Tel: 7676775624 | Mail: info@yellowandred.in

Language: EN KAN

    Follow us :


ಡಿ ಕೆ ಶಿ ಆರೆಸ್ಟ್, ಪ್ರತಿಭಟನೆಗೂ ಒಂದಾದ ಮೈತ್ರಿ, ರಾಷ್ಟ್ರ ಮಟ್ಟದ ನಾಯಕ ಚಿದಂಬರ್ ಬಂಧನಕ್ಕಿಂತಲೂ ಭಿನ್ನ ಡಿಕೆಶಿ ಬಂಧನ

Posted date: 04 Sep, 2019

Powered by:     Yellow and Red

ಡಿ ಕೆ ಶಿ ಆರೆಸ್ಟ್, ಪ್ರತಿಭಟನೆಗೂ ಒಂದಾದ ಮೈತ್ರಿ, ರಾಷ್ಟ್ರ ಮಟ್ಟದ ನಾಯಕ ಚಿದಂಬರ್ ಬಂಧನಕ್ಕಿಂತಲೂ ಭಿನ್ನ ಡಿಕೆಶಿ ಬಂಧನ

*ಹೊತ್ತಿ ಉರಿದ ಕನಕಪುರ ಮತ್ತು ಸಾತನೂರು,* *ರಾಮನಗರದಲ್ಲಿಯೂ ಉಗ್ರ ಪ್ರತಿಭಟನೆ,* *ಚನ್ನಪಟ್ಟಣ ದಲ್ಲಿ ಹೇಳಿಕೊಳ್ಳುವಂತ ಪ್ರತಿಭಟನೆ* *ಇಲ್ಲಾ, ಮಾಗಡಿಯಲ್ಲಿಯೂ ಸಹ ತಣ್ಣನೆ* *ಪ್ರತಿಭಟನೆ. ರಾಜ್ಯದಾದ್ಯಂತ ಹಲವಾರು* *ಜಿಲ್ಲೆಗಳಲ್ಲಿ ಸಹ ಪ್ರತಿಭಟನೆ ಇವಿಷ್ಟೂ ಡಿ ಕೆ* *ಶಿವಕುಮಾರ್ ಬಂಧನದಿಂದ ರಾಜ್ಯ ಮತ್ತು* *ರಾಮನಗರ ಜಿಲ್ಲೆಯಲ್ಲಿ ಇಂದು ನಡೆದ,* *ನಡೆಯುತ್ತಿರುವ ಪ್ರತಿಭಟನೆ.*


ರಾಜ್ಯದಲ್ಲಿ ಬಿಜೆಪಿ ಸರ್ಕಾರ ರಚಿಸುವ ಮುನ್ನ ಕಾಂಗ್ರೆಸ್ ಮತ್ತು ಜೆಡಿಎಸ್ ಪಕ್ಷಗಳು ಮೈತ್ರಿ ಮಾಡಿಕೊಂಡು ಸರ್ಕಾರ ರಚಿಸಿ ಚನ್ನಪಟ್ಟಣ ದ ಶಾಸಕ ಹೆಚ್ ಡಿ ಕುಮಾರಸ್ವಾಮಿ ಮುಖ್ಯಮಂತ್ರಿಯಾಗಿ, ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಸಮನ್ವಯ ಸಮಿತಿ ಅಧ್ಯಕ್ಷರಾಗಿ ಹದಿನಾಲ್ಕು ತಿಂಗಳು ರಾಜ್ಯ ಸರ್ಕಾರ ಮುನ್ನಡೆಸಲು ಪ್ರಯತ್ನ ಪಟ್ಟಿದ್ದಕ್ಕಿಂತಲೂ ಸರ್ಕಾರದ ಭಾಗವಾದ ಕೆಲವು ಶಾಸಕರು ಮತ್ತು ಮಂತ್ರಿಗಳನ್ನು ಹಿಡಿದಿಟ್ಟುಕೊಳ್ಳುವುದಕ್ಕಾಗಿಯೇ ವರ್ಷವನ್ನು ಸವೆಸಿದ್ದು ಎಲ್ಲರಿಗೂ ತಿಳಿದ ವಿಷಯವೇ !


