Tel: 7676775624 | Mail: info@yellowandred.in

Language: EN KAN

    Follow us :


ಮೆಹಂದಿನಗರ ದಿಂದ ಲಾಳಾಘಟ್ಟ ರಸ್ತೆಯ ಐದು‌ ಲಕ್ಷ ಹಣ ನುಂಗಿದ ಶಂಕರ್ ಅಂಡ್ ಟೀಂ !

Posted date: 05 Sep, 2019

Powered by:     Yellow and Red

ಮೆಹಂದಿನಗರ ದಿಂದ ಲಾಳಾಘಟ್ಟ ರಸ್ತೆಯ ಐದು‌ ಲಕ್ಷ ಹಣ ನುಂಗಿದ ಶಂಕರ್ ಅಂಡ್ ಟೀಂ !

ಚನ್ನಪಟ್ಟಣ: ಈಗಾಗಲೇ ರಾಮನಗರ ಜಿಲ್ಲಾ ಪಂಚಾಯತಿ ಅನುದಾನದ ಹಲವಾರು ಕಾಮಗಾರಿಗಳನ್ನು ಮಾಡದೇ ಹಾಗೂ ಕೆಲವು ಕಳಪೆ ಕಾಮಗಾರಿ ಮಾಡಿ *ಇಪ್ಪತ್ತು ಲಕ್ಷ ರೂಪಾಯಿಗಳಿಗೂ* ಹೆಚ್ಚು ಮೌಲ್ಯದ ಹಣವನ್ನು ದುರುಪಯೋಗ ಪಡಿಸಿಕೊಂಡು *ತನಿಖೆ ಎದುರಿಸಿ ಅಮಾನತುಗೊಂಡು* ಇತ್ತೀಚೆಗೆ ಚನ್ನಪಟ್ಟಣ ಲೋಕೋಪಯೋಗಿ ಇಲಾಖೆಗೆ ಮರು ಸೇರ್ಪಡೆಯಾಗಿರುವ *ಪರೀಕ್ಷಾರ್ಥ ಇಂಜಿನಿಯರ್ ಜಿ ಎಸ್ ಶಂಕರ್* ಹೊಂಗನೂರು ಜಿಲ್ಲಾ ಪಂಚಾಯತಿ ವ್ಯಾಪ್ತಿಯ ಮೆಹದಿ ನಗರದಿಂದ ಲಾಳಾಘಟ್ಟ ರಸ್ತೆ ದುರಸ್ತಿ ಹೆಸರಿನಲ್ಲಿ *೫,೦೦,೦೦೦* ರೂಪಾಯಿಗಳನ್ನು ಜೇಬಿಗೆ ಇಳಿಸಿಕೊಂಡಿದ್ದು ಇವರ ವಿರುದ್ಧ ಜಿಲ್ಲಾ ಪಂಚಾಯತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿಗಳಿಗೆ ದೂರು ನೀಡಿರುವುದಾಗಿ ಮಾಹಿತಿ ಹಕ್ಕು ಕಾರ್ಯಕರ್ತ ವಿ ಜಿ ಕೃಷ್ಣೇಗೌಡ ತಿಳಿಸಿದ್ದಾರೆ.


೨೦೧೭/೧೮ ಸಾಲಿನ ಜಿಲ್ಲಾ ಪಂಚಾಯತಿ ಅನುದಾನವನ್ನು ನಗರದ ಮೆಹದಿ ನಗರದಿಂದ (ಸಾಮಾಜಿಕ ಅರಣ್ಯ ಇಲಾಖೆಯ ಮುಂಭಾಗ) ಲಾಳಾಘಟ್ಟ ಗ್ರಾಮದ (ಅರಳೀಮರ) ತನಕ ೫,೦೦,೦೦೦* ರೂಪಾಯಿಗಳ ಎಸ್ಟಿಮೇಟ್ ತಯಾರಿಸಿ *ಗುತ್ತಿಗೆದಾರ ಎಂ ಎಸ್ ಕಿರಣಕುಮಾರ* ಎಂಬುವವರ ಹೆಸರಿನಲ್ಲಿ *೪,೯೯,೮೧೭* ರೂಪಾಯಿಗಳನ್ನು ಕಾಮಗಾರಿ ಮಾಡದೇ ಪಡೆದುಕೊಂಡಿದ್ದಾರೆ ಎಂದು ಸಂಪೂರ್ಣ ದಾಖಲೆಗಳ ಸಮೇತ ದೂರು ನೀಡಿರುವುದಾಗಿ ತಿಳಿಸಿದರು.


