Tel: 7676775624 | Mail: info@yellowandred.in

Language: EN KAN

    Follow us :


ತಾಳೆಯೋಲೆ ೧೬: ಮನೆಗೆ ಬೆಕ್ಕು ಹೇಗೆ ಶುಭಕರ ?

Posted date: 20 Aug, 2019

Powered by:     Yellow and Red

ತಾಳೆಯೋಲೆ ೧೬: ಮನೆಗೆ ಬೆಕ್ಕು ಹೇಗೆ ಶುಭಕರ ?

ಭಾರತೀಯ ಆಚಾರ ವ್ಯವಹಾರಗಳಲ್ಲಿ ಅಡಗಿರುವ ಶಾಸ್ತ್ರೀಯತೆ ಶಾಸ್ತ್ರೀಯ ದೃಷ್ಟಿಯಿಂದ ವಿಶ್ಲೇಷಿಸಿರುವ ಗ್ರಂಥ

ಇಂಗ್ಲಿಷ್ ಮೂಲ ಲೇಖಕ: ಡಾ ವೆಂಗನೂರು ಬಾಲಕೃಷ್ಣನ್.

ಕನಡಕ್ಕೆ: ಊರುಕುಂಟೆ ನರಸಿಂಹ ಮೂರ್ತಿ*


ಮನೆಗೆ ಬೆಕ್ಕು ಹೇಗೆ ಶುಭಕರ ?


ನಮ್ಮ ಪೂರ್ವಜರು ಸಾಕು ಪ್ರಾಣಿಗಳನ್ನು ತಮ್ಮ ಕುಟುಂಬದ ಒಂದು ಭಾಗವಾಗಿ ನೋಡಿಕೊಳ್ಳುತ್ತಿದ್ದರು. ನಾಯಿಗಳು, ಬೆಕ್ಕುಗಳು, ಕೋಳಿಗಳು, ಪಶುಗಳು, ಪಕ್ಷಿಗಳು ಮುಂತಾದವು ಅವಿಭಕ್ತ ಕುಟುಂಬದ ಸದಸ್ಯರಾಗಿ ಇರುತ್ತಿದ್ದವು. ಈ ಪ್ರಾಣಿ ಪಕ್ಷಿಗಳೂ ಸಹ ತಮ್ಮ ಯಜಮಾನನಿಗೆ ಬಹುತೇಕ ಉಪಕಾರಿಯಾಗಿ ಇರುತ್ತಿದ್ದವು ಹಾಗೂ ತಮ್ಮ ಯಜಮಾನನ ಆಸ್ತಿಯನ್ನು ರಕ್ಷಿಸುವಲ್ಲಿ ಪ್ರಮುಖ ಪಾತ್ರ ವಹಿಸುತ್ತಿದ್ದವು.


ಬೆಕ್ಕುಗಳು ಅವರ ಮನೆಗಳಲ್ಲಿ ಸಂಪೂರ್ಣ ಸ್ವಾತಂತ್ರ್ಯವನ್ನು ಹೊಂದಿದ ಸಾಕು ಪ್ರಾಣಿಗಳಾಗಿದ್ದವು. ಅವರು ಬೆಕ್ಕುಗಳನ್ನು ಪ್ರೀತಿಸುವುದಷ್ಟೇ ಅಲ್ಲದೆ ಅವುಗಳು ತಮ್ಮ ಮಡಿಲಲ್ಲಿ ವಿಶ್ರಮಿಸಿಕೊಳ್ಳುವುದಕ್ಕೂ ಅವಕಾಶ ಮಾಡಿಕೊಡುತ್ತಿದ್ದರು. ಇಲಿಗಳು ಮತ್ತಿತರ ಹಾನಿಕಾರಕ ಚಿಕ್ಕ ಜೀವಿಗಳನ್ನು ಹಿಡಿದು ತಿಂದು ಮನೆಯ ಪರಿಸರದಲ್ಲಿ ಅವುಗಳು ಇಲ್ಲದಂತೆ ಮಾಡುತ್ತವೆ.


ಮನೆಯಲ್ಲಿ ಅದು ಸ್ವೇಚ್ಛೆಯಾಗಿ ತಿರುಗಾಡಿಕೊಂಡು ಮ್ಯಾಂವ್ ಮ್ಯಾಂವ್ ಎಂಬ ಕೀರಲು ಧ್ವನಿಯಲ್ಲಿ ಕಿರುಚುತ್ತಾ ಇಲಿಗಳು ಹಾಗೂ ಮತ್ತಿತರ ಹಾನಿಕಾರಕ ಜೀವಿಗಳು ಮನೆಯ ಪರಿಸರದಲ್ಲಿ ಬಾರದಂತೆ ಅವುಗಳಲ್ಲಿ ಭಯವನ್ನುಂಟು ಮಾಡುತ್ತವೆ. ಈ‌ ರೀತಿಯಾಗಿ ಬೆಕ್ಕುಗಳು ಇಲಿಗಳ ಅಥವಾ ಇನ್ನಿತರ ಜೀವಿಗಳ ಮುಖಾಂತರ ತಮ್ಮ ಯಜಮಾನ ನಷ್ಟ ಹೊಂದದಂತೆ, ಮನೆಯ ಸದಸ್ಯರಿಗೆ ಅವುಗಳಿಂದ ರೋಗಗಳು ಬರದಂತೆ ರಕ್ಷಿಸುತ್ತವೆ. ಈ ಕಾರಣದಿಂದಾಗಿ ಬೆಕ್ಕುಗಳು ಮನೆಯಲ್ಲಿ ಇದ್ದರೆ ಶುಭವೆಂದು ಹೇಳಲ್ಪಟ್ಟಿದೆ.


ಸಂಗ್ರಹ ಮತ್ತು ಪ್ರಚಾರ;

ಗೋ ರಾ ಶ್ರೀನಿವಾಸ...

ಮೊ:9845856139.

ಪ್ರತಿಕ್ರಿಯೆಗಳು

  • ನಿಮ್ಮ ಅಭಿಪ್ರಾಯ ತಿಳಿಸುವಲ್ಲಿ ನೀವು ಮೊದಲಿಗರಾಗಿ.

ನಿಮ್ಮ ಅಭಿಪ್ರಾಯಗಳನ್ನು ಬರೆಯಿರಿ/ತಿಳಿಸಿ.

Top Stories »  


Top ↑