ಕಪ್ಪು ಹಣ ಶೇಖರಣೆ ಮಾಡಿದ ಸಂಬಂಧ ಡಿ ಕೆ ಶಿವಕುಮಾರ್ ರವರನ್ನು ಕಳೆದ ನಾಲ್ಕು ದಿನಗಳಿಂದ ಇ ಡಿ ಇಲಾಖೆಯು ದೆಹಲಿಯ ತನ್ನ ಕಛೇರಿಯಲ್ಲಿ ವಿಚಾರಣೆ ನಡೆಸಿದ್ದು ಸಮರ್ಪಕವಾದ ಉತ್ತರ ನೀಡದೆ ಪ್ರತಿ ಪ್ರಶ್ನೆಗೂ ಸಮಯಾವಕಾಶ ಕೇಳುತ್ತಿದ್ದ ಡಿಕೆಶಿ ಯನ್ನು ನಿನ್ನೆ ರಾತ್ರಿ ೦೮:೩೦ ಸಮಯದಲ್ಲಿ ಬಂಧಿಸಿಲಾಗಿತ್ತು. ಇದನ್ನು ಖಂಡಿಸಿ ರಾಜ್ಯ ಮತ್ತು ರಾಷ್ಟ್ರ ಬಿಜೆಪಿ ಸರ್ಕಾರದ ವಿರುದ್ಧ ಕಾಂಗ್ರೆಸ್ ಕಾರ್ಯಕರ್ತರು ಮತ್ತು ಡಿಕೆಶಿ ಬೆಂಬಲಿಗರಷ್ಟೇ ಅಲ್ಲದೆ ಜೆಡಿಎಸ್ ಕಾರ್ಯಕರ್ತರು ಸಹ ಪ್ರತಿಭಟನೆ ನಡೆಸುತ್ತಿದ್ದಾರೆ.


ಕಾಂಗ್ರೆಸ್ ನ ರಾಷ್ಟ್ರ ಮಟ್ಟದ ನಾಯಕ ಕೇಂದ್ರದ ಮಾಜಿ ಹಣಕಾಸು ಸಚಿವ ಪಿ ಚಿದಂಬರಂ ರವರನ್ನು ಇತ್ತೀಚೆಗೆ ಬಂಧಿಸಿದರೂ ಸಹ ಹಿರಿಯ ರಾಜಕಾರಣಿಗಳು ಅವರ ಪರ ಹೇಳಿಕೆ ಹಾಗೂ ಬಿಜೆಪಿ ಗೆ ಧಿಕ್ಕಾರ ಕೂಗಿದರೇ ವಿನಹ ಪಕ್ಷದ ಕಾರ್ಯಕರ್ತರಾಗಲಿ, ಚಿದಂಬರಂ ಬೆಂಬಲಿಗರಾಗಲಿ ಬೀದಿಗಿಳಿದು ಪ್ರತಿಭಟಿಸಲಿಲ್ಲ, ಡಿಕೆಶಿ ರಾಜ್ಯ ಮಟ್ಟದ ನಾಯಕರಾದರು ರಾಷ್ಟ್ರದಾದ್ಯಂತ ಅವರದೇ ವರ್ಚಸ್ಸು ಹೊಂದಿದ್ದು ಹೈಕಮಾಂಡ್ ಆದೇಶದ ಮೇರೆಗೆ ಹಲವಾರು ರಾಜ್ಯಗಳಲ್ಲಿ ತನ್ನದೇ ವರ್ಚಸ್ಸು ಉಳಿಸಿಕೊಂಡಿದ್ದರು, ಸ್ಥಳೀಯವಾಗಿ ತನ್ನ ಬೆಂಬಲಿಗರನ್ನು ಬೆಳೆಸುವಲ್ಲಿಯೂ ಬೇರೆ ನಾಯಕರಿಗಿಂತ ಭಿನ್ನವಾಗಿದ್ದರಿಂದ ಬೀದಿಗಿಳಿದು ಪ್ರತಿಭಟನೆ ನಡೆಸುತ್ತಿರುವುದು ಅವರ ಅಭಿಮಾನಕ್ಕೆ ಸಾಕ್ಷಿಯಾಗಿದೆ.


ಕಳೆದ ಸಮ್ಮಿಶ್ರ ಸರ್ಕಾರದಲ್ಲಿ ಮುಖ್ಯಮಂತ್ರಿ ಹೆಚ್ ಡಿ ಕುಮಾರಸ್ವಾಮಿ ಯವರ ಪ್ರತಿ ನಡೆಯನ್ನು ಡಿ ಕೆ ಶಿವಕುಮಾರ್ ಸಮರ್ಥಿಸಿಕೊಂಡು ಬಂದಿದ್ದರು, ಸರ್ಕಾರ ಬೀಳುವ ಸಮಯದಲ್ಲಿ ಕುಮಾರಸ್ವಾಮಿ ಯವರ ಜೊತೆ ನಿಂತಿದ್ದರಿಂದ ನಿನ್ನೆ ರಾತ್ರಿಯೇ ಜೆಡಿಎಸ್ ಕಾರ್ಯಕರ್ತರಿಗೆ ಡಿಕೆಶಿ ಬೆಂಬಲಿಗರ ಜೊತೆ ಪ್ರತಿಭಟನೆ ಗೆ ಕೈಜೋಡಿಸಬೇಕೆಂಬ ಸಂದೇಶ ರವಾನಿಸಿದರು, ಹಾಗಾಗಿ ರಾಜ್ಯದಾದ್ಯಂತ ಕಾಂಗ್ರೆಸ್ ಮತ್ತು ಜೆಡಿಎಸ್ ಕಾರ್ಯಕರ್ತರು ಒಟ್ಟಾಗಿ ಕೆಲವು ಕಡೆ ಪ್ರತ್ಯೇಕವಾಗಿ ಪ್ರತಿಭಟನೆ ನಡೆಸಿ ಒಗ್ಗಟ್ಟು ಪ್ರದರ್ಶಿಸಿದರು.