*ಈ ರಸ್ತೆಯು ಪ್ರಸ್ತುತ ಜಿಲ್ಲಾ ಪಂಚಾಯತಿ ಅಧ್ಯಕ್ಷೆ ಜಿ ಡಿ ವೀಣಾಕುಮಾರಿ ಯವರ ಕುಟುಂಬ ಒಡೆತನದ ವಿಜಯ ಚಾಕಿ ಸಾಕಾಣಿಕಾ ಕೇಂದ್ರ ಇರುವ ರಸ್ತೆ ಎಂಬುದು ದುರದೃಷ್ಟಕರ* *ಇದೇ ರಸ್ತೆಗೆ ೨೦೧೬ ನೇ ಸಾಲಿನಲ್ಲಿ ಇಂಜಿನಿಯರ್ ಚಿಕ್ಕ ವೆಂಕಟೇಶ್ ರವರು ೪,೫೦,೦೦೦ ರೂಪಾಯಿಗಳ ಬಿಲ್ ಮಾಡಿದ್ದು ಅಂದೂ ಸಹ ಕಾಮಗಾರಿ ನಡೆದಿರುವುದಿಲ್ಲ ಎಂದು ತಿಳಿಸಿದರು.*


ಕ್ರಮಸಂಖ್ಯೆ ಒಂದರಿಂದ ಒಂಭತ್ತರವರೆಗೆ ಇರುವ ಕಾಮಗಾರಿಯಲ್ಲಿ *೨೨೦ ಮೀಟರ್ ಉದ್ದದ ಮತ್ತು ೦೩.೦೫ ಮೀಟರ್ ಅಗಲ ಕಾಮಗಾರಿ* ಎಂದು ಅಳತೆ ಬಿಲ್ಲಿನಲ್ಲಿ ನಮೂದಿಸಿದ್ದು, ಕಾಮಗಾರಿಯ *ಪೋಟೋಗಳಲ್ಲಿ ಪ್ಯಾಚ್ ವರ್ಕ್" ತೋರಿಸಿದ್ದಾರೆ, ಈ ಪೋಟೋಗಳು ಈ ರಸ್ತೆಯ ಕಾಮಗಾರಿಗೆ ಸಂಬಂಧಿಸಿದ್ದಲ್ಲ, ಹಾಗಾಗಿ *ಗುತ್ತಿಗೆದಾರ ಎಂ ಎಸ್ ಕಿರಣಕುಮಾರ್, ಪ್ರೊಬೇಷನರಿ ಕಿರಿಯ ಇಂಜಿನಿಯರ್ ಜಿ ಎಸ್ ಶಂಕರ್ ಹಾಗೂ ಅಂದಿನ ಪ್ರಭಾರ ಸಹಾಯಕ ಕಾರ್ಯಪಾಲಕ ಅಭಿಯಂತರ ಕುಮಾರಸ್ವಾಮಿ* ವಿರುದ್ಧ ಕಾನೂನು ಕ್ರಮ ಕೈಗೊಂಡು ಸಾರ್ವಜನಿಕರ ತೆರಿಗೆ ಹಣವನ್ನು ವಸೂಲಿ ಮಾಡಬೇಕೆಂದು ಒತ್ತಾಯಿಸಿದ್ದಾರೆ.


ಗೋ ರಾ ಶ್ರೀನಿವಾಸ...

ಮೊ:9845856139.

ಪ್ರತಿಕ್ರಿಯೆಗಳು

  • ನಿಮ್ಮ ಅಭಿಪ್ರಾಯ ತಿಳಿಸುವಲ್ಲಿ ನೀವು ಮೊದಲಿಗರಾಗಿ.

ನಿಮ್ಮ ಅಭಿಪ್ರಾಯಗಳನ್ನು ಬರೆಯಿರಿ/ತಿಳಿಸಿ.

Top Stories »  


Top ↑