Tel: 7676775624 | Mail: info@yellowandred.in

Language: EN KAN

    Follow us :


ತಾಳೆಯೋಲೆ ೧೮:/ಅಸ್ತಮಿಸುವ ಸೂರ್ಯ ಕಿರಣಗಳು ವ್ಯಕ್ತಿಯ ತೇಜಸ್ಸನ್ನು ಹೆಚ್ಚಿಸುತ್ತದೆಯೇ?

Posted date: 22 Aug, 2019

Powered by:     Yellow and Red

ತಾಳೆಯೋಲೆ ೧೮:/ಅಸ್ತಮಿಸುವ ಸೂರ್ಯ ಕಿರಣಗಳು ವ್ಯಕ್ತಿಯ ತೇಜಸ್ಸನ್ನು ಹೆಚ್ಚಿಸುತ್ತದೆಯೇ?

ಭಾರತೀಯ ಆಚಾರ ವ್ಯವಹಾರಗಳಲ್ಲಿ ಅಡಗಿರುವ ಶಾಸ್ತ್ರೀಯತೆ ಶಾಸ್ತ್ರೀಯ ದೃಷ್ಟಿಯಿಂದ ವಿಶ್ಲೇಷಿಸಿರುವ ಗ್ರಂಥ


*ಇಂಗ್ಲಿಷ್ ಮೂಲ ಲೇಖಕ: ಡಾ ವೆಂಗನೂರು ಬಾಲಕೃಷ್ಣನ್.

ಕನಡಕ್ಕೆ: ಊರುಕುಂಟೆ ನರಸಿಂಹ ಮೂರ್ತಿ*


*ಅಸ್ತಮಿಸುವ ಸೂರ್ಯ ಕಿರಣಗಳು ವ್ಯಕ್ತಿಯ ತೇಜಸ್ಸನ್ನು ಹೆಚ್ಚಿಸುತ್ತದೆಯೇ ?*


ಮಧ್ಯಾಹ್ನ ದ ಸಮಯದಲ್ಲಿ ಮಕ್ಕಳು ಬಿಸಿಲಿನಲ್ಲಿ ಆಡುತ್ತಿದ್ದರೆ ಹಿರಿಯರು ಅವರನ್ನು ಗದರಿಸಿ ನೆರಳಿಗೆ ಕಳುಹಿಸುತ್ತಾರೆ. ಅದೇ ಹಿರಿಯರು ಸಾಯಂಕಾಲದ (ಗೋಧೂಳಿ) ಬಿಸಿಲನ್ನು ಅನುಮೋದಿಸುತ್ತಾರೆ. ಹಿರಿಯರ ಪ್ರಕಾರ *ಸಾಯಂಕಾಲದ ಬಿಸಿಲು ವ್ಯಕ್ತಿಗೆ ಚಿನ್ನದ ಛಾಯೆಯನ್ನು ಉಂಟು ಮಾಡುತ್ತದೆ.*


ಸಂಜೆಯಲ್ಲಿ ನದಿಯ ತೀರ, ಸಮುದ್ರ ತೀರ ಅಥವಾ ಹಾಗೆ ಬೇರೆ ಕಡೆ ತಿರುಗಾಡಿ (ವಾಕಿಂಗ್) ಬರುವುದಕ್ಕೆ ಹೋಗುತ್ತೇವೆ. ಇದರಲ್ಲಿ ಇನ್ನೊಂದು ಆಂತರ್ಯ ಇದೆ, ಸೂರ್ಯಾಸ್ತದ ಸಮಯದಲ್ಲಿ ಮನೆಯಿಂದ ಹೊರಗೆ ಹೋಗಿದ್ದಾಗ ಸೂರ್ಯ ಕಿರಣಗಳು ದೇಹದ ಮೇಲೆ ಬಿದ್ದು ನಮ್ಮ ದೇಹಕ್ಕೆ ಪ್ರಯೋಜನ ಉಂಟು ಮಾಡುತ್ತವೆ. ಹಾಗೆಯೇ ಸಂಜೆ ವೇಳೆ ಹೊರಗೆ ಹೋಗುವ ಮೂಲಕ ಪ್ರಕೃತಿಯ ಸೌಂದರ್ಯವನ್ನು ಆಸ್ವಾದಿಸುವುದೇ ಅಲ್ಲದೆ ಈ ರೀತಿಯಾಗಿ ಸೂರ್ಯನ ಬಿಸಿಲಿನಿಂದಲೂ ಚಿಕಿತ್ಸೆ ದೊರೆತಂತಾಗುತ್ತದೆ.


