕವಾದ ಸತ್ಯ ಅಡಗಿದೆ.


ಸಂಗ್ರಹ ಮತ್ತು ಪ್ರಚಾರ;

ಗೋ ರಾ ಶ್ರೀನಿವಾಸ...

ಮೊ:9845856139.

ಪ್ರತಿಕ್ರಿಯೆಗಳು

  • ನಿಮ್ಮ ಅಭಿಪ್ರಾಯ ತಿಳಿಸುವಲ್ಲಿ ನೀವು ಮೊದಲಿಗರಾಗಿ.

ನಿಮ್ಮ ಅಭಿಪ್ರಾಯಗಳನ್ನು ಬರೆಯಿರಿ/ತಿಳಿಸಿ.

Top Stories »  


Top ↑