Tel: 7676775624 | Mail: info@yellowandred.in

Language: EN KAN

    Follow us :


ತಾಳೆಯೋಲೆ ೧೯: ಸಮುದ್ರ ತನ್ನಲ್ಲಿ ಶವಗಳನ್ನು ಇಟ್ಟುಕೊಳ್ಳುವುದಿಲ್ಲವೇ ?

Posted date: 23 Aug, 2019

Powered by:     Yellow and Red

ತಾಳೆಯೋಲೆ ೧೯: ಸಮುದ್ರ ತನ್ನಲ್ಲಿ ಶವಗಳನ್ನು ಇಟ್ಟುಕೊಳ್ಳುವುದಿಲ್ಲವೇ ?

ಭಾರತೀಯ ಆಚಾರ ವ್ಯವಹಾರಗಳಲ್ಲಿ ಅಡಗಿರುವ ಶಾಸ್ತ್ರೀಯತೆ ಶಾಸ್ತ್ರೀಯ ದೃಷ್ಟಿಯಿಂದ ವಿಶ್ಲೇಷಿಸಿರುವ ಗ್ರಂಥ


*ಇಂಗ್ಲಿಷ್ ಮೂಲ ಲೇಖಕ: ಡಾ ವೆಂಗನೂರು ಬಾಲಕೃಷ್ಣನ್.

ಕನಡಕ್ಕೆ: ಊರುಕುಂಟೆ ನರಸಿಂಹ ಮೂರ್ತಿ*


ಸಮುದ್ರ ತನ್ನಲ್ಲಿ ಶವಗಳನ್ನು ಇಟ್ಟುಕೊಳ್ಳುವುದಿಲ್ಲವೇ ?


ಸಮುದ್ರವನ್ನು ಕುರಿತು ಜನರಲ್ಲಿ ಎಷ್ಟೋ ನಂಬಿಕೆಗಳು, ಭಾವನೆಗಳು ಇರುವವು. ಹಲವಾರು ಚಲನಚಿತ್ರಗಳು, ಮತ್ತು ಸಾಹಿತ್ಯಗಳು ಸಮುದ್ರಕ್ಕೆ ಸಂಬಂಧಿಸಿದ ಅನೇಕ ವಿಷಯಗಳನ್ನು ತಿಳಿಸಿವೆ. ನಂಬಿಕೆಯ ಪ್ರಕಾರ ಸಮುದ್ರವು ತನ್ನ ಒಡಲಲ್ಲಿ ಶವಗಳನ್ನಾಗಲಿ, ಕಳೇಬರಗಳನ್ನಾಗಲಿ ಇಟ್ಟುಕೊಳ್ಳುವುದಿಲ್ಲ, ವ್ಯಕ್ತಿ ಸಮುದ್ರದಲ್ಲಿ ಮರಣ ಹೊಂದಿದರೆ ಆತನ ಶವವು ಕೆಲವು ದಿನಗಳಲ್ಲಿಯೇ ತೀರವನ್ನು ಸೇರಿತ್ತದೆ.


ಪೂರ್ವಜರ ನಂಬಿಕೆಯ ಪ್ರಕಾರ ಸಮುದ್ರವು ಪವಿತ್ರವಾದುದು. ಆದುದರಿಂದಲೇ ಅದು ತನ್ನಲ್ಲಿ ಕೊಳೆತ ವಸ್ತುಗಳನ್ನು ನಿಲ್ಲಿಸಿಕೊಳ್ಳುವುದಿಲ್ಲ. ವಾಸ್ತವವಾಗಿ ಅತ್ಯಂತ ವೇಗವಾಗಿ ಸಮುದ್ರದ ಮೇಲೆ ಬಹಳ ದೂರದಿಂದ ಬೀಸುವ ಗಾಳಿ ಸಮುದ್ರದ ಅಲೆಗಳನ್ನು ತಳ್ಳಿ ನೀರಿನ ಮೇಲೆ ಇರುವ ವಸ್ತುಗಳನ್ನು ತೀರಕ್ಕೆ ಸೇರಿಸುತ್ತದೆ.


ಈ ಗಾಳಿ ಸೃಷ್ಟಿಸುವ ದೊಡ್ಡ ದೊಡ್ಡ ಅಲೆಗಳ ಕಾರಣದಿಂದ ಸಮುದ್ರದಲ್ಲಿ ನಿರ್ಜೀವವಾಗಿರುವ ಎಲ್ಲವನ್ನೂ ತೀರದ ಕಡೆಗೆ ನೂಕಲ್ಪಡುತ್ತದೆ.

ಹೀಗೆ ಶವಗಳು, ಕಳೆಬರಗಳು ಕೆಲವೇ ದಿನಗಳಲ್ಲಿ ತೀರ ಸೇರುತ್ತವೆ. ಈ ಕಾರಣದಿಂದ ಸಮುದ್ರವೂ ಶವಗಳನ್ನು ಇಟ್ಡುಕೊಳ್ಳುವುದಿಲ್ಲ ಎಂಬ ನಂಬಿಕೆ ಜ‌ನರದ್ದಾಗಿದೆ.


*ಸಂಗ್ರಹ ಮತ್ತು ಪ್ರಚಾರ;*

*ಗೋ ರಾ ಶ್ರೀನಿವಾಸ...*

*ಮೊ:9845856139.*

ಪ್ರತಿಕ್ರಿಯೆಗಳು

  • ನಿಮ್ಮ ಅಭಿಪ್ರಾಯ ತಿಳಿಸುವಲ್ಲಿ ನೀವು ಮೊದಲಿಗರಾಗಿ.

ನಿಮ್ಮ ಅಭಿಪ್ರಾಯಗಳನ್ನು ಬರೆಯಿರಿ/ತಿಳಿಸಿ.

Top Stories »  


Top ↑