Tel: 7676775624 | Mail: info@yellowandred.in

Language: EN KAN

    Follow us :


ತಾಳೆಯೋಲೆ ೧೭: ಹಾವಿಗೆ ಮುಂಗುಸಿ ಶತೃನಾ?

Posted date: 21 Aug, 2019

Powered by:     Yellow and Red

ತಾಳೆಯೋಲೆ ೧೭: ಹಾವಿಗೆ ಮುಂಗುಸಿ ಶತೃನಾ?

ಭಾರತೀಯ ಆಚಾರ ವ್ಯವಹಾರಗಳಲ್ಲಿ ಅಡಗಿರುವ ಶಾಸ್ತ್ರೀಯತೆ ಶಾಸ್ತ್ರೀಯ ದೃಷ್ಟಿಯಿಂದ ವಿಶ್ಲೇಷಿಸಿರುವ ಗ್ರಂಥ


ಇಂಗ್ಲಿಷ್ ಮೂಲ ಲೇಖಕ: ಡಾ ವೆಂಗನೂರು ಬಾಲಕೃಷ್ಣನ್.

ಕನಡಕ್ಕೆ: ಊರುಕುಂಟೆ ನರಸಿಂಹ ಮೂರ್ತಿ


ಹಾವಿಗೆ ಮುಂಗುಸಿ ಶತೃನಾ ? 


ಹಾವುಗಳು ಹೆಚ್ಚಾಗಿ ಓಡಾಡುವ ಪ್ರದೇಶದಲ್ಲಿ ಒಂದು ಮುಂಗುಸಿಯನ್ನು ತಂದು ಬಿಡಬೇಕು ಎಂಬುದು ಒಂದು ನಂಬಿಕೆ.

ಮುಂಗುಸಿ ಹಾವುಗಳಿಗೆ ಶತೃ, ಆದ್ದರಿಂದ ಹಾವನ್ನು ನೋಡಿದ ತಕ್ಷಣ ಮುಂಗುಸಿ ಅದನ್ನು ಕೊಲ್ಲುತ್ತದೆ ಎನ್ನುವುದು ಜನರ ಅಭಿಪ್ರಾಯ.


ಹಾವು ಮತ್ತು ಮುಂಗುಸಿಯ ಮಧ್ಯೆ ನಡೆದ ಕಾಳಗವನ್ನು ನೋಡಿದವರು ಯಾರಾದರೂ ಸರಿ ಈ ವಿಷಯವನ್ನು ಅಂಗೀಕರಿಸುತ್ತಾರೆ. ಹಾವಿನ ಪ್ರಹಾರವನ್ನು ಬಹಳ ಚಾಕಚಕ್ಯತೆಯಿಂದ ತಪ್ಪಿಸಿಕಳ್ಳುತ್ತಾ ಹಾವಿನ ಮೇಲೆ ಒಬ್ಬ ಮಲ್ಲ ಯೋಧನಂತೆ ಎರಗಿ ವಿಜಯವನ್ನು ಸಾಧಿಸುತ್ತದೆ. ಒಂದೆರಡು ಪ್ರಹಾರಗಳ ನಂತರ ಹಾವು ತನ್ನ ಹೆಡೆಯನ್ನು ಎತ್ತುವುದಕ್ಕೆ ಮುಂಚೆಯೇ ಮುಂಗುಸಿಯೂ ಹಾವಿನ ಮೇಲೆ ಬಿದ್ದು ದಾಳಿ ಮಾಡಿ ವಿಜಯ ಸಾಧಿಸುತ್ತದೆ.


ಈ ಹೋರಾಟದಲ್ಲಿ ಮುಂಗುಸಿ ಹಾವಿನ ಮುಂದೆ ಧೂಳನ್ನು ಎಬ್ಬಿಸಿ ಅಯೋಮಯದಲ್ಲಿ ಬೀಳಿಸಿ ದಿಕ್ಕನ್ನು ತಪ್ಪಿಸುತ್ತದೆ. ಹಾಗೆಯೇ ತನ್ನ ಶರೀರದ ಮೇಲಿರುವ ಉದ್ದವಾದ ಕೂದಲನ್ನು (ರೋಮ) ಬಿಡಿಸಿ ಹಾವಿನ ಗುರಿಯನ್ನು ತಪ್ಪಿಸುತ್ತದೆ. *ವಾಸ್ತವವಾಗಿ ಮುಂಗುಸಿಗೆ ರೋಗ ನಿರೋಧಕ ಶಕ್ತಿಯು ಯಥೇಚ್ಛವಾಗಿ ಇರುವುದರಿಂದ ಹಾವಿನ ವಿಷವೂ ಸಹ ಅದನ್ನು ಕೊಲ್ಲಲಾಗುವುದಿಲ್ಲ.* ಆದುದರಿಂದ ಆಕಸ್ಮಿಕವಾಗಿ ಹಾವು ಕಡಿದರು ಸಹ ಮುಂಗುಸಿಗೆ ಅಂತಹ ಪ್ರಮಾದವೇನು ಆಗುವುದಿಲ್ಲ.


*ಹಾವು ಮುಂಗುಸಿಯ ಪ್ರಧಾನ ಆಹಾರ, ಆದುದರಿಂದ ತನ್ನ ಆಹಾರಕ್ಕಾಗಿ ಹಾವನ್ನು ಸಾಯಿಸುವುದೇ ವಿನಹ ಶತೃತ್ವದಿಂದಲ್ಲ.*


*ಸಂಗ್ರಹ ಮತ್ತು ಪ್ರಚಾರ;*

*ಗೋ ರಾ ಶ್ರೀನಿವಾಸ...*

*ಮೊ:9845856139.*

ಪ್ರತಿಕ್ರಿಯೆಗಳು

  • ನಿಮ್ಮ ಅಭಿಪ್ರಾಯ ತಿಳಿಸುವಲ್ಲಿ ನೀವು ಮೊದಲಿಗರಾಗಿ.

ನಿಮ್ಮ ಅಭಿಪ್ರಾಯಗಳನ್ನು ಬರೆಯಿರಿ/ತಿಳಿಸಿ.

Top Stories »  


Top ↑