ಪ್ರಾಚೀನ ಮಾನವರು ಪ್ರಕೃತಿಯ ಮಡಿಲಲ್ಲಿ ಜೀವಿಸಿದ ಹಾಗೆ ಪ್ರಕೃತಿಗೆ ಬಹಳ ಸನ್ನಿಹಿತವಾಗಿದ್ದು ಜೀವನವನ್ನು ನಡೆಸುತ್ತಿದ್ದನು. ತನ್ನ ಪೂರ್ತಿ ಜೀವನವೂ ಪ್ರಕೃತಿಯೊಂದಿಗೆ ಅನುಸಂಧಾನವಾಗಿ ಇರುವುದು. *ಸೂರ್ಯನ ಕಾಂತಿ, ಮಂಜು, ಮಳೆ, ಗಾಳಿ* ಮುಂತಾದವುಗಳು ಮನುಷ್ಯನ ಜೀವನದ ಭಾಗವಾಗಿ ಇದ್ದವು, ಹೀಗೆ ಸೂರ್ಯಾಸ್ತ ಸಮಯದ ಕಿರಣಗಳು ಮನುಷ್ಯನಿಗೆ ಒಳ್ಳೆಯದನ್ನುಂಟು ಮಾಡುತ್ತವೆ.


ಸೂರ್ಯ ಕಿರಣಗಳು ನಮ್ಮ ಶರೀರಕ್ಕೆ ಸೋಕಿದರೆ ಚರ್ಮ ವ್ಯಾಧಿಗಳು, ಬರುವುದಿಲ್ಲವೆಂದು ನಮ್ಮ ಆಧುನಿಕ ಶಾಸ್ತ್ರವೂ ಸಹ ಹೇಳುತ್ತದೆ. ಆದ್ದರಿಂದಲೇ ಎಳೆ ಮಕ್ಕಳನ್ನು ಬೆಳಗಿನ ಸಮಯದ ಎಳೆ ಬಿಸಿಲಿನಲ್ಲಿ ಸ್ವಲ್ಪ ಆಟವಾಡಿಸುತ್ತಾರೆ. *ಮುಂಜಾನೆಯ ಮತ್ತು ಸೂರ್ಯಾಸ್ತ ಸಮಯದ ಕಿರಣಗಳಲ್ಲಿ "ಡಿ" ವಿಟಮಿನ್ ಹೆಚ್ಚಾಗಿ ಇರುವುದೆಂದು ಗುರುತಿಸಲಾಗಿದೆ.*


*ಗಜ್ಜಿ ,(ಕಜ್ಜಿ) ತುರಿಕೆ ಮತ್ತು ಶರೀರದೊಳಗಿನ (ಕಾಣದ) ವ್ಯಾಧಿಗಳು ಬರದಂತೆ ಈ ಸಮಯದ ಸೂರ್ಯನ ಕಿರಣಗಳು ತಡೆಯುತ್ತವೆ.*


*ಗೋ ರಾ ಶ್ರೀನಿವಾಸ...*

*ಮೊ:9845856139.*

ಪ್ರತಿಕ್ರಿಯೆಗಳು

  • ನಿಮ್ಮ ಅಭಿಪ್ರಾಯ ತಿಳಿಸುವಲ್ಲಿ ನೀವು ಮೊದಲಿಗರಾಗಿ.

ನಿಮ್ಮ ಅಭಿಪ್ರಾಯಗಳನ್ನು ಬರೆಯಿರಿ/ತಿಳಿಸಿ.

Top Stories »  


Top ↑