ಟೈರ್ ಗಳಿಗೆ ಬೆಂಕಿ ಹಚ್ಚಿದ್ದು, ಬಸ್ ಗೆ ಬೆಂಕಿ ಹಚ್ಚಿರುವುದು, ಕಲ್ಲು ತೂರಾಟ ನಡೆಸಿದ್ದು, ಅಂಗಡಿ ಮುಂಗಟ್ಟುಗಳನ್ನು ಬಲವಂತವಾಗಿ ಮುಚ್ಚಿಸಲು ಪ್ರಯತ್ತಿಸುತ್ತಿರುವ ಕಾಂಗ್ರೆಸ್ ಮತ್ತು ಜೆಡಿಎಸ್ ಕಾರ್ಯಕರ್ತರಿಗೆ ಜನಸಾಮಾನ್ಯರು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ. ಪ್ರತಿಭಟನೆ ನಡೆಸಲಿ, ಪ್ರತಿಭಟನೆಯನ್ನು ಶಾಂತಿಯಿಂದ ಮಾಡಿ ನ್ಯಾಯ ಒದಗಿಸಿಕೊಳ್ಳಲಿ, ನಾವು ಅವರ ಜೊತೆ ಇರುತ್ತೇವೆ, ಆದರೆ ಸಾರ್ವಜನಿಕ ಆಸ್ತಿ ಪಾಸ್ತಿ ನಷ್ಟ ಮಾಡುವುದರಿಂದ ನಮ್ಮ ಮೇಲೆ ಹೊರೆ ಬೀಳುತ್ತದೆ, ಟೈರ್ ಗಳನ್ನು ಸುಡುವುದರಿಂದ ಜನರ ಆರೋಗ್ಯ ಮತ್ತು ಪರಿಸರ ಹಾಳಾಗುತ್ತದೆ ಎಂಬ ಸಾಮಾನ್ಯ ಜ್ಞಾನ ಇರಬೇಕು ಎಂಬುದು ಅವರ ಜಿಜ್ಞಾಸೆ.


ಸಾಮಾಜಿಕ ಜಾಲತಾಣಗಳಲ್ಲಿಯೂ ಪರವಿರೋಧ ಸಂದೇಶಗಳು ಹರಿದಾಡುತ್ತಿದ್ದು ಡಿಕೆಶಿ ತನ್ನ ತಂದೆಗೆ ಎಡೆ ಇಡಲು ಬಿಡಲಿಲ್ಲ ಎಂಬ ಸಂದೇಶಕ್ಕೆ ಮಾಹಿತಿ ಕಾರ್ಯಕರ್ತರೊಬ್ಬರು ಅದೆಷ್ಟೋ ಮಂದಿಗೆ ಎಡೆ ಇಡುವುದಿರಲಿ ಊಟಕ್ಕೂ ಕಣ್ಣೀರಿನಲ್ಲಿ ಕೈತೊಳೆಯುವಂತೆ ಮಾಡಿದ್ದಾರೆ ಎಂದು ತಿರುಗೇಟು ನೀಡಿದ್ದಾರೆ, ಇದೇ ರೀತಿ ಪರವಿರೋಧ ಚರ್ಚೆಗಳು ನಿರಂತರವಾಗಿ ಸಾಗುತ್ತಿವೆ.


*(ಇಡಿ ಇಡಿ ಇಡಿ, ಎಷ್ಟಾದರೂ ಕೂಡಿ ಇಡಿ,* *ಹೇಗಾದರೂ ಸಂಪಾದಿಸಿ ಕೂಡಿ ಇಡಿ, ಬಡವರ* *ಹೊಟ್ಟೆ ಮೇಲಾದರು ಹೊಡೆದು ಕೂಡಿ ಇಡಿ,* *ಶ್ರೀಮಂತರ ಬಳಿ ಕೊಳ್ಳೆ ಹೊಡೆದು ಇಡಿ, ನೀವು* *ಕೂಡಿಟ್ಟ ಹಣ ಇಡಿ ಗೆ ಗೊತ್ತಾಗದಂತೆ ಇಡಿ,* *ಗೊತ್ತಾದರೆ ಜೈಲಿಗೋಗಲು ಆಗಿರಿ ರೆಡಿ.)*


*ಗೋ ರಾ ಶ್ರೀನಿವಾಸ...)

*ಮೊ:9845856139.*

ಪ್ರತಿಕ್ರಿಯೆಗಳು

  • ನಿಮ್ಮ ಅಭಿಪ್ರಾಯ ತಿಳಿಸುವಲ್ಲಿ ನೀವು ಮೊದಲಿಗರಾಗಿ.

ನಿಮ್ಮ ಅಭಿಪ್ರಾಯಗಳನ್ನು ಬರೆಯಿರಿ/ತಿಳಿಸಿ.

Top Stories »  


Top ↑